Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ

ಸೋಂಕು ನಿಯಂತ್ರಣದಿಂದ ಸರ್ವರಿಗೂ ಆರೋಗ್ಯ

Team Udayavani, Oct 19, 2024, 10:15 AM IST

5-health

ಪ್ರತೀ ವರ್ಷ ಅಕ್ಟೋಬರ್‌ ತಿಂಗಳ ಮೂರನೇ ವಾರವನ್ನು “ಜಾಗತಿಕ ಸೋಂಕು ನಿಯಂತ್ರಣ ವಾರ’ವನ್ನಾಗಿ ಆಚರಿಸಲಾಗುತ್ತದೆ. ಇದರ ಅಂಗವಾಗಿ ಈ ವರ್ಷದ ಧ್ಯೇಯ ವಾಕ್ಯವಾದ “ಚಲಿಸುವ ಸೂಜಿ’ಯ ಮೂಲಕ ನಾವು ಹೇಗೆಲ್ಲ ಸೋಂಕನ್ನು ತಡೆಗಟ್ಟಬಹುದು ಈ ವಿಷಯದ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

1986ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿದ್ದ ರೊನಾಲ್ಡ್‌ ರೇಗನ್‌ ಅವರು ಈ ವಿಶ್ವ ಸೋಂಕು ತಡೆಗಟ್ಟುವ ವಾರವನ್ನು ಅಕ್ಟೋಬರ್‌ ತಿಂಗಳ ಮೂರನೇ ವಾರದಲ್ಲಿ ಆಚರಿಸಲು ಪ್ರಾರಂಭ ಮಾಡಿದರು.

ವಿಶ್ವ ಸೋಂಕು ನಿಯಂತ್ರಣ ವಾರವನ್ನು ಪ್ರತೀ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಆಚರಿಸುತ್ತಾರೆ. ಈ ವರ್ಷ ನಾವು ಇದನ್ನು ಅಕ್ಟೋಬರ್‌ ತಿಂಗಳ 13ರಿಂದ 19ರ ವರೆಗೆ ಆಚರಿಸುತ್ತಿದ್ದೇವೆ.

ಸೋಂಕು ತಡೆಗಟ್ಟುವ ವಾರವನ್ನು ಮೊದಲು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಆಚರಿಸಲಾಯಿತು. ಬಳಿಕ ಅಲ್ಲಿಂದ ಅದು ಏಷ್ಯ, ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ ಸೋಂಕು ನಿಯಂತ್ರಣದಿಂದ ಸರ್ವರಿಗೂ ಆರೋಗ್ಯ ಆಪ್ರಿಕಾ, ಯೂರೋಪ್‌ ಖಂಡಗಳಲ್ಲಿ ಪಸರಿಸಿ ಅನಂತರ ವಿಶ್ವದಾದ್ಯಂತ ಆಚರಿಸಲು ಆರಂಭ ಮಾಡಿದರು.

ನಾವು ವಿಶ್ವ ಸೋಂಕು ನಿಯಂತ್ರಣ ವಾರವನ್ನು ಆಚರಿಸುವ ಉದ್ದೇಶವೇನೆಂದರೆ – ಸಾರ್ವಜನಿಕರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಬೇಕಾಗುವ ಶಿಕ್ಷಣವನ್ನು ಕೊಡುವುದರ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಬಹುದು ಮತ್ತು ಅವರು ದಿನನಿತ್ಯ ಮಾಡುವ ಕರ್ತವ್ಯವನ್ನು ಅವರಿಗೆ ನೆನಪಿನಲ್ಲಿ ಉಳಿಯುವಂತೆ ಮಾಡಬಹುದು.

ನಮ್ಮ ದೈನಂದಿನ ಜೀವನದಲ್ಲಿ ಹೇಗೆ ಸೋಂಕನ್ನು ತಡೆಗಟ್ಟಬಹುದು, ಅದು ಆಸ್ಪತ್ರೆಯಾಗಿರಬಹುದು ಅಥವಾ ಸಾರ್ವಜನಿಕ ಸ್ಥಳಗಳಲ್ಲಿಯೂ ಆಗಿರಬಹುದು. ಅದಕ್ಕಾಗಿ ನಾವು ಕೆಲವು ನೀತಿ ನಿಯಮಗಳನ್ನು ಅಳವಡಿಸಿಕೊಳ್ಳಬೇಕು.

