ಕಾಲಿನ ಆರೋಗ್ಯಕ್ಕೆ ತೆಂಗಿನೆಣ್ಣೆ
Team Udayavani, Nov 10, 2020, 5:00 AM IST
ತೆಂಗಿನ ಎಣ್ಣೆಗೆ ಆಯುರ್ವೇದದಲ್ಲಿ ಪ್ರಮುಖ ಸ್ಥಾನವಿದೆ. ತೆಂಗಿನೆಣ್ಣೆಯು ಆರೋಗ್ಯವರ್ಧಕವಾಗಿ ಮತ್ತು ಸೌಂದರ್ಯವರ್ಧಕವಾಗಿ ಕೆಲಸ ಮಾಡುತ್ತದೆ. ಪ್ರತಿದಿನದ ಬದುಕಿನಲ್ಲಿ ತೆಂಗಿನೆಣ್ಣೆಯ ಬಳಕೆಯಿಂದ ಸೌಂದರ್ಯ ವೃದ್ಧಿ ಸಾಧ್ಯ.
ಕಾಲಿನ ಸೌಂದರ್ಯದಲ್ಲಿ ತೆಂಗಿನ ಎಣ್ಣೆಯ ಪಾತ್ರ ಮಹತ್ವವಾದುದು. ಪ್ರತಿದಿನ ಕಾಲಿಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಕಾಲಿನ ಸೌಂದರ್ಯ ವೃದ್ಧಿಯಾಗುತ್ತದೆ.
ಕಾಲಿನ ಆರೋಗ್ಯದಲ್ಲಿ ತೆಂಗಿನೆಣ್ಣೆಯ ಪ್ರಯೋಜನಗಳು
ಕಾಲಿನ ಆರೋಗ್ಯ ಕಾಪಾಡಿಕೊಳ್ಳಲು ಸುಲಭವಾಗಿ ದೊರಕುವ ತೆಂಗಿನೆಣ್ಣೆಯಿಂದ ಸಾಧ್ಯ.ಚರ್ಮಗಳಲ್ಲಿ ಹಲವು ವಿಧಗಳಿದ್ದು ಕೆಲವೊಂದು ಚರ್ಮಗಳಿಗೆ ಇದು ಹೆಚ್ಚು ಉಪಯುಕ್ತವಾದುದು. ಆದ್ದರಿಂದ ತೆಂಗಿನೆಣ್ಣೆ ಬಳಕೆ ಮಾಡುವ ಮೊದಲು ತಮ್ಮ ಚರ್ಮದ ಕುರಿತು ತಿಳಿದು ಬಳಕೆ ಮಾಡುವುದು ಉತ್ತಮ.
1 ಒಣಗಿದ ಚರ್ಮಕ್ಕೆ ತೆಂಗಿನೆಣ್ಣೆ
ಸುಕ್ಕುಗಟ್ಟಿದ ಅಥವಾ ಒಣಗಿದ ಕಾಲಿನ ಚರ್ಮಕ್ಕೆ ತೆಂಗಿನೆಣ್ಣೆ ಹಚ್ಚುವುದರಿಂದ ಒಣ ಚರ್ಮವನ್ನು ತಡೆಗಟ್ಟ ಬಹುದು. ಪ್ರತಿದಿನ ರಾತ್ರಿ ಮಲಗುವಾಗ ಕಾಲಿಗೆ ಎಣ್ಣೆ ಹಚ್ಚಿ ಮಲಗುವುದರಿಂದ ಇದನ್ನು ತಡೆಗಟ್ಟಬಹುದು.
2 ಚರ್ಮ ಮೃದುವಾಗಲು ಸಹಕಾರಿ
ಪ್ರತಿದಿನ ಕಾಲಿಗೆ ತೆಂಗಿನೆಣ್ಣೆಯನ್ನು ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮ ಮೃದುವಾಗುತ್ತದೆ.
3 ಒಡೆದ ಚರ್ಮಕ್ಕೆ ರಾಮಬಾಣ
ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಲು ಒಡೆಯುವುದು ಸಾಮಾನ್ಯ. ಇದನ್ನು ನಿಯಂತ್ರಿಸಲು ತೆಂಗಿನೆಣ್ಣೆಯನ್ನು ಬಳಕೆ ಮಾಡಬಹುದು.
4 ಚರ್ಮದ ಹೊಳಪಿಗೆ ಸಹಕಾರಿ
ತೆಂಗಿನೆಣ್ಣೆಯನ್ನು ಸಾಮಾನ್ಯವಾಗಿ ಎಲ್ಲ ಬ್ಯೂಟಿ ಕ್ರೀಮ್‌ಗಳಲ್ಲಿ ಬಳಕೆ ಮಾಡುತ್ತಾರೆ. ತೆಂಗಿನೆಣ್ಣೆ ಚರ್ಮಕ್ಕೆ ಹೊಳಪು ನೀಡುವ ವಿಶೇಷ ಗುಣವಿದೆ.
5 ಚರ್ಮದ ಅಲರ್ಜಿಗಳಿಗೂ ಉತ್ತಮ ಮದ್ದು
ಚರ್ಮದ ಸಮಸ್ಯೆಗಳಿಗೂ ತೆಂಗಿನೆಣ್ಣೆ ಉತ್ತಮ ಮದ್ದಾಗಿದ್ದು, ಚರ್ಮದ ಅಲರ್ಜಿ, ತುರಿಕೆಗೆ ತೆಂಗಿನೆಣ್ಣೆ ಬಳಸಬಹುದು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.