Breast Cancer: ಸ್ತನಗಳ ಕ್ಯಾನ್ಸರ್‌ ನಿಗಾ ಇರಿಸಬೇಕಾದ ಆರಂಭಿಕ ಲಕ್ಷಣಗಳು


Team Udayavani, Jan 12, 2025, 2:26 PM IST

12-cancer

ಭಾರತದಲ್ಲಿ ಸ್ತನಗಳ ಕ್ಯಾನ್ಸರ್‌ಗೆ ತುತ್ತಾಗುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಹೀಗಾಗಿ ಭಾರತೀಯ ಮಹಿಳೆಯರಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್‌ ಇದು. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸ್ತನ ಕ್ಯಾನ್ಸರ್‌ ಉಂಟಾಗುವ ಪ್ರಮಾಣ ಕಡಿಮೆ ಇದೆಯಾದರೂ ಅದರಿಂದ ಮರಣ ಪ್ರಮಾಣ ತುಲನಾತ್ಮಕವಾಗಿ ನಮ್ಮಲ್ಲಿ ಹೆಚ್ಚಿದೆ. ಸಂಪೂರ್ಣವಾಗಿ ಗುಣಪಡಿಸಬಹುದಾದ ಕ್ಯಾನ್ಸರ್‌ಗಳಲ್ಲಿ ಸ್ತನಗಳ ಕ್ಯಾನ್ಸರ್‌ ಕೂಡ ಒಂದು; ಆರಂಭಿಕ ಹಂತಗಳಲ್ಲಿಯೇ ಅದನ್ನು ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸುವುದು ಗುಣ ಪ್ರಮಾಣವನ್ನು ಹೆಚ್ಚಿಸುವ ಅತ್ಯಂತ ಮುಖ್ಯ ವಿಧಾನವಾಗಿದೆ.

ನಮ್ಮ ಜನಸಮುದಾಯದಲ್ಲಿ ಸ್ತನಗಳ ಕ್ಯಾನ್ಸರ್‌ ಬಗ್ಗೆ ಜ್ಞಾನವನ್ನು ಹೆಚ್ಚಿಸುವುದು ಹಾಗೂ ಸ್ತನಗಳ ಕ್ಯಾನ್ಸರ್‌ನ ಲಕ್ಷಣಗಳ ಬಗ್ಗೆ ಮುಕ್ತವಾಗಿ ಸಮಾಲೋಚಿಸಲು ಅಡ್ಡಿಯಾಗುವ ಮುಜುಗರ, ಹಿಂಜರಿಕೆಗಳನ್ನು ನಿವಾರಿಸುವುದು ಅಥವಾ ಕ್ಯಾನ್ಸರ್‌ ರೋಗಪತ್ತೆಗೆ ಸಂಬಂಧಿಸಿದ ಅಂಜಿಕೆಯನ್ನು ನಿವಾರಿಸುವುದು ಈ ನಿಟ್ಟಿನಲ್ಲಿ ಬಹಳ ಮುಖ್ಯವಾಗಿದೆ. 20 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಪ್ರತೀ ತಿಂಗಳು ಕೂಡ ನಿಯಮಿತವಾಗಿ ಸ್ತನಗಳ ಸ್ವಯಂ ತಪಾಸಣೆಯನ್ನು ವೈದ್ಯಕೀಯ ವೃತ್ತಿನಿರತರು ಕಲಿಸಿಕೊಟ್ಟಿರುವಂತೆ ನಡೆಸಬೇಕು.