“ಒಬ್ಬ ಆರೋಗ್ಯವಂತ ವ್ಯಕ್ತಿಯು ಸಾವಿರ ಆಸೆಗಳನ್ನು ಹೊಂದಿರುತ್ತಾನೆ. ಆದರೆ ಅನಾರೋಗ್ಯದ ವ್ಯಕ್ತಿ ಕೇವಲ ಉತ್ತಮ ಆರೋಗ್ಯಕ್ಕಾಗಿ ಆಶಿಸುತ್ತಾನೆ.’

ಇದು ಆರೊಗ್ಯದ ಪ್ರಾಮುಖ್ಯವನ್ನು ತಿಳಿಸುತ್ತದೆ. ಅದಕ್ಕಾಗಿ ನಾವು ಈಗಿನಿಂದಲೇ ಶಾಲಾ ಮಕ್ಕಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸೋಂಕನ್ನು ಹೇಗೆ ತಡೆಗಟ್ಟಬಹುದು ಎಂಬ ವಿಚಾರವನ್ನು ಮನದಟ್ಟು ಆಗುವಂತೆ ಹೇಳಬೇಕು. ನಾವು ಕೆಲವು ಪರಿಣಾಮಕಾರಿಯಾದ ನೀತಿ ನಿಯಮಗಳನ್ನು ದಿನನಿತ್ಯದ ಕಾಯಕದಲ್ಲಿ ಅಳವಡಿಸಿಕೊಳ್ಳಬೇಕು.

ಅವು ಯಾವುದೆಂದರೆ:

ವೈಯಕ್ತಿಕ ರಕ್ಷಣಾ ಸಾಧನಗಳು. ಅಂದರೆ ಕೈಗವಸುಗಳು, ಮೂಗು ಮತ್ತು ಬಾಯಿ ಅಥವಾ ಮೂಗು ಮತ್ತು ಕಣ್ಣುಗಳನ್ನು ಆವರಿಸುವ ರಕ್ಷಣಾತ್ಮಕ ಮುಖವಾಡ ಕೆಲಸ ಮಾಡಲು ಬೇಕಾದ ನಿಲುವಂಗಿಯನ್ನು ಹೇಗೆ ಉಪಯೋಗಿಸಬೇಕು.

ನಂಜು ನಿರೋಧಕ ತಂತ್ರಜ್ಞಾನವನ್ನು (Aseptic Technique) ಅಳವಡಿಸಿಕೊಳ್ಳುವುದು.

ಕೈ ನೈರ್ಮಲ್ಯ, ಕೈ ಶುಚಿತ್ವವನ್ನು ಉತ್ತಮ ಗೊಳಿಸುವುದು.

ಲಸಿಕೆ ಕೊಡುವುದರಿಂದ ಹಲವಾರು ಕಾಯಿಲೆಗಳನ್ನು ತಡೆಗಟ್ಟಬಹುದು.

ಪರಿಸರ ಸೋಂಕು ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸುವುದು.

“ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮವಾಗಿದೆ’. ನಾವು ನಮ್ಮ ಆರೋಗ್ಯದ ದೃಷ್ಟಿಯಿಂದ ನೋಡಿದರೆ ನಾವು ಹೇಗೆ ಅತ್ಯುತ್ತಮವಾದ ಚಿಕಿತ್ಸೆಯನ್ನು ಪಡೆಯಬಹುದು ಮತ್ತು ಹೇಗೆ ಸೋಂಕನ್ನು ತಡೆಗಟ್ಟಬಹುದು ಎಂಬ ವಿಷಯವು ಮೊದಲು ಮನವರಿಕೆಯಾಗಬೇಕು.

ನಾವು ಆಸ್ಪತ್ರೆಯಲ್ಲಿದ್ದಾಗ ಗುಣಮುಖರಾಗಲು ಕೆಲವು ಪರಿಕರಗಳನ್ನು ಉಪಯೋಗಿಸುತ್ತಾರೆ. ನಾವು ಆರೋಗ್ಯದಿಂದಿರಲು ಕೆಲವು ರಕ್ಷಣಾ ಸಾಧನಗಳು ಮತ್ತು ನಂಜು ನಿರೋಧಕ ತಂತ್ರಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ.

