ಮೂತ್ರಕೋಶ ನೋವು ಕಾಯಿಲೆ ಬ್ಲಾಡರ್‌ ಪೇಯ್ನ ಸಿಂಡ್ರೋಮ್‌ (ಬಿಪಿಎಸ್‌) 

ಮೂತ್ರಕೋಶದ ಪದರಗಳ ಒಳಗೆ ಹರಿಯಲ್ಪಟ್ಟಾಗ, ಮೂತ್ರದಲ್ಲಿರುವ ವಿಷಾಂಶಗಳಿಂದಾಗಿ ತೊಂದರೆಗಳು ಉದ್ಭವಿಸುತ್ತವೆ.

Team Udayavani, Oct 17, 2022, 5:53 PM IST

ಮೂತ್ರಕೋಶ ನೋವು ಕಾಯಿಲೆ ಬ್ಲಾಡರ್‌ ಪೇಯ್ನ ಸಿಂಡ್ರೋಮ್‌ (ಬಿಪಿಎಸ್‌) 

ಶಾರದಾ ನಗರದ ಎಲ್ಲ ವೈದ್ಯರನ್ನೂ ಸಂಪರ್ಕಿಸಿದ್ದರು ಆದರೆ ಆಕೆಯ ನೋವು ಹಾಗೆಯೇ ಉಳಿದುಕೊಂಡಿತ್ತು. ಎಲ್ಲ ವೈದ್ಯರೂ ಮೊದಲು ಆಕೆಯನ್ನು ಪರೀಕ್ಷಿಸಿದಾಗ ನಿಮಗೆ ಮೂತ್ರಸೋಂಕು ಇದೆ ಎಂದೇ ಹೇಳಿದ್ದರು. ಆದರೆ ಪ್ರಯೋಗಾಲಯ ಪರೀಕ್ಷೆಗಳ ವರದಿ ಪ್ರತೀ ಬಾರಿಯೂ ಸೋಂಕನ್ನು ನಿರಾಕರಿಸಿತ್ತು. ಕೆಲವು ಆಕೆಯನ್ನು ಆ್ಯಂಟಿಬಯಾಟಿಕ್‌ ಔಷಧಿಗಳ ಮೂಲಕ ಚಿಕಿತ್ಸೆಗೆ ಒಳಪಡಿಸಿದ್ದರು. ಇನ್ನು ಕೆಲವರು ಹಾಗೆ ಮಾಡಿರಲಿಲ್ಲ. ಏನೇ ಆದರೂ ಆಕೆಯ ಸ್ಥಿತಿ ಉತ್ತಮಗೊಂಡಿರಲೇ ಇಲ್ಲ.