ಸ್ತನಗಳಲ್ಲಿ ನೋವುರಹಿತ ಗಂಟು ಉಂಟಾಗುವುದು ಸ್ತನಗಳ ಕ್ಯಾನ್ಸರ್‌ನ ಅತ್ಯಂತ ಸಾಮಾನ್ಯವಾಗಿರುವ ಲಕ್ಷಣವಾಗಿದೆ. ನೋವಿಲ್ಲದೆ ಇರುವುದರಿಂದ ಸಾಮಾನ್ಯವಾಗಿ ಸ್ತ್ರೀಯರು ಇದನ್ನು ನಿರ್ಲಕ್ಷಿಸುತ್ತಾರೆ; ಆದರೆ ಸ್ತನಗಳ ಕ್ಯಾನ್ಸರ್‌ ಆರಂಭಿಕ ಹಂತಗಳಲ್ಲಿ ಉಂಟಾಗುವ ಗಂಟು ನೋವು ರಹಿತವಾಗಿರುತ್ತವೆ ಎಂಬುದನ್ನು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕು. ಕೆಲವೊಮ್ಮೆ ಗಂಟು ಎಂಬುದಾಗಿ ನಿರ್ದಿಷ್ಟವಾಗಿ ಗುರುತಿಸಲಾಗದ; ಆದರೆ ಸ್ತನಗಳು ಗಡುಸಾಗಿರುವ, ಊದಿಕೊಂಡಿರುವ ಲಕ್ಷಣವೂ ಉಂಟಾಗುವುದಿದೆ. ಆದ್ದರಿಂದ ಸ್ತನಗಳಲ್ಲಿ ಉಂಟಾಗಿರುವ ನೋವುರಹಿತ ಗಂಟು, ಸ್ತನಗಳು ಗಡುಸಾಗಿರುವುದು, ಊದಿಕೊಂಡಿರುವುದನ್ನು ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು.

ಸ್ತನಗಳ ಕ್ಯಾನ್ಸರ್‌ ಸ್ತನಗಳ ತೊಟ್ಟುಗಳಿಂದ ರಕ್ತಮಿಶ್ರಿತ ದ್ರವ ಸೋರುವಿಕೆ ಅಥವಾ ಕೀವಿನಂತಹ ದ್ರವ ಸೋರುವಿಕೆಯಂತಹ ಲಕ್ಷಣಗಳೊಂದಿಗೂ ಪ್ರಕಟಗೊಳ್ಳಬಹುದಾಗಿದೆ. ತೊಟ್ಟುಗಳು ಬಿರುಕು ಬಿಡುವುದು ಮತ್ತು ತೊಟ್ಟುಗಳ ಚರ್ಮ ಹುರುಪೆಯೇಳುವುದು ಕೂಡ ಸ್ತನಗಳ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿರಬಹುದು. ಇತ್ತೀಚೆಗೆ ಸ್ತನ ತೊಟ್ಟುಗಳು ಒಳಕ್ಕೆ ಜರುಗಿದ್ದರೆ ಅಥವಾ ಮುಂಚಾಚಿಕೊಂಡಿದ್ದರೆ ಅದು ಕೂಡ ಸ್ತನ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು.

ಕಂಕುಳಿನಲ್ಲಿ ಗಂಟುಗಳು ಅಥವಾ ಸ್ತನಗಳಲ್ಲಿ ಹಲವು ಗಂಟುಗಳಾಗಿಯೂ ಸ್ತನ ಕ್ಯಾನ್ಸರ್‌ ಆರಂಭಿಕ ಲಕ್ಷಣ ಪ್ರದರ್ಶಿಸಬಹುದು. ಮುಂದುವರಿದ ಹಂತಗಳಲ್ಲಿ, ಸ್ತನಗಳ ಚರ್ಮ ಕೆಂಪಗಾಗುವುದು, ನೀರು ತುಂಬಿ ಊದಿಕೊಳ್ಳುವುದು, ಹುಣ್ಣುಗಳು ಉಂಟಾಗುವುದು ಮತ್ತು ದ್ರವ ಸೋರುವಿಕೆಯ ಲಕ್ಷಣಗಳನ್ನು ತೋರ್ಪಡಿಸಬಹುದು. ಈ ಹಂತಗಳಲ್ಲಿ ಸ್ತನ ಕ್ಯಾನ್ಸರ್‌ ನೋವು ಸಹಿತವಾಗಿರುತ್ತದೆ. ಸ್ತನಗಳ ಕ್ಯಾನ್ಸರ್‌ ಇಂತಹ ಎದ್ದುಕಾಣುವ ನಿರ್ದಿಷ್ಟ ಲಕ್ಷಣಗಳನ್ನು ಪ್ರದರ್ಶಿಸುವಂತಹ ಮುಂದುವರಿದ ಹಂತಗಳನ್ನು ತಲುಪುವುದಕ್ಕೆ ಮುನ್ನವೇ ಅದನ್ನು ಪತ್ತೆಹಚ್ಚಿ ಚಿಕಿತ್ಸೆಗೆ ಒಳಪಡಿಸುವುದು ಗುಣ ಹೊಂದುವುದಕ್ಕೆ ಬಹಳ ಮುಖ್ಯವಾಗಿರುತ್ತದೆ.