ವೈಯಕ್ತಿಕ ರಕ್ಷಣಾ ಸಾಧನಗಳು

ಇವು ಅಪಾಯಗಳಿಗೆ, ಒಡ್ಡಿಕೊಳ್ಳುವುದನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು ಬಳಸುವ ಸಾಧನ. ಕೆಲವು ಜೈವಿಕ ಅಪಾಯಗಳು, ರಾಸಾಯನಿಕ ಅಪಾಯಗಳು, ವಿಕಿರಣ ಶಾಸ್ತ್ರದ ಅಪಾಯಗಳು ಆರೋಗ್ಯ ಕಾರ್ಯಕರ್ತರ ಸುರಕ್ಷತೆಯ ದೃಷ್ಟಿಯಿಂದ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಅಳವಡಿಸಿಕೊಳ್ಳಬೇಕು.

ನಂಜು ನರೋಧಕ ತಂತ್ರ (Aseptic Technique)

ನಂಜು ನಿರೋಧಕ ತಂತ್ರವೆಂದರೆ ರೋಗ ಉಂಟು ಮಾಡುವ ಸೂಕ್ಷ್ಮಾಣು ಜೀವಿಗಳಿಂದ ಮುಕ್ತವಾಗಿರುವ ಸ್ಥಿತಿಯಾಗಿದೆ. ಈ ತಂತ್ರವನ್ನು ಹೆಚ್ಚಾಗಿ ನಾವು ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸಮಯದಲ್ಲಿ ಉಪಯೋಗಿಸಬಹುದು. ಇದನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ ಸೋಂಕನ್ನು ತಡೆಗಟ್ಟಬಹುದು.

19ನೇ ಶತಮಾನದಲ್ಲಿ ಪ್ರಾರಂಭಿಸಿದ ಈ ಒಂದು ಬದಲಾವಣೆಯು ಶಸ್ತ್ರಚಿಕಿತ್ಸೆಯ ಉಪಕರಣಗಳ ಕ್ರಿಮಿನಾಶಕಗಳು ಕಾರ್ಯವಿಧಾನದ ಸಮಯದಲ್ಲಿ ಉಪಯೋಗಿಸುವ ಕೈ ಗವಸುಗಳು, ನಿಲುವಂಗಿಗಳು, ಇನ್ನು ಅನೇಕ ರೀತಿಯ ಅನುಷ್ಠಾನಗಳನ್ನು ಪರಿಚಯಿಸಿತು.

ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಸೂಕ್ಷ್ಮ ಜೀವಿಗಳನ್ನು ತೊಡೆದುಹಾಕಲು ಹಲವಾರು ಕಾರ್ಯವಿಧಾನ ಅನುಸರಿಸುತ್ತಾರೆ. ಇದನ್ನು ಶಸ್ತ್ರಚಿಕಿತ್ಸೆ ತಜ್ಞರು, ದಾದಿಯರು, ಅರೆವೈದ್ಯಕೀಯ ಸಿಬಂದಿು ಅಭ್ಯಾಸ ಮಾಡುತ್ತಾರೆ.

ನಂಜು ನಿರೋಧಕ ತಂತ್ರಗಳನ್ನು ಅತೀ ಕಟ್ಟುನಿಟ್ಟಾಗಿ ಹಾಗೂ ಪರಿಣಾಮಕಾರಿಯಾಗಿ ಅನುಸರಿಸುವ ಸ್ಥಳಗಳು: -ಶಸ್ತ್ರಚಿಕಿತ್ಸಾ ಕೊಠಡಿ ಮತ್ತು -ತೀವ್ರ ನಿಗಾ ಘಟಕಗಳು

