ಕೋವಿಡ್ 2ನೇ ಅಲೆ ಭೀತಿ : ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕೆಲವು ಟಿಪ್ಸ್
Team Udayavani, Apr 21, 2021, 5:15 PM IST
ಈಗ ದೇಶದಲ್ಲಿ ಕೋವಿಡ್ ಎರಡನೇ ಅಲೆಯ ಭೀತಿ ಶುರುವಾಗಿದೆ. ಕಳೆದ ಬಾರಿ ದೇಶದ ಜನತೆಗೆ ನರಕ ತೋರಿಸಿದ್ದ ಮಹಾಮಾರಿ ಸೋಂಕು, ಇದೀಗ ಮತ್ತೊಮ್ಮೆ ತನ್ನ ರೌದ್ರನರ್ತನ ಶುರು ಮಾಡಿದೆ.
ಕೋವಿಡ್ ವಿರುದ್ಧ ಸಮರ ಸಾರಿರುವ ಸರ್ಕಾರ ಲಸಿಕಾ ಅಭಿಯಾನ ಪ್ರಾರಂಭಿಸಿದೆ. ದೇಶದ ಜನರಿಗೆ ಉಚಿತವಾಗಿ ಲಸಿಕೆ ನೀಡುತ್ತಿದೆ.
ಕೋವಿಡ್ ಸೋಂಕಿನಿಂದ ಪಾರಾಗಬೇಕಾದರೆ ಎಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲೇಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಹ್ಯಾಂಡ್ ಸಾನಿಟೈಸ್ ಮಾಡಿಕೊಳ್ಳಬೇಕು. ಇವೆಲ್ಲವುದರ ಜೊತೆಗೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಬಹುಮುಖ್ಯ. ಹಾಗಾದರೆ ಮನೆಯಲ್ಲಿಯೇ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ ? ಈ ಬಗ್ಗೆ ಕೆಲವೊಂದು ಟಿಪ್ಸ್ ಇಲ್ಲಿವೆ ನೋಡಿ
- ಡಿ ಹೈಡ್ರೆಷನ್‍ನಿಂದ ತಪ್ಪಿಸಿಕೊಳ್ಳಲು ನಿತ್ಯ ಜಾಸ್ತಿ ನೀರು ಸೇವಿಸಿ
- ಪ್ರತಿ ದಿನ ಮುಂಜಾನೆ ಯೋಗಾಸನ ಮಾಡಿ. ಅದರಲ್ಲೂ ಕನಿಷ್ಠ 30 ನಿಮಿಷಗಳ ವರೆಗೆ ಪ್ರಾಣಾಯಾಮ ಮಾಡಿ
- ಅಡುಗೆಯಲ್ಲಿ ಅರಿಶಿನ, ಜೀರಿಗೆ, ಧನಿಯಾ ಬೆಳ್ಳೊಳ್ಳಿಯನ್ನು ಹೆಚ್ಚೆಚ್ಚು ಬಳಸಿ
- ಜಂಕ್ ಫುಡ್‍ನಿಂದ ದೂರವಿರಿ. ಪೋಷಕಾಂಶಯುಕ್ತ ಡ್ರೈ ಫ್ರ್ಯೂಟ್ಸ್ ಸೇವಿಸಿ. ಹಾಗೂ ನಿತ್ಯ ಕನಿಷ್ಠ 7 ರಿಂದ 8 ಗಂಟೆಗಳ ವರೆಗೆ ನೆಮ್ಮದಿಯಾಗಿ ನಿದ್ದೆ ಮಾಡಿ
- ನೈರ್ಮಲ್ಯ ಕಾಪಾಡಿಕೊಳ್ಳಿ, ಸೋಪು ಹಚ್ಚಿ ಕನಿಷ್ಠ 20 ಸೆಕೆಂಡ್‍ಗಳ ವರೆಗೆ ಕೈ ತೊಳೆದುಕೊಳ‍್ಳಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಹೊರಗಡೆ ಹೋಗುವ ಮುನ್ನ ತಪ್ಪದೆ ಮಾಸ್ಕ್ ಧರಿಸಿ( ಮನೆಯಲ್ಲಿ ಸಿದ್ಧಪಡಿಸಲಾದ ಮಾಸ್ಕ್ ಧರಿಸುವುದು ಇನ್ನೂ ಉತ್ತಮ)
- ಪ್ರತಿ ದಿನ ಮುಂಜಾನೆ 10 ಗ್ರಾಂನಷ್ಟು ಚಾವನ್‍ಪ್ರಾಶ್ ಸೇವಿಸಿ ( ಡಯಾಬಿಟಿಸ್ ಕಾಯಿಲೆ ಹೊಂದಿರುವವರು ಸಕ್ಕರೆ ರಹಿತ ಚಾವನ್‍ಪ್ರಾಶ ಸೇವಿಸುವುದು ಉತ್ತಮ)
- ತುಳಸಿ, ದಾಲ್ಚಿನ್ನಿ, ಕರಿಮೆಣಸು, ಶುಂಠಿಯಿಂದ ತಯಾರಿಸಿದ ಚಹಾ ಸೇವಿಸಿ
- ಮೂಗಿನ ಹೊಳ್ಳೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ತುಪ್ಪ ಹಚ್ಚಿಕೊಳ್ಳಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಖಜೂರ್ ಸೇವಿಸಿ. ಸಾಬೂದಾನಿ ಬಾರ್ಲಿ ಹಾಗೂ ಹೆಚ್ಚೆಚ್ಚು ತರಕಾರಿ ಸೇವಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.