ಎಗ್‌ ಫ್ರೀಜಿಂಗ್‌ ಎಂಬ ಸಿಟಿ ಟ್ರೆಂಡ್‌


Team Udayavani, Feb 21, 2022, 12:55 PM IST

ಎಗ್‌ ಫ್ರೀಜಿಂಗ್‌ ಎಂಬ ಸಿಟಿ ಟ್ರೆಂಡ್‌

ಮಗು ತಡವಾಗಿ ಬೇಕು ಎಂಬ ಭವಿಷ್ಯದ ಪ್ಲ್ರಾನಿಂಗ್ ಮಾಡಿಕೊಳ್ಳುವ ಹೆಣ್ಣು ಮಕ್ಕಳಿಗೆ ಸಮಸ್ಯೆಯಾಗಿ ಕಾಡುವುದು ಅಂಡಾಣು ಶಕ್ತಿ ಕ್ಷೀಣಿಸುವಿಕೆ. ಅದಕ್ಕೂ ವೈದ್ಯಕೀಯ ಲೋಕದಲ್ಲಿ ಎಗ್ ಫ್ರೀಜಿಂಗ್ಎಂಬ ಪರಿಹಾರವಿದ್ದು, ಇದೀಗ ಅದರತ್ತ ಮಾಡರ್ನ್ ಮಹಿಳೆಯರ ಗಮನ ಹರಿದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚಿನ ಮಹಿಳೆಯರು ತಾಯಿತನ ಅನುಭವಿಸಲು ಎಗ್ ಫ್ರೀಜಿಂಗ್ ಮೂಲಕ ಅಂಡಾಣು ಶೇಖರಿಸಿ ತಮಗೆ ಬೇಕಾದ ಅವಧಿಯಲ್ಲಿ ಮಗು ಪಡೆಯುವಟ್ರೆಂಡ್ಶುರುವಾಗಿದೆ. ಬಗ್ಗೆ ಸುದ್ದಿಸುತ್ತಾಟದಲ್ಲಿ ಒಂದು ನೋಟ.

ಹೆಣ್ಣಿನ ಬದುಕು ಪರಿಪೂರ್ಣವಾಗುವುದು ತಾಯಿಯಾದಾಗ ಎನ್ನುವ ಮಾತಿದೆ. ಮದುವೆಯಾಗಿ ಒಂದೆರೆಡು ವರ್ಷದಲ್ಲೇ ಮಗು ಹೆತ್ತು ಪರಿಪೂರ್ಣತೆ ಪಡೆದುಕೊಳ್ಳುವ ಕಾಲ ಈಗಿಲ್ಲ. ಮದುವೆಯಾಗುವುದಕ್ಕೂ ತಮ್ಮ ಬದುಕಿನ ಕಂಫ‌ರ್ಟ್‌ನೆಸ್‌ ನೋಡುವ ಹೆಂಗಳೆಯರು ಮಗು ಮಾಡಿಕೊಳ್ಳುವುದಕ್ಕೂ ನಿರ್ದಿಷ್ಟ ಕಾಲಘಟ್ಟ ಬರಬೇಕೆಂದು ಕಾಯುತ್ತಾರೆ.ಈ ರೀತಿ ಭವಿಷ್ಯದ ಪ್ಲ್ರಾನಿಂಗ್‌ ಮಾಡಿಕೊಳ್ಳುವ ಹೆಣ್ಣು ಮಕ್ಕಳಿಗೆ ಸಮಸ್ಯೆಯಾಗಿ ಕಾಡುವುದು ಅಂಡಾಣು ಶಕ್ತಿ ಕ್ಷೀಣಿಸುವಿಕೆ. ಅದಕ್ಕೂ ವೈದ್ಯಕೀಯ ಲೋಕದಲ್ಲಿ ” ಎಗ್‌ ಫ್ರೀಜಿಂಗ್‌ ಎಂಬ ಪರಿಹಾರವಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಂಡುಬರುತ್ತಿದ್ದ ಈ ರೀತಿಯ ವ್ಯವಸ್ಥೆ ಇದೀಗ ಭಾರತಕ್ಕೂ ಕಾಲಿಟ್ಟಿದ್ದು ರಾಜಧಾನಿ ಬೆಂಗಳೂರಿನಲ್ಲಿಯೂ ಪ್ರಾರಂಭವಾಗಿದೆ. ಕೆಲಸದ ಒತ್ತಡ, ಭವಿಷ್ಯದ ಚಿಂತೆ ಸೇರಿ ಹಲವಾರು ಕಾರಣಗಳಿಂದಾಗಿಮಹಿಳೆಯರು ಈ ಟ್ರೆಂಡ್‌ಗೆ ಆಕರ್ಷಿತರಾಗುತ್ತಿದ್ದಾರೆ.