ಶಸ್ತ್ರಚಿಕಿತ್ಸಾ ಕೊಠಡಿ

ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ರೋಗಿಗಳನ್ನು ಆಸ್ಪತ್ರೆಯ ಸೂಕ್ಷ್ಮಾಣು ಜೀವಿಗಳಿಂದ ಮುಕ್ತವಾಗಿಡುವುದು ಮುಖ್ಯ ಗುರಿಯಾಗಿದೆ. ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ತಂಡದ ಎಲ್ಲ ಸದಸ್ಯರು ಉತ್ತಮವಾದ ನಂಜುನೀರೋಧಕ ತಂತ್ರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಾರೆ. ಅದರಲ್ಲಿ ದಾದಿಯರು, ಶಸ್ತ್ರಚಿಕಿತ್ಸಾ ತಂತ್ರಜ್ಞರು, ಅರವಳಿಕೆ ತಜ್ಞರು, ಹಲವು ತಾಂತ್ರಿಕ ಸಲಹೆಗಾರರು, ಅರೆವೈದ್ಯಕೀಯ ಸಿಬಂದಿ ಹಾಗೂ ಸ್ವಚ್ಚತಾ ಸಿಬಂದಿಯನ್ನು ಗುರುತಿಸಬಹುದು.

ಶಸ್ತ್ರಚಿಕಿತ್ಸಾ ಕೊಠಡಿಗೆ ಹೋಗುವ ಮುನ್ನ ನಾವು ನಮ್ಮ (ದಿನನಿತ್ಯ ಬಳಸುವ) ಉಡುಪು, ಪಾದರಕ್ಷೆಗಳನ್ನು ತೆಗೆದು, ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಇರುವ ಉಡುಪು ಹಾಗೂ ಪಾದರಕ್ಷೆಗಳನ್ನು ಧರಿಸಬೇಕು. ಇದು ಮಾತ್ರವಲ್ಲದೇ ತಲೆ ಕೂದಲುಗಳನ್ನು ಕಟ್ಟಿ ಟೋಪಿಯನ್ನು ಧರಿಸಬೇಕು.

ಶಸ್ತ್ರಚಿಕಿತ್ಸೆಯ ದಿನ ಶಸ್ತ್ರಚಿಕಿತ್ಸಾ ಕೊಠಡಿಗೆ ಹೋಗುವ ರೋಗಿಗಳು ಸ್ನಾನ ಮಾಡಬೇಕು. ಕೆಲವೊಮ್ಮೆ ಶಸ್ತ್ರಚಿಕಿತ್ಸಾ ತಂತ್ರಜ್ಞರು ನಂಜುನಿರೋಧಕ ದ್ರಾವಣವನ್ನು ಉಪಯೋಗಿಸಿ ಸ್ನಾನ ಮಾಡಲು ಶಿಫಾರಸು ಮಾಡುತ್ತಾರೆ. ಜತೆಗೆ ಕೊಠಡಿಗೆ ಹೋಗುವ ಮುನ್ನ ರೋಗಿಗಳು ಆಸ್ಪತ್ರೆಯ ಗೌನ್‌ ಧರಿಸಬೇಕು. ಇದು ಸಡಿಲವಾಗಿ ಆರಾಮದಾಯಕವಾಗಿ ಮತ್ತು ಸುಲಭವಾಗಿ ತೆಗೆದುಹಾಕಬಹುದು. ಯಾವುದೇ ಶೃಂಗಾರ ಸಾಧನಗಳ ಬಳಕೆ ಹಾಗೂ ಉಗುರುಗಳಿಗೆ ಬಣ್ಣವನ್ನು ಹಚ್ಚುವುದು ನಿಷಿದ್ಧ.

ರೋಗಿಗಳ ಅಡ್ಡ ಸೋಂಕನ್ನು (Cross Infection) ತಡೆಗಟ್ಟಲು ಕೆಲವು ಉಪಕರಣಗಳನ್ನು ಅಟೊಕ್ಲೇವಿಂಗ್‌ ಮೂಲಕ ಅಥವಾ ಮರುಬಳಕೆ ಆಗುವ ಉಪಕರಣಗಳು ಕ್ರಿಮಿನಾಶಕವನ್ನು ಬಳಸಿ ಸೋಂಕನ್ನು ತಡೆಗಟ್ಟಬಹುದು.

