Headache: ದೀರ್ಘ‌ಕಾಲೀನ ತಲೆನೋವು; ನೇತ್ರ ಸಮಸ್ಯೆಯ ಸೂಚನೆಯೂ ಆಗಿರಲು ಸಾಧ್ಯ


Team Udayavani, Jun 2, 2024, 3:08 PM IST

13-head-ache

ಅನೇಕ ಮಂದಿ ವಯಸ್ಕರು ಮತ್ತು ಮಕ್ಕಳಲ್ಲಿ ತಲೆನೋವು ಒಂದು ಸಾಮಾನ್ಯ ಸಮಸ್ಯೆ ಆಗಿರುತ್ತದೆ. ತಲೆನೋವುಗಳನ್ನು ಸ್ಥೂಲವಾಗಿ ಪ್ರಧಾನ ಮತ್ತು ಉಪ ತಲೆನೋವುಗಳು ಎಂದು ವರ್ಗೀಕರಿಸಬಹುದಾಗಿದೆ. ಮೈಗ್ರೇನ್‌, ಚಿಂತೆಯ ತಲೆನೋವು, ಕ್ಲಸ್ಟರ್‌ ತಲೆನೋವುಗಳಂತೆ ತಲೆನೋವೇ ಪ್ರಮುಖ ಸಮಸ್ಯೆಯಾಗಿದ್ದರೆ ಅದು ಪ್ರಧಾನ ಅಥವಾ ಪ್ರೈಮರಿ ತಲೆನೋವು. ಸೈನಸ್‌ ಸೋಂಕು, ಹಲ್ಲುಗಳಲ್ಲಿ ತೊಂದರೆ, ಟೆಂಪೊಮ್ಯಾಂಡಿಬ್ಯುಲಾರ್‌ ತೊಂದರೆಗಳು, ಮೆದುಳು ಗಡ್ಡೆಗಳು ಅಥವಾ ದೃಷ್ಟಿ ಸಮಸ್ಯೆಗಳಂತಹ ಇತರ ಅನಾರೋಗ್ಯಗಳಿಂದ ತಲೆನೋವು ಉಂಟಾದರೆ ಅದನ್ನು ಸೆಕೆಂಡರಿ ಅಥವಾ ಉಪ ತಲೆನೋವು ಎನ್ನಲಾಗುತ್ತದೆ.

ಬಹುತೇಕ ಪ್ರಧಾನ ತಲೆನೋವುಗಳು ದೃಷ್ಟಿ ಸಮಸ್ಯೆಗಳನ್ನು ಉಂಟು ಮಾಡಬಹುದು. ಮೈಗ್ರೇನ್‌ನಲ್ಲಿ ಅದರ ಲಕ್ಷಣಗಳಾದ ಬೆಳಕಿನ ಭಯ, ಸದ್ದಿನ ಭಯದಂತಹ ಲಕ್ಷಣಗಳ ಜತೆಗೆ ತೀವ್ರ ಕಣ್ಣು ನೋವು ಕೂಡ ಇರಬಹುದಾಗಿದೆ. ಕ್ಲಸ್ಟರ್‌ ತಲೆನೋವಿನಲ್ಲಿ ತಲೆಯ ಒಂದು ಪಾರ್ಶ್ವದಲ್ಲಿ ನೋವಿನ ಜತೆಗೆ ಕೆಂಪಗಾಗುವುದು, ಬಾಧಿತ ಭಾಗದ ಕಣ್ಣಿನಲ್ಲಿ ನೀರು ಸುರಿಯಬಹುದು. ಚಿಂತೆಯ ತಲೆನೋವಿನಲ್ಲಿ ಹಣೆ ಬಿಗಿಹಿಡಿದಂತಹ ಅನುಭವದ ಜತೆಗೆ ಕಣ್ಣು ನೋವು ಕೂಡ ಇರಬಹುದು.