ಇದಕ್ಕೆ ತಮ್ಮದೇ ಆದ ಸಮರ್ಥನೆಯನ್ನೂ ನೀಡುತ್ತಾರೆ.  ಎಗ್‌ ಫ್ರೀಜಿಂಗ್‌ ಮೂಲಕ ಅಂಡಾಣು ಶೇಖರಿಸಿ ಮಗುಪಡೆಯಲು ಈಗಾಗಲೇತೀರ್ಮಾನಿಸಿರುವ ಮಹಿಳೆಯರಅನಿಸಿಕೆ, ಅಭಿಪ್ರಾಯ ಹಾಗೂ ಇದರ ಸುತ್ತಮುತ್ತ ಇಂದಿನ ಸುತ್ತಾಟ. ಈವಿಧಾನದ ಅಳವಡಿಸಿಕೊಂಡಿರುವವವರು ಏನು ಹೇಳುತ್ತಾರೆ ಎಂಬುದು ಅವರಮಾತುಗಳಲ್ಲೇ ಕೇಳುವುದಾದರೆ ಸಾಕಷ್ಟು ಕುತೂಹಲಕಾರಿ ಸಂಗತಿಗಳು ಗೊತ್ತಾಗುತ್ತವೆ.

ನನಗೆ 27 ವರ್ಷ. ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ವೃತ್ತಿ ನಿರ್ವಹಿಸುತ್ತಿದ್ದೇನೆ. ವೃತ್ತಿ ನಿಷ್ಠೆಯಿಂದ ಕಡಿಮೆ ಅವಧಿಯಲ್ಲಿ ಮ್ಯಾನೇಜರ್‌ಹುದ್ದೆಗೆ ಬಡ್ತಿ ಹೊಂದಿದ್ದೇನೆ. ಈ ನಡುವೆ ಮದುವೆಯೂ ಆಗಿದೆ. ಸಮಸ್ಯೆ ಪ್ರಾರಂಭವಾಗಿರುವು ಇಲ್ಲಿಂದ. ಈಗಲೇ ತಾಯಿ ಆಗಲು ವೃತ್ತಿ ಕನಸುಗಳು ಅಡ್ಡಿಯಾಗುತ್ತಿದೆ. ದತ್ತು ತೆಗೆದುಕೊಳ್ಳುವ ಮನಸ್ಸಿಲ್ಲ. ಇನ್ನೂ ವಯಸ್ಸಾಗುತ್ತಿದ್ದಂತೆ ಗುಣಮಟ್ಟದ ಅಂಡಾಣುಗಳ ಉತ್ಪತ್ತಿ ಹಾಗೂ ಪ್ರಮಾಣ ಕ್ಷೀಣಿಸುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಮಕ್ಕಳಾಗುವುದು ಕಷ್ಟವಾಗಲಿದೆ. ಇದರಿಂದ 27ನೇ ವರ್ಷಕ್ಕೆ ಅಂಡಾಣುವನ್ನು ಶೇಖರಿಸಿದ್ದೇನೆ. ಕೆಲವು ವರ್ಷಗಳ ಬಳಿಕ ನನ್ನ ಅಂಡಾಣುವನ್ನು ಬಳಸಿಕೊಂಡು ಮಗುವನ್ನು ಪಡೆದುಕೊಳ್ಳುವ ಆಸೆ. ಈ ವಿಷಯ ಪತಿಗೆ ಮಾತ್ರ ಗೊತ್ತಿದೆ. ಪೋಷಕರು ಸಂಪ್ರದಾಯದವರು ಆಗಿರುವುದರಿಂದ ಈ ವಿಷಯ ಮುಚ್ಚಿಟ್ಟಿದ್ದೇನೆ. ಆಧುನಿಕ ತಂತ್ರಜ್ಞಾನದ ಬಗ್ಗೆ ಅವರಿಗೆ ಹೆಚ್ಚಿನ ಒಲವು ಇಲ್ಲ. ವೃತ್ತಿ ಬದುಕಿನಲ್ಲಿ ಯಶಸ್ವಿಯಾದ ಬಳಿಕ ಮಗುವನ್ನು ಪಡೆಯಬೇಕು ಎನ್ನುವ ಬಯಕೆ ಗರಿ ಸಿಕ್ಕಿದೆ ಎನ್ನುತ್ತಾರೆ ಐಟಿಬಿಟಿ ಉದ್ಯೋಗಿ ಸ್ಮಿತಾ(ಹೆಸರು ಬದಲಾಯಿಸಲಾಗಿದೆ)

