Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?


Team Udayavani, Nov 24, 2024, 10:08 AM IST

Udayavani Kannada Newspaper

ಆಂಟಿಬಯೋಟಿಕ್‌ ಪ್ರತಿರೋಧವು (resistance) ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಗಮನಾರ್ಹವಾದ ವಿಷಯವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಪ್ರಪಂಚದ ಯಾವುದಾದರೂ ಒಂದು ಪ್ರದೇಶದಲ್ಲಿ ಹೊಸ ಔಷಧ-ನಿರೋಧಕ “ಸೂಪರ್‌ಬಗ್‌’ ಬಗ್ಗೆ ಕೇಳದೆ ನಾವು ಒಂದು ತಿಂಗಳು ಇರಲು ಸಾಧ್ಯವಿಲ್ಲ. ನಮ್ಮ ಮತ್ತು ನಮ್ಮ ಪ್ರೀತಿಪಾತ್ರರ ಆರೋಗ್ಯದಲ್ಲಿ ಸಕ್ರಿಯ ಪಾತ್ರವನ್ನು ವಹಿಸಲು ಮತ್ತು ಸಾರ್ವಜನಿಕ ಆರೋಗ್ಯಕ್ಕೆ ರಚನಾತ್ಮಕ ಶಕ್ತಿಯಾಗಲು ಪ್ರತಿಜೀವಕ ನಿರೋಧಕತೆ ((Antibiotic Resistance/ABR) ಏನು ಮತ್ತು ಅದು ಹೇಗೆ ಉಂಟಾಗುತ್ತದೆ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಆ್ಯಂಟಿಮೈಕ್ರೊಬಿಯಲ್‌ಗ‌ಳು ಮತ್ತು ಪ್ರತಿಜೀವಕಗಳು

ಆ್ಯಂಟಿಮೈಕ್ರೊಬಿಯಲ್‌ಗ‌ಳು ಸಾಮಾನ್ಯವಾಗಿ ಬ್ಯಾಕ್ಟೀರಿಯಾ, ವೈರಸ್‌ ಗಳು, ಶಿಲೀಂಧ್ರಗಳು (fungus) ಮತ್ತು ಪರಾವಲಂಬಿಗಳಿಂದ (parasites) ಉಂಟಾಗುವ ಸೋಂಕುಗಳ ವಿರುದ್ಧ ಹೋರಾಡಲು ಬಳಸುವ ಔಷಧಗಳ ಗುಂಪು.

ಪ್ರತಿಜೀವಕಗಳು ಅಂದರೆ ಆಂಟಿಬಯೋಟಿಕ್‌, ಮಾನವ ದೇಹದಲ್ಲಿ ಬ್ಯಾಕ್ಟೀರಿಯಾದ ಸೋಂಕಿಗೆ ಚಿಕಿತ್ಸೆ ನೀಡಲು ಬಳಸುವ ಔಷಧಗಳಾಗಿವೆ. ಈ ಔಷಧಗಳು ಬ್ಯಾಕ್ಟೀರಿಯಾದ ಗುಣೀಕರಣವನ್ನು ಕಡಿಮೆ ಮಾಡುತ್ತವೆ ಅಥವಾ ಅವುಗಳನ್ನು ಕೊಲ್ಲುತ್ತವೆ. ಮಾನವರಲ್ಲದೆ ಪ್ರತಿಜೀವಕಗಳನ್ನು ಪಶುಸಂಗೋಪನೆ ಮತ್ತು ಕೃಷಿ/ಬೆಳೆಗಳಲ್ಲಿಯೂ ಬಳಸಲಾಗುತ್ತದೆ.

