ದುರ್ಬಲ ಶ್ವಾಸಕೋಶ ಕಾಯಿಲೆಗೆ ಯೋಗದಲ್ಲಿದೆ ಮದ್ದು 


Team Udayavani, Oct 23, 2020, 10:29 AM IST

ದುರ್ಬಲ ಶ್ವಾಸಕೋಶ ಕಾಯಿಲೆಗೆ ಯೋಗದಲ್ಲಿದೆ ಮದ್ದು 

ಕ್ರಾನಿಕ್‌ ಅಬ್ಸಬ್ಸ್ವ್ರಕ್ವಿವ್‌ ಪಲ್ಮೊನರಿ ಡಿಸೀಸ್‌ (COPD) ಅಂದರೆ ದೀರ್ಘ‌ಕಾಲಿನ ದುರ್ಬಲ ಶ್ವಾಸಕೋಶದ ಕಾಯಿಲೆ. ಇದು ಸಾಂಕ್ರಾಮಿಕ ರೋಗವಲ್ಲ. ಮುಖ್ಯವಾಗಿ ಶ್ವಾಸಕೋಶದ ಕಾರ್ಯಕ್ಕೆ ಅಡೆತಡೆ ಉಂಟುಮಾಡುತ್ತದೆ. ಶ್ವಾಸಕೋಶದಲ್ಲಿ ಪೂರ್ಣಪ್ರಮಾಣದಲ್ಲಿ ಗಾಳಿ ಹೊರಗೆ ಹೋಗದೇ ಇರುವುದರಿಂದ ಶ್ವಾಸಕೋಶ ತುಂಬಿದಂತೆ ಆಗಿ ಉಸಿರಾಟಕ್ಕೆ ತೊಂದರೆಯಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ 2004ರ ವರದಿಯ ಪ್ರಕಾರ ಸುಮಾರು 64 ಮಿಲಿಯನ್‌ ಜನರು ಸಿಒಪಿಡಿಯಿಂದ ಬಳಲಿದ್ದಾರೆ. 2030ರಲ್ಲಿ ಈ ರೋಗವು ಅತೀ ಹೆಚ್ಚು ಸಾವು ಸಂಭವಿಸುವ ರೋಗಗಳಲ್ಲಿ 3ನೆಯದಾಗಿರುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಸಿಒಪಿಡಿ ಕಾರಣಗಳೇನು?
ಧೂಮಪಾನ ಪ್ರಬಲ ಕಾರಣ. ಸಿಗರೆಟ್‌, ಪೈಪ್‌ ಸೇದುವವರಿಗೆ ಸಿಒಪಿಡಿ ಬರುವ ಸಾಧ್ಯತೆ ಹೆಚ್ಚು. ಧೂಮಪಾನದ ಹೊಗೆ ಹತ್ತಿರದಿಂದ ಸೇವಿಸುತ್ತಿದ್ದವರಿಗೂ ಇದು ಬರಬಹುದು.  ಅದಷ್ಟೇ ಅಲ್ಲ, ಒಲೆಯ ಹೊಗೆ, ಕಲ್ಲಿದ್ದಲು ಹೊಗೆ, ಆಭರಣಗಳ ತಯಾರಿಕೆ ವೇಳೆ ಉಂಟಾಗುವ ಹೊಗೆ ಅಥವಾ ಹೊಗೆಯಾಡು ಪ್ರದೇಶದಲ್ಲಿ ಜೀವನ ನಡೆಸುವುದು ಸಿಒಪಿಡಿಗೆ ಕಾರಣವಾಗಬಹುದು. ವಾಯುಮಾಲಿನ್ಯ, ರಾಸಾಯನಿಕಗಳು, ಗಣಿಗಾರಿಕೆ, ಟೆಕ್ಟ್ಟೈಲ್ಸ್‌, ಸಿಮೆಂಟ್‌, ವಾಹನ ದಟ್ಟನೆ ಪ್ರದೇಶದಲ್ಲಿ ಕೆಲಸ ನಿರ್ವಹಿಸುವುದರಿಂದಲೂ ಕಾಯಿಲೆ ಬರಬಹುದು. ದೀರ್ಘ‌ಕಾಲದ ಅಸ್ತಮಾ ಸಮಸ್ಯೆಯಿದ್ದು, ಚಿಕಿತ್ಸೆ ಪಡೆಯದಿದ್ದಾಗ, ವಂಶಪಾರಂಪರಿಕ ಅಂಶಗಳೂ ಕಾಯಿಲೆಗೆ ಕಾರಣವಾಗುತ್ತದೆ.