ನಮ್ಮ ಹೊರರೋಗಿ ವಿಭಾಗವು ವಿಶೇಷವಾಗಿ ಮಹಿಳೆಯರ ಮೂತ್ರಸಂಬಂಧಿ ಸಮಸ್ಯೆಗಳಿಗೆ ವಿಶೇಷವಾಗಿ ಚಿಕಿತ್ಸೆ ನೀಡುತ್ತೇವೆ ಎಂಬುದನ್ನು ಯಾರಿಂದಲೋ ಕೇಳಿ ಶಾರದಾ ಕೊನೆಯ ಪ್ರಯತ್ನವಾಗಿ ನಮ್ಮ ಹೊರರೋಗಿ ವಿಭಾಗಕ್ಕೆ ಆಗಮಿಸಿದ್ದರು. ಎರಡು ಮಕ್ಕಳ ತಾಯಿ, 36 ವಯಸ್ಸಿನ ಶಾರದಾ ನಮ್ಮಲ್ಲಿ ಬಂದಾಗ ತನ್ನ ನೋವು ಎರಡು ವರ್ಷಗಳ ಹಿಂದೆ ಆರಂಭವಾಗಿತ್ತು ಎಂಬುದಾಗಿ ಹೇಳಿದರು. ಎರಡು ವರ್ಷಗಳ ಹಿಂದಿನವರೆಗೆ ಎಲ್ಲವೂ ಸರಿಯಾಗಿತ್ತು, ಬಳಿಕ ಸಮಸ್ಯೆಗಳು ನಿಧಾನವಾಗಿ ಬಿಗಡಾಯಿಸಲು ಆರಂಭಿಸಿದ್ದವು. ಆಕೆಯ ಕೆಳಹೊಟ್ಟೆಯ ಭಾಗದಲ್ಲಿ ಸರಿಸುಮಾರಾಗಿ ಯಾವಾಗಲೂ ನೋವು ಇರುತ್ತಿತ್ತು. ಆಕೆಗೆ ದೀರ್ಘ‌ಕಾಲ ಮೂತ್ರ ತಡೆ ಹಿಡಿದುಕೊಳ್ಳಲು ಆಗುತ್ತಿರಲಿಲ್ಲ, ಕೆಲವೊಮ್ಮೆ ಮೂತ್ರ ವಿಸರ್ಜನೆ ಮಾಡುವುದು ಎಷ್ಟು ತುರ್ತಾಗುತ್ತಿತ್ತು ಎಂದರೆ, ಯಾವುದೇ ಕಾರಣದಿಂದ ಶೌಚಾಲಯಕ್ಕೆ ಹೋಗುವುದು ಸಾಧ್ಯವಾಗದೆ ಇದ್ದರೆ ಮೂತ್ರ ಸ್ರಾವವಾಗಿ ಬಟ್ಟೆ ಒದ್ದೆಯಾಗಿ ಬಿಡುತ್ತಿತ್ತು. ಹಗಲು ಪ್ರತೀ ಗಂಟೆಗೊಮ್ಮೆ ಎಂಬಂತೆ ಶೌಚಾಲಯಕ್ಕೆ ಹೋಗಬೇಕಾಗಿತ್ತು, ರಾತ್ರಿ ಮೂತ್ರವಿಸರ್ಜನೆಯ ತೀವ್ರ ಬಯಕೆಯೊಂದಿಗೆ ನಾಲ್ಕೈದು ಬಾರಿ ಏಳಬೇಕಾಗುತ್ತಿತ್ತು. ತನ್ನ ಸಮಸ್ಯೆಯ ಬಗ್ಗೆ ವಿವರವಾಗಿ ತಿಳಿಸುತ್ತಾ ಶಾರದಾಗೆ ಕಣ್ಣೀರೇ ಬಂದುಬಿಟ್ಟಿತು, ಏಕೆಂದರೆ ಆಕೆ ಸಂಪರ್ಕಿಸಿದ್ದ ಕೊನೆಯ ವೈದ್ಯರು ನಿಮ್ಮದು ಮನಸ್ಸಿಗೆ ಸಂಬಂಧಿಸಿದ ಸಮಸ್ಯೆ ಎಂದು ಹೇಳಿ ಮನೋವೈದ್ಯರನ್ನು ಸಂಪರ್ಕಿಸಲು ತಿಳಿಸಿದ್ದರು!

