ಸ್ವದೇಶಿ ಮೂಲ ನುಗ್ಗೆ ಕೃಷಿ ಬಲು ಸುಲಭ
ಉತ್ತಮ ತಳಿಗಳನ್ನು ಸಂಶೋಧಿಸಲಾಗಿದ್ದು, ಇದುಕೂಡ ವಾಣಿಜ್ಯ ಬೆಳೆಯ ಸ್ಥಾನ ಪಡೆದುಕೊಂಡಿದೆ.
Team Udayavani, Aug 30, 2021, 1:29 PM IST
ಅಡುಗೆಗೆ ಉಪಯೋಗಿಸುವ ನುಗ್ಗೆಕಾಯಿ ಕೇವಲ ಸಾಮಾನ್ಯ ತರಕಾರಿಯಾಗಿರದೆ ವಿವಿಧ ಔಷಧೀಯ ಗುಣ, ಜೀವಸತ್ವಗಳನ್ನು ಹೊಂದಿರುವ ಆರೋಗ್ಯ ವರ್ಧಕವೂ ಹೌದು. ಅಲ್ಲದೆ ರುಚಿಯಲ್ಲಿ ಇದು ತರಕಾರಿಗಳ ರಾಜನೇ ಸರಿ. ನುಗ್ಗೆ ಕೋಡು ಮಾತ್ರವಲ್ಲದೆ ಸಂಪೂರ್ಣ ಮರವೇ ಒಂದಲ್ಲೊಂದು ರೀತಿಯಲ್ಲಿ ಉಪಯೋಗಕಾರಿ.
ಸ್ವದೇಶಿ ಮೂಲ
ನುಗ್ಗೆ ಅಧಿಕ ಕಬ್ಬಿಣಂಶ ಭರಿತ ಸ್ವದೇಶಿ ಮೂಲದ ಹಸುರು ತರಕಾರಿ. ಭಾರತದ ವಾಯವ್ಯ ಪ್ರದೇಶ ಇದರ ತವರು. ದಕ್ಷಿಣ ಭಾರತದ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಕಾಯಿ ಮಾತ್ರವಲ್ಲದೆ ಹೂವು, ಸೊಪ್ಪು ಸಹ ರುಚಿಕರ ತರಕಾರಿ. ಇದರ ಬೀಜಗಳಿಂದ ಎಣ್ಣೆ ತೆಗೆಯಲಾಗುತ್ತಿದ್ದು, “ಬೆನ್ ಆಯಿಲ್’ ಎಂದು ಹೆಸರು. ಎಣ್ಣೆ ತೆಗೆದ ಬಳಿಕ ಉಳಿಯುವ ಹಿಂಡಿಯನ್ನು ದನಗಳಿಗೆ ಅಹಾರವಾಗಿ ಬಳಸುತ್ತಾರೆ. ನುಗ್ಗೆ ಮರದ ತೊಗಟೆಯಿಂದ ನಾರು ಉತ್ಪಾದನೆಕೂಡ ಮಾಡಲಾಗುತ್ತದೆ.
ಅಲ್ಲದೆ ಇತ್ತೀಚೆಗಿನ ದಿನಗಳಲ್ಲಿ ಇದನ್ನು ಕಾಗದ ತಯಾರಿಯಲ್ಲಿ ಕಚ್ಚಾ ವಸ್ತುವಾಗಿ ಬಳಸಲಾಗುತ್ತದೆ. ನುಗ್ಗೆ ಮರದಿಂದ ಲಭಿಸುವ ಅಂಟು (ಗೋಂದು) ಅನ್ನು ಹಳ್ಳಿಗರು ಕಾಗದ ಇನ್ನಿತರ ವಸ್ತುಗಳನ್ನು ಜೋಡಿಸಲು ಬಳಸುತ್ತಾರೆ. ಎಲೆಗಳನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿ ಪಾತ್ರೆಗಳನ್ನು ತೊಳೆಯಲು ಉಪಯೋಗಿಸುವವರೂ ಇದ್ದಾರೆ. ಜನವರಿಯಿಂದ ಜೂನ್ ನುಗ್ಗೆ ಋತು ಆಧುನಿಕ ಅಡುಗೆಗಳಲ್ಲಿ ನುಗ್ಗೆ ಕಾಯಿಯನ್ನು ವಿಶೇಷವಾಗಿ ಬಳಸಲಾಗುತ್ತಿದ್ದು, ಹಳ್ಳಿಗಳಲ್ಲಿ ಇದರ ಬಳಕೆ ಹೆಚ್ಚು. ಜನವರಿಯಿಂದ ಜೂನ್ ಮಧ್ಯಾವಧಿಯವರೆಗೆ ನುಗ್ಗೆಕಾಯಿಯ ಋತು.
