ಮಕ್ಕಳಲ್ಲಿ ಅಸ್ತಮಾ ಬರುವುದೇಕೆ?ಯಾವ ಮಕ್ಕಳಿಗೆ ಅಸ್ತಮಾ ಹೆಚ್ಚು ಕಾಣಿಸಿಕೊಳ್ಳುತ್ತದೆ

ಮಗು ನೆಲಕ್ಕಿಂತಲೂ ಮಂಚದ ಮೇಲೆ ಮಲಗುವುದೇ ಸೂಕ್ತ.

Team Udayavani, Jan 27, 2023, 4:58 PM IST

ಮಕ್ಕಳಲ್ಲಿ ಅಸ್ತಮಾ ಬರುವುದೇಕೆ?ಯಾವ ಮಕ್ಕಳಿಗೆ ಅಸ್ತಮಾ ಹೆಚ್ಚು ಕಾಣಿಸಿಕೊಳ್ಳುತ್ತದೆ

ಅಸ್ತಮಾ ಪ್ರಾರಂಭದ ದಿನದಿಂದಲೇ ಅದನ್ನು ಗುರುತಿಸಿ ಸರಿಯಾದ ಚಿಕಿತ್ಸೆ ನೀಡಿದಾಗ ಮಗು ಬೇಗನೆ ಗುಣ ಹೊಂದಬಹುದು. ಈ ಕಾಯಿಲೆಯ ಬಗ್ಗೆ ತಿಳಿಯಲು ಜನಸಾಮಾನ್ಯರಿಗೆ ಕೆಲವು ವಿಷಯಗಳ ಪರಿಚಯ ಅವಶ್ಯಕ. ಅಸ್ತಮಾ ಇರುವ -ಬರುವ ಉಬ್ಬಸವನ್ನು ಬೇಗನೆ ಸೂಕ್ತ ಚಿಕಿತ್ಸೆ ನೀಡಿ ಶಮನಗೊಳಿಸುವುದರಿಂದ ತೀವ್ರವಾದ ಉಸಿರಾಟದ ತೊಂದರೆ ತಡೆಗಟ್ಟಬಹುದು.

ಅಸ್ತಮಾ ಕಾಯಿಲೆಯಿಂದ ಜಗತ್ತಿನಲ್ಲಿ ಸುಮಾರು 400 ಮಿಲಿಯನ್‌ ರೋಗಿಗಳು ಬಳಲುತ್ತಿದ್ದಾರೆ. ಇವರಲ್ಲಿ 100 ಮಿಲಿಯನ್‌ ರೋಗಿಗಳು ಭಾರತದಲ್ಲಿದ್ದಾರೆ. ಅತ್ಯಂತ ಅಪಾಯಕಾರಿ ಕಾಯಿಲೆಗಳಾದ ಡಯಾಬಿಟಿಸ್‌, ಹೃದ್ರೋಗ ಮತ್ತು ಕ್ಯಾನ್ಸರ್‌ಗಳಿಗಿಂತಲೂ ಹೆಚ್ಚು ಜನರು ಅಸ್ತಮಾ ಕಾಯಿಲೆಯಿಂದ ಸಾವು ಮತ್ತು ನೋವು ಅನುಭವಿಸುತ್ತಿದ್ದಾರೆ.

ಮುಂದುವರಿದ ರಾಷ್ಟ್ರಗಳಲ್ಲಿ ಪ್ರತಿಶತ 0.8ರಿಂದ 37ರಷ್ಟು ಮಕ್ಕಳು ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು, ಭಾರತದಲ್ಲಿ ಪ್ರತಿಶತ ಶೇ.2ರಿಂದ 20ರಷ್ಟಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಅಸ್ತಮಾದಿಂದ ಬಳಲುವ ಮಕ್ಕಳ ಪ್ರಮಾಣ ಶೇ.11ರಿಂದ 31 ಎಂದು ವೈಜ್ಞಾನಿಕವಾಗಿ ಗಣತಿ ಮಾಡಿದ ದಾಖಲಾತಿಗಳಿಂದ ದೃಢಪಡಿಸಲಾಗಿದೆ.