ಹಂತಗಳು ಮತ್ತು ಲಕ್ಷಣಗಳು
ಸಿಒಪಿಡಿ ಪ್ರಾರಂಭದಲ್ಲಿ ಆರೋಗ್ಯ ವ್ಯತ್ಯಾಸ ಕಾಣಿಸಿಕೊಳ್ಳಬಹುದು. ಕ್ರಮೇಣ ಗಂಭೀರ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ 40 ವರ್ಷ ಮೆಲ್ಪಟ್ಟವರಲ್ಲಿ (ಧೂಮಪಾನಿಗಳಲ್ಲಿ 40 ವರ್ಷ ಒಳಗೂ) ಸಿಒಪಿಡಿ ಕಂಡುಬರುತ್ತವೆ. ಸಿಒಪಿಡಿ ಹಂತ ತಿಳಿದುಕೊಳ್ಳಲು ಸ್ಪೈರೋಮೀಟರ್‌ ಎಂಬ ಯಂತ್ರದ ಸಹಾಯದಿಂದ ಶ್ವಾಸಕೋಶ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಇದರ ಆಧಾರದಲ್ಲಿ ಸೌಮ್ಯ, ಮಧ್ಯಮ, ಗಂಭೀರ, ಅತಿ ತೀವ್ರ ಎಂದು ಕಾಯಿಲೆ ಹಂತ ಅರಿತು ಚಿಕಿತ್ಸೆ ಬಗ್ಗೆ ನಿರ್ಧರಿಸಲಾಗುತ್ತದೆ.

ಸೌಮ್ಯ ಸಿಒಪಿಡಿ
ತುಂಬಾ ಕೆಮ್ಮು ಬರಬಹುದು. ಕೆಲವೊಮ್ಮೆ ಕಫ‌ ಹೊರಬರುತ್ತದೆ. ಶ್ರಮದ ದುಡಿಮೆ ಅಥವಾ ವೇಗದ ನಡಿಗೆಯಲ್ಲಿ ಉಸಿರಾಟದ ತೊಂದರೆ ಕಂಡುಬರುತ್ತದೆ. ಈ ವೇಳೆ ಮನೆಯಲ್ಲಿದ್ದೇ ಆರೋಗ್ಯ ಸುಧಾರಣೆಮಾಡಿಕೊಳ್ಳಬಹುದು.

ಮಧ್ಯಮ ಸಿಒಪಿಡಿ
ಹೆಚ್ಚು ಕೆಮ್ಮು, ಕೆಮ್ಮಿನೊಂದಿಗೆ ಕಫ‌, ಉಸಿರಾಟಕ್ಕೆ ತೊಂದರೆ. ಶ್ವಾಸಕೋಶದ ಸೋಂಕಿನಿಂದ ಗುಣಮುಖರಾಗಲು ಹಲವು ವಾರಗಳು ಬೇಕಾಗುತ್ತವೆ. ಈ ಹಂತದಲ್ಲಿ ರೋಗಿಗೆ ತುರ್ತು ಚಿಕಿತ್ಸೆ, ಅಥವಾ ಹೊರರೋಗಿಯಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ.

