Cancer Symptoms: ಮಹಿಳೆಯರಲ್ಲಿ ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಡುವ ಕ್ಯಾನ್ಸರ್‌ ಲಕ್ಷಣಗಳು

ಗಮನಿಸಲೇಬೇಕಾದ ಪ್ರಮುಖ ಎಚ್ಚರಿಕೆಯ ಸಂಕೇತಗಳು

Team Udayavani, Jul 28, 2024, 3:11 PM IST

10-women-cancer

ಮಹಿಳೆಯರಲ್ಲಿ ಕ್ಯಾನ್ಸರ್‌ ಲಕ್ಷಣಗಳು ವಿಭಿನ್ನವಾಗಿರಬಹುದಾಗಿದ್ದು, ಯಾವ ಕ್ಯಾನ್ಸರ್‌ ಎಂಬುದನ್ನು ಆಧರಿಸಿಯೂ ಬದಲಾಗಬಹುದಾಗಿದೆ. ಸಾಮಾನ್ಯವಾಗಿ ಮಹಿಳೆಯರನ್ನು ಬಾಧಿಸುವ ವಿವಿಧ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದ ಸಾಮಾನ್ಯ ಲಕ್ಷಣಗಳನ್ನು ಇಲ್ಲಿ ವಿವರಿಸಲಾಗಿದೆ.

ಸ್ತನ ಕ್ಯಾನ್ಸರ್‌

ಸ್ತನದಲ್ಲಿ ಅಥವಾ ಕಂಕುಳಲ್ಲಿ ಗಂಟುಗಳು ಅಥವಾ ದಪ್ಪಗಾಗುವುದು

ಸ್ತನದ ಆಕಾರ ಅಥವಾ ಗಾತ್ರದಲ್ಲಿ ಬದಲಾವಣೆ

ಸ್ತನದ ತೊಟ್ಟುಗಳಿಂದ ಎದೆಹಾಲು ಅಲ್ಲದ ಸ್ರಾವ; ವಿಶೇಷವಾಗಿ ರಕ್ತಸಹಿತವಾಗಿ ರುವುದು

ಜೋತು ಬೀಳುವುದು, ಕೆಂಪಗಾಗುವುದು ಅಥವಾ

ಅಂಡಾಶಯದ ಕ್ಯಾನ್ಸರ್‌

ಹೊಟ್ಟೆ ಉಬ್ಬರ ಅಥವಾ ಊತ

ಆಹಾರ ಸೇವಿಸುವಾಗ ಬೇಗನೆ ಹೊಟ್ಟೆ ತುಂಬಿದಂತಾಗುವುದು

ವಸ್ತಿ ಕುಹರ (ಪೆಲ್ವಿಕ್‌) ಭಾಗದಲ್ಲಿ ಕಿರಿಕಿರಿ ಅಥವಾ ನೋವು

ಮಲಬದ್ಧತೆಯಂತಹ ಮಲವಿಸರ್ಜನೆಯ ಕ್ರಮದಲ್ಲಿ ಬದಲಾವಣೆ

ಪದೇಪದೆ ಮೂತ್ರಶಂಕೆ

ಗರ್ಭಕಂಠದ ಕ್ಯಾನ್ಸರ್‌

ಯೋನಿಯ ಮೂಲಕ ಅಸಹಜ ರಕ್ತಸ್ರಾವ (ಋತುಚಕ್ರದ ನಡುವಿನ ದಿನಗಳಲ್ಲಿ, ಲೈಂಗಿಕ ಸಂಪರ್ಕದ ಬಳಿಕ ಅಥವಾ ಋತುಚಕ್ರಬಂಧದ ಬಳಿಕ) ಯೋನಿಯ ಮೂಲಕ ಅಸಹಜ ಸ್ರಾವ

ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ವಸ್ತಿಕುಹರ (ಪೆಲ್ವಿಕ್‌) ದಲ್ಲಿ ನೋವು

ಎಂಡೊಮೆಟ್ರಿಯಲ್‌ (ಯುಟೆರೈನ್‌) ಕ್ಯಾನ್ಸರ್‌

ಯೋನಿಯ ಮೂಲಕ ಅಸಹಜ ರಕ್ತಸ್ರಾವ ಅಥವಾ ಸ್ರಾವ

ವಸ್ತಿಕುಹರ ಭಾಗದಲ್ಲಿ ನೋವು

ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ನೋವು

ಕೊಲೊರೆಕ್ಟಲ್‌ ಕ್ಯಾನ್ಸರ್‌

ಮಲವಿಸರ್ಜನೆಯ ಕ್ರಮದಲ್ಲಿ ಬದಲಾವಣೆ (ಭೇದಿ, ಮಲಬದ್ಧತೆ ಅಥವಾ ಮಲ ವಿಸರ್ಜನೆ ಕಡಿಮೆಯಾಗುವುದು)