ಕಣ್ಣಿನ ಅನೇಕ ಸಮಸ್ಯೆಗಳು ತಲೆನೋವಿಗೆ ಕಾರಣವಾಗುತ್ತವೆ. ಕಣ್ಣಿಗೆ ಒತ್ತಡವಾಗುವುದು, ಕೋಸು ಕಣ್ಣು ತಲೆನೋವನ್ನು ಪ್ರಚೋದಿಸಬಹುದು. ನಾವು ನೋಡುವ ವಸ್ತುಗಳ ಬಿಂಬಗಳನ್ನು ಕಣ್ಣಿನಲ್ಲಿರುವ ರೆಟಿನಾ ಸೆರೆಹಿಡಿಯುತ್ತದೆ. ರೆಟಿನಾದ ಮೇಲೆ ಬಿದ್ದ ವಸ್ತುವಿನ ಪ್ರತಿಬಿಂಬವನ್ನು ಬಿಂಬವಾಗಿ ರೂಪಿಸುವ ಕಾರ್ಯ ಕಾರ್ನಿಯಾ ಮತ್ತು ಕಣ್ಣಿನ ಮಸೂರದ್ದು. ಈ ಸಂರಚನೆಗಳಲ್ಲಿ ತೊಂದರೆಗಳು ಉಂಟಾದರೆ ಬಿಂಬ ರೂಪುಗೊಳ್ಳುವುದಕ್ಕೆ ಅಡಚಣೆ ಉಂಟಾಗುತ್ತದೆ.

ಇದನ್ನು ಸರಿಹೊಂದಿಸುವುದಕ್ಕಾಗಿ ತಲೆಬುರುಡೆಯ ಸ್ನಾಯುಗಳು, ಅದರಲ್ಲೂ ವಿಶೇಷವಾಗಿ ಕಣ್ಣಿನ ಸುತ್ತಲಿನ ಸ್ನಾಯುಗಳು ವಸ್ತುಗಳ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುತ್ತವೆ. ಇದರಿಂದ ಕಣ್ಣುಗಳ ಮೇಲೆ ಒತ್ತಡ ಉಂಟಾಗಬಹುದು. ಬಿಂಬ ರೂಪುಗೊಳ್ಳುವುದರಲ್ಲಿ ತೊಂದರೆ ಇದ್ದಾಗ ಅದರಿಂದಾಗಿ ಅಸಮರ್ಪಕ ದೃಷ್ಟಿ ಕೇಂದ್ರೀಕರಣವಾಗುವುದರಿಂದ ಕಣ್ಣುಗಳ ಮೇಲೆ ಒತ್ತಡ ಉಂಟಾಗುತ್ತದೆ.

ಇದು ಮಯೋಪಿಯಾ (ಸಮೀಪ ದೃಷ್ಟಿದೋಷ), ಹೈಪರ್‌ ಮೆಟ್ರೋಪಿಯಾ (ದೂರ ದೃಷ್ಟಿದೋಷ) ಅಥವಾ ಅಸ್ಟಿಗ್ಮಾಟಿಸಂ (ಅಸಮ ದೃಷ್ಟಿ ದೋಷ) ಆಗಿರಬಹುದಾಗಿದೆ. ಹೈಪರ್‌ ಮೆಟ್ರೋಪಿಯಾ ಅಥವಾ ದೂರ ದೃಷ್ಟಿದೋಷದಲ್ಲಿ ರೆಟಿನಾದ ಬದಲು ಕಣ್ಣಿನ ಹಿಂಭಾಗದಲ್ಲಿ ವಸ್ತುಗಳ ಪ್ರತಿಬಿಂಬ ರೂಪುಗೊಳ್ಳುತ್ತದೆ.

ಇದರಿಂದಾಗಿ ಹತ್ತಿರದ ವಸ್ತುಗಳು ಮಂಜಾಗಿ ಕಾಣುವುದರಿಂದ ಹಣೆಯ ಸ್ನಾಯುಗಳು ದೃಷ್ಟಿ ಕೇಂದ್ರೀಕರಿಸಲು ಬಳಕೆಯಾಗುತ್ತವೆ. ಕಾರ್ನಿಯಾದ ಮೇಲೆ ಅಸಹಜತೆಯಿಂದಾಗಿ ದೃಷ್ಟಿ ಮಂಜಾಗಿ ಅಸ್ಟಿಗ್ಯಾಟಿಸಂ ಅಥವಾ ಅಸಮ ದೃಷ್ಟಿಯು ಉಂಟಾಗುತ್ತದೆ. ಕಣ್ಣುಗಳನ್ನು ಹೆಚ್ಚು ದೀರ್ಘ‌ಕಾಲ ಉಪಯೋಗಿಸಲು ಪ್ರಯತ್ನಿಸುವುದರಿಂದಲೂ ಕಣ್ಣುಗಳ ಮೇಲೆ ಒತ್ತಡ ಉಂಟಾಗಿ ತಲೆನೋವು.