ಕೆಲವು ಮೂಲಭೂತ ನಂಜು ನಿರೋಧಕ ಕಾರ್ಯವಿಧಾನಗಳು

ಕೈ ತೊಳೆಯುವುದು

ರಕ್ಷಣಾತ್ಮಕ ಕೈಗವಸುಗಳು

ಮುಖ ಗವಸುಗಳು

ನಿಲುವಂಗಿಯನ್ನು ಧರಿಸುವುದು

ಉಪಕರಣಗಳಿಗೆ ಕ್ರಿಮಿನಾಶಕವನ್ನು ಉಪಯೋಗಿಸುವುದು

ಬಳಸಿದ ಉಡುಗೆಗಳ (linen) ಸೂಕ್ತ ವಿಲೇವಾರಿ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ಕೈ ತೊಳೆಯುವುದು

ಈ ವಿಧಾನವನ್ನು ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಶಸ್ತ್ರಚಿಕಿತ್ಸಾ ತಂತ್ರಜ್ಞರು 5ರಿಂದ 10 ನಿಮಿಷಗಳವರೆಗೆ ಕೈ ನೈರ್ಮಲ್ಯವನ್ನು ಮಾಡಬೇಕು. ಇದರಿಂದ 80 ಪ್ರತಿಶತ ಸೋಂಕನ್ನು ತಡೆಗಟ್ಟಬಹುದು.

ರಕ್ಷಣಾತ್ಮಕ ಕೈಗವಸುಗಳು ಮತ್ತು ನಿಲುವಂಗಿಗಳು

ಕೈ ನೈರ್ಮಲ್ಯವಾದ ಅನಂತರ ಎಲ್ಲಿಯೂ ಕೂಡ ಕೈಯನ್ನು ಸ್ಪರ್ಶಿಸದೇ ಶಸ್ತ್ರಚಿಕಿತ್ಸಾ ಆರಂಭಿಸುವ ಮೊದಲು ನಿಲುವಂಗಿಯನ್ನು ಧರಿಸಬೇಕು ಮತ್ತು ಎರಡು ಜತೆ ಕೈಗವಸುಗಳನ್ನು ಧರಿಸಬೇಕು.

ಮುಖಗವಸುಗಳು

ಇದನ್ನು ಧರಿಸುವುದರಿಂದ ನಾವು ರಕ್ತ ಅಥವಾ ಯಾವುದೇ ದ್ರವಗಳು ಮುಖಕ್ಕೆ ಸಿಡಿಯುವುದನ್ನು ತಪ್ಪಿಸಬಹುದು.

ಕ್ರಿಮಿನಾಶಕ

ಕೆಲವು ಉಪಕರಣಗಳನ್ನು ಕ್ರಿಮಿನಾಶಕ ದ್ರವದಲ್ಲಿ 5 ನಿಮಿಷಗಳವರೆಗೆ ಮುಳುಗಿಸಿ ಇಟ್ಟು ಮತ್ತೆ ಶುಚಿಯಾಗಿಸುತ್ತಾರೆ. ಇದರಿಂದ ನಾವು ಅಡ್ಡ ಸೋಂಕನ್ನು ತಡೆಗಟ್ಟಬಹುದು.

-ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಉಪಯೋಗಿಸಿದ ಧಿರಿಸುಗಳು ಉಪಯೋಗಿಸಿದ ಉಡುಗೆ ಅಥವಾ ಲಿನನ್‌ಗಳನ್ನು ಹೈಪೋಕ್ಲೋರೈಡ್‌ ದ್ರಾವಣದಲ್ಲಿ 10 ನಿಮಿಷ ಮುಳುಗಿಸಿ ಮತ್ತೆ ನೀರಿನಲ್ಲಿ ತೊಳೆದು ಹಾಕಬೇಕು. ಮತ್ತೆ ಇದನ್ನು ಲಾಂಡ್ರಿಗೆ ಕಳಿಸಬೇಕು. ಏಕೆಂದರೆ ಕೆಲವು ಲಿನೆನ್‌ಗಳಲ್ಲಿ ರಕ್ತದ ಕಲೆಗಳಿರುತ್ತದೆ. ಹೈಪೋಕ್ಲೋರೈಡ್‌ ದ್ರಾವಣದ ಬಳಕೆಯಿಂದ ಸೂಕ್ಷ್ಮಾಣು ಜೀವಿಗಳನ್ನು ತಡೆಗಟ್ಟಬಹುದು.