ಸ್ಥಳೀಯ ನುಗ್ಗೆಕಾಯಿ ಈ ನಿರ್ದಿಷ್ಟ ಅವಧಿಯ ಅನಂತರ ಮರೆಯಾಗುತ್ತದೆ. ಆದರೆ ಆಂಧ್ರ ನುಗ್ಗೆಕಾಯಿ ಮಾರುಕಟ್ಟೆಗಳಲ್ಲಿ ವರ್ಷವಿಡೀಕಾಣಸಿಗುತ್ತದೆ. ಹಿಂದಿನ ಕಾಲದಲ್ಲಿ ನುಗ್ಗೆಯನ್ನು ಆರ್ಥಿಕ ದೃಷ್ಟಿಯಿಂದ ಬೆಳೆಯಲಾಗುತ್ತಿರಲಿಲ್ಲ.ಕಡಿಮೆ ಶ್ರಮದಲ್ಲಿ ಲಾಭ ತಂದುಕೊಡುವ ನುಗ್ಗೆಕೃಷಿಯನ್ನು ರೈತರು ತಮ್ಮ ಪಾಳು ಬಿದ್ದಿರುವ ಜಮೀನುಗಳಲ್ಲಿ ಕೈಗೊಂಡರೆಕೈತುಂಬ ಸಂಪಾದನೆ ಖಂಡಿತಾ ಸಾಧ್ಯ.
ನುಗ್ಗೆಕೃಷಿಗೆ ಎಂತಹ ಪ್ರದೇಶ ಅಗತ್ಯ ಯಾವ ಪ್ರದೇಶದಲ್ಲಿಯೂ ನುಗ್ಗೆ ಮರಗಳು ಹೇರಳವಾಗಿ ಬೆಳೆಯುತ್ತವೆ. ಅತಿ ಕಡಿಮೆ ತೇವಾಂಶದಲ್ಲಿಯೂ ಹುಲುಸಾಗಿ ಬೆಳೆಯುವುದು. ನುಗ್ಗೆ ವಾಸ್ತವವಾಗಿ ಉಷ್ಣವಲಯದ ಮರ. ಒಣ ಹಾಗೂ ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಚೆನ್ನಾಗಿ ಫಸಲು ನೀಡುತ್ತದೆ. ಇದರ ಬೇಸಾಯಕ್ಕೆ ಮೈದಾನ ಪ್ರದೇಶಗಳಾದಲ್ಲಿ ಉತ್ತಮ. ಇದಕ್ಕೆ ದಕ್ಷಿಣ ಭಾರತದ ಹವಾಗುಣ ಸೂಕ್ತ. ಹೂ ಬಿಡುವಾಗ ಮೋಡ ಮುಚ್ಚಿದ ಹವಾಗುಣ ಅಥವಾ ಮಳೆಯಾಗುವುದಿದ್ದಲ್ಲಿ ಅವು ಬಹುಪಾಲು ಉದುರಿಬೀಳುತ್ತವೆ. ಬಲವಾದ ಗಾಳಿ ಬೀಸುವಂತಿದ್ದರೂ ಸಹ ಹಾನಿಕಾರಕವೇ.
