ಸದ್ಯಕ್ಕಿಲ್ಲ ಬೂಸ್ಟರ್ ಡೋಸ್: ಕೇಂದ್ರ ಸರ್ಕಾರ
ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರಬೇಕು.
Team Udayavani, Sep 17, 2021, 2:50 PM IST
ನವದೆಹಲಿ: ಕೊರೊನಾ ಲಸಿಕೆಯ ಮೂರನೇ ಡೋಸ್ ನೀಡುವ ಬಗ್ಗೆ ಕೇಂದ್ರ, ವೈಜ್ಞಾನಿಕ ಮತ್ತು ಆರೋಗ್ಯದ ದೃಷ್ಟಿಯಿಂದ ಯಾವುದೇ ಚಿಂತನೆ ನಡೆಸಿಲ್ಲ. 2 ಡೋಸ್ ಲಸಿಕೆ ನೀಡುವುದೇ ಆದ್ಯತೆಯಾಗಿರುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನವದೆಹಲಿಯಲ್ಲಿ ಮಾತನಾಡಿದ ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ್, “ಲಸಿ ಕೆಯ ಎರಡೂ ಡೋಸ್ ಪಡೆಯುವುದು ಅಗತ್ಯ. ಅದರಲ್ಲಿ ಬದಲಾವಣೆ ಇಲ್ಲ. 3ನೇ ಡೋಸ್ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ’ ಎಂದಿದ್ದಾರೆ. ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರಬೇಕು.ಅಕ್ಟೋಬರ್ ಮತ್ತು ನವೆಂಬರ್ ನಿರ್ಣಾಯಕವಾಗಲಿವೆ. ಲಸಿಕೆ ನೀಡುವಿಕೆ ಹೆಚ್ಚಾಗಬೇಕು, ಮುನ್ನೆಚ್ಚರಿಕಾ ಕ್ರಮಗಳ ಪಾಲನೆಯಾಗಬೇಕು ಎಂದು ಎಚ್ಚರಿಸಿದ್ದಾರೆ.
ಶೇ. 70 ಜನರಲಿ ರೋಗನಿರೋಧಕ ಶಕ್ತಿ
ಗಣೇಶೋತ್ಸವ ಮತ್ತು ಸಂಭವನೀಯ ಕೊರೊನಾ ಮೂರನೇ ಅಲೆ ಹಿನ್ನೆಲೆ ಸರಕಾರ ಮತ್ತು ಮನಪಾ ಆಡಳಿತ ಆತಂಕದಲ್ಲಿರುವಾಗ ಇದೀಗ ಬಂದಿರುವ ಸಮೀಕ್ಷೆ ಯೊಂದು ನಿಟ್ಟುಸಿರು ಬಿಡುವಂತಾ ಗಿದೆ. ಮುಂಬಯಿ ಯಲ್ಲಿ ಶೇ.70ರಿಂದ 80ರಷ್ಟು ನಾಗರಿಕರಲ್ಲಿ ರೋಗನಿರೋಧಕ ಶಕ್ತಿ ಅಭಿವೃದ್ಧಿಯಾಗಿದೆ ಎಂಬ ಅಂಕಿ ಅಂಶಗಳು ಸೀರೋ ಸಮೀಕ್ಷೆಯಿಂದ ತಿಳಿದು ಬಂದಿವೆ.
ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ವತಿಯಿಂದ ನಗರದಲ್ಲಿ ಐದನೇ ಸೀರೋ ಸಮೀಕ್ಷೆಯನ್ನು ನಡೆಸಿದೆ. 24 ವಾರ್ಡ್ ಗಳಿಂದ 8,000 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಲಸಿಕೆ ಪಡೆದವರು ಮತ್ತು ಲಸಿಕೆ ಪಡೆಯದ ನಾಗರಿಕರನ್ನು ಒಳಗೊಂಡಿದೆ. ಚಿಕ್ಕ ಮಕ್ಕಳನ್ನು ಈ ಸಮೀಕ್ಷೆಯಲ್ಲಿ ಸೇರಿಸಲಾಗಿಲ್ಲ. ಸಮೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿಗಳ ಪೈಕಿ ಶೇ. 70ರಿಂದ 80ರಷ್ಟು ನಾಗರಿಕರು ರೋಗನಿರೋಧಕ ಶಕ್ತಿ ಹೊಂದಿದ್ದಾರೆ ಎಂದು ಕಂಡುಬಂದಿದೆ. ಈ ವಿವರವಾದ ವರದಿಯನು ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ ಸದ್ಯದಲ್ಲೇ ಹೊರಡಿಸುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.