ಪ್ರತಿಜೀವಕ ನಿರೋಧಕತೆ (ABR)

ಪ್ರತಿಜೀವಕಗಳ ಆವಿಷ್ಕಾರವು ವೈದ್ಯಕೀಯ ಜಗತ್ತಿನಲ್ಲಿ ಕ್ರಾಂತಿಯನ್ನು ಉಂಟು ಮಾಡಿತು ಮತ್ತು ಅಲೋಪತಿ/ಇಂಗ್ಲಿಷ್‌ ಮೆಡಿಸಿನ್‌ ಇತಿಹಾಸದಲ್ಲಿ ಅತ್ಯಂತ ಪ್ರಯೋಜನಕಾರಿ ಪ್ರಗತಿಗಳಲ್ಲಿ ಒಂದಾಗಿದೆ. ವೈದ್ಯರು ನ್ಯುಮೋನಿಯಾ, ಸೈನಸೈಟಿಸ್‌ ಮತ್ತು ಕ್ಷಯ ರೋಗದಂತಹ ಗಂಭೀರ ಸೋಂಕುಗಳಿಗೆ ಕೆಲವೇ ಮಾತ್ರೆಗಳೊಂದಿಗೆ ಚಿಕಿತ್ಸೆ ನೀಡಲು ಸಾಧ್ಯವಾಯಿತು. ಕಾಲಾಂತರದಲ್ಲಿ ಬ್ಯಾಕ್ಟೀರಿಯಾವು ಪ್ರತಿಜೀವಕಗಳಿಗೆ ಹೊಂದಿಕೊಳ್ಳಲು ಮತ್ತು ಬದುಕಲು ಮಾರ್ಗಗಳನ್ನು ಕಂಡುಕೊಂಡಿದೆ. ಕೆಲವು ಪ್ರತಿಜೀವಕಗಳನ್ನು ಕಡಿಮೆ ಪರಿಣಾಮಕಾರಿ ಅಥವಾ ನಿಷ್ಪ್ರಯೋಜಕವಾಗಿಸುತ್ತದೆ. ಅಂತಹ ಔಷಧ-ನಿರೋಧಕ ಬ್ಯಾಕ್ಟೀರಿಯಾಗಳನ್ನೂ “ಸೂಪರ್‌ಬಗ್ಸ್‌’ ಎಂದು ಕರೆಯಲಾಗುತ್ತದೆ. ಪ್ರತಿಜೀವಕಗಳು ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಾಧ್ಯವಾಗದ ಸ್ಥಿತಿಯನ್ನು ಪ್ರತಿಜೀವಕ ಪ್ರತಿರೋಧಕತೆ ಎಂದು ಕರೆಯಲಾಗುತ್ತದೆ.

ಹೀಗೆ ಪ್ರತಿರೋಧವು ಬ್ಯಾಕ್ಟೀರಿಯಾಗಳಲ್ಲಿ ವೈರಸ್‌ಗಳಲ್ಲಿ, ಶಿಲೀಂಧ್ರಗಳಲ್ಲಿ (fugus) ಮತ್ತು ಪರಾವಲಂಬಿಗಳಲ್ಲಿ ಉಂಟಾಗಬಹುದು. ಒಟ್ಟಾರೆಯಾಗಿ ಇದನ್ನು ಸೂಕ್ಷ್ಮಜೀವಿ ವಿರೋಧಿ ಪ್ರತಿರೋಧ (Antimicrobial Resistance/ AMR) ಎಂದು ಕರೆಯಲಾಗುತ್ತದೆ.

ಬ್ಯಾಕ್ಟೀರಿಯಾಗಳು ತಮ್ಮನ್ನು ತಾವು ಮಾರ್ಪಡಿಸಿಕೊಳ್ಳುವುದರಿಂದ ಎಬಿಆರ್‌ ಸಮಯದೊಂದಿಗೆ ನೈಸರ್ಗಿಕವಾಗಿ ಸಂಭವಿಸಬಹುದು. ಆದರೆ ಈ ಪ್ರಕ್ರಿಯೆಯು ಈ ಕೆಳಗಿನ ಅಂಶಗಳಿಂದ ವೇಗಗೊಳ್ಳುತ್ತದೆ.

