ಆಗಾಗ ಮಾಸ್ಕ್ ಬದಲಿಸುತ್ತಿರಿ : ಬ್ಲ್ಯಾಕ್ ಫಂಗಸ್ ಹೊಡೆದೊಡಿಸಿ
Team Udayavani, May 24, 2021, 3:40 PM IST
ದೇಶದಲ್ಲಿ ರಕ್ಕಸ ಕೋವಿಡ್ ಮಹಾಮಾರಿ ಅಟ್ಟಹಾಸದ ಜೊತೆಗೆ ಬ್ಲ್ಯಾಕ್ ಫಂಗಸ್ ಕಾಯಿಲೆ ಕೂಡ ಭೀತಿ ಹುಟ್ಟಿಸುತ್ತಿದೆ. ಈಗಾಗಲೇ ಹಲವು ಜನರನ್ನು ಬಲಿ ಪಡೆದಿರುವ ಬ್ಲ್ಯಾಕ್ ಫಂಗಸ್ ದೇಶದ ಜನತೆಯನ್ನು ಬೆಂಬಿಡದೆ ಕಾಡುತ್ತಿದೆ.
ಹಾಗಾದರೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುವುದು ಹೇಗೆ ? ಈ ಕಾಯಿಲೆ ಹುಟ್ಟಿಕೊಳ್ಳಲು ಕಾರಣಗಳು ಏನು ? ಎಂಬುದರ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.
ಬ್ಲ್ಯಾಕ್ ಫಂಗಸ್‌ಗೆ ಪ್ರಮುಖ ಕಾರಣವೇನು?
ತಜ್ಞರ ಪ್ರಕಾರ ಕೋವಿಡ್ 19 ಸೋಂಕಿತರಲ್ಲಿ ನಿಯಂತ್ರಣಕ್ಕೆ ಬಾರದ ಮಧುಮೇಹ ಸಮಸ್ಯೆಯಿದ್ದು ಅಂಥವರಿಗೆ ಸ್ಟಿರಾಯ್ಡ್, ಟೊಸಿಲಿಜುಮಾಬ್ ಹಾಗೂ ವೆಂಟಿಲೇಟರ್ ಚಿಕಿತ್ಸೆ ನೀಡಿದಾಗ ಈ ರೀತಿಯ ಮ್ಯೂಕೋರ್ಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.
ಏಮ್ಸ್‌ನ ಸೀನಿಯರ್ ನ್ಯೂರೋಸರ್ಜನ್ ಆಗಿರುವ ಡಾ. ಪಿ ಸರತ್ ಚಂದ್ರ ಅವರು ‘ ಕೋವಿಡ್ 19ಗೆ 6 ವಾರಗಳಿಗಿಂತ ಅಧಿಕ ಚಿಕಿತ್ಸೆ ಪಡೆದವರಲ್ಲಿ ಬ್ಲ್ಯಾಕ್ ಫಂಗಸ್ ಬರುವ ಅಪಾಯ ಅಧಿಕ’ ಎಂದು ಹೇಳಿದ್ದಾರೆ.
ಬ್ಲ್ಯಾಕ್ ಫಂಗಸ್‌ಗೆ ಒಂದು ಪ್ರಮುಖ ಕಾರಣವೆಂದರೆ ನಿಯಂತ್ರಣಕ್ಕೆ ಬಾರದ ಮಧುಮೇಹ, ಅಲ್ಲದೆ ವೆಂಟಿಲೇಟರ್‌ನಲ್ಲಿರುವ ರೋಗಿಯ ಚೇತರಿಕೆಗೆ ಬಳಸುತ್ತಿರುವ ಸ್ಟಿರಾಯ್ಡ್ ಹಾಗೂ ಟೊಸಿಲಿಜುಮಾ, ಆಕ್ಸಿಜನ್ ಸಪ್ಲಿಮೆಂಟ್ ಇವೆಲ್ಲಾ ಬ್ಲ್ಯಾಕ್ ಫಂಗಸ್‌ಗೆ ಪ್ರಮುಖ ಕಾರಣಗಳಾಗಿವೆ.