ಅಸ್ತಮಾ ಪ್ರಾರಂಭದ ದಿನದಿಂದಲೇ ಅದನ್ನು ಗುರುತಿಸಿ ಸರಿಯಾದ ಚಿಕಿತ್ಸೆ ನೀಡಿದಾಗ ಮಗು ಬೇಗನೆ ಗುಣ ಹೊಂದಬಹುದು. ಈ ಕಾಯಿಲೆಯ ಬಗ್ಗೆ ತಿಳಿಯಲು ಜನಸಾಮಾನ್ಯರಿಗೆ ಕೆಲವು ವಿಷಯಗಳ ಪರಿಚಯ ಅವಶ್ಯಕವೆನಿಸುತ್ತದೆ. ಶ್ವಾಸಕೋಶದ ರಚನೆ, ಅಸ್ತಮಾದಲ್ಲಿ ಉಬ್ಬಸ ಎಂದರೇನು? ಮತ್ತು ಯಾವುದರಿಂದ ಉಬ್ಬಸ ಬರಬಹುದು, ಉಬ್ಬಸ ಬಂದಾಗ ಅದರ ಚಿಕಿತ್ಸೆ, ಆಧುನಿಕವಾಗಿ ಅಸ್ತಮಾದಲ್ಲಿ ಉಪಯೋಗಿಸುವ ಉಪಕರಣಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

ಶ್ವಾಸಕೋಶದ ರಚನೆ: ಮೂಗಿನಿಂದ ಪ್ರಾರಂಭವಾಗಿ ಸಣ್ಣ ಸಣ್ಣದಾಗಿರುವ ಗಾಲಿ ಚೀಲದವರೆಗೆ ಶ್ವಾಸಕೋಶಗಳು ಸಂಪರ್ಕ ಹೊಂದಿವೆ. ಚಿಕ್ಕ ಗಾಳಿಚೀಲಗಳಲ್ಲಿ ಇಂಗಾಲದ ಡೈಆಕ್ಸೈಡ್‌ನ್ನು ಹೊರದೂಡಿ ಆಮ್ಲಜನಕವನ್ನು ಹೀರಿಕೊಳ್ಳುವ ಕೆಲಸ ಶ್ವಾಸಕೋಶದ್ದಾಗಿದೆ.

ಉಬ್ಬಸ ಎಂದರೇನು? ನಾವು ಉಸಿರಾಡುವ ಶ್ವಾಸಕೋಶದ ನಾಳಗಳು ಕಾರಣಾಂತರದಿಂದ ಸಂಕುಚಿತಗೊಂಡು ಅವುಗಳ ವ್ಯಾಸ ಕಮ್ಮಿಯಾಗಿ ರೋಗಿ ಉಸಿರಾಡುವಾಗ ಹೊರ ಹೊಮ್ಮುವ ಶಬ್ದ ಶಿಳ್ಳೆಯಂತೆ ಇರುತ್ತದೆ. ಅದನ್ನೇ ವೀಸ್‌ ಎಂದು ಕರೆಯಲಾಗುತ್ತದೆ. ಅದು ತೀವ್ರವಾದಾಗ ಆ ಶಬ್ದವು ಸ್ಕೆತಸ್ಕೋಫಿನ ಸಹಾಯ ಇಲ್ಲದೆ ಕೇಳಿಸುತ್ತದೆ. ಮಗುವಿಗೆ ಒಂದು ವರ್ಷದಲ್ಲಿ ಕನಿಷ್ಟ ಮೂರಕ್ಕಿಂತ ಹೆಚ್ಚು ಬಾರಿ ಉಬ್ಬಸದೊಂದಿಗೆ ಕೆಮ್ಮು ಇದ್ದು ಮತ್ತು ಆ ಕೆಮ್ಮು ಪ್ರತಿಬಾರಿಯೂ ಮೂರು ದಿನಕ್ಕಿಂತ ಹೆಚ್ಚು ದಿನವಿದ್ದರೆ ಅಂತ ಮಕ್ಕಳಿಗೆ ಅಸ್ತಮಾ ಇದೆ ಎಂದು ಗುರುತಿಸಲಾಗುವುದು.

