ಕ್ಯಾರೆಟ್ ವಿದ್ ಖರ್ಜೂರ ಜ್ಯೂಸ್…ಆರೋಗ್ಯವೃದ್ಧಿ ಜ್ಯೂಸ್
ಪಪ್ಪಾಯಿ ಹೋಳುಗಳಿಗೆ ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿ ಮಿಕ್ಸಿಂಗ್ ಬೌಲ್‌ಗೆ ಹಾಕಿ.
Team Udayavani, Dec 7, 2020, 1:11 PM IST
ಪಪ್ಪಾಯಿ ಜ್ಯೂಸ್..ಬೇಕಾಗುವ ಸಾಮಗ್ರಿ:
ಪಪ್ಪಾಯಿ ಹಣ್ಣಿನ ಹೋಳುಗಳು-ಒಂದು ಕಪ್, ಸಕ್ಕರೆ – ಎರಡು ಚಮಚ, ಲಿಂಬೆರಸ – ನಾಲ್ಕು ಚಮಚ, ಜೇನುತುಪ್ಪ- ಎರಡು ಚಮಚ, ಏಲಕ್ಕಿಪುಡಿ – ಕಾಲುಚಮಚ.
ತಯಾರಿಸುವ ವಿಧಾನ:
ಪಪ್ಪಾಯಿ ಹೋಳುಗಳಿಗೆ ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ ಇದಕ್ಕೆ ಬೇಕಷ್ಟು ನೀರು ಹಾಗೂ ಕಿತ್ತಾಳೆ ಅಥವಾ ಲಿಂಬೆರಸ ಸೇರಿಸಿ. ಜೇನುತುಪ್ಪ ಮತ್ತು ಐಸ್‌ಪೀಸ್ ಸೇರಿಸಿ ಸರ್ವ್ ಮಾಡಬಹುದು.
ಕ್ಯಾರೆಟ್ ವಿದ್ ಖರ್ಜೂರ ಜ್ಯೂಸ್
ಬೇಕಾಗುವ ಸಾಮಗ್ರಿ:
ಹೆಚ್ಚಿದ ಕ್ಯಾರೆಟ್ – ಎರಡು ಕಪ್, ಸಕ್ಕರೆ – ನಾಲ್ಕು ಚಮಚ, ಹಾಲು – ಎರಡು ಕಪ್, ಖರ್ಜೂರ – ನಾಲ್ಕು, ಗೇರುಬೀಜ – ಎಂಟು.
ತಯಾರಿಸುವ ವಿಧಾನ:
ಕ್ಯಾರೆಟ್‌ಗೆ ಸ್ವಲ್ಪ ನೀರು ಸೇರಿಸಿ ಬೇಯಲು ಇಡಿ. ಇದು ಬೇಯುತ್ತಾ ಬರುವಾಗ ಒಂದು ಕಪ್ ಹಾಲು ಸೇರಿಸಿಕೊಳ್ಳಿ. ಚೆನ್ನಾಗಿ ಬೇಯಿಸಿದ ನಂತರ ಆರಲು ಬಿಡಿ. ಇದಕ್ಕೆ ಹೆಚ್ಚಿದ ಖರ್ಜೂರ, ಹಾಲು, ಸಕ್ಕರೆ, ಗೋಡಂಬಿ ಸೇರಿಸಿ ನುಣ್ಣಗೆ ರುಬ್ಬಿ ಬೇಕಷ್ಟು ನೀರು ಸೇರಿಸಿಕೊಂಡು ಹದ ಮಾಡಿಕೊಳ್ಳಿ. ಗೋಡಂಬಿತರಿ ಹಾಗೂ ಐಸ್‌ಪೀಸ್ ಸೇರಿಸಿ ಸರ್ವ್ ಮಾಡಬಹುದು. ಹುಳಿತೇಗು, ಹೊಟ್ಟೆಉರಿ ಹೋಗಲಾಡಿಸುವುದರ ಜೊತೆಗೆ ಬೇಸಿಗೆಯಲ್ಲಿ ಕಾಡುವ ಶ್ಯಕ್ತಿಯನ್ನು ಶಮನಗೊಳಿಸುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.