ಧನ್ವಂತರಿ ಆರಾಧನೆಯಿಂದ ಆರೋಗ್ಯ ವೃದ್ಧಿ


Team Udayavani, Feb 28, 2022, 11:00 AM IST

ಧನ್ವಂತರಿ ಆರಾಧನೆಯಿಂದ ಆರೋಗ್ಯ ವೃದ್ಧಿ

ಧನ್ವಂತರಿ ಹಿಂದೂ ಸಂಪ್ರದಾಯದಲ್ಲಿ ವಿಷ್ಣು ವಿನ ಅವತಾರ. ವೇದ ಹಾಗೂ ಪುರಾಣಗಳಲ್ಲಿ ದೇವತೆಗಳ ವೈದ್ಯನೆಂದು ಧನ್ವಂತರಿಯ ಉಲ್ಲೇಖವಿದೆ. ಆಯುರ್ವೇದದ ದೇವತೆ ಕೂಡ ಧನ್ವಂತರಿ. ಹಿಂದೂ ಸಂಪ್ರದಾಯದಲ್ಲಿ ಆಯು ರಾರೋಗ್ಯ ಬಯಸುವವರು ಧನ್ವಂತರಿಯನ್ನು ಪ್ರಾರ್ಥಿಸುವುದು ಸಾಮಾನ್ಯ.

ಆದ್ದರಿಂದಲೇ ಪ್ರತೀ ವರ್ಷ ಅಶ್ವಯುಜ ಬಹುಳ ತ್ರಯೋದಶಿಯಂದು ಹಿಂದೂ ಸಮಾಜವು, ಆಯುರ್ವೇದ ಶಿಕ್ಷಣ ಸಂಸ್ಥೆಗಳು ಮತ್ತು ಇತರ ಆರೋಗ್ಯ ಸಂಬಂಧೀ ಕೇಂದ್ರಗಳಲ್ಲಿ ಧನ್ವಂತರಿ ಜಯಂತಿಯ ಆಚರಣೆ, ಧನ್ವಂತರೀ ಪೂಜಾ ಮಹೋತ್ಸವ ಸಹಿತವಾಗಿ ಪ್ರಾಮುಖ್ಯವನ್ನು ಪಡೆದಿದೆ. ಈ ವರ್ಷ ನವೆಂಬರ್‌ 2 ರಂದು ಧನ್ವಂತರೀ ಜಯಂತಿ ಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ.”

ಧನ್ವಂತರಿಯು ಭಾರತೀಯ ವೈದ್ಯ ಪದ್ಧ ತಿಯ ಮೊದಲ ವೈದ್ಯನೆಂಬ ಪ್ರತೀತಿ ಹಾಗೂ ನಂಬಿಕೆ ಇದೆ. ವೈದಿಕ ಸಂಪ್ರದಾಯದ ಪ್ರಕಾರ ಧನ್ವಂತರಿ ಆಯುರ್ವೇದದ ಹರಿಕಾರ. ಹಿಂದೂ ಸಂಪ್ರದಾಯದಲ್ಲಿ ಹಲವು ಸಸ್ಯಗಳ, ಗಿಡಮೂಲಿ ಕೆಗಳ ಪಾರಿಸರಿಕ ಬಳಕೆಯಿಂದ ಔಷಧ ತಯಾ ರಿಸಿದ ಗೌರವ ಧನ್ವಂತರಿಗೆ ಸಲ್ಲುತ್ತದೆ.

ಸಮುದ್ರ ಮಥನದ ಕಾಲದಲ್ಲಿ ಸುರಾ ಕೌಸ್ತುಭ ಅಪ್ಸರಾ ಉಚ್ಛೆ„ಶ್ರವ ಕಲ್ಪವೃಕ್ಷ ಕಾಮಧೇನು ಐರಾವತ ಪಾರಿಜಾತ ಲಕ್ಷ್ಮೀ ಹಾಲಾಹಲ ಚಂದ್ರ ಅಮೃತ ಹಾಗೂ ಧನ್ವಂತರಿ ಉದ್ಭವ ಆಯಿತೆಂಬುದು ಪುರಾಣೇತಿಹಾಸ.

