ಮನೆಯಲ್ಲೇ ಇದೆ ಆ್ಯಂಟಿ ಬಯೋಟಿಕ್
Team Udayavani, Mar 6, 2018, 9:18 AM IST
ವೈದ್ಯರು ಔಷಧದಲ್ಲಿ ಆ್ಯಂಟಿ ಬಯೋಟಿಕ್‌ಗಳನ್ನು ಕೊಡುವುದು ಸಾಮಾನ್ಯ. ಇದು ಹಲವು ರೋಗಗಳು, ಅಡ್ಡ ಪರಿಣಾಮಗಳನ್ನು ತಡೆಗಟ್ಟುತ್ತದೆ ಎಂಬ ಕಾರಣಕ್ಕೆ ನಾವು ಅದನ್ನು ಸ್ವೀಕರಿಸುತ್ತೇವೆ. ಆ್ಯಂಟಿ ಬಯೋಟಿಕ್ ಕೇವಲ ಅಲೋಪತಿ ಮೆಡಿಸಿನ್‌ನಲ್ಲಿ ಮಾತ್ರ ಇರುವುದಲ್ಲ ನಮ್ಮ ಅಡುಗೆ ಮನೆಯಲ್ಲೂ ಇದೆ. ನೈಸರ್ಗಿ ಕವಾಗಿ ದೊರೆಯುವ ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಮಾತ್ರವಲ್ಲ ಇವುಗಳ ಬಳಕೆ ಆರೋಗ್ಯದ ದೃಷ್ಟಿಯಿಂದ ಹೆಚ್ಚುಸುರಕ್ಷಿತವೂ ಆಗಿದೆ ಎಂಬುದು ವೈಜಾನಿಕ ಸಂಶೋಧನೆಯಿಂದಲೂ ದೃಢಪಟ್ಟಿದೆ. ಅವು ಯಾವುವು ಗೊತ್ತೇ?
ಬೆಳ್ಳುಳ್ಳಿ
ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣ ಹೊಂದಿರುವ ಬೆಳ್ಳುಳ್ಳಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಅಲರ್ಜಿ, ಅಸ್ತಮಾ, ಶೀತ, ಕೆಮ್ಮು ನಿವಾರಣೆ ಮಾಡುವ ಬೆಳ್ಳುಳ್ಳಿ ಹೃದಯದ ಆರೋಗ್ಯಕ್ಕೂ ಅತ್ಯುತ್ತಮವಾಗಿದೆ.
ಜೇನು ತುಪ್ಪ
ಹಲವು ಸೋಂಕುರೋಗಗಳನ್ನು ತಡೆಗಟ್ಟುವ ಜೇನುತುಪ್ಪ ಮನೆ ಮದ್ದಿನಲ್ಲಿ ಪ್ರಮುಖ ಸ್ಥಾನಗಿಟ್ಟಿಸಿಕೊಂಡಿದೆ. ಸುಟ್ಟ ಗಾಯ, ಚರ್ಮದ ತೊಂದರೆ, ಕಲೆಗಳನ್ನು ನಿವಾರಿಸುವಲ್ಲಿ ಜೇನು ತುಪ್ಪ ಔಷಧವಾಗಿ ಬಳಕೆಯಾಗುತ್ತದೆ.
ಶುಂಠಿ
ಶುಂಠಿ ಕೂಡ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. ನಿಶ್ಶಕ್ತಿ, ರಕ್ತದೊತ್ತಡ, ವಾಕರಿಕೆ ಸಮಸ್ಯೆಯನ್ನು ನಿಯಂತ್ರಿಸುವ ಗುಣ ಹೊಂದಿರುವ ಗಂಟಲಿನ ತುರಿಕೆ, ಶುಂಠಿ ಕೆಮ್ಮು, ಶೀತಕ್ಕೂ ಅತ್ಯುತ್ತಮ ಔಷಧವಾಗಿದೆ.
ಲವಂಗ
ಹಲ್ಲಿನ ಹಲವು ಸಮಸ್ಯೆಗಳಿಗೆ ಲವಂಗವನ್ನು ಬಳ ಸು ತ್ತೇವೆ. ಲವಂಗದ ನೀರನ್ನು ಪ್ರತಿನಿತ್ಯ 1/2 ಚಮಚ ಸೇವನೆ ಮಾಡುವುದ ರಿಂದ ದೇಹದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಗುಣ ಹೆಚ್ಚಾಗುತ್ತದೆ.
ವಿದ್ಯಾ ಕೆ. ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್
World Osteoporosis Day: ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವಕಳಿ ಎಂದರೇನು?
Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್ 16
Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ
Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.