ಇನ್ನು ಶಸ್ತ್ರಚಿಕಿತ್ಸೆಯ ಅನಂತರ ಕೆಲವು ರೋಗಿಗಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸುತ್ತಾರೆ. ಇಲ್ಲಿ ರೋಗಿಯ ಆರೈಕೆದಾರರು ಯಾವಾಗಲೂ ಬರುವಂತಿಲ್ಲ. ರೋಗಿಯ ಆರೈಕೆದಾರರಿಗೆ ನಿಗದಿತವಾದ ಸಮಯವನ್ನು ಸೂಚಿಸುತ್ತಾರೆ. ತುಂಬಾ ಜನರು ಹೋಗಿ ರೋಗಿಯನ್ನು ನೋಡುವಂತಿಲ್ಲ. ರೋಗಿಯ ಆರೈಕೆದಾರರಿಗೆ ಯಾವುದೇ ತರದ ಸೋಂಕುಗಳಿದ್ದರೆ ಹೋಗಬಾರದು. ಹೋದರೆ, ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡಬಹುದು. ಸಾಮಾನ್ಯ ಒಳ ರೋಗಿ ವಿಭಾಗಕ್ಕೆ (ಗಚrಛ) ವರ್ಗಾಯಿಸಿದ ಅನಂತರ ರೋಗಿ ಮತ್ತು ರೋಗಿಯ ಆರೈಕೆದಾರರು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.

ಇದರಿಂದ ನಾವು ಸಾಂಕ್ರಾಮಿಕ ರೋಗ ಹರಡುವಿಕೆ ಅಥವಾ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದು ಮತ್ತು ದೈನಂದಿನ ಆರೋಗ್ಯವನ್ನು ಉತ್ತೇಜಿಸುವುದು ಅಗತ್ಯವಾಗಿದೆ. ಉತ್ತಮ ನೈರ್ಮಲ್ಯ ಅಭ್ಯಾಸಗಳಿಂದ ದೇಹವು ಸೋಂಕುಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಹೋರಾಡಲು ಸಹಾಯ ಮಾಡುತ್ತದೆ.

ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣವನ್ನುಆರೋಗ್ಯ ರಕ್ಷಣೆಯಿಂದ ಸಾರ್ವಜನಿಕ ಆರೋಗ್ಯದಲ್ಲಿ ಒಂದು ಘಟಕವಾಗಿ ವಿಸ್ತರಿಸಲಾಗಿದೆ. ಇದನ್ನು ಸೋಂಕು ರಕ್ಷಣೆ ಎಂದು ಕರೆಯುತ್ತಾರೆ. ಸಮಾಜದಲ್ಲಿ ಸೋಂಕು ತಡೆಗಟ್ಟುವ ಕುರಿತಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸೂಕ್ತ ಮಾಹಿತಿ ನೀಡತಕ್ಕದ್ದು.

ಈ ಎಲ್ಲ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ದಿಷ್ಟ ಆರೋಗ್ಯ ಹಾಗೂ ಆರೈಕೆ ವಿತರಣೆ ವ್ಯವಸ್ಥೆಯ ಚೌಕಟ್ಟಿನಲ್ಲಿ ಸ್ವಸ್ಥ ಸಮಾಜ ನಿರ್ಮಾಣದ ದೃಢ ಸಂಕಲ್ಪವನ್ನು ಮಾಡಬೇಕು.

ಡಾ| ಮುರಳೀಧರ ವರ್ಮಾ

ಪ್ರೊಫೆಸರ್‌ ಮತ್ತು ವಿಭಾಗ ಮುಖ್ಯಸ್ಥರು

ಸೋಂಕು ರೋಗಗಳ ವಿಭಾಗ ಅಧ್ಯಕ್ಷರು,

ಆಸ್ಪತ್ರೆ ಸೋಂಕು ನಿಯಂತ್ರಣ ಸಮಿತಿ ಅಧ್ಯಕ್ಷರು,

ಆ್ಯಂಟಿಮೈಕ್ರೋಬಿಯಲ್‌ ಸ್ಟೀವರ್ಡ್‌ಶಿಪ್‌ ಪ್ರೋಗ್ರಾಮ್‌ ಕೆಎಂಸಿ, ಮಾಹೆ, ಮಣಿಪಾಲ

-ಡಾ| ಪಿ. ಶುಭಾ ಸೂರಿಯ

ನರ್ಸಿಂಗ್‌ ಸೇವೆಗಳ ಮುಖ್ಯಸ್ಥರು

ಕೆಎಂಸಿ, ಮಾಹೆ, ಮಣಿಪಾಲ

-ಸಂಧ್ಯಾ

ಸೋಂಕು ನಿಯಂತ್ರಣ ನರ್ಸ್‌ ಕೆಎಂಸಿ, ಮಾಹೆ,

ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಹಾಸ್ಪಿಟಲ್‌ ಇನ್‌ಫೆಕ್ಷನ್‌ ಕಂಟ್ರೋಲ್‌ ಕಮಿಟಿ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