ಉಬ್ಬಸ ಉಂಟಾಗುವುದು ಹೇಗೆ…?
ಇದಕ್ಕೆ ಮುಖ್ಯ ಕಾರಣವೆಂದರೆ ಶ್ವಾಸಕೋಶದ ನಾಳಗಳು. ಸುತ್ತುವರೆದ ಸ್ನಾಯುಗಳು ಸಂಕುಚಿತಗೊಳ್ಳುವುದರಿಂದ ನಾಳದೊಳಗೆ ಹೆಚ್ಚಿನ ಪ್ರಮಾಣದಲ್ಲಿ ಕಫ ಉತ್ಪತ್ತಿಯಾಗಿ, ನಾಳದೊಳಗಿರುವ ಮ್ಯೂಕಸ್‌ ಎಂಬ ಪದರಿನಲ್ಲಿ ಬಾವು ಉಂಟಾಗುತ್ತದೆ. ಈ ಮೂರು ಕ್ರಿಯೆಗಳು ಉಬ್ಬಸ ಬರುವ ಮಕ್ಕಳಿಗೆ ಪರಿಸರದಲ್ಲಾಗುವ ವ್ಯತ್ಯಾಸಗಳಿಗೆ ಬಹುಬೇಗನೆ ಅವಶ್ಯಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಉಂಟಾಗಿ ಕಾಯಿಲೆ ಲಕ್ಷಣಗಳಿಗೆ ಕಾರಣವಾಗುತ್ತದೆ.

ಯಾವ ಮಕ್ಕಳಿಗೆ ಅಸ್ತಮಾ ಹೆಚ್ಚು ಕಾಣಿಸಿಕೊಳ್ಳುತ್ತದೆ?: ಸಾಮಾನ್ಯವಾಗಿ ಒಂದು ವರ್ಷ ಮೇಲ್ಪಟ್ಟ ಮಕ್ಕಳಲ್ಲಿ. ಗಂಡು ಮಕ್ಕಳು ಪ್ರಾಯಕ್ಕಿಂತ ಮೊದಲು ಹಾಗೂ ಹೆಣ್ಣು ಮಕ್ಕಳು ಪ್ರಾಯದಲ್ಲಿದ್ದಾಗ. ಅಸ್ತಮಾ ಹಾಗೂ ಅಲರ್ಜಿ ಇರುವ ಪಾಲಕರಿದ್ದಲ್ಲಿ , ಮಗುವು ಕಡಿಮೆ ತೂಕದೊಂದಿಗೆ ಜನಿಸಿದ್ದಲ್ಲಿ , ಬಾಲ್ಯದಲ್ಲಿ ತಾಯಿಯ ಹಾಲನ್ನು ಉಣಿಸದಿದ್ದಲ್ಲಿ, ಮಗುವು ಕೈಗಾರಿಕೆಯಿಂದ ಮುಂದುವರಿದ ನಗರದಲ್ಲಿ ವಾಸಿಸುತ್ತಿದ್ದರೆ ಹಾಗೂ ಹೆಚ್ಚು ತೂಕ ಹೊಂದಿದ ಮಕ್ಕಳಲ್ಲಿ ಕಾಯಿಲೆ ಬೇರೆ ಮಕ್ಕಳಿಗಿಂತಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಯಾವ ಕಾರಣಗಳಿಗೆ ಉಬ್ಬಸ ಬರುತ್ತದೆ? ಪರಿಸರದ ವಾತಾವರಣದಲ್ಲಿ ವ್ಯತ್ಯಾಸ ಕಂಡು ಬಂದಾಗ. ಮಳೆ-ಚಳಿಗಾಲ, ಮನೆಯಲ್ಲಿ ಪಾಲಕರು ಧೂಮಪಾನ ಮಾಡುವುದರಿಂದ, ಮನೆಗೆ ಬಣ್ಣ ಮಾಡಿಸಿದಾಗ, ಜನರು ಬಹಳಷ್ಟು ಸೇರಿದೆಡೆಗೆ ಹೋದಾಗ(ಮದುವೆ-ಮಾರ್ಕೆಟ್‌-ಜಾತ್ರೆ ಇತ್ಯಾದಿ) ಸೋಂಕುಗಳು, ವೈರಸ್‌ ಸೋಂಕು, ಟಾನ್ಸಿಲೈಟಿಸ್‌ ಇತ್ಯಾದಿಗಳಿಂದ ಕರುಳಿನಲ್ಲಿ ಪರಾವಲಂಬಿ ಜಂತುಹುಳುಗಳು ಸೇರಿಕೊಂಡಾಗ, ಕೆಲವು ಔಷಧಿಗಳಿಂದ, ಸೆಂಟ್‌ ಮತ್ತು ಪೌಡರ್‌ಗಳಿಂದ, ಮಾನಸಿಕ ಒತ್ತಡಗಳಿಂದ, ಪರೀಕ್ಷೆ, ಮನೆಯಲ್ಲಿ ಗೊಂದಲ ವಾತಾವರಣ,  ಋತುಚಕ್ರವಾದಾಗ, ಐಸ್‌ಕ್ರೀಂ-ಆಹಾರ ಉತ್ಪನ್ನಗಳಿಗೆ ಬಳಸುವ ರಾಸಾಯನಿಕಗಳಿಂದ, ಹುಳಿ ಪದಾರ್ಥಗಳಿಂದ ಹಾಗೂ ದೈಹಿಕ ಶ್ರಮ ಮಾಡಿದಾಗ(ಆಟ, ಓಟ, ಅತ್ತಾಗ, ನಕ್ಕಾಗ) ಮಕ್ಕಳಿಗೆ ಉಬ್ಬಸ ಬರುವುದು ಎಂದಲ್ಲ..ಇವುಗಳಲ್ಲಿ ಕೆಲವೇ ಕೆಲವು ಮಕ್ಕಳಿಗೆ ಉಬ್ಬಸ ಬರಲು ಕಾರಣವಾಗುತ್ತದೆ. ಕೆಲವೊಮ್ಮೆ ಪರಿಸರದಲ್ಲಾಗುವ ವ್ಯತ್ಯಾಸ, ಆಹಾರದ ಪದಾರ್ಥ ಒಟ್ಟಿಗೆ ಸೇರಿ ಉಬ್ಬಸದ ತೀವ್ರತೆ ಹೆಚ್ಚಿಸುತ್ತದೆ.