ಡಾ| ಬಾಸಿಲಾ ಅಲಿ ಸ್ತನ ಸರ್ಜನ್‌ ಕೆಎಂಸಿ ಆಸ್ಪತ್ರೆ, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸರ್ಜರಿ ವಿಭಾಗ , ಕೆಎಂಸಿ, ಮಂಗಳೂರು

ಟಾಪ್ ನ್ಯೂಸ್

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

1-raj

IPL 2025 ಮಾರ್ಚ್ 23 ರಿಂದ ಆರಂಭ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

19-uv-fusion

UV Fusion: ನಮ್ಮಲ್ಲಿಯೂ ಕೊರತೆಗಳಿವೆ

Jaishankar

Trump ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾರತ ಪ್ರತಿನಿಧಿಸಲಿರುವ ಜೈಶಂಕರ್

Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು

Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು

18-uv-fusion

Learning: ಪ್ರಯತ್ನ ಮತ್ತು ಪ್ರಮಾದ ಕಲಿಕೆಯ ಮೊದಲ ಮೆಟ್ಟಿಲು

1-deee

BJP ಗೆದ್ದರೆ ದೆಹಲಿಯ ಕೊಳೆಗೇರಿಗಳು ನೆಲಸಮ: ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

UV Fusion: ನಮ್ಮಲ್ಲಿಯೂ ಕೊರತೆಗಳಿವೆ

18-uv-fusion

Learning: ಪ್ರಯತ್ನ ಮತ್ತು ಪ್ರಮಾದ ಕಲಿಕೆಯ ಮೊದಲ ಮೆಟ್ಟಿಲು

11-knee-1

Osteoarthritis, Knee Osteoarthritis: ಮೂಳೆ ಸವೆತ ಹಾಗೂ ಮಂಡಿ ಸವೆತ

10-liver-cancer

Liver Cancer: ಯಕೃತ್‌ ಕ್ಯಾನ್ಸರ್‌ನೊಂದಿಗೆ ಬದುಕಲು ಕಾರ್ಯತಂತ್ರಗಳು

9-hmpv

HMPV: ಹ್ಯೂಮನ್‌ ಮೆಟಾನ್ಯುಮೊ ವೈರಸ್‌ (ಎಚ್‌ಎಂಪಿವಿ); ಹೊಸ ಆತಂಕವೇನೂ ಅಲ್ಲ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

14

UV Fusion: ಗೆದ್ದ ಗೆಲುವನ್ನು ಗಟ್ಟಿತನದಲ್ಲಿ ನಿಭಾಯಿಸುವುದು ಒಂದು ಕಲೆ!

13

UV Fusion: ಬದಲಾವಣೆ ಜಗದ ನಿಯಮ

1-raj

IPL 2025 ಮಾರ್ಚ್ 23 ರಿಂದ ಆರಂಭ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

12(1

UV Fusion: ನವ ವರುಷ ನವೋಲ್ಲಾಸ; ನಿರ್ಧಾರಗಳಿಗೆ ಬದ್ಧರಾಗಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.