ನಾವು ಆಕೆಯ ಪರೀಕ್ಷಾ ವರದಿಗಳನ್ನು ನೋಡಿದೆವು. ಮೂತ್ರ ಪರೀಕ್ಷೆಯ ವಿಭಿನ್ನ ವರದಿಗಳಿದ್ದವು, ಆದರೆ ಎಲ್ಲೂ ಸೋಂಕಿನ ವರದಿಗಳು ಇರಲಿಲ್ಲ. ಶಾರದಾ ಅವರನ್ನು ನಿಜವಾಗಿಯೂ ಬಾಧಿಸುತ್ತಿದ್ದದ್ದು ಇಂಟರ್‌ಸ್ಟೀಶಿಯಲ್‌ ಸಿಸ್ಟೈಟಿಸ್‌ ಅಥವಾ ಮೂತ್ರಕೋಶ ನೋವು ಕಾಯಿಲೆ (ಬಿಪಿಎಸ್‌) ಎಂಬ ಸಮಸ್ಯೆ. ಈ ಸಮಸ್ಯೆಗೆ ಒಳಗಾದ ರೋಗಿಯು ಮೂತ್ರ ಸೋಂಕು ಸಮಸ್ಯೆಯ ಚಿಹ್ನೆಗಳನ್ನೇ ಹೋಲುವ ಚಿಹ್ನೆಗಳನ್ನು ಭಿನ್ನ ತೀವ್ರತೆಯೊಂದಿಗೆ ಅನೇಕ ತಿಂಗಳುಗಳಿಂದ ಹೊಂದಿರುತ್ತಾರೆ. ಆದರೆ ಪರೀಕ್ಷೆಗಳಲ್ಲಿ ಯಾವುದೇ ಸೋಂಕು ಕಂಡುಬರುವುದಿಲ್ಲ. ಇದೊಂದು ದೀರ್ಘ‌ಕಾಲಿಕ ಸಮಸ್ಯೆಯಾಗಿದ್ದು, ಪುರುಷರಿಗಿಂತ ಮಹಿಳೆಯರಲ್ಲೇ ಕಂಡುಬರುವುದು ಹೆಚ್ಚು. ರೋಗಿಗೆ ಲಘು ಕಿರಿಕಿರಿ, ಒತ್ತಡ, ಮೂತ್ರಕೋಶ ಮತ್ತು ತೊಡೆ – ಸೊಂಟ ಸಂಧಿ ಭಾಗದಲ್ಲಿ ಮೃದುತನ, ನೋವಿನ ಅನುಭವ ಉಂಟಾಗಬಹುದು.

ಮೂತ್ರ ವಿಸರ್ಜನೆಯ ಬಯಕೆ ಪದೇಪದೇ ಉಂಟಾಗುತ್ತಿರುತ್ತದೆ. ಈ ಚಿಹ್ನೆಗಳು ಸಾಮಾನ್ಯವಾಗಿ ಅನೇಕ ತಿಂಗಳುಗಳಿಂದ ಇರುತ್ತವೆ. ಚಿಹ್ನೆಗಳ ತೀವ್ರತೆ ಬದಲಾಗುತ್ತಾ ಇರುತ್ತದೆ – ಒಂದು ದಿನ ಇದ್ದಂತೆ ಇನ್ನೊಂದು ದಿನ ಇರುವುದಿಲ್ಲ. ಲಕ್ಷಣಗಳು ಕೆಲವು ದಿನಗಳಲ್ಲಿ ಇತರ ದಿನಗಳಿಗಿಂತ ಹೆಚ್ಚು ತೀವ್ರವಾಗಿರುತ್ತವೆ. ಇದನ್ನು ಇರಿಟೇಬಲ್‌ ಬವೆಲ್‌ ಸಿಂಡ್ರೋಮ್‌, ಫೈಬೊÅಮಯೇಲ್ಜಿಯಾ ಅಥವಾ ಕ್ರಾನಿಕ್‌ ಫ್ಯಾಟೀಗ್‌ ಸಿಂಡ್ರೋಮ್‌ ಜತೆಗೂ ತಳುಕು ಹಾಕುವುದು ಸಾಧ್ಯ. ಕೆಲವು ಮಹಿಳೆಯರಿಗೆ ಲೈಂಗಿಕ ಸಂಪರ್ಕ ಕಾಲದಲ್ಲಿಯೂ ನೋವು ಉಂಟಾಗಬಹುದು. ಹೀಗಾಗಿ ಬಿಪಿಎಸ್‌ ಕಾಯಿಲೆಯು ವೈಯಕ್ತಿಕ ಸಂಬಂಧ, ನಿದ್ರೆ ಮತ್ತು ದೈನಿಕ ಕಾರ್ಯಚಟುವಟಿಕೆಗಳ ಮೇಲೂ ಕೆಲವಷ್ಟು ಪರಿಣಾಮ ಬೀರುವುದು ಸಾಧ್ಯ.

