ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಪಡೆಯುವ ಅವಧಿಯಲ್ಲಿ ಉತ್ತಮ ಆಹಾರ ಸೇವನೆ


Team Udayavani, Feb 19, 2017, 3:45 AM IST

Cancer.jpg

ಕ್ಯಾನ್ಸರ್‌ ತಪಾಸಣೆ ಆಗಿರುವ ಜನರು ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಪಡೆಯುವ ಅವಧಿಯಲ್ಲಿ ಮತ್ತು ಅನಂತರ ಆರೋಗ್ಯಕರ ಆಹಾರ ಸೇವಿಸುವುದು ಮತ್ತು ದೈಹಿಕವಾಗಿ ಸಕ್ರಿಯರಾಗಿ ಇರುವುದು ಬಹಳ ಆವಶ್ಯಕ. ಕೀಮೋತೆೆರಪಿ, ರೇಡಿಯೇಷನ್‌ ಮತ್ತು ಇನ್ನಿತರ ಚಿಕಿತ್ಸೆಗಳು ಕ್ಯಾನ್ಸರ್‌ ರೋಗಿಯ ಶರೀರದ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡಬಹುದು. ಬಹಳ ಉತ್ತಮ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನಿಮಗೆ ಬೇಗನೆ ಚೇತರಿಸಿಕೊಳ್ಳಲು ಸಹಾಯ ಆಗಬಹುದು ಮತ್ತು ನಿಮಗೆ ಹಿತ ಅನ್ನಿಸಬಹುದು. ಕ್ಯಾನ್ಸರ್‌ ಕಾಯಿಲೆ ಮತ್ತು ಅದಕ್ಕಾಗಿ ಪಡೆಯುವ ಚಿಕಿತ್ಸೆಯು ನಿಮ್ಮ ಶರೀರವು ಕೆಲವು ಆಹಾರವನ್ನು ಮತ್ತು ಪೋಷಕಾಂಶಗಳನ್ನು ತೆಗೆದುಕೊಳ್ಳುವ ರೀತಿಯ ಮೇಲೆಯೂ  ಸಹ  ಪ್ರಭಾವ ಬೀರಬಹುದು. ಚಿಕಿತ್ಸೆಯ ಸಂದರ್ಭದಲ್ಲಿ ನೀವು ಆರೋಗ್ಯವಾಗಿ ಇರಲು ಕೆಲವು ಹೆಚ್ಚುವರಿ ಕ್ಯಾಲೊರಿಗಳನ್ನು ಮತ್ತು ಪ್ರೋಟೀನ್‌ಗಳನ್ನು ತೆಗೆದುಕೊಳ್ಳಬೇಕಾಗಬಹುದು. 

ತೆಗೆದುಕೊಳ್ಳಬೇಕಾದ ಆಹಾರಗಳು
ಮೈದಾ ಆಧಾರಿತ ಆಹಾರಗಳಿಗೆ ಬದಲಾಗಿ ಇಡಿಯ ಧಾನ್ಯಗಳಿಂದ ತಯಾರಿಸಿದ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ.

ಧಾನ್ಯಗಳು, ಕಿಚಡಿ, ಪೊಂಗಲ್‌ ಇತ್ಯಾದಿ ಬೇಳೆ ಮತ್ತು ಕಾಳುಗಳಿಂದ ತಯಾರಿಸಲಾದ ಆಹಾರಗಳನ್ನು ತೆಗೆದುಕೊಳ್ಳಬಹುದು. 

ಹೆಸರು, ಬಿಳಿ ಕಡಲೆ ಅಥವಾ ಕಡಲೆಯಂತಹ ಧಾನ್ಯಗಳನ್ನು ಮೊಳಕೆ ಬರಿಸಿ ಸೇವಿಸಿದರೆ ಉತ್ತಮ. 