ಮಲದ ಜತೆಗೆ ರಕ್ತ

ಹೊಟ್ಟೆಯಲ್ಲಿ ತೊಂದರೆ (ಹಿಡಿದುಕೊಳ್ಳುವುದು, ವಾಯು ಅಥವಾ ನೋವು) ವಿವರಿಸಲಾಗದ ತೂಕ ನಷ್ಟ

ದಣಿವು

ಶ್ವಾಸಕೋಶದ ಕ್ಯಾನ್ಸರ್‌

ಸತತ ಕೆಮ್ಮು

ಕಫ‌ದ ಜತೆಗೆ ರಕ್ತ

ಉಸಿರು ಹಿಡಿದುಕೊಳ್ಳುವುದು

ಎದೆನೋವು

ಧ್ವನಿ ದೊರಗಾಗುವುದು

ತೂಕ ನಷ್ಟ ಮತ್ತು ಹಸಿವು ನಷ್ಟ

ಚರ್ಮದ ಕ್ಯಾನ್ಸರ್‌

ಚರ್ಮದಲ್ಲಿ ಹೊಸ ಬೆಳವಣಿಗೆಗಳು ಅಥವಾ ಗುಣವಾಗದ ಹುಣ್ಣುಗಳು

ಈಗಾಗಲೇ ಇರುವ ಮಚ್ಚೆಗಳಲ್ಲಿ ಬದಲಾವಣೆ (ಅಸಮ್ಮಿತಿ, ಅಂಚುಗಳ ಅಸಹಜತೆ, ಬಣ್ಣ ಬದಲಾವಣೆ, ವ್ಯಾಸ ಹೆಚ್ಚಳ, ಆಕಾರ/ ಗಾತ್ರದಲ್ಲಿ ಬದಲಾವಣೆ)

ಸಾಮಾನ್ಯ ಲಕ್ಷಣಗಳು

(ಹಲವು ಕ್ಯಾನ್ಸರ್‌ಗಳಿಗೆ ಇವು ಸಾಮಾನ್ಯ ಲಕ್ಷಣಗಳು)

ವಿವರಿಸಲಾಗದ ತೂಕ ನಷ್ಟ

ಸತತ ದಣಿವು

ವಿವರಿಸಲಾಗದ ನೋವು

ಸತತ ಜ್ವರ ಅಥವಾ ರಾತ್ರಿ ಬೆವರುವುದು

ಏನು ಮಾಡಬೇಕು?

ನಿಯಮಿತ ತಪಾಸಣೆ: ನಿಯಮಿತವಾಗಿ ಮ್ಯಾಮೊಗ್ರಾಮ್‌, ಪ್ಯಾಪ್‌ ಸ್ಮಿಯರ್‌ ಮತ್ತು ಇತರ ಪರೀಕ್ಷೆಗಳ ನಡೆಸುವುದರಿಂದ ಕ್ಯಾನ್ಸರ್‌ ಇದ್ದರೆ ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸುವುದು ಸಾಧ್ಯವಾಗುತ್ತದೆ.

ಆರೋಗ್ಯಯುತ ಜೀವನಶೈಲಿ: ಆರೋಗ್ಯಯುತ ಆಹಾರ ಕ್ರಮ, ನಿಯಮಿತ ವ್ಯಾಯಾಮ, ಧೂಮಪಾನ ವರ್ಜಿಸುವುದು, ಮದ್ಯಪಾನವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಇತ್ಯಾದಿಗಳ ಮೂಲಕ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.

ಶೀಘ್ರ ವೈದ್ಯಕೀಯ ಆರೈಕೆ: ಸತತವಾದ ಅಥವಾ ಅಸಹಜವಾದ ಯಾವುದೇ ಲಕ್ಷಣಗಳು ಕಂಡುಬಂದರೆ ಕೂಡಲೇ ಆಂಕಾಲಜಿಸ್ಟ್‌ರನ್ನು ಸಂಪರ್ಕಿಸಿ ಸಮಾಲೋಚನೆ, ತಪಾಸಣೆ ಮಾಡಿಸಿಕೊಳ್ಳಬೇಕು.

ಮಹಿಳೆಯರಲ್ಲಿ ಉಂಟಾಗಬಹುದಾದ ಕ್ಯಾನ್ಸರ್‌ ಗಳಿಗೆ ಚಿಕಿತ್ಸೆ ಮತ್ತು ಫ‌ಲಿತಾಂಶ ಚೆನ್ನಾಗಿರಬೇಕಾದರೆ ಶೀಘ್ರ ಪತ್ತೆ ಮತ್ತು ಆದಷ್ಟು ಬೇಗನೆ ಚಿಕಿತ್ಸೆಯ ಆರಂಭ ನಿರ್ಣಾಯಕವಾಗಿರುತ್ತವೆ.

-ಡಾ| ಹರೀಶ್‌ ಇ.

ಸರ್ಜಿಕಲ್‌ ಆಂಕಾಲಜಿಸ್ಟ್‌

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ,

ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಂಕಾಲಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

fasting- ಆತ್ಮದ ಶಕ್ತಿ; ಆಧುನಿಕ ಪ್ರಾಚೀನ ಹಾಗೂ ಪರಿಕಲ್ಪನೆಯ ಸಂಯೋಗ

4

Health: ಮೊಣಕಾಲಿನ ಅಸ್ಥಿಸಂಧಿವಾತ; ಸಾಮಾನ್ಯ ಸಮಸ್ಯೆಯನ್ನು ಮಾಡಿಕೊಳ್ಳುವುದು

1

Tobacco Cessation Centre: ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತಂಬಾಕು ವರ್ಜನ ಕೇಂದ್ರ

11

Health: ರೋಗಿ ಸುರಕ್ಷೆಗೆ ಒಂದು ನಮನ

10

Health: ಚಟುವಟಿಕೆಗಳ ಮೂಲಕ ಮಾನಸಿಕ ಆರೋಗ್ಯಕ್ಕೆ ಉತ್ತೇಜನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.