ಮಗು ಬೇಕುಇವಾಗಲೇ ಬೇಡ! :

ನನಗೆ ಮಗು ಬೇಕು ಆದರೆ ಇವಾಗಲೇ ಮಗುವಿನ ಜವಾಬ್ದಾರಿ ಬೇಡ. ಮದುವೆಯಾಗಿ 5ತಿಂಗಳಾಗಿದೆ. ಮಗುವಿನ ಬಗ್ಗೆ ನಾವಿಬ್ಬರು ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದೇವೆ. ಆದರೆ ಈ ಕೂಡಲೆ ಮಗುವಾದರೆ ಅದನ್ನು ನೋಡಿಕೊಳ್ಳುವುದು ಕಷ್ಟ. ಮದುವೆಯ ಜೀವನವನ್ನು ಸವಿಯಬೇಕು. ಸ್ವತ್ಛಂದಹಕ್ಕಿಗಳ ತರಹ ಹಾರಾಡುವವರು ನಾವು. ಈ ನಡುವೆ ಗರ್ಭದಲ್ಲಿ ಮೂರು ತಿಂಗಳು ತುಂಬಿದ್ದ ಮಗು ಕೆಲಸ ಹಾಗೂ ಇತರೆ ಒತ್ತಡದಿಂದಾಗಿ ಅಬಾಷನ್‌ ಆಗಿತ್ತು. ಇದರಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಹಾಗಾಗಿ ಸದ್ಯದ ಜೀವನ ಶೈಲಿಯಲ್ಲಿ ಮಗು ಪಡೆಯಲು ಕಷ್ಟವಾಗುತ್ತಿದೆ. ನನಗೆ ಒಂದು 33 ವರ್ಷ ಆಗುವ ವೇಳೆ ಮಗು ಪಡೆಯಬೇಕು ಎನ್ನುವ ಇಚ್ಛೆ ಇದೆ. ಈ ವೇಳೆ ಅಂಡಾಣುಗಳು ಕ್ಷೀಣಿಸುತ್ತದೆ ಎನ್ನುವ ಭೀತಿ ಇರುವುದರಿಂದ26 ವರ್ಷಕ್ಕೆ ಅಂಡಾಣು ಶೇಖರಣೆ ಇಟ್ಟಿದ್ದೇನೆ. ಯಾವಾಗಬೇಕೋ ಆ ವೇಳೆ ಮಗುವನ್ನು ಯಾವುದೇ ಚಿಂತೆಯಲ್ಲಿದೆಪಡೆಯುತ್ತೇನೆ ಎನ್ನುವ ವಿಶ್ವಾಸವಿದೆ. ಇದಕ್ಕೆ ಕುಟುಂಬ, ಪತಿ ಸಹಕಾರವಿದೆ ಎನ್ನುತ್ತಾರೆ ಸರಕಾರಿ ಉದ್ಯೋಗಿ ಸ್ವಾತಿ( ಹೆಸರು ಬದಲಾಯಿಸಲಾಗಿದೆ).