ಗಂಭೀರ ಸಿಒಪಿಡಿ
ಇದು ರೋಗದ ಮೂರನೇ ಹಂತ. ಇಲ್ಲಿ ಕೆಮ್ಮು ಅಧಿಕ, ತುಂಬಾ ಕಫ‌ ಹೊರಬರುತ್ತದೆ. ಶ್ವಾಸಕೋಶ ಸೋಂಕುಗಳಿಂದ ಗುಣವಾಗಲು ಹಲವು ವಾರಗಳು ಬೇಕಾಗಬಹುದು. ಕೋಣೆ ಒಳಗೆ ಓಡಾಡುವುದೂ ಕಷ್ಟ. ಈ ಹಂತದಲ್ಲಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿದ್ದು ಚಿಕಿತ್ಸೆ ಪಡೆಯಬೇಕಾಗುತ್ತದೆ.

ಅತಿ ತೀವ್ರ ಸಿಒಪಿಡಿ
ಈ ಹಂತದಲ್ಲಿ ರೋಗವು ತೀವ್ರವಾಗು ಉಲ್ಬಣಗೊಂಡು ರೋಗಿ ತನ್ನನ್ನು ತಾನೇ ನಿರ್ವಸಲು ಕಷ್ಟವಾಗುತ್ತದೆ. ಈ ಹಂತದಲ್ಲಿ ರೋಗಿಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಬೇಕಾಗುತ್ತದೆ.

ಸಿಒಪಿಡಿಯಿಂದ ಇತರ ಆರೋಗ್ಯ ಸಮಸ್ಯೆಗಳು
ಸಿಒಪಿಡಿ ತೀವ್ರತೆಗೆ ಅನುಸಾರವಾಗಿ ದೇಹದ ಇತರ ಭಾಗದಲ್ಲಿ ಪರಿಣಾಮ ಬೀರಬಹುದು. ಖನ್ನತೆ ಬರಬಹುದು. ಇವೆಲ್ಲವನ್ನು ತಡೆಯಲು ಸಿಒಪಿಡಿಗೆ ಸೂಕ್ತ ಮುಂಜಾಗ್ರತಾ ಕ್ರಮಕೈಗೊಳ್ಳುವುದೇ ಚಿಕಿತ್ಸೆಗಿಂತ ಉತ್ತಮ.

ಯೋಗ ಉತ್ತಮ ಮದ್ದು
ಪ್ರಾಚೀನ ಯೋಗ ಪದ್ಧತಿ ನೈಸರ್ಗಿಕ ಜೀವನ ಶೈಲಿಯನ್ನು ನಡೆಸಲು ಮಾರ್ಗದರ್ಶನ ನೀಡುತ್ತದೆ. ಯೋಗದ ಶಾಸ್ತ್ರೀಯ ಹಾಗೂ ವೈಜ್ಞಾನಿಕ ಅಭ್ಯಾಸದಿಂದ ಉತ್ತಮ ಆರೋಗ್ಯದ ಜೀವನ ನಮ್ಮದಾಗಿಸಬಹುದು. ಯೋಗ ಚಿಕಿತ್ಸೆಯನ್ನು ಹಠಯೋಗ ಪ್ರದೀಪಿಕಾ, ಪಾತಂಜಲ, ಯೋಗಸೂತ್ರ ಇತ್ಯಾದಿ ಶಾಸ್ತ್ರೀಯ ಪಠ್ಯಗಳು ತಿಳಿಸುತ್ತವೆ. ಅಷ್ಟಾಂಗ ಯೋಗ ವ್ಯಕ್ತಿಯ ಯೋಗಕ್ಷೇಮ ಅಥವಾ ಆರೋಗ್ಯವಾಗಿರುವ ಸ್ಥಿತಿಯನ್ನು ಬೋಧಿಸುತ್ತದೆ. ಆಸನಗಳು ವ್ಯಕ್ತಿಯ ಅಂಗಗಳು, ಗ್ರಂಥಿಗಳು, ಜೀವಕೋಶಗಳು, ನರಮಂಡಲಗಳು ಸುಸ್ಥಿತಿಯಲ್ಲಿಡಲು ಪ್ರೇರಕವಾಗುತ್ತದೆ.

