Dental Checkup: ದಂತ ವೈದ್ಯಕೀಯ ತಪಾಸಣೆಗಳನ್ನು ತಪ್ಪಿಸಿಕೊಳ್ಳದಿರಿ


Team Udayavani, Sep 1, 2024, 12:12 PM IST

11-tooth

“ದಂತ ವೈದ್ಯಕೀಯ ತಪಾಸಣೆ ದುಬಾರಿಯಲ್ಲ; ಆದರೆ ಅದರತ್ತ ನಿರ್ಲಕ್ಷ್ಯ ದುಬಾರಿಯಾದೀತು!’

ಭಾರತದಲ್ಲಿ ದಂತವೈದ್ಯಕೀಯ ಆರೋಗ್ಯವನ್ನು ಬಹಳ ನಿರ್ಲಕ್ಷ್ಯದಿಂದ ಕಾಣಲಾಗುತ್ತದೆ. ದಂತ ವೈದ್ಯರ ಬಳಿಗೆ ನಿಯಮಿತ ತಪಾಸಣೆಗೆ ತೆರಳುವುದು ಎಂದರೆ, “ಅಯ್ಯೋ ಯಾರಪ್ಪಾ ಅಲ್ಲಿಗೆ ಹೋಗುವುದು’ ಎಂಬ ಭಾವನೆ! ನೋವು ಅಧಿಕವಾಗಿದ್ದರೂ ಕೂಡ ವೈದ್ಯರ ಬಳಿಗೆ ಹೋಗುವುದನ್ನು ಬಿಟ್ಟು ಯಾವುದಾದರೊಂದು ನೋವು ನಿವಾರಕ ಮಾತ್ರೆ ನುಂಗಿ ಸುಮ್ಮನಿದ್ದು ಬಿಡುವ ಪರಿಪಾಠ ನಮ್ಮದು. ಇದಕ್ಕೆ ಕಾರಣಗಳು ತುಂಬ ಸರಳ: ದಂತವೈದ್ಯಕೀಯ ಚಿಕಿತ್ಸೆ, ತಪಾಸಣೆ ಎಂದರೆ ನೋವು, ಆತಂಕ, ಭಯ ಮತ್ತು ವೆಚ್ಚ ತಗಲುತ್ತದೆ ಎಂಬ ತಪ್ಪು ಕಲ್ಪನೆಗಳು.

ಆದರೆ ಇವೆಲ್ಲವುಗಳಿಗೂ ಮೂಲ ಕಾರಣ ಏನು? ಕೇವಲ ನಿರ್ಲಕ್ಷ್ಯ! ಇಲ್ಲೊಂದು ಸರಳ ಪ್ರಶ್ನೆಯಿದೆ: ನಿಯಮಿತ ರಕ್ತದೊತ್ತಡ ತಪಾಸಣೆಗಾಗಿ ವೈದ್ಯರ ಬಳಿಗೆ ಹೋಗುವುದಕ್ಕೆ ವ್ಯಕ್ತಿಯೊಬ್ಬರು ಹೆದರುತ್ತಾರೆ ಅಥವಾ ಅದನ್ನು ನಿರ್ಲಕ್ಷಿಸುತ್ತಾರೆ ಎಂದಿಟ್ಟುಕೊಳ್ಳಿ. ಪರಿಣಾಮವಾಗಿ ಮುಂದೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಒಂದು ಸಣ್ಣ ನಿರ್ಲಕ್ಷ್ಯದಿಂದಾಗಿ ಮುಂದೆ ಒಳಗಾಗಬೇಕಾದ ನೋವು ಮತ್ತು ಹಣಕಾಸಿನ ಹೊರಗೆ ಇದು ಒಂದು ಸಣ್ಣ ಉದಾಹರಣೆ. ದಂತ ವೈದ್ಯಕೀಯ ಚಿಕಿತ್ಸೆಯ ವಿಚಾರದಲ್ಲಿಯೂ ಈ ಮಾತು ನಿಜ.