ಅಸ್ತಮಾ ಇರುವ -ಬರುವ ಉಬ್ಬಸವನ್ನು ಬೇಗನೆ ಸೂಕ್ತ ಚಿಕಿತ್ಸೆ ನೀಡಿ ಶಮನಗೊಳಿಸುವುದರಿಂದ ತೀವ್ರವಾದ ಉಸಿರಾಟದ ತೊಂದರೆಯನ್ನು, ಆಸ್ಪತ್ರೆಗೆ ಸೇರಿಸುವ ಸಾಧ್ಯತೆಯನ್ನು ತಡೆಗಟ್ಟಬಹುದು. ಮಕ್ಕಳು ಉಬ್ಬಸದಿಂದ ಸಂಪೂರ್ಣವಾಗಿ ಮುಕ್ತವಾಗಬಲ್ಲರು. ಅಲ್ಲದೇ ಬಹಳ ದಿನಗಳಿಂದ ಉಬ್ಬಸ ಇದ್ದಲ್ಲಿ ಮಗುವಿನಲ್ಲಿ ಆಹಾರ ಸೇವನೆ, ಆಟ-ಚಟುವಟಿಕೆಗಳು ಕಡಿಮೆ ಆಗುತ್ತವೆ. ಅಲ್ಲದೇ ಗಣನೀಯವಾಗಿ ಬೆಳವಣಿಗೆ ಕುಂಠಿತವಾಗುತ್ತದೆ.

ಅಸ್ತಮಾದ ತೀವ್ರತೆಯನ್ನು ಪೀಕ್‌ ಫ್ಲೋಮೀಟರ್‌, ಸ್ಪೈರೋಮಿಟ್ರಿ, ರಕ್ತ ಪರೀಕ್ಷೆಯಿಂದ ಕಂಡು ಹಿಡಿಯಬಹುದು. ತೀಕ್ಷ್ಣತೆ ಹೆಚ್ಚಾದ ಸಂದರ್ಭ ಮಗುವಿಗೆ ಉಸಿರಾಡಲು ಅನುಕೂಲ ಆಗುವಂತೆ ಸ್ವಲ್ಪ ಎತ್ತರದಲ್ಲಿ ತಲೆಯನ್ನಿಟ್ಟು  ಮಲಗಿಸುವುದು. ಮಗುವಿನ ಬಟ್ಟೆಗಳನ್ನು ಸಡಿಲಗೊಳಿಸುವುದು, ಶಾಂತತೆ ಕಾಪಾಡಿ ಮತ್ತು ಸವಿಯಾದ ಮಾತುಗಳಿಂದ ಮಗುವನ್ನು ಸಂತೈಸುವುದು. ಮೊದಲಿಗೆ ನೀಡಿದ್ದ ಸ್ಪೇಸರ್‌ಗಳಿಗೆ ಇನ್‌ಹೇಲರ್‌ ಅಳವಡಿಸಿ ಔಷಧಿ ಸೇವನೆಗೆ ಅನುಕೂಲ ಮಾಡಿ ಪ್ರತಿ 20 ನಿಮಿಷಕ್ಕೊಮ್ಮೆ ಮರಳಿ, ಮರಳಿ ನೀಡುವುದರಿಂದ ತೀವ್ರತೆ ಕಡಿಮೆ ಆಗುತ್ತದೆ. ಪ್ರಿಡ್ನಿಸಲೋನ(ವೈಸಲಾನ್‌) ಮಾತ್ರೆಯನ್ನ ವೈದ್ಯರ ಸಲಹೆಗನುಗುಣವಾಗಿ ಕೊಡಬೇಕು. ಮಗು ಚೇತರಿಸಿಕೊಳ್ಳದಿದ್ದಲ್ಲಿ ವೈದ್ಯರ ಬಳಿಗೆ ಕೊಂಡೊಯ್ಯಬೇಕು.