ಚಿಕಿತ್ಸೆ ಬಳಿಕ ಮಗು :

ನನಗೀಗ 27 ವರ್ಷ. ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ಮದುವೆ ಹಾಗೂ ಕುಟುಂಬ ಎನ್ನುವ ಸಾವಿರಾರು ಕನಸು ಇನ್ನೂ ಕನಸಾಗಿಯೂ ಉಳಿದುಕೊಂಡಿದೆ. ಶಿಕ್ಷಣ ಮುಗಿಸಿ,ಉದ್ಯೋಗಕ್ಕೆ ಸೇರಿದ ಮೂರು ವರ್ಷದಲ್ಲಿ ಕ್ಯಾನ್ಸರ್‌ ಸಿಡಿಲು ಭವಿಷ್ಯಕ್ಕೆ ಬೆಂಕಿ ಹಾಕಿದೆ. ಕ್ಯಾನ್ಸರ್‌ ಪ್ರಾರಂಭ ಹಂತದಲ್ಲಿ ಇದೆ.ಚಿಕಿತ್ಸೆ ಪಡೆದರೆ ಗುಣವಾಗುತ್ತದೆ ಎಂದಿದ್ದಾರೆ. ಆದರೆ ಅನಂತರಏನು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಈ ನಡುವೆ ಪ್ರಿಯಕರ ನನ್ನ ಚಿಕಿತ್ಸೆ ಬಳಿಕ ಮದುವೆಯಾಗುತ್ತೇನೆ ಎಂದು ಒಪ್ಪಿದ್ದಾರೆ. ಆದರೆಕೀಮೋಥೆರಪಿ ಒಳಗಾದರೆ ಮಗುವಾಗುವುದು ಕಷ್ಟ. ಆದರೆ ಮಗು ನನ್ನ ಜೀವನದ ಕನಸು. ಈ ನಿಟ್ಟಿನಲ್ಲಿ ನನ್ನ ಅಂಡಾಣುವನ್ನು ಎಗ್‌ ಫ್ರೀಜಿಂಗ್‌ ಮಾಡಿದ್ದೇನೆ. ಸುಮಾರು ಒಂದು ವರ್ಷ ಆಗಿದೆ. ಚಿಕಿತ್ಸೆ ಪಡೆದು ಗುಣ ಮುಖರಾದ ಬಳಿಕಮಗುವನ್ನು ಪಡೆಯುವ ಹಂಬಲವಿದೆ ಎನ್ನುತ್ತಾರೆ ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿರುವ ಜ್ಞಾನ(ಹೆಸರು ಬದಲಾಯಿಸಲಾಗಿದೆ).

 ಇನ್ನಷ್ಟು ಹಾರಾಡಬೇಕುಮಗು ಬೇಡ :

ವೃತ್ತಿಯಲ್ಲಿ ನಾನು ಗಗನ ಸಖೀ. ನಮ್ಮಲ್ಲಿ ದೈಹಿಕ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ. ಮದುವೆಯಾಗಿ 3 ವರ್ಷವಾಗಿದ್ದು, 30ರ ಸಮೀಪಿಸುತ್ತಿದೆ ವಯಸ್ಸು. ಇಷ್ಟು ದಿನ ಫ್ಯಾಮಿಲಿ ಪ್ಲ್ರಾನಿಂಗ್‌ನಲ್ಲಿದೆ. ಆದರೆ ಇದೀಗ ತೀವ್ರವಾದ ಭಯ ಕಾಡುತ್ತಿದೆ. ವಯಸ್ಸು ಹೆಚ್ಚಾದಂತೆಅಂಡಾಣು ಕ್ಷೀಣವಾಗುತ್ತದೆ ಎನ್ನಲಾಗುತ್ತಿದೆ. ಹಾಗಂತಮಗು ಕೂಡಲೇ ಪಡೆಯುವ ಮನಸ್ಸಿಲ್ಲ. ಇನ್ನಷ್ಟು ವರ್ಷಲೋಹದ ಹಕ್ಕಿಯ ಜಗತ್ತಿನಲ್ಲಿ ಹಾರಬೇಕು ಎನ್ನುವ ಆಸೆಇದೆ. ಜತೆಗೆ ಮಗುವಿನ ಆರೈಕೆಯಲ್ಲಿ ಜೀವನದ ಸುಖಪಡೆಯಬೇಕು. ವೃತ್ತಿ ಬದುಕಿಗೆ ಇನ್ನು 3ರಿಂದ 4 ವರ್ಷದ ಬಳಿಕ ಇತಿಶ್ರೀ ಹಾಡಿ, ಮಗು ಪಡೆಯಬೇಕು ಅಂತ ಇದ್ದೀನಿ. ಹಾಗಾಗಿ ಅಂಡಾಣು ಸಂಗ್ರಹಿಸಿ ಇಡುವುದು ಉತ್ತಮ ಎಂದು ಮನಗೊಂಡು, ಎಗ್‌ ಫ್ರೀಜಿಂಗ್‌ ಮಾಡಿಸಿದ್ದೇನೆ. ಇನ್ನು ಯಾವುದೇ ಚಿಂತೆಯಿಲ್ಲದೆ ಕೆಲಸದ ಕಡೆಗೆಗಮನ ನೀಡಬಹುದು ಎನ್ನುತ್ತಾರೆ ಗಗನ ಸಖಿ ಖ್ಯಾತಿ(ಹೆಸರು ಬದಲಾಯಿಸಲಾಗಿದೆ).