ನಿಯಮಿತವಾದ ದಂತ ವೈದ್ಯಕೀಯ ತಪಾಸಣೆಯನ್ನು ನಿರ್ಲಕ್ಷಿಸುವುದರಿಂದ ಇರಬಹುದಾದ ಅನಾರೋಗ್ಯಗಳು ಉಲ್ಬಣಗೊಂಡು ಗಂಭೀರ ದಂತ ವೈದ್ಯಕೀಯ, ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳಿಗೆ ತುತ್ತಾಗಬೇಕಾದೀತು. ಪ್ರತೀ ಮೂರು ತಿಂಗಳುಗಳಿಗೆ ಒಮ್ಮೆ ಸಮೀಪದ ದಂತ ವೈದ್ಯರ ಬಳಿಗೆ ಹೋಗಿ ತಪಾಸಣೆ ಮಾಡಿಸಿಕೊಂಡರೆ ನಿಮ್ಮ ಹಲ್ಲುಗಳ ಆರೋಗ್ಯ ಮಾತ್ರವಲ್ಲದೆ ಒಟ್ಟಾರೆ ಆರೋಗ್ಯ ಮತ್ತು ಹಣಕಾಸಿನ ಸ್ಥಿತಿಗತಿ ಬಾಧೆಗೀಡಾಗದೆ ಸುಸ್ಥಿತಿಯಲ್ಲಿರುತ್ತವೆ.

ಇದರಿಂದ ನೀವು ಹಲವು ತೊಂದರೆಗಳಿಂದ ಪಾರಾಗಬಹುದು.

ಒಂದು ಉದಾಹರಣೆ ನೋಡೋಣ. ನೀವು ಬಾಯಿಯ ನೈರ್ಮಲ್ಯವನ್ನು ನಿರ್ಲಕ್ಷಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ವಸಡುಗಳ ಉದ್ದಕ್ಕೆ ಕೊಳೆಯ ಪದರ ಬೆಳೆಯುತ್ತದೆ. ವಸಡುಗಳು ಮತ್ತು ಹಲ್ಲುಗಳ ನಡುವೆ ಬ್ಯಾಕ್ಟೀರಿಯಾ ಹೆಚ್ಚುತ್ತವೆ. ನಿಯಮಿತವಾದ ಹಲ್ಲುಶುಚಿಗಾಗಿ ವೈದ್ಯರಲ್ಲಿಗೆ ಹೋಗುವುದಿಲ್ಲ. ಇದರಿಂದ ಜಿಂಜಿವೈಟಿಸ್‌ ಉಂಟಾಗುತ್ತದೆ, ಕ್ರಮೇಣ ಪೆರಿಯೋಡಾಂಟಿಕ್ಸ್‌ ತಲೆದೋರುತ್ತದೆ. ಬಾಯಿಯೊಳಗೆ ಗಾಯ, ಬಿರುಕು ಅಥವಾ ಹಲ್ಲುಜ್ಜುವಾಗ ಉಂಟಾಗುವ ಗಾಯದಿಂದಾಗಿ ಅವಕಾಶ ದೊರೆತರೆ ಬಾಯಿಯಲ್ಲಿ ಬೆಳೆದಿರುವ ಬ್ಯಾಕ್ಟೀರಿಯಾಗಳು ರಕ್ತ ಪರಿಚಲನೆ ವ್ಯವಸ್ಥೆಯೊಳಕ್ಕೂ ಹೊಕ್ಕು ಬಿಡುವ ಸಾಧ್ಯತೆಯಿದೆ.