ಮಕ್ಕಳಲ್ಲಿ ಉಬ್ಬಸದ ತೀವ್ರತೆ ಹೆಚ್ಚಾದಾಗ ಔಷಧಿಯನ್ನು ಅಣುವಿನಷ್ಟು ಬೆರೆಸಿ ಉಸಿರಾಟದೊಂದಿಗೆ ಸೇವಿಸುವ ಪ್ರಕ್ರಿಯೆಯೇ ಏರೋಸೆಲ್‌ ಚಿಕಿತ್ಸೆ. ಇದರಿಂದ ಮಗುವಿಗೆ ಅತಿ ಕಡಿಮೆ ಪ್ರಮಾಣದ ಔಷಧಿಗಳನ್ನು ಉಪಯೋಗಿಸಲಾಗುವುದು. ಔಷಧ ನೇರವಾಗಿ ಶ್ವಾಸಕೋಶಗಳಿಗೆ ಮುಟ್ಟುತ್ತದೆ. ತೀವ್ರಗತಿಯಲ್ಲಿ ರೋಗಿ ಗುಣಮುಖ ಆಗುತ್ತಾರೆ. ಈ ರೀತಿಯ ಔಷಧಗಳನ್ನು ಬಹಳ ದಿನ ಉಪಯೋಗಿಸುವುದರಿಂದ ಅದಕ್ಕೆ ಹೊಂದಿಕೊಳ್ಳುತ್ತಾರೆ ಎಂಬ ಅಪನಂಬಿಕೆಯೂ ಇದೆ. ಈ ರೀತಿಯಲ್ಲಿ ಔಷಧವನ್ನು ಉಪಯೋಗಿಸುವುದರಿಂದ ಆದಕ್ಕೆ ಹೊಂದಿಕೊಳ್ಳುವುದಿಲ್ಲ. ಸ್ಟಿರಾಯಿಡ್‌ ತುಂಬಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಆದ್ದರಿಂದ ಮಾತ್ರೆ ರೂಪದಲ್ಲಿ ತೆಗೆದುಕೊಳ್ಳುವ ಸ್ಟಿರಾಯಿಡ್‌ ಎಲ್ಲಾ ಅಂಗಾಂಗಗಳಿಗೆ ಹಾನಿಕರ ಅಲ್ಲ. ಏರೋಸೆಲ್‌ಗೆ ಮೀಟರ್‌ ಡೋಸ್‌ ಇನ್‌ಹೇಲರ್‌, ರೋಟಾ ಹೇಲರ್‌, ನೆಬ್ಯುಲೈಸರ್‌ ಬಳಕೆ ಮಾಡಲಾಗುತ್ತದೆ.

ಉಬ್ಬಸ ತಡೆಗಟ್ಟಲು ಮನೆಯನ್ನು ಚೊಕ್ಕಟವಾಗಿಡಬೇಕು. ಒದ್ದೆ ಬಟ್ಟೆಯಿಂದ ಹಲವಾರು ಬಾರಿ ಸಾರಿಸಬೇಕು. ದಿಂಬು, ಹಾಸಿಗೆ, ರಗ್‌ಗಳನ್ನು ಶುಚಿ ಮಾಡಿ, ರಗ್ಗುಗಳನ್ನು ವಾರಕ್ಕೊಮ್ಮೆ ಸೂರ್ಯನ ಬೆಳಕಿನಲ್ಲಿ ಒಣಗಿಸಬೇಕು. ಫ್ಯಾನ್‌ ಬಳಸುವ ಮೊದಲು ಅವುಗಳ ರೆಕ್ಕೆಗಳನ್ನು ಒದ್ದೆ ಬಟ್ಟೆಯಲ್ಲಿ ಒರೆಸಿ, ಉಪಯೋಗಿಸಬೇಕು. ಮಗುವಿಗೆ ಥಂಡಿ ಅನುಭವವಾಗದಂತೆ ಬೆಚ್ಚನೆಯ ಬಟ್ಟೆ ಹಾಕಿ, ಕಿಟಕಿಯಿಂದ ಹೊರ ಮಲಗಲು ಅನುವು ಮಾಡಿಕೊಡಬೇಕು. ಮನೆಯಲ್ಲಿ ಸಾಕು ಪ್ರಾಣಿಗಳನ್ನು ಇಟ್ಟುಕೊಳ್ಳದೇ ಇರುವುದು ಕ್ಷೇಮ. ಮನೆಯಲ್ಲಿ ಸಂಪೂರ್ಣವಾಗಿ ಧೂಮಪಾನ ನಿಲ್ಲಿಸಬೇಕು. ಮಗು ನೆಲಕ್ಕಿಂತಲೂ ಮಂಚದ ಮೇಲೆ ಮಲಗುವುದೇ ಸೂಕ್ತ.