ನುಗ್ಗೆಯ ಬೇಸಾಯಕ್ಕೆ ಇಂತಹುದೇ ಮಣ್ಣಿನ ಭೂಮಿ ಇರಬೇಕು ಎಂಬ ನಿಯಮವಿಲ್ಲ. ಮರಳು ಮಿಶ್ರಿತ ಗೋಡು ಮಣ್ಣು ಅತ್ಯುತ್ತಮ. ಜಿಗುಟುಕಪ್ಪು ಮಣ್ಣು ಸೂಕ್ತವಲ್ಲ. ನೀರು ಬಸಿಯುವುದು ಬಹುಮುಖ್ಯ. ಮಣ್ಣಿನಲ್ಲಿ ಸ್ವಲ್ಪ ಸುಣ್ಣ ಇದ್ದರೂ ಗಿಡಗಳು ತಡೆದುಕೊಳ್ಳಬಲ್ಲವು. ಇತ್ತೀಚೆಗೆ ನುಗ್ಗೆಯಲ್ಲೂ ಸಂಸ್ಕರಿಸಲ್ಪಟ್ಟ ಉತ್ತಮ ತಳಿಗಳನ್ನು ಸಂಶೋಧಿಸಲಾಗಿದ್ದು, ಇದುಕೂಡ ವಾಣಿಜ್ಯ ಬೆಳೆಯ ಸ್ಥಾನ ಪಡೆದುಕೊಂಡಿದೆ.
ಕಡಿಮೆ ಕೂಲಿ
ನುಗ್ಗೆ ಬೆಳೆಯಲು ಹೆಚ್ಚುಕೂಲಿ ಕಾರ್ಮಿಕರು ಬೇಕಾಗಿಲ್ಲ. ಒಮ್ಮೆ ಸಸಿ ನೆಟ್ಟು,ಕೊಟ್ಟಿಗೆ ಗೊಬ್ಬರ ಹಾಕಿ, ಡ್ರಿಪ್‌ನಲ್ಲಿ ನೀರು ಹರಿಸಿದರೆ ಸಾಕು. ಉತ್ತಮ ಆರೈಕೆ ಮಾಡಿದರೆ ಕೇವಲ 4 ತಿಂಗಳಿಗೆ ಬೆಳೆ ಬರುತ್ತದೆ. ಮಾವು, ಸಪೋಟ, ಕಿತ್ತಳೆ ಮುಂತಾದ ಬೆಳೆಗಳಲ್ಲಿ ಫಸಲು ದೃಢಗೊಳ್ಳುವ ತನಕ ಅಂದರೆ ಮೊದಲ 3-4 ವರ್ಷಗಳವರೆಗೆ ಇದನ್ನು ಮಿಶ್ರ ಕೃಷಿಯಾಗಿ ಬೆಳೆಯಬಹುದು.
ನುಗ್ಗೆ ಕೃಷಿ
2ರಿಂದ2.5 ಮೀಟರ್ ಅಂತರದಲ್ಲಿ30 ಘನ ಸೆಂ.ಮೀ. ಗಾತ್ರದ ಗುಂಡಿಗಳನ್ನು ತೆಗೆದು ಬಿಸಿಲಿಗೆ ಬಿಡಬೇಕು. ಗುಂಡಿಗಳನ್ನು ತೋಡಲು ಮೇ-ಜೂನ್ ಸೂಕ್ತಕಾಲ. ಅನಂತರ ಗುಂಡಿಗಳಿಗೆ ತಿಪ್ಪೆ ಗೊಬ್ಬರ ಮತ್ತು ಮೇಲ್ಮಣ್ಣನ್ನು ತುಂಬಿ ನೀರುಕೊಟ್ಟರೆ ಆ ಮಿಶ್ರಣ ಚೆನ್ನಾಗಿ ಕುಳಿತುಕೊಳ್ಳುತ್ತದೆ. ಒಂದೆರಡು ಮಳೆಗಳಾದ ಅನಂತರ ತಲಾ ಒಂದರಂತೆ ಸಸಿಗಳನ್ನು ನೆಟ್ಟು, ಆಸರೆ ಕೋಲು ಸಿಕ್ಕಿಸಿ ಕಟ್ಟಬೇಕು. ಸಸಿಗಳು ಸುಮಾರು ಒಂದು ಮೀಟರ್‌ನಷ್ಟು ಎತ್ತರಕ್ಕೆ ಬೆಳೆದಾಗ ಅವುಗಳ ತಿರಿ (ತುದಿ)ಯನ್ನು ಚಿವುಟಿ ಹಾಕಿದರೆ ಸುತ್ತ ಹರಡಿ ಬೆಳೆಯುತ್ತವೆ. ಆಗ ಅದರ ನೆತ್ತಿ ಬಿಚ್ಚಿ ಹರಡಿದ ಛತ್ರಿಯಂತೆ ಕಾಣುವುದು. ಅದರಿಂದ ಹೆಚ್ಚಿನ ಪ್ರಮಾಣದಲ್ಲಿ ಹೂವು ಬಿಟ್ಟು ಅಧಿಕ ಫಸಲು ಸಾಧ್ಯ.
