ಡೆಲ್ಟಾವೂ ಮತ್ತೊಮ್ಮೆ ಬದಲು?
ಕೊವ್ಯಾಕ್ಸಿನ್ ಲಸಿಕೆಯ ಮಿಶ್ರಣ ಮಾಡಿ ಅಧ್ಯಯನ ನಡೆಸಲು ಡಿಜಿಸಿಐ ಸಂಸ್ಥೆಗೆ ಅನುಮತಿ ನೀಡಿದೆ.
Team Udayavani, Aug 12, 2021, 7:00 AM IST
ಹೊಸದಿಲ್ಲಿ/ತಿರುವನಂತಪುರ: ಕೇರಳದಲ್ಲಿ ಸೋಂಕಿನ ಡೆಲ್ಟಾ ರೂಪಾಂತರಿ ಮತ್ತೂಂದು ಹೊಸ ರೂಪ ಪಡೆಯುತ್ತಿದೆ. ಹೀಗೆಂದು ಕೇಂದ್ರ ಆರೋಗ್ಯ ಸಚಿವಾಲಯವೇ ದೃಢಪಡಿಸಿದೆ.
ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಆರು ಮಂದಿ ಸದಸ್ಯರ ತಂಡ ನಡೆಸಿದ ಅಧ್ಯಯನದಲ್ಲಿ ಈ ಅಂಶ ವ್ಯಕ್ತವಾಗಿದೆ. ಸುಮಾರು 40 ಸಾವಿರ ಹೊಸ ರೀತಿಯ (ಬ್ರೇಕ್‌ಥ್ರೂ) ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ಡೆಲ್ಟಾ ಕೂಡ ಹೊಸ ರೂಪ ಪಡೆದುಕೊಂಡಿದೆಯೇ ಎಂದು ಸಂಶಯಿಸಲಾಗುತ್ತಿದೆ. ಆ.1ರಿಂದ 20ರ ನಡುವೆ ರಾಜ್ಯದಲ್ಲಿ 4.6 ಲಕ್ಷ ಕೇಸುಗಳು ದೃಢಪಡಲಿವೆ ಎಂದು ಎಚ್ಚರಿಕೆ ನೀಡಿತ್ತು.
23, 500 ಹೊಸ ಕೇಸು: ಕೇರಳದಲ್ಲಿ ಬುಧವಾರ 1.62 ಲಕ್ಷ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 23,500 ಹೊಸ ಕೇಸುಗಳು ದೃಢಪಟ್ಟಿವೆ.
ಸಕ್ರಿಯ ಸೋಂಕು ಕನಿಷ್ಠ: 140 ದಿನಗಳಿಗೆ ಹೋಲಿಕೆ ಮಾಡಿದರೆ ದೇಶದಲ್ಲಿ ಸಕ್ರಿಯ ಸೋಂಕು ಸಂಖ್ಯೆ 3,86,351ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಇದೇ ವೇಳೆ ಮಂಗಳವಾರದಿಂದ ಬುಧವಾ ರದ ಅವಧಿಯಲ್ಲಿ 38, 353 ಹೊಸ ಪ್ರಕರಣಗಳು ಮತ್ತು 497 ಮಂದಿ ಅಸುನೀಗಿದ್ದಾರೆ. ದೇಶದಲ್ಲಿ 53.24 ಕೋಟಿ ಡೋಸ್ ಲಸಿಕೆಯನ್ನು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.
ಶೀಘ್ರ ಫೈಜರ್ ಲಸಿಕೆ? :
ಮೂರು ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಿರುವ ಭಾರತದಲ್ಲಿ ಇನ್ನೊಂದು ಲಸಿಕೆಗೆ ಶೀಘ್ರವೇ ಅನುಮತಿ ಸಿಗುವ ಸಾಧ್ಯತೆ ಇದೆ. ಅಮೆರಿಕದ ಫೈಜರ್ ಐಎನ್‌ಸಿ ಮತ್ತು ಜರ್ಮನ್‌ನ ಬಯೋನ್‌ಟೆಕ್ ಸಂಸ್ಥೆ ಜಂಟಿಯಾಗಿ ತಯಾರಿಸಿರುವ ಕೊರೊನಾ ಲಸಿಕೆಗೆ ಅನುಮತಿ ಸಿಗುವ ಸಾಧ್ಯತೆಯಿದೆ. ಆ ಲಸಿಕೆಯ 5 ಕೋಟಿ ಡೋಸ್ ಖರೀದಿಸುವ ಬಗ್ಗೆ ಭಾರತವು ತಯಾರಕ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು “ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ. ಈಗಾಗಲೇ ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳಲ್ಲಿ ಫೈಜರ್ ಬಳಕೆಯಲ್ಲಿದೆ.
ಹೈದರಾಬಾದ್‌ನ ಭಾರತ್ ಬಯೋಟೆಕ್ ತಯಾರಿಸುತ್ತಿರುವ ಮೂಗಿನ ಮೂಲಕ ನೀಡುವ ಲಸಿಕೆ (ಅಡೆನೊವೈರಲ್ ಇಂಟ್ರಾನಸಲ್ ಲಸಿಕೆ) ಮತ್ತು ಕೊವ್ಯಾಕ್ಸಿನ್ ಲಸಿಕೆಯ ಮಿಶ್ರಣ ಮಾಡಿ ಅಧ್ಯಯನ ನಡೆಸಲು ಡಿಜಿಸಿಐ ಸಂಸ್ಥೆಗೆ ಅನುಮತಿ ನೀಡಿದೆ. ಲಸಿಕೆ ಮಿಶ್ರಣದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ನೀಡಿರುವುದಾಗಿ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು “ನ್ಯೂಸ್ 18′ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.