ಕೋವಿಡ್‌ ಲಸಿಕೆ ಮತ್ತು ಹೃದಯ ಸತ್ಯಾಂಶಗಳು ಮತ್ತು ಸುಳ್ಳುಗಳು


Team Udayavani, May 10, 2021, 1:36 PM IST

Covid Vaccine

ಪ್ರಶ್ನೆ: ನಾವು ಯಾವ ಲಸಿಕೆ  ತೆಗೆದುಕೊಳ್ಳಬೇಕು? ಲಭ್ಯವಿರುವ ಲಸಿಕೆಗಳಲ್ಲಿ ಯಾವುದು ಅತ್ಯುತ್ತಮ?

ಕ್ಷಯ, ಇನ್‌ಫ್ಲುಯೆಂಜಾ ಇತ್ಯಾದಿಗಳಿಗೆ ಲಭ್ಯವಿರುವ ಲಸಿಕೆಗಳಿಗಿಂತಲೂ ಈಗ ಕೊರೊನಾ ವಿರುದ್ಧ ಅಭಿವೃದ್ಧಿಪಡಿಸಲಾಗಿರುವ ಲಸಿಕೆಗಳು ಪರಿಣಾಮಕಾರಿಯಾಗಿವೆ. ಯಾವುದೇ ಲಸಿಕೆ ನೂರಕ್ಕೆ ನೂರು ಪರಿಣಾಮಕಾರಿ ಅಲ್ಲವಾದರೂ ಕೊರೊನಾ ಲಸಿಕೆ ಹಾಕಿಸಿಕೊಂಡ ಬಳಿಕ ಕೊರೊನಾ ಸೋಂಕಿಗೆ ತುತ್ತಾಗುವ ಅಥವಾ ಲಸಿಕೆಯನ್ನು ಮೀರಿದ ಸೋಂಕಿಗೆ ತುತ್ತಾಗುವ ಸಾಧ್ಯತೆಗಳು ತೀರಾ ಅಲ್ಪ ಎಂಬುದಾಗಿ ಐಸಿಎಂಆರ್‌ ಒದಗಿಸುವ ದತ್ತಾಂಶಗಳು ಹೇಳುತ್ತವೆ. ಈ ಅಪಾಯ ಕೊವಿಶೀಲ್ಡ್‌ ಲಸಿಕೆಯ ಬಳಿಕ ಶೇ. 0.03; ಕೊವ್ಯಾಕ್ಸಿನ್‌ ಲಸಿಕೆಯ ಬಳಿಕ ಶೇ. 0.04 ಆಗಿದೆ (ವಿವರ: ಇನ್‌ಫೆಕ್ಷನ್ಸ್‌ ಆಫ್ಟರ್‌ ಕೋವಿಡ್‌-19 ವ್ಯಾಕ್ಸಿನೇಶನ್‌, ಇಂಡಿಯನ್‌ ಎಕ್ಸ್‌ಪ್ರೆಸ್‌, ಎ.24, 2021). ಈ 2 ಅಂಕಿಸಂಖ್ಯೆಗಳ ಅರ್ಥ, ಲಸಿಕೆ ಹಾಕಿಸಿ ಕೊಂಡ 10 ಸಾವಿರ ಮಂದಿಯಲ್ಲಿ 1 ಒಬ್ಬರಿಗೆ ಈ ಅಪಾಯ ಉಂಟಾಗಬಹುದು. ಇದನ್ನು ಅರ್ಥ ಮಾಡಿಕೊಳ್ಳಲು ಉದಾಹರಣೆ ಕೊಡಬಹು ದಾದರೆ, ಪ್ರತೀ 10 ಸಾವಿರ ಶಿಶುಜನನಗಳಲ್ಲಿ ಒಂದು ತ್ರಿವಳಿಯಾಗಿರುತ್ತದೆ. ಅಂದರೆ ಇದು ಅತ್ಯಂತ ಅಪರೂಪ ಎಂದರ್ಥ ತಾನೇ? ಲಸಿಕೆ ಹಾಕಿಸಿಕೊಂಡ ಬಳಿಕ ಸೋಂಕಿಗೆ ಒಳಗಾಗುವ ಅಪಾಯವೂ ಇಷ್ಟೇ ಅಪರೂಪ. ಆದ್ದರಿಂದ ಅವಕಾಶ ಸಿಕ್ಕಿದಾಗ ನಿಮಗೆ ಯಾವ ಲಸಿಕೆ ಲಭ್ಯವಿದೆಯೋ ಅದನ್ನು ಹಾಕಿಸಿಕೊಳ್ಳಿ.