ಸ್ನಾನ ಮಾಡುವಾಗ ಮಗುವಿಗೆ ಧೂಳಿನ ಅಲರ್ಜಿ ಇದ್ದಲ್ಲಿ ಸೀಗೆಕಾಯಿ ಪುಡಿ ಬಳಸಬಾರದು. ತಲೆ ಕೂದಲನ್ನು ಚಿಕ್ಕದಾಗಿ ಕತ್ತರಿಸಬೇಕು. ತಲೆಸ್ನಾನ ಮಾಡುವಾಗ ಮೊದಲು ಶಾಂಪೂ ಹಚ್ಚಿದ ಐದು ನಿಮಿಷದ ನಂತರ ತಲೆಯನ್ನು ಹಿಂದಕ್ಕೆ ಬಾಗಿಸಿ ಕೂದಲು ತೊಳೆಯಬೇಕು. ಆಹಾರ ಪದಾರ್ಥ ಕೊಡುವಾಗ ಉಬ್ಬಸಕ್ಕೆ ಕಾರಣವಾಗುವ ಆಹಾರ ತ್ಯಜಿಸುವುದು ಸೂಕ್ತ. ವಿನಾಕಾರಣ ಮಗುವನ್ನು ಪೌಷ್ಟಿಕ ಆಹಾರದಿಂದ ದೂರ ಇಡಬಾರದು. ಅಗತ್ಯ ಕ್ರಮ ಅನುಸರಿಸುವ ಮೂಲಕ ಮಾಹಿತಿಗನುಗುಣವಾಗಿ ಕಾಯಿಲೆಯಿಂದಾಗುವ ಸಾವು-ನೋವನ್ನು ತಡೆಗಟ್ಟಬಹುದು. ಮಕ್ಕಳಲ್ಲಿ ಅಸ್ತಮಾ ಕಂಡು ಬಂದಾಕ್ಷಣ ಹೆದರುವ, ಅಂಜುವ ಪ್ರಮೇಯವೇ ಬೇಡ. ವಾತಾವರಣಕ್ಕೆ ಅನುಗುಣವಾಗಿ ಮಕ್ಕಳ ಆರೈಕೆ, ಆಹಾರಕ್ಕೆ ಆದ್ಯತೆ ನೀಡುವ ಮೂಲಕ ಅಸ್ತಮಾದಿಂದ ಬಳಲುತ್ತಿರುವ ಮಕ್ಕಳು ಸಹ ಇತರೆ ಮಕ್ಕಳಂತೆ ಆಡುವ, ಪಾಡುವ, ನಲಿಯುವ ವಾತಾವರಣ ನಿರ್ಮಾಣ ಮಾಡುವುದು ಪೋಷಕರ ಕೈಯಲ್ಲಿದೆ.

ಡಾ| ಎನ್‌.ಕೆ. ಕಾಳಪ್ಪನವರ್‌, ಚಿಕ್ಕ ಮಕ್ಕಳ ತಜ್ಞ, ವೈದ್ಯಕೀಯ ನಿರ್ದೇಶಕರು, ಎಸ್‌.ಎಸ್‌.ಆಸ್ಪತ್ರೆ, ದಾವಣಗೆರೆ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

3-health

Mother: ತಾಯಂದಿರ ಮಾನಸಿಕ ಆರೋಗ್ಯ

Lip Care Routine; How much do you know about keeping your lips healthy?

Lip Care Routine; ನಿಮ್ಮ ತುಟಿಗಳ ಆರೋಗ್ಯ ಕಾಪಾಡುವ ಬಗ್ಗೆ ನಿಮಗೆಷ್ಟು ಗೊತ್ತು?

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.