ನನಗೆ ನನ್ನದೇ ಮಗುಬೇಕು :

ನನಗೆ ಮಗು ಬೇಕು. ಆದರೆ ಇದೀಗ 9 ತಿಂಗಳು ಹೊತ್ತು, ಪ್ರಸವದ ನೋವು ಪಡೆದು ಮಗುವನ್ನು ಪಡೆಯುವ ಇಚ್ಛೆ ಇಲ್ಲ. ಮಗು ಬೇಕು ಎನ್ನುವ ನಿಟ್ಟಿನಲ್ಲಿ ನನ್ನ ಅಂಡಾಣು ಹಾಗೂ ಪತಿಯ ವೀರ್ಯವನ್ನು ಸಂಗ್ರಹಿಸಲಾಗಿತ್ತು. ಆದರೆ ವಿಧಿ ಆಟ ಬೇರೆ ಇತ್ತು. ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಪತಿ ತೀರಿಕೊಂಡರು. ಪ್ರಸ್ತುತ ಮಗುವನ್ನು ನನ್ನಗರ್ಭದಲ್ಲಿಟ್ಟು ಜನನ ಕೊಡುವ ಮನಸ್ಥಿತಿ ಇಲ್ಲ. ಇದರಿಂದ ಬಾಡಿಗೆ ತಾಯಿ ಮೂಲಕ ನನ್ನಹಾಗೂ ಪತಿಯ ಮಗುವನ್ನು ಪಡೆಯುವ ನಿರೀಕ್ಷೆಯಲ್ಲಿದ್ದೇನೆ. ಬಾಡಿಗೆ ತಾಯಿಗೆ ಇದೀಗ 7 ತಿಂಗಳು ಪೂರ್ಣಗೊಂಡಿದೆ. ಎರಡು ಬಾರಿ ಪ್ರಯತ್ನದ ಬಳಿಕ ಗರ್ಭ ನಿಂತಿದೆ. ಪತಿಯ ನೆನಪಿನಲ್ಲಿ ಮಗುವಿನ ಜತೆಗೆ ಜೀವನವನ್ನು ಕಳೆಯುತ್ತೇನೆ ಎನ್ನುತ್ತಾರೆ ನಿಸರ್ಗ( ಹೆಸರು ಬದಲಾಯಿಸಲಾಗಿದೆ).