ಪ್ಯಾಕ್‌ ಮಾಡಲಾದ ಜ್ಯೂಸ್‌ಗಳಿಗೆ ಬದಲಾಗಿ ತಾಜಾ ಹಣ್ಣು ಮತ್ತು ತರಕಾರಿ ಜ್ಯೂಸ್‌ ಗಳನ್ನು ಸೇವಿಸಿ

ನಿಮ್ಮ ಊಟದ ಅರ್ಧ ಬಟ್ಟಲು ತಾಜಾ ಹಣ್ಣು ತರಕಾರಿಗಳಿಂದ ತುಂಬಿರಲಿ

ನಿಮ್ಮ ಪ್ರೋಟೀನ್‌ ಸೇವನೆಯನ್ನು ಹೆಚ್ಚಿಸಿಕೊಳ್ಳಲು ಹಾಲು , ಮೊಸರು, ಪನೀರ್‌ ಇತ್ಯಾದಿ ಹಾಲಿನ ಉತ್ಪನ್ನಗಳನ್ನು ಹೆಚ್ಚು ಸೇವಿಸಬೇಕು

ವಾರದಲ್ಲಿ ಕನಿಷ್ಠ ಮೂರು ಬಾರಿ ನಿಮ್ಮ ಊಟದಲ್ಲಿ ದಟ್ಟ ಹಸುರು ಬಣ್ಣದ ತಾಜಾ ತರಕಾರಿಗಳು ಸೂಪ್‌ ಅಥವಾ ಪಲ್ಯವನ್ನು ಸೇವಿಸಿ

ಸಿಹಿ ತಿನಿಸುಗಳನ್ನು ಹೆಚ್ಚು ಸೇವಿಸಬಾರದು. ಅವುಗಳಲ್ಲಿ ಹೆಚ್ಚು ಸಕ್ಕರೆ ಅಂಶ ಇದ್ದು ಪೋಷಕಾಂಶಗಳು ಇರುವುದು ಬಹಳ ಕಡಿಮೆ

ರೆಡ್‌ ಮೀಟ್‌ ಅಥವಾ ಸಂಸ್ಕರಿಸಿದ ಮಾಂಸಾಹಾರಕ್ಕೆ ಬದಲಾಗಿ ಮೀನು, ಮೊಟ್ಟೆ ಅಥವಾ ಕೋಳಿಯ ಮಾಂಸವನ್ನು ಆಗಾಗ ಸೇವಿಸಬಹುದು. 

ಬೀಜಗಳು, ಒಣ ಹಣ್ಣುಗಳು, ಪುಡ್ಡಿಂಗ್‌, ಗಂಜಿ ಮತ್ತು ಬೇಯಿಸಿದ ಧಾನ್ಯಗಳಂತಹ ಅಧಿಕ ಕ್ಯಾಲೊರಿ ಮತ್ತು ಪೋಷಣೆ ಭರಿತ ಆಹಾರಗಳನ್ನು ಸೇವಿಸಿ. 

ದಿನದ ಉದ್ದಕ್ಕೂ ಸಣ್ಣ ಸಣ್ಣ ಊಟ ಸೇವಿಸಿ. ಹಸಿವಾದ ಅನಂತರವೇ ಊಟ ಮಾಡೋಣ ಎಂದು ಕಾಯಬೇಡಿ. ದಿನದಲ್ಲಿ ಆಗಾಗ ಊಟ ಮಾಡುತ್ತಾ ಇರಿ. 

ಒಂದೇ ಆಹಾರವನ್ನು ಒಂದೇ  ಸಮಯದಲ್ಲಿ ಸೇವಿಸಬೇಡಿ. ನಿಮ್ಮ ಊಟದಲ್ಲಿ ವೈವಿಧ್ಯತೆ ಇರಲಿ, ನಿಂಬೆ ಹೋಳುಗಳು, ಕೊತ್ತಂಬರಿ ಸೊಪ್ಪು, ಟೊಮ್ಯಾಟೋ ಮತ್ತು ಇನ್ನಿತರ ಪೋಷಣಾ ಭರಿತ ಸೊಪ್ಪು$ ತರಕಾರಿಗಳು ನಿಮ್ಮ ಊಟದ ಬಟ್ಟಲಲ್ಲಿ ಇರಲಿ. 

ನಿಮಗೆ ಹಸಿವು ಇಲ್ಲದಿದ್ದರೂ 
ಆಹಾರ ಸೇವಿಸಲು ಪ್ರಯತ್ನಿಸಿ 

ಕ್ಯಾನ್ಸರ್‌ ಚಿಕಿತ್ಸೆಯ ಸಂದರ್ಭದಲ್ಲಿ ಹಸಿವೆ ಆಗದೆ ಇರುವುದು ಬಹಳ ಸಾಮಾನ್ಯ. ಕೆಲವು ಚಿಕಿತ್ಸೆಗಳ ಕಾರಣದಿಂದ ಆಹಾರದ ರುಚಿಯೇ ಹಿತವೆನಿಸದೆ ಇರಬಹುದು, ಹಾಗಿದ್ದರೂ ಸಹ ನೀವು ಆಹಾರವನ್ನು ಬಿಟ್ಟು ಬಿಡುವಂತಿಲ್ಲ , ಯಾಕೆಂದರೆ ಚಿಕಿತ್ಸೆಯ ಈ ಸಂದರ್ಭದಲ್ಲಿ ನೀವು ಸಾಕಷ್ಟು ಪೋಷಣೆಯನ್ನು ಪಡೆಯುವುದು ಬಹಳ ಆವಶ್ಯಕ. 

