ಮೂಳೆಗಳ ಆರೋಗ್ಯದಲ್ಲಿ ಕ್ಯಾಲ್ಸಿಯಂ ಮತ್ತು ವಿಟಾಮಿನ್ “ಡಿ’ ಗಳ ಪಾತ್ರ
Team Udayavani, Jan 29, 2017, 3:45 AM IST
ಕ್ಯಾಲ್ಸಿಯಂ ನಮ್ಮ ಮೂಳೆಗಳ ಆರೋಗ್ಯಕ್ಕೆ ಮತ್ತು ಆಸ್ಟಿಯೋಪೋರಸ್ ನಿವಾರಣೆಗೆ ಬಹಳ ಉತ್ತಮ ಅಂಶ. ಕ್ಯಾಲ್ಸಿಯಂ ಅನ್ನುವುದು ಮೂಳೆಗಳ ರಚನೆಗೆ ಬಹಳ ಆವಶ್ಯವಿರುವ ಪೋಷಕಾಂಶ. ನಮ್ಮ ಜೀವನಪರ್ಯಂತ ಮೂಳೆಗಳ ಆರೋಗ್ಯ ಮತ್ತು ದೃಢತೆಯನ್ನು ಕಾಪಾಡಿಕೊಳ್ಳಲು ಕ್ಯಾಲ್ಸಿಯಂ ಸಹಾಯ ಮಾಡುತ್ತದೆ. ಆದರೆ ನಿಮ್ಮ ಶರೀರಕ್ಕೆ ಸಾಕಷ್ಟು ಪ್ರಮಾಣದಲ್ಲಿ ವಿಟಾಮಿನ್ “ಡಿ’ ಪೂರೈಕೆ ಆದರೆ ಮಾತ್ರವೇ ಕ್ಯಾಲ್ಸಿಯಂ ಸದುಪಯೋಗವಾಗಿ ಮೂಳೆಗಳು ಸಂಪೂರ್ಣ ಸಂರಚನೆಯನ್ನು ತಲುಪಲು ಸಾಧ್ಯ.
ನಮ್ಮ ಮೂಳೆಗಳ ಸಂರಕ್ಷಣೆಗಾಗಿ ಕ್ಯಾಲ್ಸಿಯಂ ಮತ್ತು ವಿಟಾಮಿನ್ “ಡಿ’ಗಳು ಜೊತೆಯಾಗಿ ಕೆಲಸ ಮಾಡುತ್ತವೆ. ಕ್ಯಾಲ್ಸಿಯಂ ನಮ್ಮ ಶರೀರದಲ್ಲಿ ಮೂಳೆಗಳ ರಚನೆ ಮತ್ತು ನಿರ್ವಹಣೆಗೆ ಸಹಾಯ ಮಾಡಿದರೆ, ವಿಟಾಮಿನ್ “ಡಿ’ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ನಾವು ಆಹಾರದ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಅನ್ನು ಸೇವಿಸಿದರೂ ಸಹ, ನಮಗೆ ವಿಟಾಮಿನ್ “ಡಿ’ ಕೊರತೆ ಆದರೆ ಕ್ಯಾಲ್ಸಿಯಂನಿಂದ ನಮಗೆ ಹೆಚ್ಚು ಪ್ರಯೋಜನವಾಗುವುದಿಲ್ಲ.
ಕ್ಯಾಲ್ಸಿಯಂ
ನಮ್ಮ ಶರೀರದಲ್ಲಿರುವ ಒಟ್ಟು ಕ್ಯಾಲ್ಸಿಯಂನ 99.5% ಪ್ರಮಾಣ ನಮ್ಮ ಮೂಳೆಗಳಲ್ಲಿ ಇರುತ್ತದೆ. ಅನೇಕ ಜನರು ತಾವು ಸೇವಿಸುವ ಆಹಾರದ ಮೂಲಕ ಸಾಕಷ್ಟು ಕ್ಯಾಲ್ಸಿಯಂ ಅನ್ನು ಪಡೆಯುತ್ತಾರೆ.
ಕ್ಯಾಲ್ಸಿಯಂ ಅನ್ನು ಒಳಗೊಂಡಿರುವ
ಉತ್ತಮ ಆಹಾರ ಮೂಲಗಳು ಅಂದರೆ:
ಬೆಣ್ಣೆ
ಮೊಸರು
ಹಾಲು
ಸಾರ್ಡೆçನ್ ಗಳು ಮತ್ತು ಮೀನುಗಳು
ಬಸಳೆ, ಟರ್ನಿಪ್ ಗಡ್ಡೆಯಂತಹ ದಟ್ಟ ಹಸುರು ಬಣ್ಣದ ಸೊಪ್ಪು ತರಕಾರಿಗಳು
ಪುಷ್ಟೀಕರಿಸಿದ ಕಾರ್ನ್ ಫ್ಲೇಕ್ಸ್
ಪುಷ್ಟೀಕರಿಸಿದ ಕಿತ್ತಲೆ ರಸ.