Gandhi Jayanti: ಆ ದಿನಗಳು ಮತ್ತೇ ಮರಳಲಾರವು…ಮತ್ತೇ ಬಾ ಬಾಪು!

Gandhi Jayanti: ಆ ದಿನಗಳು ಮತ್ತೇ ಮರಳಲಾರವು…ಮತ್ತೇ ಬಾ ಬಾಪು!

8-train

Special Train: ದೀಪಾವಳಿ- ಕೊಂಕಣ ರೈಲ್ವೇಯಿಂದ ಬೆಂಗಳೂರು- ಕಾರವಾರ ವಿಶೇಷ ರೈಲು

ByPoll: No worries about Channapatnam constituency; committed to NDA decision: Nikhil Kumaraswamy

ByPoll: ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಹಪಾಹಪಿ ಇಲ್ಲ; ಎನ್‌ಡಿಎ ನಿರ್ಧಾರಕ್ಕೆ ಬದ್ಧ: ನಿಖಿಲ್

Success: ಯಶಸ್ಸಿನ ಮೆಟ್ಟಿಲೇರಲು ಮಾರ್ಗದರ್ಶಕರು ಬೇಕು!

Success: ಯಶಸ್ಸಿನ ಮೆಟ್ಟಿಲೇರಲು ಮಾರ್ಗದರ್ಶಕರು ಬೇಕು!

Murphy movie review

Murphy Review: ಅಲೆಗಳ ಅಬ್ಬರದಲ್ಲಿ ಪ್ರೇಮ ನಿನಾದ

INDvsNZ: Sarfaraz’s impressive century helped India in trouble

INDvsNZ: ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ನೆರವಾದ ಸರ್ಫರಾಜ್‌ ಆಕರ್ಷಕ ಶತಕ

Chikkamagaluru: ಬೆಳ್ಳಂಬೆಳಗ್ಗೆ ಕಿಡಿಗೇಡಿಗಳಿಂದ ವಾಮಾಚಾರ… ಬೆಚ್ಚಿಬಿದ್ದ ಮಲೆನಾಡು

Mudigere: ರಾತ್ರಿ ಬೆಳಗಾಗುವುದರೊಳಗೆ ಕಿಡಿಗೇಡಿಗಳಿಂದ ವಾಮಾಚಾರ, ಬೆಚ್ಚಿಬಿದ್ದ ಮಲೆನಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-anasthesia

Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್‌ 16

7-health

Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Mantrika Movie Review

Mantrika Movie Review: ಮೂಢನಂಬಿಕೆಯ ಸುತ್ತ ಮಾಂತ್ರಿಕ

Gandhi Jayanti: ಆ ದಿನಗಳು ಮತ್ತೇ ಮರಳಲಾರವು…ಮತ್ತೇ ಬಾ ಬಾಪು!

Gandhi Jayanti: ಆ ದಿನಗಳು ಮತ್ತೇ ಮರಳಲಾರವು…ಮತ್ತೇ ಬಾ ಬಾಪು!

8-train

Special Train: ದೀಪಾವಳಿ- ಕೊಂಕಣ ರೈಲ್ವೇಯಿಂದ ಬೆಂಗಳೂರು- ಕಾರವಾರ ವಿಶೇಷ ರೈಲು

7-bng

Bengaluru: ಸೊಸೈಟಿ ಮಹಾಮಂಡಲದಲ್ಲಿ 19.3 ಕೋಟಿ ಅಕ್ರಮ

ByPoll: No worries about Channapatnam constituency; committed to NDA decision: Nikhil Kumaraswamy

ByPoll: ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಹಪಾಹಪಿ ಇಲ್ಲ; ಎನ್‌ಡಿಎ ನಿರ್ಧಾರಕ್ಕೆ ಬದ್ಧ: ನಿಖಿಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.