ಕ್ಷೀರೋದಮಥನೋದೂ½ತಂ ದಿವ್ಯ ಗಂಧಾನು ಲೇಪಿತಂ ಸುಧಾಕಲಶಹಸ್ತಂ ತಂ ವಂದೇ ಧನ್ವಂತರಿಂ ಹರಿಂ ಎಂಬ ಶ್ಲೋಕದಂತೆ ಕ್ಷೀರ ಸಮುದ್ರ ಮಥನ ಕಾಲದಲ್ಲಿ ದಿವ್ಯ ಗಂಧಾನುಲೇಪಿತನಾಗಿ ಅಮೃತ ಕಲಶ ಕೈಯಲ್ಲಿ ಹಿಡಿದು ಮಹಾವಿಷ್ಣು ಧನ್ವಂತರಿಯ ಅವತಾರ ತಾಳಿದನು ಎಂದು ಪುರಾಣಗಳಲ್ಲಿ ವರ್ಣಿತವಾಗಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಮುಂದಿನ ಐದು ದಿನಗಳವರೆಗೆ ಅಕಾಲಿಕ  ಮಳೆ ಸಾಧ್ಯತೆ

ದೇವತೆಗಳು ರಾಕ್ಷಸರೊಂದಿಗೆ ಹೋರಾಡುವ ಸಂದರ್ಭಗಳಲ್ಲಿ ಗುಣಪಡಿಸಲಾರದ ನೋವು, ವ್ಯಾಧಿಗಳಿಗೆ ತುತ್ತಾಗುವುದನ್ನು ಕಂಡು ವೈದ್ಯನಾಗಿ ಚಿಕಿತ್ಸೆ ನೀಡಲು ಧನ್ವಂತರಿ ರೂಪಧಾರಿಯಾಗಿ ವಿಷ್ಣು ಅವತರಿಸಿದನೆಂದು ನಂಬಲಾಗಿದೆ.

ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲಿ 1) ಧನು +ಏವ+ಅಂತಃ+ಅರಿ=ಧನ್ವಂತರಿ (ಸರ್ಜನ್‌), ಧನ್ವಂ ಈಯರ್ತಿ ಗತ್ಛತೀತಿ ಧನ್ವಂತರೀ ಎಂದೂ ಹೇಳಲಾಗಿದೆ. ಭಾರತೀಯ ವೈದ್ಯ ಪದ್ಧತಿಯ ಲ್ಲಿಯೂ ನಿಖರವಾಗಿ ಔಷಧ ಸಾಧ್ಯ ಹಾಗೂ ಶಸ್ತ್ರ ಸಾಧ್ಯ ರೋಗಗಳ ವಿವರಣೆ ಇದೆ. ಅವುಗಳಲ್ಲಿ ಶಸ್ತ್ರ ಚಿಕಿತ್ಸಾ ಪಿತಾಮಹನಾಗಿ ಧನ್ವಂತರಿಯನ್ನು ಉಲ್ಲೇಖಿಸಲಾಗಿದೆ. ಧನ್ವಂತರಿಯು ತನ್ನ ಶಿಷ್ಯ ವರ್ಗಗಳಿಗೆ ಶಸ್ತ್ರ ಚಿಕಿತ್ಸಾ ಸಹಿತ ಆಯುರ್ವೇದದ ಉಪದೇಶವನ್ನು ಮಾಡಿದ್ದನೆಂದೂ ಅವುಗಳಲ್ಲಿ ಸುಶ್ರುತಾಚಾರ್ಯರು ಶಸ್ತ್ರ ಚಿಕಿತ್ಸಾ ಪಾರಂಗತರಾ ದರೆಂದೂ ಹೇಳಲಾಗಿದೆ. ಅವರನ್ನು ಕಸಿ ಅಥವಾ ಪ್ಲಾಸ್ಟಿಕ್‌ ಸರ್ಜರಿಯ ಪಿತಾಮಹ ಎಂದೂ ಹೇಳ ಲಾಗಿದೆ. 2) ಧನುಷಾ+ತರತೇ+ತಾರಯತೇ +ಪಾಪಾತ್‌=ಧನ್ವಂತರಿ (ಪಾಪ ವಿಮುಕ್ತಿ) ಎಂಬುದು ಧನ್ವಂತರಿ ಪದದ ನಿಷ್ಪತ್ತಿಯಾಗಿದೆ.