 ಪ್ರತಿಜೀವಕಗಳನ್ನು ದುರುಪಯೋಗ ಪಡಿಸಿಕೊಳ್ಳುವುದರಿಂದ: ಅಂದರೆ ಪ್ರತಿಜೀವಕ ಔಷಧಗಳನ್ನು ಅಗತ್ಯವಿಲ್ಲದಿದ್ದಾಗ ಸೂಚಿಸಲಾಗುತ್ತದೆ, ತಪ್ಪು ಪ್ರಮಾಣದಲ್ಲಿ ಸೇವಿಸಲಾಗುತ್ತದೆ. ಕೋಳಿ, ಹಂದಿ, ಕುರಿ, ಮೀನುಗಳಂತಹ ಆಹಾರ ಪ್ರಾಣಿಗಳ ತೂಕವನ್ನು ಹೆಚ್ಚಿಸಲು ಮತ್ತು ಸೋಂಕನ್ನು ತಡೆಗಟ್ಟಲು ಪ್ರಾಣಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ರೋಗಗಳನ್ನು ತಡೆಗಟ್ಟಲು ಅವುಗಳನ್ನು ಬೆಳೆಗಳ (ಹಣ್ಣು-ತರಕಾರಿಗಳು) ಮೇಲೆ ಅತಿಯಾಗಿ ಬಳಸುವುದರಿಂದ ಪ್ರತಿಜೀವಕಗಳ ಮಿತಿಯಿಲ್ಲದ ಬಳಕೆಯಾಗುತ್ತಿದೆ.

 ಸಮುದಾಯದಲ್ಲಿ ನೈರ್ಮಲ್ಯದ ಕೊರತೆ: ಕೈಗಳನ್ನು ತೊಳೆಯದೆ ಆಹಾರವನ್ನು ಸೇವಿಸುವುದು, ಅಸಮರ್ಪಕ ತ್ಯಾಜ್ಯ ವಿಲೇವಾರಿ ವಿಧಾನಗಳು, ಮಾಂಸದ ಅಂಗಡಿಗಳಲ್ಲಿ ಅಸಮರ್ಪಕ ಶುಚಿತ್ವ ಮತ್ತು ಮಾಂಸದ ಅಸಮರ್ಪಕ ಸಂಗ್ರಹಣೆಯಂತಹ ಕಳಪೆ ನೈರ್ಮಲ್ಯ ಅಭ್ಯಾಸಗಳು, ಮಾರ್ಗಸೂಚಿಗಳ ಪ್ರಕಾರ ಒಳಚರಂಡಿ ನೀರನ್ನು ಸಂಸ್ಕರಿಸದಿರುವುದು, ನದಿಗಳಲ್ಲಿ ಔಷಧ ತ್ಯಾಜ್ಯವನ್ನು ಬೆರೆಸುವುದು.

 ಆಸ್ಪತ್ರೆಗಳಲ್ಲಿ ಅನೈರ್ಮಲ್ಯ ಅಭ್ಯಾಸಗಳು, ಕೈ ತೊಳೆಯದಿರುವುದು, ಅಗತ್ಯವಿದ್ದಾಗ ಮಾಸ್ಕ್ಗಳನ್ನು / ಕೈಗವಸುಗಳನ್ನು ಬಳಸದಿರುವುದು ಮುಂತಾದ ಸೋಂಕು ತಡೆಗಟ್ಟುವ ಕ್ರಮಗಳನ್ನು ಸರಿಯಾಗಿ ಅನುಸರಿಸದಿದ್ದರೆ ಎಬಿಆರ್‌/ಎಎಂಆರ್‌ ಸಂಭವಿಸಬಹುದು.