ಯಾಕೆ ಎಗ್ ಫ್ರೀಜಿಂಗ್? :

  • ಮಹಿಳೆ ಮಗುವನ್ನು ನಿಧಾನ ಪಡೆಯಲು ಇಚ್ಛಿಸಿದಾಗ
  • ಅನಾರೋಗ್ಯದಿಂದ ಬಳಲುತ್ತಿದ್ದರೆ

5 ವರ್ಷ ಶೇಖರಣೆ :

ಮಹಿಳೆಯಿಂದ ಸಂಗ್ರಹಿಸಲಾದ ಅಂಡಾಣುವನ್ನು ನಿಗದಿತ ಉಷ್ಣಾಂಶದಲ್ಲಿಸುಮಾರು 3ರಿಂದ 5 ವರ್ಷಗಳ ಕಾಲ ಇಡಲು ಸಾಧ್ಯವಿದೆ. ಈ ವೇಳೆ ಅಂಡಾಣು ಗುಣಮಟ್ಟ ಕ್ಷೀಣಿಸುವುದಿಲ್ಲ ಎನ್ನುವುದು ವೈದ್ಯರ ಮಾತು.

  • ಮಹಿಳೆಯರಲ್ಲಿ ಎಗ್‌ ಫ್ರೀಜಿಂಗ್‌ ಒಲವು ಹೆಚ್ಚಳ
  • ಭವಿಷ್ಯದ ಮಗುವಿಗೆ ಈಗಲೇ ಅಂಡಾಣು ಸಂಗ್ರಹ
  • ಮಾಡರ್ನ್ ತಾಯಿತನದ ಒಲವು
  • 35+ ವಯಸ್ಸಿನಲ್ಲಿಯೂ ಮಗುವನ್ನು ಪಡೆಯಬಹುದು

ಕಳೆದೊಂದು ವರ್ಷದಿಂದ ಎಗ್‌ ಫ್ರೀಜಿಂಗ್‌ ಗೆಬರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ.30ರಿಂದ 35 ವರ್ಷದೊಳಗಿನ ಮಹಿಳೆಯರುಮಕ್ಕಳನ್ನು ಪಡೆಯುವ ಅವಧಿ ಮುಂದೆ ಹಾಕುವ ಯೋಜನೆಗಳಿದ್ದರೆ ಎಗ್‌ ಫ್ರೀಜಿಂಗ್‌ ಮಾಡುವುದು ಉತ್ತಮ. ಸರಿಯಾದ ಅವಧಿಯಲ್ಲಿ ಬಲಿಷ್ಠವಾದಅಂಡಾಣು ಶೇಖರಣೆ ಮಾಡುವುದರಿಂದಮುಂದಿನ ದಿನಗಳಲ್ಲಿ ಮಕ್ಕಳಿಲ್ಲ ಎನ್ನುವ ಕೊರಗುನೀಗಿಸಬಹುದು. ಇದರಿಂದ ವೃತ್ತಿ ಬದುಕಿಗೆತೊಂದರೆಯಾಗದು. ನಮ್ಮಲ್ಲಿ ಬರುವ ಅದೆಷ್ಟೋದಂಪತಿಗಳಿಗೆ ಈ ಬಗ್ಗೆ ಮಾಹಿತಿ ಸಿಗದೆ ಬೇಸರ ವ್ಯಕ್ತಪಡಿಸಿದ್ದೂ ಇದೆ. ಡಾ.ಸ್ಮಿತಿ ಡಿ. ನಾಯಕ್, ಪ್ರಸೂತಿ ತಜ್ಞೆ

 

ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

bellad

Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

15-mandya

Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ

Hubli; Pig farmer assault case; Four arrested including sister’s husband

Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕ್ಮಸಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-liver-cancer

Liver cancer: ಯಕೃತ್ತಿನ ಕ್ಯಾನ್ಸರ್‌

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

12-heart-attack

Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ  ಸೇವೆ

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ ಸೇವೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6

Karkala: ಲೈಸೆನ್ಸ್‌ ಇಲ್ಲದ ವ್ಯಾಪಾರಕ್ಕೆ ಕಡಿವಾಣ

bellad

Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

5

Kundapura: ಜಿಲ್ಲೆಯ ರೈತರಿಗೆ ಭಾರೀ ಆಸಕ್ತಿ!

18-liver-cancer

Liver cancer: ಯಕೃತ್ತಿನ ಕ್ಯಾನ್ಸರ್‌

4

Mulki: ವಾಹನ ನಿಲುಗಡೆ ನಿಷೇದವಿದ್ದರೂ ಪಾರ್ಕಿಂಗ್‌; ಸುಗಮ ಸಂಚಾರಕ್ಕೆ ಅಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.