ಪ್ರಶ್ನೆ: ಲಸಿಕೆ ಹಾಕಿಸಿಕೊಂಡ ಬಳಿಕವೂ ಮಾಸ್ಕ್ ಧಾರಣೆ ಮುಂದುವರಿಸಬೇಕೇ? ಪ್ರವಾಸ ಮಾಡಬಹುದೇ, ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸಬಹುದೇ?

ಹೌದು, ಹಲವು ಕಾರಣಗಳಿಗಾಗಿ ನೀವು ಮಾಸ್ಕ್ ಧಾರಣೆಯನ್ನು ಮುಂದುವರಿಸಬೇಕು. ಮೊದಲನೆಯದಾಗಿ, ಲಸಿಕೆಯು ಶೇ. 70ರಿಂದ ಶೇ. 90 ಪ್ರಕರಣಗಳಲ್ಲಿ ಮಾತ್ರ ಪರಿಣಾಮಕಾರಿಯಾಗಿರುತ್ತದೆ. ಹಾಗಾಗಿ ಲಸಿಕೆಯು ನಿಮಗೆ ರಕ್ಷಣೆ ಒದಗಿಸದ ಸಣ್ಣ ಅಪಾಯವೊಂದು ಇರುತ್ತದೆ.

ಎರಡನೆಯದಾಗಿ, ಲಸಿಕೆಯ ಮೇಲೆ ನಡೆಸಿದ ಪ್ರಯೋಗ ಮತ್ತು ಅಧ್ಯಯನ ಗಳು ಹೇಳುವುದೇನೆಂದರೆ, ಲಸಿಕೆಯು ನಿಮಗೆ ಕೊರೊನಾ ಸೋಂಕಿನ ಗಂಭೀರ ಪರಿಣಾಮಗಳು ಉಂಟಾಗದಂತೆ ತಡೆಯುತ್ತವೆಯೇ ವಿನಾ ಸೋಂಕೇ ತಗಲದಂತೆ ರಕ್ಷಣೆ ನೀಡುವುದಿಲ್ಲ.

ಕೋವಿಡ್‌-19 ಸೋಂಕುಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಕೂಡ ಇದನ್ನೇ ಹೇಳುತ್ತಾರೆ. ಕೊರೊನಾ ಲಸಿಕೆ (ಯಾವುದೇ ಲಸಿಕೆ)ಯ ಎರಡನೇ ಡೋಸ್‌ ಹಾಕಿಸಿಕೊಂಡ ಕನಿಷ್ಠ 2 ವಾರಗಳ ಬಳಿಕ ಕೊರೊನಾ ಸೋಂಕಿಗೆ ತುತ್ತಾದರೆ ಅಂತಹ ರೋಗಿಗಳಲ್ಲಿ ಗಂಭೀರ ಸಮಸ್ಯೆಗಳು ಉಂಟಾಗುವುದು ಕಡಿಮೆ ಎಂಬುದನ್ನು ವೈದ್ಯರು ಕಂಡುಕೊಂಡಿದ್ದಾರೆ. ಇಂಥ ಬಹುತೇಕ ರೋಗಿಗಳು ಲಘು ಸ್ವರೂಪದ ಲಕ್ಷಣಗಳನ್ನು ಹೊಂದಿರುತ್ತಾರೆ ಹಾಗೂ ಹೋಮ್‌ ಐಸೊಲೇಶನ್‌ ಮತ್ತು ದೈಹಿಕ ನೋವು, ಜ್ವರಗಳಿಗೆ ಪ್ಯಾರಾಸಿಟಮಾಲ್‌ನಂತಹ ರೋಗಲಕ್ಷಣ ಆಧಾರಿತ ಔಷಧೋಪಚಾರದಿಂದ ಗುಣ ಹೊಂದುತ್ತಾರೆ.