ಸೋಯಾಬೀನ್ಸ್
ಪುಷ್ಟೀಕರಿಸಿದ ಬ್ರೆಡ್ ಮತ್ತು ಕಾಳುಗಳು
ಮನುಷ್ಯನ ವಯಸ್ಸು, ಲಿಂಗ ಮತ್ತು ಹಾರ್ಮೋನ್ ಮಟ್ಟವನ್ನು ಹೊಂದಿಕೊಂಡು ದಿನನಿತ್ಯಕ್ಕೆ ಶಿಫಾರಸು ಮಾಡುವ ಕಾಲ್ಸಿಯಂ ಪ್ರಮಾಣದಲ್ಲಿ ವ್ಯತ್ಯಾಸಗಳಾಗಬಹುದು.
ನಾವು ಗಮನಿಸಬೇಕಾದ ಬಹುಮುಖ್ಯ ಅಂಶ ಅದರೆ ಬೇರೆ ಬೇರೆ ವಯೋವರ್ಗದಲ್ಲಿರುವ ಅನೇಕ ಮಹಿಳೆಯರು ತಮ್ಮ ಆಹಾರದ ಮೂಲಕ ಸೂಕ್ತ ಪ್ರಮಾಣದ ಕ್ಯಾಲ್ಸಿಯಂ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅನೇಕ ಅನೇಕ ವೈದ್ಯರು ಕ್ಯಾಲ್ಸಿಯಂ ತೆಗೆದುಕೊಳ್ಳುವಂತೆ ಅವರ ಮಹಿಳಾ ರೋಗಿಗಳಿಗೆ ಶಿಫಾರಸು ಮಾಡುತ್ತಾರೆ.
ನಿಮ್ಮ ಕ್ಯಾಲ್ಸಿಯಂ ಸೇವನೆಯನ್ನು ಹೆಚ್ಚಳಗೊಳಿಸುವ ಒಂದು ಬಹುಮುಖ್ಯ ಉಪಾಯ ಅಂದರೆ ಆಹಾರದ ಮೂಲಕ ಕ್ಯಾಲ್ಸಿಯಂ ಸೇವನೆಯನ್ನು ಹೆಚ್ಚಿಸುವುದು. ಅನೇಕ ರೀತಿಯ ಶಿಫಾರಸು ರಹಿತ ಕ್ಯಾಲ್ಸಿಯಂ ಪೂರಣಗಳು ಲಭ್ಯ ಇದ್ದು ಅವು ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಆಸ್ಟೊಯೋಪೋರೋಸಿಸ್ ತೊಂದರೆಯನ್ನು ತಡೆಗಟ್ಟಲು ಸಹಾಯ ಮಾಡಬಹುದು. ತಮಗೆ ಯಾವುದು ಸೂಕ್ತ ಆಯ್ಕೆ ಸೂಕ್ತ ಎಂದು ತಿಳಿಯಲು ಈ ಬಗ್ಗೆ ವೈದ್ಯರಲ್ಲಿ ಚಾರಿಸಿದರೆ ಉತ್ತಮ.
ವಿಟಾಮಿನ್ “ಡಿ’
ಸ್ನಾಯು ಹಾಗೂ ಮೂಳೆಗಳು ದೃಢವಾಗಿ ಬೆಳೆಯಲು ವಿಟಾಮಿನ್ ಡಿ ಆವಶ್ಯಕ. ವಿಟಾಮಿನ್ “ಡಿ’ ಇಲ್ಲದೆ ಅವರ ಶರೀರವು ಕ್ಯಾಲ್ಸಿಯಂ ಅನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳದು. ನಮ್ಮ ಶರೀರದ ಮೂಳೆಗಳ ಆರೋಗ್ಯಕ್ಕೆ ವಿಟಾಮಿನ್ “ಡಿ’ ಬಹಳ ಆವಶ್ಯಕ. ವಿಟಾಮಿನ್ “ಡಿ’ ಅನ್ನುವುದು ವಾಸ್ತವವಾಗಿ ಒಂದು ವಿಟಾಮಿನ್ ಅಲ್ಲ. ವಿಟಾಮಿನ್‌ಗಳು ಅಂದರೆ ಶರೀರಕ್ಕೆ ಆವಶ್ಯಕವಿರುವ ಆದರೆ ತಯಾರಿಸಲು ಸಾಧ್ಯ ಇಲ್ಲದಿರುವ ವಿಶೇಷ ಪೋಷಕಾಂಶಗಳು, ಹಾಗಾಗಿ ಈ ಪೋಷಕಾಂಶಗಳನ್ನು ನಾವು ಸೇವಿಸುವ ಆಹಾರ ಅಥವಾ ಪೋಷಕಾಂಶ ಮೂಲಗಳಿಂದ ಪಡೆಯಬೇಕಾಗುತ್ತದೆ. ನಮ್ಮ ತ್ವಚೆಯನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವಾಗ ನಮ್ಮ ಶರೀರವು ತ್ವಚೆಯ ಮೂಲಕ ವಿಟಾಮಿನ್ “ಡಿ’ಯನ್ನು ಉತ್ಪಾದಿಸುವ ಕಾರಣ ವಿಟಾಮಿನ್ “ಡಿ’ಯನ್ನು ಹಾರ್ಮೋನ್ ಎಂಬುದಾಗಿ ಪರಿಗಣಿಸಲಾಗುತ್ತದೆ.