ಪ್ರಾಣಾಯಾಮದಿಂದ ಆಮ್ಲಜನಕದ ಬಳಕೆ ಮತ್ತು ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಯೋಗಾಭ್ಯಾಸದ ಬಂಧ, ಮುದ್ರಾ, ಶ್ರಾಂತಿ ಕ್ರಮ, ಪ್ರತ್ಯಾಹಾರ, ಧ್ಯಾನದ ವಿಧಾನಗಳು, ಮನಃಶಾಂತಿ ನೆಮ್ಮದಿಯನ್ನು ನೀಡುತ್ತದೆ. ಸಿಒಪಿಡಿ ಕಾಯಿಲೆಗೆ ಪರಿಣಾಮಕಾರಿಯಾಗಿ ಯೋಗ ಚಿಕಿತ್ಸೆಯನ್ನು ರೋಗದ ಹಂತವನ್ನು ನಿರ್ಧರಿಸಿ ತರಬೇತಿ ಪಡೆದಾಗ ರೋಗದಿಂದ ಗುಣ ಮುಖರಾಗಲು ಸಾಧ್ಯ.

ಚಿಕಿತ್ಸೆಗಳೇನು?
ರೋಗ ಲಕ್ಷಣಗಳು ಕಂಡು ಬಂದ ತತ್‌ಕ್ಷಣ ಶ್ವಾಸಕೋಶ ಪರಿಣತ ವೈದ್ಯರನ್ನು ಸಂದರ್ಶಿಸಬೇಕು. ಅವರು ತಪಾಸಣೆ ನಡೆಸಿ, ರಕ್ತಪರೀಕ್ಷೆ, ಎಕ್ಸರೇ ಹಾಗೂ ಸ್ಪೆ „ ರೋಮೀಟರ್‌ ಎಂಬ ಯಂತ್ರದ ಸಹಾಯದಿಂದ ರೋಗದ ತೀವ್ರತೆಯನ್ನು ಹಾಗೂ ಹಂತವನ್ನು ನಿರ್ಧರಿಸುತ್ತಾರೆ. ಅದರ ಆಧಾರದ ಮೇಲೆ ಚಿಕಿತ್ಸೆ ನೀಡುತ್ತಾರೆ. ಧೂಮಪಾನ ತ್ಯಜಿಸುವುದು, ಸ್ವಚ್ಛ ಪರಿಸರದಲ್ಲಿರುವುದು, ಹೊಗೆ-ಧೂಳುಗಳಿಂದ ದೂರವಿರಬೇಕು. ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಲಘು ವ್ಯಾಯಾಮ ಮತ್ತು ಉಸಿರಾಟದ ವ್ಯಾಯಾಮ ಪ್ರಯೋಜನಕಾರಿ. ಅತಿ ಗಂಭೀರ ಪ್ರಕರಣವಾಗಿದ್ದರೆ, ಮನೆಯಲ್ಲಿಯೇ ಆಮ್ಲಜನಕ ತೆಗೆದುಕೊಳ್ಳಲು ವೈದ್ಯರು ಸೂಚಿಸಬಹುದು. ಇದರೊಂದಿಗೆ ಯೋಗ ಅಭ್ಯಾಸ ಒಂದು ಪರಿಣಾಮಕಾರಿ ಚಿಕಿತ್ಸೆಯಾಗುತ್ತದೆ.

‡ ಕುಶಾಲಪ್ಪ ಗೌಡ ಎನ್‌.
ಸಂಶೋಧನ ವಿದ್ಯಾರ್ಥಿ,
ಯೇನಪೊಯ ವಿವಿ ದೇರಳಕಟ್ಟೆ

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.