ಪ್ರತಿಜೀವಕ ಪ್ರತಿರೋಧದ ಪರಿಣಾಮ

ಸೋಂಕುಗಳಿಗೆ ಮೊದಲ ಸಾಲಿನ ಪ್ರತಿಜೀವಕಗಳಿಂದ (ಉದಾಹರಣೆಗೆ, ಅಮೋಕ್ಸಿಲಿನ್‌, ಅಝೀಥರೊಮೈಸಿನ್‌, ಪೆನಿಸಿಲಿನ್‌) ಚಿಕಿತ್ಸೆ ನೀಡಲು ಸಾಧ್ಯವಾಗದಿದ್ದಾಗ ದುಬಾರಿ ಯಾದವುಗಳನ್ನು ಬಳಸಬೇಕು. ಚಿಕಿತ್ಸೆಯ ವೆಚ್ಚವು ಹೆಚ್ಚುತ್ತದೆ, ಆಸ್ಪತ್ರೆಯಲ್ಲಿ ಉಳಿಯುವುದು ಮತ್ತು ಬಳಲುವುದು ಅನಿವಾರ್ಯ.

ಇವೆಲ್ಲವೂ ಕುಟುಂಬದ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸಬಹುದು. ಸರ್ವೇಸಾಮಾನ್ಯವಾದ ಬ್ಯಾಕ್ಟೀರಿಯಾದ ಸೋಂಕುಗಳಿಗೆ ಚಿಕಿತ್ಸೆ ನೀಡುವಲ್ಲಿ ಪ್ರತಿಜೀವಕಗಳು ನಿಷ್ಪರಿಣಾಮಕಾರಿಯಾದರೆ ಶಸ್ತ್ರಚಿಕಿತ್ಸೆಗಳು, ಸಿಸೇರಿಯನ್‌ ಹೆರಿಗೆ ವಿಧಾನಗಳು ಮತ್ತು ಅಂಗಾಂಗ ಕಸಿಗಳನ್ನು ಮಾಡುವುದು ಅಪಾಯಕಾರಿಯಾಗುತ್ತದೆ.

ಜಾಗತಿಕ ಮಟ್ಟದಲ್ಲಿ ಸೂಕ್ಷ್ಮಜೀವಿ ಪ್ರತಿರೋಧವು (ಎಎಂಆರ್‌) ಈಗ ಆರೋಗ್ಯದ ತುರ್ತುಸ್ಥಿತಿ ಎಂದು ಗುರುತಿಸಲಾಗಿದೆ. 2021ರ ಸಂಶೋಧನೆಯ ಪ್ರಕಾರ, 4.71 ಮಿಲಿಯನ್‌ ಸಾವುಗಳು ಪ್ರತಿಜೀವಕ ಪ್ರತಿರೋಧಕ್ಕೆ ಸಂಬಂಧಿಸಿವೆ ಎಂದು ಅಂದಾಜಿಸಲಾಗಿದೆ.

ಪ್ರತಿಜೀವಕ ಪ್ರತಿರೋಧವನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ

 ಕೈಗಳನ್ನು ಚೆನ್ನಾಗಿ ತೊಳೆಯುವುದು, ಆರೋಗ್ಯಕರ ರೀತಿಯಲ್ಲಿ ಆಹಾರವನ್ನು ತಯಾರಿಸುವುದು, ಅನಾರೋಗ್ಯದಿಂದ ಬಳಲುತ್ತಿರುವಾಗ ಇತರರೊಂದಿಗೆ ನಿಕಟ ಸಂಪರ್ಕವನ್ನು ಸೀಮಿತಗೊಳಿಸುವುದು, ಅಗತ್ಯ ಲಸಿಕೆಗಳನ್ನು ತೆಗೆದುಕೊಳ್ಳುವುದು, ಸುರಕ್ಷಿತ ನೀರು ಮತ್ತು ನೈರ್ಮಲ್ಯದ ಮೂಲಕ ಸೋಂಕಿನ ಅಪಾಯವನ್ನು ಕಡಿಮೆ ಮಾಡಿ. ಸೋಂಕುಗಳನ್ನು ತಡೆಗಟ್ಟುವುದರಿಂದ ಪ್ರತಿಜೀವಕ ಔಷಧಗಳ ಅಗತ್ಯವನ್ನು ಕಡಿಮೆ ಮಾಡಬಹುದು.