ವಿಟಾಮಿನ್ “ಡಿ’ ನಮ್ಮ ಶರೀರಕ್ಕೆ ಕ್ಯಾಲ್ಸಿಯಂ ಅನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅನೇಕ ಜನರಿಗೆ ಸೂರ್ಯನ ಬೆಳಕೇ ವಿಟಾಮಿನ್ “ಡಿ’ ಯ ಮೂಲ ಆಗಿರುತ್ತದೆ. ಆದರೆ ವಿಟಾಮಿನ್ “ಡಿ’ಯನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ, ಚರ್ಮಕ್ಕೆ ಸರಿಯಾದ ಹೊದಿಕೆ ಅಥವಾ ರಕ್ಷಣೆಯನ್ನು ನೀಡದೆ ಸೂರ್ಯನ ಪ್ರಖರ ಬೆಳಕಿಗೆ ತcಚೆಯನ್ನು ಒಡ್ಡಿಕೊಂಡರೆ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆಗಳು ಇವೆ. ಒಂದು ವೇಳೆ ನಿಮಗೆ ಈ ಬಗ್ಗೆ ಆತಂಕ ಇದ್ದರೆ ಅಥವಾ ನೀವು ಅಂದರೆ ಅಲ್ಲಿ ಸೂರ್ಯನ ಬೆಳಕು ಬರುವುದು ಬಹಳ ಅಪರೂಪವಾಗಿರುವ ಉತ್ತರ ಭಾಗದಲ್ಲಿ ನೆಲೆಸಿದ್ದರೆ ನೀವು ನಿತ್ಯ ಸೇವಿಸುವ ಆಹಾರದ ಮೂಲಕವೂ ಸಹ ವಿಟಾಮಿನ್ “ಡಿ’ಯನ್ನು ಪಡೆಯಬಹುದಾಗಿದೆ.
ವಿಟಾಮಿನ್ ಡಿ ಯ ಅತ್ಯುತ್ತಮ ಮೂಲಗಳು ಅಂದರೆ:
ವಿಟಾಮಿನ್ “ಡಿ’ – ಯಿಂದ ಪುಷ್ಟೀಕರಿಸಿದ ಹಾಲು
ಮೊಟ್ಟೆಯ ಹಳದಿ ಭಾಗ
ಕೊಬ್ಬಿನ ಮೀನು
ಇಷ್ಟ ಇದ್ದರೆ ಒಬ್ಬ ವ್ಯಕ್ತಿಯು ನಿತ್ಯವೂ ಬಹು ವಿಟಾಮಿನ್ ಮಾತ್ರೆಗಳು ಅಥವಾ ವಿಟಾಮಿನ್ “ಡಿ’ ಪೂರಣಗಳನ್ನು ಸೇವಿಸಬಹುದು. ವಿಟಾಮಿನ್ “ಡಿ’ಯನ್ನು ಒಳಗೊಂಡಿರುವ ಕ್ಯಾಲ್ಸಿಯಮ್ ಪೂರಣಗಳು ಸಹ ಲಭ್ಯ ಇವೆ.
ಆಹಾರ ಅಥವಾ ಪ್ರರಣಗಳ ಮೂಲಕ ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಾಮಿನ್ “ಡಿ’ಯನ್ನು ಪಡೆಯುವುದು ಆಸ್ತಿಯೋಪೋರೋಸಿಸ್ ತಡೆಗಟ್ಟುವಿಕೆಯ ಯೋಜನೆಯ ಬಹು ಮುಖ್ಯ ಅಂಶ ಆಗಿರುತ್ತದೆ. ನಿಮ್ಮ ನಿತ್ಯದ ಆಹಾರದಲ್ಲಿ ಈ ಪೋಷಕಾಂಶಗಳನ್ನು ಸೇರಿಸುವುದು ಎಷ್ಟು ಒಳ್ಳೆಯದು ಎಂಬ ಬಗ್ಗೆ ನಿಮ್ಮ ವೈದ್ಯರಲ್ಲಿ ಮಾತನಾಡಿ.
ಮುಂದುವರಿಯುವುದು
– ಡಾ| ಸುರೇಂದ್ರ ಯು. ಕಾಮತ್,
ಪ್ರೊಫೆಸರ್ ಮತ್ತು ಮುಖ್ಯಸ್ಥರು,
ಮೂಳೆಗಳ ಚಿಕಿತ್ಸಾ ವಿಭಾಗ,
ಕೆ ಎಂ ಸಿ ಆಸ್ಪತ್ರೆ, ಡಾ. ಬಿ ಆರ್ ಅಂಬೇಡ್ಕರ್ ವೃತ್ತ, ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.