ರೋಗ ಇತಿಹಾಸವನ್ನು ವಿಸ್ತೃತವಾಗಿ ಕಲೆ ಹಾಕುವ ಮೂಲಕ, ಕೂಲಂಕಷ ತಪಾಸಣೆ ಮತ್ತು ಪರೀಕ್ಷೆಗಳನ್ನು ಕೈಗೊಂಡು ತಜ್ಞ ವೈದ್ಯರೊಬ್ಬರು ಈ ನಿರ್ದಿಷ್ಟ ಕಾಯಿಲೆಯನ್ನು ನಿರ್ಧರಿಸುವುದು ಸಾಧ್ಯ. ಮೂತ್ರಕೋಶ ನೋವು, ಬ್ಯಾಕ್ಟೀರಿಯಾ ಸೋಂಕು ಇಲ್ಲದೆಯೇ ಪದೇಪದೇ ಅನೇಕ ಬಾರಿ ಮೂತ್ರವಿಸರ್ಜನೆ ಹಾಗೂ ಇವು ಆರು ತಿಂಗಳುಗಳಿಂದ ಹೆಚ್ಚು ಕಾಲ ಇರುವುದು – ಈ ತ್ರಿವಳಿ ಚಿಹ್ನೆಗಳು ಮೂತ್ರಕೋಶ ನೋವು ಸಿಂಡ್ರೋಮ್‌ನ ಗುಣಲಕ್ಷಣಗಳು. ಕೆಲವು ಸಂದರ್ಭಗಳಲ್ಲಿ ಸೂಕ್ಷ್ಮದರ್ಶಕದಂತಹ ಉಪಕರಣದ ಮೂಲಕ ಮೂತ್ರಕೋಶದ ಒಳಗನ್ನು ಪರೀಕ್ಷಿಸುವ ಸಿಸ್ಟೊಸ್ಕೊಪಿ ಅಥವಾ ಕೆಳ ಮೂತ್ರಜನಕಾಂಗ ವ್ಯೂಹದ ಕಾರ್ಯಚಟುವಟಿಕೆಯನ್ನು ತಿಳಿಯುವ ಯುರೋಡೈನಾಮಿಕ್‌ ತಪಾಸಣೆಗಳ ಅಗತ್ಯ ಬೀಳಬಹುದು. ಈ ಪರೀಕ್ಷೆಗಳನ್ನು ಮೂತ್ರಕೋಶ ನೋವು ಕಾಯಿಲೆಯನ್ನು ಪತ್ತೆ ಮಾಡುವುದಕ್ಕಿಂತಲೂ ಹೆಚ್ಚಾಗಿ ಇತರ ಅಪಾಯಕಾರಿ ಸಮಸ್ಯೆಗಳ ಸಂಭಾವ್ಯತೆ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳುವುದಕ್ಕಾಗಿ ಕೈಗೊಳ್ಳಲಾಗುತ್ತದೆ. ದಶಕಗಳ ಕಾಲದಿಂದ ನಡೆದ ಸಂವಾದ, ಅಧ್ಯಯನ, ಸಂಶೋಧನೆಗಳ ಹೊರತಾಗಿಯೂ ಈ ಕಾಯಿಲೆಯ ನಿಖರವಾದ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ದೀರ್ಘ‌ಕಾಲಿಕ ಸೋಂಕುಗಳು, ಕೆಲವು ಅಲರ್ಜಿಕಾರಕಗಳು ಅಥವಾ ಆಟೊ ಇಮ್ಯೂನ್‌ ಮಾಡ್ಯುಲೇಟರ್‌ಗಳು ಮೂತ್ರಕೋಶದ ಒಳ ರಕ್ಷಣಾ ಭಿತ್ತಿಯನ್ನು ಹಾನಿಗೀಡು ಮಾಡುತ್ತವೆ ಎಂಬುದಾಗಿ ಅಂದಾಜಿಸಲಾಗಿದೆ. ಈ ಹಾನಿಯಿಂದಾಗಿ ಮೂತ್ರವು ಮೂತ್ರಕೋಶದ ಪದರಗಳ ಒಳಗೆ ಹರಿಯಲ್ಪಟ್ಟಾಗ, ಮೂತ್ರದಲ್ಲಿರುವ ವಿಷಾಂಶಗಳಿಂದಾಗಿ ತೊಂದರೆಗಳು ಉದ್ಭವಿಸುತ್ತವೆ. ಇದರಿಂದ ನೋವು ಕಾಣಿಸಿಕೊಳ್ಳುತ್ತದೆ ಹಾಗೂ ಮೂತ್ರಕೋಶದ ಸ್ನಾಯುಗಳಲ್ಲಿ ನೋವಿನ ಅನುಭವಗಳು ಉಂಟಾಗಿ ಆಗಾಗ ಮೂತ್ರ ವಿಸರ್ಜನೆಯ ಬಯಕೆ ಉಂಟಾಗುತ್ತದೆ.

