ಬಾಳೆ ದಿಂಡಿನಲ್ಲಿವೆ ಆರೋಗ್ಯದ ಗುಟ್ಟು ..ಇದರಿಂದಾಗುವ ಪ್ರಯೋಜನಗಳೇನು ?
Team Udayavani, Jun 10, 2021, 3:58 PM IST
ಬಾಳೆ ಹಣ್ಣು ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಅದೆಷ್ಟೋ ಜನರಿಗೆ ಬಾಳೆ ದಿಂಡು ಕೂಡ ಆರೋಗ್ಯಕ್ಕೆ ಉತ್ತಮ ಎನ್ನುವ ವಿಚಾರ ಗೊತ್ತಿಲ್ಲ.
ಹೌದು, ಬಾಳೆ ಗೊನೆ ಕೊಯ್ದ ಬಳಿಕ ಬಾಳೆದಿಂಡನ್ನು ಕತ್ತರಿಸಿ ಎಸೆಯುತ್ತಾರೆ. ಆದರೆ, ಹಾಗೆ ಎಸೆಯುವ ಬದಲು ಅದನ್ನು ಸೀಳಿ ಒಳಭಾಗದ ಎಳೆಯ ದಿಂಡನ್ನು ತೆಗೆದಿಡಿ. ಇದರಿಂದ ಪಲ್ಯ, ಜ್ಯೂಸ್, ಬಜ್ಜಿ ಮತ್ತಿತರ ತಿನಿಸುಗಳನ್ನು ತಯಾರಿಸಬಹುದು.
ಬಾಳೆ ದಿಂಡು ಸೇವನೆಯಿಂದಾಗುವ ಪ್ರಯೋಜನಗಳೇನು ?
ಬಾಳೆ ದಿಂಡಿನಿಂದ ಸಿದ್ಧಪಡಿಸಲಾದ ಖಾದ್ಯಗಳ ಸೇವನೆಯಿಂದ ಹಲವು ಪ್ರಯೋಜನಗಳಿವೆ.
ದೇಹದ ಕಲ್ಮಶ ದೂರ :
ಬಾಳೆದಿಂಡಿನ ಪಲ್ಯ ಸೇವನೆ ಮಾಡುವುದರಿಂದ ಗೊತ್ತಿಲ್ಲದೆ ನಮ್ಮ ಹೊಟ್ಟೆಯೊಳಗೆ ಸೇರಿದ ಕೂದಲು ಮೊದಲಾದ ಕಸಗಳು ಹೊರಹೋಗುತ್ತವೆ. ಹಾಗಾಗಿ ದೇಹದ ಕಲ್ಮಶ ಹೊರಹಾಕಲು ಇದನ್ನು ಸೇವಿಸುವುದು ಕಡ್ಡಾಯ.
ಮಲಬದ್ಧತೆ ಸಮಸ್ಯೆ ನಿವಾರಣೆ :
ಮಲಬದ್ಧತೆ ಸಮಸ್ಯೆಯನ್ನು ಇದು ದೂರ ಮಾಡುತ್ತದೆ. ನಾರಿನಂಶ ಹೇರಳವಾಗಿರುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಹೊಟ್ಟೆ ಉಬ್ಬರಿಸುವುದು, ಗ್ಯಾಸ್ಟ್ರಿಕ್ ನಂಥ ಸಮಸ್ಯೆಗಳು ದೂರವಾಗುತ್ತವೆ.
ಕಿಡ್ನಿ ಸ್ಟೋನ್ ಮಾಯ :
ಬಾಳೆದಿಂಡಿನಿಂದ ತಯಾರಿಸಿದ ಜ್ಯೂಸ್ ಅಥವಾ ಬಾಳೆದಿಂಡಿನ ರಸ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಕೂಡಾ ಕರಗುತ್ತದೆ. ಮೂತ್ರಪಿಂಡದಲ್ಲಾಗುವ ಸಮಸ್ಯೆಗಳಿಗೆ ಬಾಳೆ ದಿಂಡಿನಲ್ಲಿರುವ ಪೊಟ್ಯಾಶಿಯಂ ಅತ್ಯುತ್ತಮ ಔಷಧ. ರಕ್ತಹೀನತೆಯನ್ನು ದೂರಮಾಡಿ, ಕಬ್ಬಿಣಾಂಶವನ್ನು ಹೆಚ್ಚಿಸುತ್ತದೆ.
ಉಪಯೋಗಕ್ಕೆ ಬರುವುದಿಲ್ಲ ಎಂದು ಎಸೆಯುವ ಬಾಳೆ ದಿಂಡಿನಿಂದ ಮೇಲೆ ತಿಳಿಸಿದ ರೀತಿಯಲ್ಲಿ ಹಲವು ಪ್ರಯೋಜನಕಾರಿಗಳಾಗುತ್ತವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.