ಕ್ಯಾನ್ಸರ್‌ ಚಿಕಿತ್ಸೆಯ ಅಡ್ಡ ಪರಿಣಾಮಗಳು
ಕೆಲವು ಆಹಾರಗಳು ಕ್ಯಾನ್ಸರ್‌ ಚಿಕಿತ್ಸೆಯ ಕೆಲವು ಸಾಮಾನ್ಯ ಕಿರಿಕಿರಿಗಳನ್ನು ತಗ್ಗಿಸಲು ಸಹಾಯ ಮಾಡುತ್ತವೆ.   
1.ಮಲಬದ್ಧತೆ: ಸಾಕಷ್ಟು ನೀರು ಕುಡಿಯಿರಿ (ದಿನಕ್ಕೆ ಕನಿಷ್ಠ 8 ಗ್ಲಾಸ್‌)  ಮತ್ತು ಸಾಕಷ್ಟು ನಾರಿನ ಅಂಶ ಇರುವ ಆಹಾರಗಳಾದ ಸೊಪ್ಪು$ ತರಕಾರಿಗಳು, ಬೇಯಿಸಿದ ಆಹಾರಗಳು, ಸೂಪ್‌ ಮತ್ತು ನಿಂಬೆ ಜಾತಿಯ ಹಣ್ಣುಗಳನ್ನು ಸೇವಿಸಿ. 

2. ಭೇದಿ: ಡಿಹೈಡ್ರೇಷನ್‌ ಆಗುವುದನ್ನು ತಪ್ಪಿಸಲು ಸಾಕಷ್ಟು ನೀರು ಕುಡಿಯಿರಿ. ಅತಿಸಾರ ಅಥವಾ ಭೇದಿ, ಸೆಡೆತ, ಜೀರ್ಣಿಸಲು ಆಗದೆ ಇರುವ ತೊಂದರೆ ಅಥವಾ ಕೆಲವು ವಿಧದ ಶಸ್ತ್ರ ಚಿಕಿತ್ಸೆಯಾದ ಅನಂತರ ಕಡಿಮೆ ನಾರಿನ ಅಂಶವುಳ್ಳ ಆಹಾರವನ್ನು ಸೇವಿಸಲು ಸೂಚಿಸಲಾಗುತ್ತದೆ.  ಇಂತಹ ಸಂದರ್ಭದಲ್ಲಿ ಕಾಳು ಮತ್ತು ಬೀಜಗಳು, ಹಸಿ ತರಕಾರಿಗಳು ಮತ್ತು ಹಣ್ಣುಗಳು ಮತ್ತು ಇಡಿಯ ಧಾನ್ಯದ ಬ್ರೆಡ್‌ ಮತ್ತು ಧಾನ್ಯಗಳನ್ನು ಸೇವಿಸಬಾರದು. 
  
3. ಬಾಯಿ ಹುಣ್ಣು ಮತ್ತು ಬಾಯಿ ಒಣಗುವುದು: ಆಹಾರಗಳನ್ನು ನುಂಗಲು ಸುಲಭ ಆಗುವಂತೆ ಆಹಾರಗಳನ್ನು ನುಣ್ಣಗೆ ಮಾಡಿ ಸೇವಿಸಿ. ಸೂಪ್‌ ಮತ್ತು ದ್ರವಾಹಾರದ ರೂಪದಲ್ಲಿರುವ ಆಹಾರಗಳನ್ನು ಸೇವಿಸಿ ಅಂದರೆ ಹಾಲು ಅಥವಾ ಮೊಸರು ಮಜ್ಜಿಗೆ, ಮಿಲ್ಕ್ ಶೇಕ್‌, ದಪ್ಪ ಹಣ್ಣಿನ ರಸ, ಓಟ್ಸ್‌ ಗಂಜಿ , ರಾಗಿ ಗಂಜಿ, ಜೋಳದ ಗಂಜಿ, ಇತ್ಯಾದಿ

