ಒಣ ದ್ರಾಕ್ಷಿ ಪೋಷಕಾಂಶಗಳ ಕಣಜ; ಜೀರ್ಣಶಕ್ತಿ, ರೋಗನಿರೋಧಕ ಶಕ್ತಿ ವೃದ್ಧಿ
ಉಸಿರಿನ ದುರ್ವಾಸನೆ ಯನ್ನು ಹೋಗಲಾಡಿಸುತ್ತದೆ.
Team Udayavani, Jan 18, 2023, 3:56 PM IST
ಸಣ್ಣಪುಟ್ಟ ಕಾಯಿಲೆಗಳಿಂದ ಹಿಡಿದು ದೊಡ್ಡದೊಡ್ಡ ರೋಗಗಳು ಬಾರದಂತೆ ಕಾಪಾಡುವ ಔಷಧಗಳು ನಮ್ಮ ಅಡುಗೆ ಮನೆಯಲ್ಲೇ ಇವೆ. ಆದರೆ ಇದರ ಬಗ್ಗೆ
ಅಸಡ್ಡೆಯೇ ಹೆಚ್ಚು. ಆಯುರ್ವೇದದ ಪ್ರಕಾರ ಭಾರತೀಯ ಅಡುಗೆ ಶೈಲಿಯಲ್ಲಿ ಬಳಸುವ ಪ್ರತಿಯೊಂದು ಪದಾರ್ಥಗಳಲ್ಲೂ ಆರೋಗ್ಯ ವರ್ಧನೆಯ ಅಂಶಗಳಿರುತ್ತವೆ. ಹೆಚ್ಚಾಗಿ ಸಿಹಿ ಖಾದ್ಯಗಳಲ್ಲಿ ಬಳಕೆಯಾಗುವ ಒಣ ದ್ರಾಕ್ಷಿ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ರಾತ್ರಿ ಮಲಗುವ ಮುನ್ನ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದ ಅನಂತರ ಆ ನೀರನ್ನು ಸೇವಿಸುವುದರಿಂದಲೂ ಅನೇಕ ಲಾಭಗಳಿವೆ. ಈ ನೀರನ್ನು ಸತತವಾಗಿ ನಾಲ್ಕು ದಿನ ಕುಡಿದರೆ ಕರುಳು ಸ್ವತ್ಛವಾಗುತ್ತದೆ.
ಹೃದಯ ಸಂಬಂಧಿ, ಯಕೃತ್ ಸಮಸ್ಯೆಗಳು ಇಲ್ಲವಾಗುತ್ತದೆ. ಪ್ರತಿದಿನ ಒಣದ್ರಾಕ್ಷಿ ನೆನೆಸಿದ ನೀರನ್ನು ಕುಡಿಯುವುದರಿಂದ ರಕ್ತವು ಶುದ್ಧಿಯಾಗುತ್ತದೆ, ಹಿಮೋಗ್ಲೋಬಿನ್ ಸಂಖ್ಯೆ ಹೆಚ್ಚಾಗುತ್ತದೆ. ಹೃದಯಾಘಾತದ ಅಪಾಯವಿರುವುದಿಲ್ಲ. ಇದರಲ್ಲಿರುವ ಕಬ್ಬಿನಾದಂಶ ದೇಹಕ್ಕೆ ದೊರೆತು ರಕ್ತಹೀನತೆ ತೊಂದರೆಯಿಂದ ರಕ್ಷಿಸುತ್ತದೆ.
ಜತೆಗೆ ಇದು ಜೀರ್ಣಶಕ್ತಿ, ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ. ಮೂತ್ರಪಿಂಡಗಳಲ್ಲಿ ಸಂಗ್ರಹವಾಗುವ ಕಶ್ಮಲಗಳನ್ನು ನಿವಾರಿಸಲು ಇದು ಅತ್ಯುತ್ತಮ.
ಇನ್ನು ನೆನೆಸಿಟ್ಟ ಒಣ ದ್ರಾಕ್ಷಿ ಸೇವನೆಯಿಂದಲೂ ಅನೇಕ ಲಾಭಗಳಿವೆ. ಇದರಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿದ್ದು, ಬಾಯಿ, ಒಸಡು, ಹಲ್ಲುಗಳಲ್ಲಿರುವ
ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ. ಇದು ಉಸಿರಿನ ದುರ್ವಾಸನೆ ಯನ್ನು ಹೋಗಲಾಡಿಸುತ್ತದೆ.
ಒಣದ್ರಾಕ್ಷಿಯಲ್ಲಿ ಅತ್ಯಧಿಕ ಪ್ರಮಾಣ ಕ್ಯಾಲ್ಸಿಯಂ ಹಾಗೂ ಹಲವು ಪೋಷಕಾಂಶಗಳಿದ್ದು, ಮೂಳೆಗಳ ಆರೋಗ್ಯಕ್ಕೆ ಅತ್ಯುತ್ತಮ. ಇದರಲ್ಲಿರುವ ಕರಗುವ ನಾರುಗಳು ಹಾಗೂ ಹಲವು ಪೋಷಕಾಂಶಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಣೆ ನೀಡುತ್ತದೆ. ಇದರಲ್ಲಿರುವ ವಿಟಮಿನ್ ಎ, ಬಿಟಾ ಕ್ಯಾರೋಟಿನ್ ಕಣ್ಣಿನ ಆರೋಗ್ಯಕ್ಕೆ ಅತ್ಯುತ್ತಮ. ಇದು ದೃಷ್ಟಿ ಹೀನತೆಯನ್ನು ತಡೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.