ಕಂಪ್ಯೂಟರನ್ನು ದೀರ್ಘ‌ಕಾಲ ಕಣ್ಣು ಮಿಟುಕಿಸದೆ ವೀಕ್ಷಿಸುವುದು, ಮಂದ ಬೆಳಕಿನಲ್ಲಿ, ರಾತ್ರಿ ಕಾಲದಲ್ಲಿ ವಾಹನ ಚಲಾಯಿಸುವುದರಿಂದ ಇದು ಉಂಟಾಗಬಹುದು. ಕಂಪ್ಯೂಟರ್‌ ಪರದೆ ಅಥವಾ ಮೊಬೈಲ್‌ ಪರದೆಯನ್ನು ದೀರ್ಘ‌ಕಾಲ, ವಿಶೇಷವಾಗಿ ಎರಡು ತಾಸುಗಳಿಗಿಂತ ಹೆಚ್ಚು ಕಾಲ ವೀಕ್ಷಿಸುವುದರಿಂದ ಕಣ್ಣುಗಳ ಮೇಲೆ ಒತ್ತಡ ಉಂಟಾಗಬಹುದು.

ಸಾಮಾನ್ಯವಾಗಿ ಕಂಪ್ಯೂಟರ್‌ ಉಪಯೋಗಿಸುವಾಗ ಕಣ್ಣು ಮಿಟುಕಿಸುವುದು ಅಪ್ರಜ್ಞಾಪೂರ್ವಕವಾಗಿ ಮರೆತುಹೋಗುತ್ತದೆ ಅಥವಾ ನಿಲ್ಲುತ್ತದೆ. ಕಣ್ಣು ಮಿಟುಕಿಸುವುದು ಕಣ್ಣುಗಳನ್ನು ಆದ್ರìವಾಗಿ ಕಾಯ್ದುಕೊಳ್ಳಲು ನೆರವಾಗುವ ಕ್ರಿಯೆಯಾಗಿದೆ. ಡಿಜಿಟಲ್‌ ಸಾಮಗ್ರಿಗಳ ಪರದೆಯ ಕೋರೈಸುವ ಪ್ರತಿಫ‌ಲನವೂ ಕಣ್ಣುಗಳಿಗೆ ಒತ್ತಡ ಉಂಟಾಗಲು ಕಾರಣವಾಗುತ್ತದೆ.

ಇವೆಲ್ಲವುಗಳಿಂದಾಗಿ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳಬಹುದು, ಕಣ್ಣುಗಳಿಗೆ ದಣಿವಾದ ಅನುಭವವಾಗಬಹುದು, ಬೆಳಕಿಗೆ ಕಣ್ಣುಗಳು ಸೂಕ್ಷ್ಮ ಸಂವೇದಿಯಾಗಬಹುದು, ಕಣ್ಣುಗಳು ಉರಿಯಬಹುದು. ಮಂದ ಬೆಳಕಿನಲ್ಲಿ ಓದುವುದು, ಬರೆಯುವುದು ಅಥವಾ ಹೊಲಿಯುವುದರಿಂದಲೂ ಕಣ್ಣುಗಳಿಗೆ ಒತ್ತಡವಾಗುತ್ತದೆ. ಕಣ್ಣುಗಳಿಗೆ ಒತ್ತಡವಾದ ಲಕ್ಷಣಗಳು ಇದ್ದರೆ ನೇತ್ರತಜ್ಞರನ್ನು ಕಾಣುವುದು ಮುಖ್ಯ. ದೃಷ್ಟಿ ದೋಷಗಳನ್ನು ಸರಿಯಾದ ಕನ್ನಡಕ ಅಥವಾ ಲೆನ್ಸ್‌ ಉಪಯೋಗಿಸಿ ಸುಲಭವಾಗಿ ಸರಿಪಡಿಸಬಹುದಾಗಿದೆ.

ಡಾ| ರೋಹಿತ್‌ ಪೈ,

ಕನ್ಸಲ್ಟೆಂಟ್‌ ನ್ಯುರಾಲಜಿ

ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಪ್ತಮಾಲಜಿ ಮತ್ತು ನ್ಯೂರಾಲಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

ISREL

Warning; ಶಿಲಾಯುಗಕ್ಕೆ ಮರಳಿಸುತ್ತೇವೆ ! : ಲೆಬನಾನ್ ಗೆ ಇಸ್ರೇಲ್ ಎಚ್ಚರಿಕೆ

ಜಿಯೋ ಆಯ್ತು ಈಗ ಏರ್ಟೆಲ್ ನಿಂದಲೂ ದರ ಏರಿಕೆ!