ಗೊಬ್ಬರ
ನುಗ್ಗೆ ಗಿಡಗಳಿಗೆ ಗೊಬ್ಬರಕೊಡುವ ರೂಢಿ ಇಲ್ಲ. ಪ್ರತಿ ವರ್ಷ ಗಿಡವೊಂದಕ್ಕೆ 10ರಿಂದ20ಕಿ.ಗ್ರಾಂ ತಿಪ್ಪೆ ಗೊಬ್ಬರ ಕೊಡುವುದು ಲಾಭದಾಯಕ. ಅದರ ಜತೆಗೆ ಸೂಕ್ತ ಪ್ರಮಾಣದ ರಾಸಾಯನಿಕ ಗೊಬ್ಬರಗಳನು ಸಹ ಕೊಡಬಹುದು. ತಮಿಳುನಾಡುಕೃಷಿ ವಿಶ್ವವಿದ್ಯಾಲಯದ ಕೊಯಮತ್ತೂರು ಕೇಂದ್ರವು ಪ್ರತಿ ಗಿಡಕ್ಕೆ ವರ್ಷಕ್ಕೆ7.5ಕಿ.ಗ್ರಾಂ ತಿಪ್ಪೆ ಗೊಬ್ಬರ ಮತ್ತು370 ಗ್ರಾಂ ಅಮೋನಿಯಂ ಸಲ್ಫೆಟ್‌ನ್ನು ಡಿಸೆಂಬರ್‌ನಲ್ಲಿ ಕೊಟ್ಟಾಗ ಅಧಿಕ ಇಳುವರಿ ಸಾಧ್ಯವಾಗಿದ್ದಾಗಿ ವರದಿ ಮಾಡಿದೆ. ಮಳೆ ಇಲ್ಲದಿದ್ದಾಗ 10-15 ದಿನಗಳಿಗೊಮ್ಮೆ ನೀರು ಕೊಡಬೇಕು. ಗಿಡ ಚೆನ್ನಾಗಿ ಬೆಳೆದ ಅನಂತರ ಅಷ್ಟೇನೂ ನೀರು ಬೇಕಾಗಿಲ್ಲ.
ಕೊಯ್ಲು
ವಾರ್ಷಿಕ ನುಗ್ಗೆ ತಳಿಗಳಲ್ಲಿ ನೆಟ್ಟ ಆರೇಳು ತಿಂಗಳಲ್ಲಿ ಹೂ ಬಿಟ್ಟುಕಾಯಿಕಚ್ಚಲು ಪ್ರಾರಂಭಿಸುತ್ತವೆ. ವರ್ಷವಿಡೀ ಹೂವು – ಕಾಯಿ ಇರುತ್ತವೆಯಾದರೂ ಹೆಚ್ಚಿನ ಪ್ರಮಾಣದಲ್ಲಿಕಾಯಿ ಸಿಗುವುದು ಮಾರ್ಚ್-ಮೇಯಲ್ಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.