 ಪ್ರತಿಜೀವಕ ಔಷಧಗಳನ್ನು ಶಿಫಾರಸು ಮಾಡಲು ಯಾವಾಗಲೂ ಅರ್ಹ ವೈದ್ಯರನ್ನು ಸಂಪರ್ಕಿಸಿ, ಸಾಮಾನ್ಯ ವೈರಲ್‌ ಶೀತ ಮತ್ತು ಜ್ವರದ ಮೇಲೆ ಯಾವಾಗಲೂ ಕೆಲಸ ಮಾಡದ ಕಾರಣ ಪ್ರತಿಜೀವಕಗಳನ್ನು ಸೂಚಿಸಲು ಆರೋಗ್ಯ ವೃತ್ತಿಪರರನ್ನು ಒತ್ತಾಯಿಸಬೇಡಿ, ಯಾವಾಗಲೂ ಸೂಚಿಸಿದ ಔಷಧಗಳ ಡೋಸೇಜ್‌ ಅನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಉಳಿದ ಪ್ರತಿಜೀವಕಗಳನ್ನು ಕುಟುಂಬಗಳೊಂದಿಗೆ ಹಂಚಿಕೊಳ್ಳಬೇಡಿ.

“ಅತಿ ಸರ್ವತ್ರ ವರ್ಜಯೇತ್‌’ ಎಂಬ ಪ್ರಸಿದ್ಧ ಮಾತಿದೆ, ಇದನ್ನು ಇಲ್ಲಿ ಅನ್ವಯಿಸಬಹುದು. ಮಾನವರು, ಪ್ರಾಣಿಗಳು ಮತ್ತು ಬೆಳೆಗಳಲ್ಲಿ ಔಷಧಗಳ ಅತಿಯಾದ ಸೇವನೆ/ಬಳಕೆಯು ಜೀವಿಗಳು ಮತ್ತು ಪರಿಸರಕ್ಕೆ ಹಾನಿಕಾರಕವಾಗಿದೆ. ಎಎಂಆರ್‌ ಕೇವಲ ವೈದ್ಯಕೀಯ ಸಮಸ್ಯೆಯಲ್ಲ; ಇದು ಎಲ್ಲರ ಮೇಲೂ ಪರಿಣಾಮ ಬೀರುತ್ತದೆ. ಇದನ್ನು ತಡೆಗಟ್ಟಲು ಯಾವ ಸರಳ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಈಗ ನಿಮಗೆಲ್ಲರಿಗೂ ತಿಳಿದಿದೆ, ಭವಿಷ್ಯದಲ್ಲಿ ಯಾವುದೇ ಸಾಂಕ್ರಾಮಿಕ ರೋಗದ ಸಾಧ್ಯತೆಗಳನ್ನು ತಪ್ಪಿಸಲು ಅವುಗಳನ್ನು ಅನುಸರಿಸಿ.

ವಿಶ್ವ ಎಎಂಆರ್‌ ಜಾಗೃತಿ ವಾರ (ಡಬ್ಲ್ಯುಎಎಡಬ್ಲ್ಯು) ಎಎಂಆರ್‌ ಬಗ್ಗೆ ಜಾಗೃತಿ ಮತ್ತು ತಿಳುವಳಿಕೆಯನ್ನು ಹೆಚ್ಚಿಸಲು ಮತ್ತು ಔಷಧ-ನಿರೋಧಕ ಸೋಂಕುಗಳ ಹೊರಹೊಮ್ಮುವಿಕೆ ಮತ್ತು ಹರಡುವಿಕೆಯನ್ನು ಕಡಿಮೆ ಮಾಡಲು ಎಲ್ಲರಲ್ಲೂ ಉತ್ತಮ ಅಭ್ಯಾಸಗಳನ್ನು ಉತ್ತೇಜಿಸುವ ಜಾಗತಿಕ ಅಭಿಯಾನವಾಗಿದೆ. ಈ ಜಾಗೃತಿ ವಾರವನ್ನು ಪ್ರತಿವರ್ಷ ನವೆಂಬರ್‌ 18 ರಿಂದ 24ರವರೆಗೆ ಆಚರಿಸಲಾಗುತ್ತದೆ. ಈ ವರ್ಷದ ಎಎಂಆರ್‌ ಜಾಗೃತಿ ಸಪ್ತಾಹವು “ಶಿಕ್ಷಣ. ವಕಾಲತ್ತು. ಕಾರ್ಯಪ್ರವೃತ್ತ’ ಎಂಬ ಧ್ಯೇಯವಾಕ್ಯವನ್ನು ಹೊಂದಿದೆ.