4. ವಾಕರಿಕೆ: ಆಹಾರಗಳನ್ನು ಸಾದಾ ರೂಪದಲ್ಲಿ ಸೇವಿಸಿ. ಅಂದರೆ ಒಗ್ಗರಣೆ, ಮಸಾಲೆ, ಎಣ್ಣೆ ಮತ್ತು ಬಲವಾದ ಸುವಾಸನೆ ಇಲ್ಲದಿರುವ ಆಹಾರಗಳನ್ನು ಸೇವಿಸಿ. ದಿನ ಇಡೀ ಸಣ್ಣ ಸಣ್ಣ ಊಟ ಸೇವಿಸಿ ನಿಮ್ಮ ಹೊಟ್ಟೆಯನ್ನು ಹಗುರಗೊಳಿಸಿ. ನಿಮಗೆ ವಾಂತಿ ಬರುವಂತೆ ಆದರೂ ಸಹ ಆಗಾಗ ನೀರು ಕುಡಿಯುತ್ತಾ ಇರಿ. ಒಂದು ವೇಳೆ ವಾಂತಿ ನಿಲ್ಲದೆ ಹಾಗೆಯೇ ಮುಂದುವರಿದರೆ ಎಳನೀರು ಕುಡಿಯಿರಿ, ತಿಳಿ ಸೂಪ್‌ ಕುಡಿಯಿರಿ, ಹಣ್ಣಿನ ರಸ ಕುಡಿಯಿರಿ……ಹೀಗೆ ನಿಧಾನವಾಗಿ ನಿಮ್ಮ ಆಹಾರದ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಿ. 

ಆಹಾರ ಸುರಕ್ಷತೆಯ ಬಗ್ಗೆ ಗಮನ ಇರಲಿ
ಕೆಲವು ಕ್ಯಾನ್ಸರ್‌ ಚಿಕಿತ್ಸೆಗಳು ತಾತ್ಕಾಲಿಕವಾಗಿ ನಿಮ್ಮ ಶರೀರದ ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಕುಗ್ಗಿಸುತ್ತವೆ. ಹಾಗಾಗಿ ಆಹಾರದ ಮೂಲಕ ಬರುವ ರೋಗಾಣುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಬಹಳ ಆವಶ್ಯಕ. ಕಲುಷಿತ ಆಹಾರ ಸೇವಿಸುವುದರಿಂದ ನೀವು ತ್ವರಿತವಾಗಿ ಕಾಯಿಲೆ ಬೀಳಬಹುದು. ನಿಮ್ಮನ್ನು ನೀವು ಸುರಕ್ಷಿತವಾಗಿ ಇರಿಸಿಕೊಳ್ಳಲು ಇಲ್ಲಿವೆ ಕೆಲವು ಸಲಹೆಗಳು. 

ಒಡೆದ ಅಥವಾ ರೆಫ್ರಿಜರೇಟರ್‌ನಲ್ಲಿ ಇರಿಸಿಲ್ಲದ ಮೊಟ್ಟೆ ಸೇವಿಸಬೇಡಿ.

ಆಹಾರಗಳು ಹಾಳಾಗುವುದನ್ನು ತಪ್ಪಿಸಲು ಆಹಾರದ ಪೊಟ್ಟಣದಲ್ಲಿ ನಮೂದಿಸಿರುವ ಎಕ್ಸ್‌ಪಯರಿ ದಿನಾಂಕವನ್ನು ಗಮನಿಸಿ ಖರೀದಿಸಿ. 

ಹಾಳಾಗುವಂತಹ ಎಲ್ಲಾ ಆಹಾರ ಸಾಮಗ್ರಿಗಳನ್ನು ನೀವು ಅವುಗಳ ಆಹಾರವನ್ನು ತಯಾರಿಸಲು ತಯಾರಾಗುವವರೆಗೆ ಫ್ರಿಜ್‌ನಲ್ಲಿ ಇರಿಸಿ.

ಅಡುಗೆ ಮನೆಯಲ್ಲಿ ಸಾಬೂನು ಮತ್ತು ಬಿಸಿ ನೀರಿನಿಂದ ತೊಳೆದು ಸ್ವತ್ಛ ಮಾಡಿದ ಮೇಲ್ಮೆ„ ಮೇಲೆ ನಿಮ್ಮ ಆಹಾರ ಸಾಮಗ್ರಿಗಳನ್ನು ತಯಾರಿಸಿಕೊಳ್ಳಿ.