ಈಗ ನಿಮ್ಮ ರೋಗ ನಿರೋಧಕ ವ್ಯವಸ್ಥೆ ಬಲಿಷ್ಠವಾಗಿದ್ದರೆ ದೇಹ ಸುಲಭವಾಗಿ ಅವುಗಳ ವಿರುದ್ಧ ಹೋರಾಡಿ ನಾಶ ಮಾಡಿ ಬಿಡುತ್ತದೆ. ಆದರೆ ಕ್ಯಾನ್ಸರ್‌, ಮಧುಮೇಹ ಅಥವಾ ಎಚ್‌ಐವಿಯಂತಹ ಅನಾರೋಗ್ಯಗಳಿಂದ ರೋಗ ನಿರೋಧಕ ವ್ಯವಸ್ಥೆ ದುರ್ಬಲವಾಗಿದ್ದರೆ ಇದು ದೇಹದ ಯಾವುದೇ ಅಂಗದಲ್ಲಿ ಸೋಂಕಿಗೆ ಕಾರಣವಾಗಬಹುದು. ಉದಾಹರಣೆಗೆ, ದುರ್ಬಲ ಎಂಡೊಕಾರ್ಡಿಟಿಸ್‌ – ಬ್ಯಾಕ್ಟೀರಿಯಾಗಳು ರಕ್ತ ಪರಿಚಲನೆ ವ್ಯವಸ್ಥೆಗೆ ಸೇರಿ ಹೃದಯದ ಕವಾಟಗಳ ಭಿತ್ತಿಗೆ ಅಂಟಿಕೊಳ್ಳುವುದರಿಂದ ತಲೆದೋರುವ ಗಂಭೀರ ಅನಾರೋಗ್ಯ ಇದು.

ತೀವ್ರ ತರಹದ ವಸಡಿನ ಕಾಯಿಲೆಗಳು ಅವಧಿಪೂರ್ವ ಹೆರಿಗೆ ಮತ್ತು ಶಿಶು ಅಪ್ರಾಪ್ತವಾಗಿ ಜನಿಸುವಂತಹ ಸಮಸ್ಯೆಗಳನ್ನೂ ಉಂಟು ಮಾಡುತ್ತದೆ.

ಅಧ್ಯಯನಗಳು ಹೇಳುವುದೇನೆಂದರೆ, ಭ್ರೂಣದ ಬೆಳವಣಿಗೆ ಮತ್ತು ಪ್ರಗತಿಗೆ ಅಡಚಣೆ ಉಂಟುಮಾಡುವ ವಿಷಾಂಶಗಳನ್ನು ಬ್ಯಾಕ್ಟೀರಿಯಾಗಳು ಬಿಡುಗಡೆ ಮಾಡಬಲ್ಲವು. ಬಾಯಿಯ ಸೋಂಕಿನಿಂದ ಅವಧಿಪೂರ್ವ ಪ್ರಸೂತಿಯೂ ತಲೆದೋರಬಹುದಾಗಿದೆ.

ಸ್ಥೂಲವಾಗಿ ಏನು ಹೇಳಬಹುದು ಎಂದರೆ, ಪ್ರತೀ ಮೂರು ತಿಂಗಳುಗಳಿಗೆ ಒಂದು ಬಾರಿ ದಂತ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳುವುದರಿಂದ ನಿಮ್ಮ ಒಟ್ಟು ಆರೋಗ್ಯವನ್ನು ಕಾಪಾಡಿಕೊಂಡಂತಾಗುತ್ತದೆ; ಸದ್ಯಕ್ಕೆ ಮಾತ್ರ ಅಲ್ಲ, ಭವಿಷ್ಯದ ದೃಷ್ಟಿಯಿಂದಲೂ.

ದಂತ ವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳುವುದರಿಂದ ನಿಮ್ಮ ಹಲ್ಲುಗಳು ಮತ್ತು ವಸಡುಗಳನ್ನು ಮಾತ್ರ ಆರೋಗ್ಯವಾಗಿ ಇರಿಸಿಕೊಳ್ಳುವುದಲ್ಲ; ಇನ್ನಿತರ ಹಲವು ಅನಾರೋಗ್ಯಗಳು ಕಾಡದಂತೆ ಪ್ರತಿಬಂಧಿಸಬಹುದು.

-ಡಾ| ಆನಂದದೀಪ್‌ ಶುಕ್ಲಾ

ಅಸೊಸಿಯೇಟ್‌ ಪ್ರೊಫೆಸರ್‌,

ಓರಲ್‌ ಸರ್ಜರಿ ವಿಭಾಗ,

ಮಣಿಪಾಲ

ದಂತ ವೈದ್ಯಕೀಯ ಮಹಾವಿದ್ಯಾಲಯ,

ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ದಂತ ವೈದ್ಯಕೀಯ ವಿಭಾಗ, ಎಂಸಿಒಡಿಎಸ್‌, ಮಾಹೆ, ಮಂಗಳೂರು)

ಟಾಪ್ ನ್ಯೂಸ್

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

2

Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.