ಈ ಸಮಸ್ಯೆಗೆ ಅನೇಕ ವಿಧದ ಚಿಕಿತ್ಸೆಗಳು ಲಭ್ಯವಿವೆ. ಜೀವನ ವಿಧಾನ ಬದಲಾವಣೆ, ನಡವಳಿಕೆಯಲ್ಲಿ ಪರಿವರ್ತನೆ, ಔಷಧಗಳು ಮತ್ತು ಶಸ್ತ್ರಚಿಕಿತ್ಸೆ ಇವುಗಳಲ್ಲಿ ಒಳಗೊಂಡಿವೆ. ಚಿಹ್ನೆಗಳು ಮತ್ತು ರೋಗಿಯ ಚರಿತ್ರೆಗಳನ್ನು ಆಧರಿಸಿ ಚಿಕಿತ್ಸೆಯನ್ನು ವ್ಯಕ್ತಿ ನಿರ್ದಿಷ್ಟವಾಗಿ ಒದಗಿಸಬೇಕಾಗುತ್ತದೆ. ಈ ಕಾಯಿಲೆಯ ಸಂದರ್ಭದಲ್ಲಿ ಮೂತ್ರಕೋಶದ ಒಳಭಿತ್ತಿ ತುಂಬಾ ಸಂವೇದನಶೀಲ ಮತ್ತು ಅಸಹಿಷ್ಣುವಾಗಿರುವುದರಿಂದ ಮೂತ್ರವನ್ನು ಹೆಚ್ಚು ಆಮ್ಲಿಯಗೊಳಿಸುವ ಆಹಾರ ಮತ್ತು ಪಾನೀಯಗಳು ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಲ್ಲವು. ಆಹಾರಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ರೋಗಲಕ್ಷಣಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಕೆಲವು ಆಹಾರ ಮತ್ತು ಪಾನೀಯಗಳು ರೋಗಲಕ್ಷಣಗಳನ್ನು ಉಲ್ಬಣಗೊಳಿಸುವುದು ಖಂಡಿತ – ಅಂತಹ ಆಹಾರ ಮತ್ತು ಪಾನೀಯಗಳೆಂದರೆ, ಕಾಫಿ, ಚಹಾ, ಸೋಡಾ, ಮದ್ಯ, ಸಿಟ್ರಸ್‌ ಹಣ್ಣುಗಳ ರಸಗಳು, ಕ್ರೇನ್‌ಬೆರಿ ಜ್ಯೂಸ್‌ ಮತ್ತು ಮಸಾಲೆಯುಕ್ತ ಆಹಾರಗಳು. ನಿರ್ದಿಷ್ಟ ವ್ಯಕ್ತಿಗೆ ಯಾವ ಆಹಾರ ಅಥವಾ ಪಾನೀಯ ತೊಂದರೆದಾಯಕ ಎಂಬುದನ್ನು ತಿಳಿದುಕೊಳ್ಳಲು ವೈಯಕ್ತಿಕ “ಆಹಾರ ದಿನಚರಿ’ ರೂಪಿಸಿಕೊಳ್ಳುವುದು ಅಗತ್ಯ.