Mobile Recharge Plans; ಜಿಯೋ ಆಯ್ತು ಈಗ ಏರ್ಟೆಲ್ ನಿಂದಲೂ ದರ ಏರಿಕೆ!

Bidar; I was defeated for our selfishness says Bhagwanth Khuba

Bidar; ನಮ್ಮವರ ಸ್ವಾರ್ಥಕ್ಕಾಗಿ ನನಗೆ ಸೋಲಾಯಿತು…: ಭಗವಂತ ಖೂಬಾ ಬೇಸರ

Randheer-Jaiswal

Biased; ಧಾರ್ಮಿಕ ಸ್ವಾತಂತ್ರ್ಯ ಕುರಿತು ವರದಿ: ಅಮೆರಿಕಕ್ಕೆ ಭಾರತ ತಿರುಗೇಟು

Mudhol ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ

Mudhol ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ

Rajya sabha ಕಲಾಪದಲ್ಲಿ ಪ್ರತಿಭಟನೆ ವೇಳೆ ಕುಸಿದು ಬಿದ್ದ ಕಾಂಗ್ರೆಸ್‌ ಸಂಸದೆ…

Rajya sabha ಕಲಾಪದಲ್ಲಿ ಪ್ರತಿಭಟನೆ ವೇಳೆ ಕುಸಿದು ಬಿದ್ದ ಕಾಂಗ್ರೆಸ್‌ ಸಂಸದೆ…

Minister RB Timmapur ರಾಜ್ಯ ಸರ್ಕಾರ ರೈತರ ಪರವಾಗಿ ಕಾರ್ಯ ಮಾಡುತ್ತಿದೆ

Minister RB Timmapur ರಾಜ್ಯ ಸರ್ಕಾರ ರೈತರ ಪರವಾಗಿ ಕಾರ್ಯ ಮಾಡುತ್ತಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-Health

Menstrual Cycle: ಹೆರಿಗೆಯ ಬಳಿಕ ಮಹಿಳೆಯ ಋತುಚಕ್ರ ಪೂರ್ವಸ್ಥಿತಿ ಸ್ಥಾಪನೆ

7-health

Health: ಅಸ್ತಮಾ ಮತ್ತು ಮೂಢನಂಬಿಕೆಗಳು

4-yoga

Yoga Practice: ಆರೋಗ್ಯಕರ ಜೀವನಕ್ಕಾಗಿ ಆಹಾರ ಪದ್ಧತಿ ಮತ್ತು ಯೋಗಾಭ್ಯಾಸ

3-

Throat Cancer: ತಂಬಾಕು ಮುಕ್ತ ಜೀವನ

9

ನಿಮಿರು ದೌರ್ಬಲ್ಯ ಚಿಕಿತ್ಸೆಯಲ್ಲಿ ಜೀವನ ವಿಧಾನ ಮತ್ತು ಆಹಾರ ಶೈಲಿ ಬದಲಾವಣೆಗಳು

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

1-wew-e-weewqewq

Muddebihal; 2 ಮರಿಗಳ ಸಮೇತ ಬೃಹತ್ ಹೆಣ್ಣು ಮೊಸಳೆ ಸೆರೆ

1-wqeqwe

Gundlupete: ಜನಸ್ಪಂದನಾ ಕಾರ್ಯಕ್ರಮ ಮುಗಿಸಿ ಬರುವಾಗ ಅಪಘಾತ: ಆಹಾರ ನಿರೀಕ್ಷಕ ಸಾವು

1-sdsads

Ramanagara; ಡಿಸಿ ಕಚೇರಿಯಲ್ಲೇ ಹೃದಯಾಘಾತದಿಂದ ನೌಕರ ಸಾವು

dinesh-gu

GST ವಿಚಾರದಲ್ಲಿ ಟೀಕೆ: ನಿರ್ಮಲಾ ಸೀತಾರಾಮನ್ ವಿರುದ್ಧ ದಿನೇಶ್ ಗುಂಡೂರಾವ್ ಕಿಡಿ

1-aaa

Kottigehara; ನದಿಯ ಕಿರು ಕಾಲುವೆಗೆ ಬಿದ್ದ ಕಾರು: ಇಬ್ಬರು ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.