ಈ ಲೇಖನವು ಎಎಂಆರ್‌ ವಿಷಯವನ್ನು ಪರಿಚಯಿಸುತ್ತದೆ ಮತ್ತು ಈ ತುರ್ತು ಸಮಸ್ಯೆಯನ್ನು ಎತ್ತಿ ಹಿಡಿಯುತ್ತದೆ. ಈ ವರ್ಷದ ಎಎಂಆರ್‌ ಜಾಗೃತಿ ಸಪ್ತಾಹದ ಮೇಲೆ ಕೇಂದ್ರೀಕರಿಸುವುದರೊಂದಿಗೆ ಈ ಲೇಖನವು ಎಎಂಆರ್‌ನ ಕಾರಣಗಳು, ಅಪಾಯಗಳು ಮತ್ತು ಜಾಗತಿಕ ಪರಿಣಾಮವನ್ನು ವಿವರಿಸುತ್ತದೆ. ಜತೆಗೆ ಅದರ ಏರಿಕೆಯನ್ನು ತಡೆಯಲು ನಾವು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಸೂಚಿಸುತ್ತದೆ. ಎಎಂಆರ್‌ ಅನ್ನು ಸರಿಯಾಗಿ ಅರ್ಥಮಾಡಿಕೊಂಡು, ಎಲ್ಲರೂ ಜತೆಯಲ್ಲಿ ಅದನ್ನು ತಡೆಗಟ್ಟುವ ಕ್ರಮಗಳನ್ನು ಅನುಸರಿಸುವುದರಿಂದ ಭವಿಷ್ಯದ ಪೀಳಿಗೆಗೆ ಜೀವರಕ್ಷಕ ಚಿಕಿತ್ಸೆಗಳನ್ನು ಕಾಯ್ದಿರಿಸಲು ನೆರವಾಗುತ್ತದೆ.

ಡಾ| ರಕ್ಷಿತಾ ಕೆ.,

ರಿಸರ್ಚ್‌ ಫೆಲೋ ಗ್ಲೋಬಲ್‌ ಹೆಲ್ತ್‌ ಪಾಲಿಸಿ ಮತ್ತು ಗವರ್ನೆನ್ಸ್‌ ವಿಭಾಗ

ಪ್ರಸನ್ನ ಸ್ಕೂಲ್‌ ಆಫ್ ಪಬ್ಲಿಕ್‌ ಹೆಲ್ತ್‌,

ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಸಿನ್‌ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

ಟಾಪ್ ನ್ಯೂಸ್

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Nagendra-ED

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

CS-Shadakshari

Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್‌.ಷಡಾಕ್ಷರಿ

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Madikeri: ವಾಹನ ಅಪಘಾತಕ್ಕೀಡಾದ ವ್ಯಕ್ತಿ ಸಾವುMadikeri: ವಾಹನ ಅಪಘಾತಕ್ಕೀಡಾದ ವ್ಯಕ್ತಿ ಸಾವು

Madikeri: ವಾಹನ ಅಪಘಾತಕ್ಕೀಡಾದ ವ್ಯಕ್ತಿ ಸಾವು

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ: ಡಿ. 28 ರಂದು ಕೋರ್ಟ್‌ ತೀರ್ಪು

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ: ಡಿ. 28 ರಂದು ಕೋರ್ಟ್‌ ತೀರ್ಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Nagendra-ED

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

CS-Shadakshari

Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್‌.ಷಡಾಕ್ಷರಿ

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.