ಮಕ್ಕಳಿಗೂ ಬಂತು ಲಸಿಕೆ… ಕೋವಿಡ್ 19 ಲಸಿಕೆ ನೀಡಲು ಡಿಸಿಜಿಐ ಗ್ರೀನ್ ಸಿಗ್ನಲ್
ಏತನ್ಮಧ್ಯೆ ಈ ಕುರಿತು ಅಧಿಕೃತ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ ಎಂದು ವರದಿ ಹೇಳಿದೆ.
Team Udayavani, Oct 12, 2021, 1:54 PM IST
ನವದೆಹಲಿ: ಕೋವಿಡ್ 19 ಸೋಂಕಿನ ವಿರುದ್ಧದ ಭಾರತದ ಹೋರಾಟಕ್ಕೆ ಮತ್ತಷ್ಟು ಉತ್ತೇಜನಕಾರಿ ಬೆಳವಣಿಗೆ ನಡೆದಿದ್ದು, 2ರಿಂದ 18 ವರ್ಷದ ನಡುವಿನ ಮಕ್ಕಳಿಗೆ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ನೀಡಲು ಡಿಸಿಜಿಐ(ಭಾರತೀಯ ಔಷಧೀಯ ನಿಯಂತ್ರಣ ಪ್ರಾಧಿಕಾರ) ಮಂಗಳವಾರ ಒಪ್ಪಿಗೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ದೆಹಲಿ ಲಕ್ಷ್ಮಿ ನಗರದಲ್ಲಿ ಪಾಕಿಸ್ತಾನಿ ಭಯೋತ್ಪಾದಕನ ಬಂಧನ, ಎಕೆ 47, ಗ್ರೆನೇಡ್ ವಶಕ್ಕೆ
ಕೋವ್ಯಾಕ್ಸಿನ್ ಮುಖ್ಯವಾಗಿ ಮಕ್ಕಳಿಗೆ ನೀಡಬಹುದಾದ ದೇಶದ ಮೊದಲ ಕೋವಿಡ್ 19 ಲಸಿಕೆಯಾಗಿದೆ. ಏತನ್ಮಧ್ಯೆ ಈ ಕುರಿತು ಅಧಿಕೃತ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ ಎಂದು ವರದಿ ಹೇಳಿದೆ.
18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಬಳಸುವ ನಿಟ್ಟಿನಲ್ಲಿ ಭಾರತ್ ಬಯೋಟೆಕ್ 2 ಮತ್ತು 3ನೇ ಹಂತದ ಪ್ರಯೋಗವನ್ನು ಪೂರ್ಣಗೊಳಿಸಿದ ಬಳಿಕ, ಅದರ ವರದಿಯನ್ನು ಡಿಸಿಜಿಐಗೆ ಸಲ್ಲಿಸಿತ್ತು. ನಂತರ ಈ ಬೆಳವಣಿಗೆ ನಡೆದಿರುವುದಾಗಿ ವರದಿ ಹೇಳಿದೆ.
ಈ ಹಿನ್ನೆಲೆಯಲ್ಲಿ 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆ ಮಾಡಲು ಡಿಸಿಜಿಐ ಹಸಿರು ನಿಶಾನೆ ತೋರಿಸಿದೆ. ಅಷ್ಟೇ ಅಲ್ಲ ಇತರ ಕಂಪನಿಗಳು ಕೂಡಾ ಮಕ್ಕಳಿಗೆ ನೀಡುವ ಲಸಿಕೆ ಕುರಿತು ವೈದ್ಯಕೀಯ ಸಂಶೋಧನೆಯ ಪ್ರಯೋಗದಲ್ಲಿ ತೊಡಗಿವೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.