ದೀವಿ ಹಲಸು ಆದಾಯಕ್ಕೂ ಲೇಸು
Team Udayavani, Sep 20, 2020, 5:30 AM IST
ದೀವಿ ಹಲಸು. ಎಲ್ಲ ಉಷ್ಣ ವಲಯ ಪ್ರದೇಶಗಳಲ್ಲಿ ಬೆಳೆಯುವ ಬೆಳೆಯಿದು. ಮಲಯ ದ್ವೀಪ ಸಮೂಹಗಳ ಮೂಲ ಆಗಿದ್ದು, ಭಾರತದ ನಾನಾ ಭಾಗದಲ್ಲಿ ಇದನ್ನು ಕಾಣಬಹುದು. ವಿವಿಧ ಖಾದ್ಯ ತಯಾರಿಕೆಯಲ್ಲಿ ಬಳಸಲ್ಪಡುವ ದಿವಿ ಹಲಸಿಗೆ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.
ಕರಾವಳಿ ಪ್ರಾಂತ್ಯದ ಮನೆಗಳ ಹಿತ್ತಿಲು ಅಥವಾ ತೋಟಗಳಲ್ಲಿ ಇದನ್ನು ನೋಡಬಹುದು. ತುಳು ಭಾಷೆಯಲ್ಲಿ ಜೀಗುಜ್ಜೆ ಅಥವಾ ದೀಗುಜ್ಜೆ ಎಂದು ಸಂಬೋಧಿಸುತ್ತಾರೆ. ದಕ್ಷಿಣ ಕನ್ನಡ, ಕಾರಾವರ, ಉತ್ತರ ಕರ್ನಾಟಕ, ಧಾರವಾಡಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ದೀಗುಜ್ಜೆಯಲ್ಲಿ ತೇವಾಂಶ, ಸಸಾರಾಜನಕ, ಮೇದಸ್ಸು, ಶರ್ಕರ, ನಾರು, ಖನಿಜ ಅಂಶಗಳಿವೆ. ಪೂರ್ಣವಾಗಿ ಬಲಿತಕಾಯಿ ಹಾಗೂ ಬೀಜಗಳನ್ನು ಬಳಸುತ್ತಾರೆ.
ಕಾಯಿಯಲ್ಲಿ ತಿರುಳಿನಲ್ಲಿ ಶೇ. 70 ರಷ್ಟು ತಿನ್ನಲು ಯೋಗ್ಯವಿರುತ್ತದೆ. ಬೇಯಿಸಿದ ಸಂದರ್ಭದಲ್ಲಿ ಸಾಮಾನ್ಯವಾಗಿ ಅಲೂಗಡ್ಡೆ ತರಹ ಇರುತ್ತದೆ. ಸಾರು, ಪಲ್ಯ, ಹುಳಿ ಮುಂತಾದ ತಯಾರಿಕೆಗೆ ಬಳಸಲಾಗುತ್ತದೆ. ದಿವಿ ಹಲಸು ಗಿಡದ ಬೆಳವಣಿಗೆಗೆ ನೀರು ಸುಲಭವಾಗಿ ಬಸಿದು ಹೋಗುವಂತಹ ಆಳವಾದ ಗೋಡು ಮಣ್ಣು ಉತ್ತಮ. ಇಲ್ಲಿ ಫಲವತ್ತತೆ ಅಂಶ ಅಧಿಕವಾಗಿದ್ದರೆ ಫಸಲು ಕೂಡ ಅಧಿಕ ದೊರೆಯುತ್ತದೆ.
ಬೆಳೆಯುವ ಬಗೆ
ಉಷ್ಣವಲಯದ ಬೆಳೆ ಆಗಿರುವುದರಿಂದ ಸಮುದ್ರ ಮಟ್ಟದಿಂದ 900 ಮೀಟರ್ ಎತ್ತರದ ತನಕವೂ ಸಾಗುವಳಿ ಮಾಡಲು ಸಾಧ್ಯವಿದೆ. ಬೆಚ್ಚಗಿನ ಹಾಗೂ ಕೆಳಮಟ್ಟದ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುತ್ತದೆ. 19 ರಿಂದ 30 ಸೆ.ಉಷ್ಣಾಂಶ, 200 ರಿಂದ 250 ಸೆಂ.ಮೀ. ಮಳೆ ಹಾಗೂ 70 ರಿಂದ 80 ಆರ್ದತೆ ಇರುವ ಪ್ರದೇಶಗಳಲ್ಲಿ ನಾಟಿಗೆ ಅನುಕೂಲಕರ. ಫಸಲಿನ ಹಿತದೃಷ್ಟಿಯಿಂದ ಶೀತ ಪ್ರದೇಶ ಮತ್ತು ಬೆಟ್ಟ ಗುಡ್ಡ ಪ್ರದೇಶಗಳು ಅಷ್ಟು ಸೂಕ್ತವಲ್ಲ ಎಂದೂ ತಜ್ಞರು ಅಭಿಪ್ರಾಯಪಡುತ್ತಾರೆ.
ಬೇಡಿಕೆ ಇದೆ
ಪದಾರ್ಥ ಹಾಗೂ ವಿವಿಧ ಖಾದ್ಯಗಳ ತಯಾರಿಕೆಗೆ ಜೀಗುಜ್ಜೆ ಹೆಚ್ಚಾಗಿ ಬಳಸ್ಪಡುವ ಕಾರಣ ಮಾರುಕಟ್ಟೆಗಳಲ್ಲಿ ಇದಕ್ಕೆ ಬೇಡಿಕೆಯೂ ಇದೆ. ಆದರೆ ದಕ್ಷಿಣ ಕನ್ನಡದಲ್ಲಿ ಇದನ್ನು ಆದಾಯದ ದೃಷ್ಟಿಯಿಂದ ಬೆಳೆಯುವುದು ಕಡಿಮೆ. ಮನೆ ಖರ್ಚಿಗೆ ಆದಿತು ಎಂಬ ಕಾರಣಕ್ಕೆ ಗಿಡ ನೆಡುತ್ತಾರೆ. ಇದನ್ನು ಉಪ ಬೆಳೆಯಾಗಿ ಬೆಳೆದರೆ ಒಂದಷ್ಟು ಆದಾಯವೂ ದೊರೆಯಬಹುದು. ತೋಟಗಾರಿಕಾ ಇಲಾಖೆಯಿಂದಲೂ ಈ ಸಸಿ ದೊರೆಯುವುದರಿಂದ ಉತ್ತಮ ಗುಣಮಟ್ಟದ ಗಿಡ ನಾಟಿ ಮಾಡಬಹುದು. ಅಡಿಕೆ, ತೆಂಗು, ರಬ್ಬರ್ ತೋಟ ಮಧ್ಯೆ ನಾಟಿ ಇದನ್ನು ಮಾಡುವಂತಹದಲ್ಲ. ದಿವಿ ಹಲಸು ರೆಂಬೆ, ಕೊಂಬೆ ಚಾಚಿಕೊಂಡು ಬೆಳೆಯುವ ಕಾರಣ, ವಿಸ್ತಾರವಾದ ಜಾಗವೂ ಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.