ದಿನಕ್ಕೊಂದು ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೆಯದು
ಜೀವಸತ್ವ, ಖನಿಜಾಂಶಗಳು ಹೇರಳವಾಗಿದ್ದು, ವಿಶೇಷವಾಗಿ ಮೊಡವೆ, ಸುಕ್ಕು, ಒಣ ತ್ವಚೆಯಾಗದಂತೆ ಕಾಪಾಡುತ್ತದೆ.
Team Udayavani, Aug 8, 2022, 12:05 PM IST
ದೇಹಕ್ಕೆ ಬೇಕಾಗುವ ಸಾಕಷ್ಟು ಪೋಷಕಾಂಶಗಳು ಅಡಕವಾಗಿರುವ ಬಾಳೆಹಣ್ಣನ್ನು ದಿನಕ್ಕೊಂದು ಸೇವಿಸುವುದು ದೇಹಾರೋಗ್ಯದ ದೃಷ್ಟಿಯಿಂದ ಅತ್ಯುತ್ತಮ. ಆರೋಗ್ಯ ಉತ್ತಮವಾಗಿರಬೇಕು ಎಂದರೆ ಜೀರ್ಣಾಂಗವ್ಯೂಹ ಸುಸ್ಥಿತಿಯಲ್ಲಿರಬೇಕು. ಬಾಳೆಹಣ್ಣು ನಮ್ಮ ಜೀರ್ಣಾಂಗ ಪ್ರಕ್ರಿಯೆಯನ್ನು ಸುಸ್ಥಿತಿಯಲ್ಲಿರಿಸುತ್ತದೆ.
ದೇಹದ ತೂಕ ಇಳಿಸುವಲ್ಲಿಯೂ ಬಾಳೆಹಣ್ಣು ಪ್ರಮುಖ ಪಾತ್ರವಹಿಸುತ್ತದೆ. ಇದರಲ್ಲಿ ನಾರಿನಾಂಶ, ಪ್ರೊಟೀನ್ ಹೇರಳವಾಗಿದ್ದು, ಹೆಚ್ಚು ಹೊತ್ತು ಹೊಟ್ಟೆ ತುಂಬಿದ
ಅನುಭವ ಕೊಡುತ್ತದೆ. ಹೀಗಾಗಿ ತೂಕ ಇಳಿಸಲು ಇದು ಪೂರಕ.
ತ್ವಚೆಯ ಆರೋಗ್ಯ ಕಾಪಾಡುವಲ್ಲಿ ಬಾಳೆಹಣ್ಣು ಪ್ರಮುಖ ಪಾತ್ರವಹಿಸುತ್ತದೆ. ಇದಲ್ಲಿ ಜೀವಸತ್ವ, ಖನಿಜಾಂಶಗಳು ಹೇರಳವಾಗಿದ್ದು, ವಿಶೇಷವಾಗಿ ಮೊಡವೆ, ಸುಕ್ಕು, ಒಣ ತ್ವಚೆಯಾಗದಂತೆ ಕಾಪಾಡುತ್ತದೆ.
ಬಾಳೆಹಣ್ಣು ದೇಹಕ್ಕೆ ಚೈತನ್ಯ ಒದಗಿಸುತ್ತದೆ. ಹೆಚ್ಚು ಸುಸ್ತು ಅನುಭವವಾಗುತ್ತಿದ್ದರೆ ಅಥವಾ ವ್ಯಾಯಾಮದ ಅನಂತರ ಇದನ್ನು ಸೇವಿಸುವುದರಿಂದ ದೇಹದಲ್ಲಿ ಅತೀ ಶೀಘ್ರದಲ್ಲಿ ಶಕ್ತಿ ತುಂಬುತ್ತದೆ.
ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಹೇರಳವಾಗಿದ್ದು, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ದೃಷ್ಟಿ ಚುರುಕಾಗಿಸಲು ಬಾಳೆ ಹಣ್ಣು ಹೆಚ್ಚು ಪೂರಕ. ಇದರಲ್ಲಿರುವ ವಿಟಮಿನ್ ಎ, ಈ ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇಷ್ಟೆಲ್ಲ ಗುಣಗಳಿರುವ ಬಾಳೆಹಣ್ಣು ದಿನಕ್ಕೊಂದು ಸೇವಿಸಿದರೆ ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಸಾಧ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.