ಮಾಂಸಾಹಾರ ಮತ್ತು ಮೀನನ್ನು ಕತ್ತರಿಸಲು ಪ್ರತ್ಯೇಕ ಕಟ್ಟಿಂಗ್‌ ಬೋರ್ಡ್‌ ಇರಲಿ, ಬಳಸಿ ಆದ ನಂತರ ಅವನ್ನು ಚೆನ್ನಾಗಿ ಸ್ವತ್ಛ ಮಾಡಿಕೊಳ್ಳಿ. 

ಹಣ್ಣು ಮತ್ತು ತರಕಾರಿಗಳನ್ನು ಬಿಸಿ ನೀರಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ನೀವು ಸುಲಭವಾಗಿ ಸ್ವತ್ಛಗೊಳಿಸಲು ಸಾಧ್ಯ ಇಲ್ಲದ ಹಣ್ಣುಗಳನ್ನು ತಿನ್ನಬೇಡಿ. 

ಮಾಂಸಾಹಾರ, ಮೀನು ಮತ್ತು ಮೊಟ್ಟೆಯೂ ಸೇರಿದಂತೆ ಹಸಿ ಅಥವಾ ಸರಿಯಾಗಿ ಬೇಯಿಸಿಲ್ಲದ ಪ್ರಾಣಿಜನ್ಯ ಆಹಾರಗಳನ್ನು ಸೇವಿಸಬೇಡಿ. 

ಬಿಟ್ಟು ಬಿಡಬೇಕಾದ ಆಹಾರಗಳು
ಹೆಚ್ಚು ಉಪ್ಪು, ಸಕ್ಕರೆ ಮತ್ತು ಎಣ್ಣೆ ಸೇರಿಸಿದ ಆಹಾರಗಳನ್ನು ಸೇವಿಸಬಾರದು

ರೆಡ್‌ ಮೀಟ್‌ ಮತ್ತು ಸಂಸ್ಕರಿಸಿದ ಮಾಂಸಾಹಾರಗಳನ್ನು ಸೇವಿಸಬಾರದು

ಉಪ್ಪಿನಕಾಯಿ, ಜಾÂಮ್‌ ಇತ್ಯಾದಿ ರೀತಿಯ ಸಂರಕ್ಷಿಸಿದ ಆಹಾರಗಳನ್ನು ಸೇವಿಸಬಾರದು

ಮದ್ಯಪಾನ ಮಾಡಬಾರದು

ತೀಕ್ಷ್ಣ ವಾಸನೆ ಇರುವ ಆಹಾರಗಳನ್ನು ಸೇವಿಸಬಾರದು
ಕೊನೆಯದಾಗಿ ಆರೋಗ್ಯಕರ ಆಹಾರ ಶೈಲಿಯನ್ನು ಅನುಸರಿಸುವುದು, ಚೆನ್ನಾಗಿ ನೀರು ಕುಡಿಯುವುದು ಮತ್ತು ಸಾಕಷ್ಟು ಕ್ಯಾಲೊರಿ, ಪ್ರೊಟೀನ್‌ ಮತ್ತು ಪೋಷಕಾಂಶಗಳನ್ನು ಒದಗಿಸಿ ಸರಿಯಾದ ದೇಹ ತೂಕವನ್ನು ಕಾಪಾಡಿಕೊಳ್ಳುವುದು ನಿಮ್ಮ ದೇಹದ ರೋಗಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮ ಪಡಿಸುವ ಮತ್ತು ನಿಮ್ಮ ಶೀಘ್ರ ಚೇತರಿಸಿಕೊಳ್ಳುವಿಕೆಗೆ ಸಹಾಯ ಮಾಡುವ ಪೂರಕ ಅಂಶಗಳು. 

– ಸುಷ್ಮಾ ಐತಾಳ್‌, 
ಡಯಟೀಷಿಯನ್‌, 
ಪಥ್ಯಾಹಾರ ವಿಭಾಗ,
ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ, ಮಂಗಳೂರು.

ಟಾಪ್ ನ್ಯೂಸ್

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-health

Mother: ತಾಯಂದಿರ ಮಾನಸಿಕ ಆರೋಗ್ಯ

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

4–Lupus-Nephritis

Lupus Nephritis: ಲೂಪಸ್‌ ನೆಫ್ರೈಟಿಸ್‌: ರೋಗಿಗಳಿಗೆ ಒಂದು ಮಾರ್ಗದರ್ಶಿ

3

Mental health: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.