ಕೊನೆಯದಾಗಿ, ಲಸಿಕೆ ಪಡೆದುಕೊಂಡ ಬಳಿಕ ನಿಮಗೆ ಸೋಂಕು ತಗಲಿ, ಲಘು ರೋಗ ಲಕ್ಷಣಗಳು ಇದ್ದರೂ ನೀವು ಲಸಿಕೆ ಹಾಕಿಸಿಕೊಂಡಿಲ್ಲದ ನಿಮ್ಮ ಕುಟುಂಬಿಕರು, ಆಪ್ತರು ಮತ್ತಿತರರಿಗೆ ಸೋಂಕನ್ನು ಹರಡಿಸುವ ಅಪಾಯ ಇರುತ್ತದೆ. ಇಂಥವರಲ್ಲಿ ಸಂಕಿರ್ಣ ಸಮಸ್ಯೆಗಳಿಗೆ ತುತ್ತಾಗಬಹುದಾದ ಗರ್ಭಿಣಿಯರು, ರೋಗ ಪ್ರತಿರೋಧಕ ಶಕ್ತಿ ಕಡಿಮೆ ಇರುವ ರೋಗಿಗಳು, ಮಕ್ಕಳು ಇರಬಹುದು. ಹೀಗಾಗಿ ಲಸಿಕೆ ಪಡೆದುಕೊಂಡ ಬಳಿಕವೂ ನೀವು ಕೋವಿಡ್‌-19ನಿಂದ ರಕ್ಷಣೆ ಒದಗಿಸುವ ಎಲ್ಲ ಮುಂಜಾಗ್ರತೆಗಳನ್ನು ಪಾಲಿಸುವುದು ಅತ್ಯಗತ್ಯ.

ಪ್ರಶ್ನೆ: ನಮ್ಮ ಮಕ್ಕಳು ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ. ಅವರಿಗೆ ಅದು ಲಭ್ಯವಾದಾಗ ಹಾಕಿಸಿಕೊಳ್ಳಬೇಕೇ?

ಹೌದು, 18 ವರ್ಷಕ್ಕಿಂದ ಮೇಲ್ಪಟ್ಟ ಎಲ್ಲರೂ ಎರಡೂ ಡೋಸ್‌ ಲಸಿಕೆಯನ್ನು ತಮಗೆ ಅವಕಾಶ ಲಭ್ಯವಾದಾಗ ಹಾಕಿಸಿಕೊಳ್ಳಬೇಕು. ಲಸಿಕೆಯ ವಿಚಾರದಲ್ಲಿ ಯಾವುದೇ ಭಾರತೀಯ ಅಧ್ಯಯನಗಳು ಗರ್ಭಿಣಿಯರು ಮತ್ತು ಹಾಲೂಡುವ ತಾಯಂದಿರನ್ನು ಒಳಗೊಂಡಿಲ್ಲ. ಹಾಗಾಗಿ ಗರ್ಭಿಣಿಯರು ಮತ್ತು ಹಾಲೂಡುವ ತಾಯಂದಿರು ತಮ್ಮ ವೈದ್ಯರ ಜತೆಗೆ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಸಮಾಲೋಚಿಸಬಹುದು.

ಡಾ| ಎಂ. ಸುಧಾಕರ ರಾವ್

ಅಸೊಸಿಯೇಟ್ಪ್ರೊಫೆಸರ್‌, ಕಾರ್ಡಿಯಾಲಜಿ ವಿಭಾಗ,

 ಕೆಎಂಸಿ, ಮಾಹೆ, ಮಣಿಪಾಲ

ಡಾ| ಸುಹೈಲ್ಧಾನ್ಸೆ

ಟಾಪ್ ನ್ಯೂಸ್

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.