ನಮಾಮಿ ಧನ್ವಂತರಿಮ್‌ ಆದಿದೇವಂ ಸುರಾ ಸುರೈರ್ವಂದಿತ ಪಾದಪದ್ಮಂ ಲೋಕೇಜರಾಋಗ್‌ ಭಯ ಮೃತ್ಯುನಾಶಂ ದಾತಾರಮೀಶಂ ವಿವಿಧೌಷಧೀನಾಂ ಧನ್ವಂತರೀ ರಮಾನಾಥಮ್‌ ಸರ್ವ ರೋಗ ವಿನಾಶಕಮ್‌. ಆಯುರ್ವೇದ ಪ್ರವಕ್ತಾರಮ್‌ ವಂದೇ ಪೀಯೂಷ ದಾಯಕಮ್‌.
ಎಂಬ ಶ್ಲೋಕದೊಂದಿಗೆ ಧನ್ವಂತರಿಯನ್ನು ನಿತ್ಯ ಪ್ರಾರ್ಥಿಸಿ ಕಾರ್ಯ ಆರಂಭಿಸಿದರೆ ದಿನವಿಡೀ ಚೈತನ್ಯಪೂರ್ಣತೆ ಉಳಿಯು ತ್ತದೆ ಎನ್ನಲಾಗಿದೆ. ಧನ್ವಂತರಿ ಸುಪ್ರಭಾತ, ಧನ್ವಂತರಿ ಪ್ರಪತ್ತಿ, ಧನ್ವಂತರಿ ಸ್ಮತಿಗಳಲ್ಲಿ ಧನ್ವಂತರಿ ದೇವರ ವಿಶೇಷತೆಯನ್ನು ಬಣ್ಣಿಸಲಾಗಿದೆ.

ವಿಷ್ಣುವಿನ ಅವತಾರವೆಂದೇ ಕರೆಯ ಲ್ಪಡುವ ಧನ್ವಂತರಿಯನ್ನು ಸದಾ ಭಜಿಸಿದರೆ ಯಾವುದೇ ರೋಗ ರುಜಿನಗಳೂ ಕಾಡುವುದಿಲ್ಲ. ಹಾಗೆಯೇ ಇನ್ನೊಂದೆಡೆ ಧನ್ವಂತರೀ ದಿವೋ ದಾಸನೆಂಬ ಕಾಶೀರಾಜನು ಸಹ ಧನ್ವಂತರಿ ಯಾಗಿದ್ದು ಮಹರ್ಷಿ ಭಾರಧ್ವಾಜರ ಶಿಷ್ಯನೆಂದೂ ಹೇಳಲಾಗಿದೆ.

ಒಟ್ಟಿನಲ್ಲಿ ಆರೋಗ್ಯ ಪರಿಪಾಲಕನಾಗಿ ಸಕಲ ಚಿಕಿತ್ಸಾ ಸೂತ್ರ ನೀಡಿದ ದೇವ ಧನ್ವಂತರಿಯ ಪೂಜಾ ಮಹೋತ್ಸವವು ತನ್ನದೇ ಆದ ಮಹತ್ವವನ್ನು ಹೊಂದಿದೆ.

ಈ ಧನ್ವಂತರಿ ಮಹೋತ್ಸವದ ದಿನ ಧನ್ವಂತರಿ ಹೋಮಹವನ ಹಾಗೂ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಪ್ರಸಾದ ರೂಪವಾಗಿ ಸುಮಧುರ ಗಂಧದ ಸಪಾದ ಭಕ್ಷ್ಯವನ್ನು ಹೋಲುವ ತಿನಿಸನ್ನು ಸಹ ಅರ್ಚಿಸಿ ಭಕ್ಷಿಸಲಾಗುತ್ತದೆ.

– ಡಾ| ಸುರೇಶ ನೆಗಳಗುಳಿ, ಮಂಗಳೂರು

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

3-health

Mother: ತಾಯಂದಿರ ಮಾನಸಿಕ ಆರೋಗ್ಯ

Lip Care Routine; How much do you know about keeping your lips healthy?

Lip Care Routine; ನಿಮ್ಮ ತುಟಿಗಳ ಆರೋಗ್ಯ ಕಾಪಾಡುವ ಬಗ್ಗೆ ನಿಮಗೆಷ್ಟು ಗೊತ್ತು?

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.