ಕೋಲ್ಡ್ ಆಕ್ಸಿಜನ್‌ನಿಂದ ಕೂಡ ಬ್ಲ್ಯಾಕ್ ಫಂಗಸ್ ಬರುವುದು
ರೋಗಿಗೆ ಕೋಲ್ಡ್ ಆಕ್ಸಿಜನ್ ನೀಡುವುದು ಮತ್ತು ಆ್ಯಂಟಿ ಫಂಗಲ್ ಡ್ರಗ್ Posaconazole ನೀಡುವುದರಿಂದಲೂ ಬ್ಲ್ಯಾಕ್ ಫಂಗಸ್ ಉಂಟಾಗುತ್ತದೆ.
ಮಾಸ್ಕ್ ಬದಲಾಯಿಸುತ್ತಿರಿ:
ಮಾಸ್ಕ್ ಅನ್ನು ತುಂಬಾ ಸಮಯ ಬಳಕೆ ಮಾಡುವುದು ಕೂಡ ಬ್ಲ್ಯಾಕ್ ಫಂಗಸ್‌ಗೆ ಒಂದು ಕಾರಣವಾಗಿದೆ. ಬಟ್ಟೆ ಮಾಸ್ಕ್ ಧರಿಸುವವರು ಪ್ರತಿದಿನ ತೊಳೆಯಬೇಕು, ಹಾಗೂ ಒಣಗಿದ ಮಾಸ್ಕ್ ಧರಿಸಿಬೇಕು. ಬಟ್ಟೆ ಮಾಸ್ಕ್‌ಗೆ ಇಸ್ತ್ರಿ ಹಾಕಿ ಬಳಸುವುದು ಮತ್ತಷ್ಟು ಸುರಕ್ಷಿತ. N95 ಮಾಸ್ಕ್ ಬಳಸುವವರು 5 ಬಾರಿ ಬಳಕೆ ಮಾಡಿದ ಬಳಿಕ ಅದನ್ನು ಡಿಸ್ಪೋಸ್ (ಕಸದ ಬುಟ್ಟಿಗೆ ಹಾಕಿ). ಒಂದೇ ಮಾಸ್ಕ್ ಅನ್ನು ವಾರ ಪೂರ್ತಿ ಬಳಸುವುದು, ಒದ್ದೆ ಮಾಸ್ಕ್ ಬಳಸುವುದು ಇವು ಬ್ಲ್ಯಾಕ್ ಫಂಗಸ್ ಅಪಾಯ ಹೆಚ್ಚಿಸುವುದು.
ಗಾಳಿ ಚೆನ್ನಾಗಿ ಓಡಾಡುವ ರೂಮಿನಲ್ಲಿರಿ :
ಕೋವಿಡ್ ಸೋಂಕಿನಿಂದ ಚೇತರಿಸಿದವರನ್ನು ಗಾಳಿ ಚೆನ್ನಾಗಿ ಓಡಾಡುವ ರೂಮಿನಲ್ಲಿ ಇರಿಸಿ. ಗಾಳಿ ಕಡಿಮೆ ಇರುವ ಕೋಣೆ, ವಾಶ್ ಮಾಡದೇ ಬಳಸುವ ಮಾಸ್ಕ್ ಬ್ಲ್ಯಾಕ್ ಫಂಗಸ್ ಬರಲು ಕಾರಣವಾಗುವುದು.
ಸ್ವಯಂ ಚಿಕಿತ್ಸೆ ಬೇಡ :
ಕೆಲ ಸೋಂಕಿತರು ಸ್ಟಿರಾಯ್ಡ್ ಚಿಕಿತ್ಸೆಯನ್ನು ಸ್ವಯಂ ತೆಗೆದುಕೊಳ್ಳುತ್ತಾರೆ, ಅಂಥವರಲ್ಲಿ ಕೂಡ ಈ ಬ್ಲ್ಯಾಕ್ ಫಂಗಸ್ ಕಂಡು ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.