ಆಹಾರ ಶೈಲಿಯಲ್ಲಿ ನಡೆಸುವ ಬದಲಾವಣೆಗಳನ್ನು ವರ್ತನಾತ್ಮಕ ಪರಿವರ್ತನೆಗಳು ಹಾಗೂ ಔಷಧಗಳ ಜತೆಗೆ ಸಂಯೋಜಿಸಿಕೊಳ್ಳುವುದು ಯೋಗ್ಯ. ಮೂತ್ರಕೋಶಕ್ಕೆ ತರಬೇತಿ ನೀಡುವುದು ಹೆಚ್ಚು ಮೂತ್ರವನ್ನು ದೀರ್ಘ‌ಕಾಲ ಹಿಡಿದಿರಿಸಿಕೊಳ್ಳುವ ಉದ್ದೇಶದೊಂದಿಗೆ ನೀಡಲಾಗುವ ಒಂದು ಬಗೆಯ ವರ್ತನಾತ್ಮಕ ಚಿಕಿತ್ಸೆ. ಔಷಧಿಗಳನ್ನು ಬಾಯಿಯ ಮೂಲಕ ಸೇವಿಸಲು ನೀಡಲಾಗುತ್ತದೆ, ಕೆಲವು ತೀವ್ರ ತರಹದ ಪ್ರಕರಣಗಳಲ್ಲಿ ಔಷಧಿಗಳನ್ನು ನೇರವಾಗಿ ಮೂತ್ರಕೋಶಕ್ಕೆ ಊಡಿಸಲಾಗುತ್ತದೆ. ಮೇಲೆ ಹೇಳಲಾದ ಎಲ್ಲ ಬಗೆಯ ಚಿಕಿತ್ಸಾ ವಿಧಾನಗಳಿಗೂ ಪ್ರತಿಕ್ರಿಯಿಸದ ಪ್ರಕರಣಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ನಿಭಾಯಿಸಲಾಗುತ್ತದೆ. ಆದರೆ ಇಂತಹ ಸಂದರ್ಭಗಳು ಅಪರೂಪ. ಬಹುತೇಕ ರೋಗಿಗಳು ಸರಿಯಾದ ಚಿಕಿತ್ಸೆಯ ಮೂಲಕ ತಮ್ಮ ರೋಗಲಕ್ಷಣಗಳಲ್ಲಿ ಗಮನಾರ್ಹ ಇಳಿಕೆಯನ್ನು ಅನುಭವಿಸುತ್ತಾರೆ ಹಾಗೂ ಸಹಜ ಜೀವನ ನಡೆಸಲು ಶಕ್ತರಾಗುತ್ತಾರೆ.

– ಡಾ| ದೀಕ್ಷಾ ಪಾಂಡೆ 
ಅಸೊಸಿಯೇಟ್‌ ಪ್ರೊಫೆಸರ್‌ (ಒಬಿಜಿವೈಎನ್‌)
ಕಸ್ತೂರ್ಬಾ ವೈದ್ಯಕೀಯ ಆಸ್ಪತ್ರೆ, ಮಣಿಪಾಲ

ಟಾಪ್ ನ್ಯೂಸ್

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

1-tanker

Mangaluru; ಟ್ಯಾಂಕರ್‌ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.