ತುರ್ತು ವೈದ್ಯಕೀಯ ಆರೈಕೆಯ ಜಾಗತೀಕರಣದ ಮಹತ್ವ
Team Udayavani, Apr 2, 2017, 3:45 AM IST
ಎಮರ್ಜೆನ್ಸಿ ಮೆಡಿಸಿನ್ (EM)) ಅಥವಾ ತುರ್ತು ವೈದ್ಯಕೀಯ ಆರೈಕೆ ಎನ್ನುವುದು ಎರಡನೆಯ ಹಂತದ ರೋಗಸ್ಥಿತಿಯನ್ನು ತಡೆಗಟ್ಟಲು ಒದಗಿಸುವ ಒಂದು ವೈದ್ಯಕೀಯ ಆರೈಕೆ ಮಾತ್ರವಲ್ಲ ಪ್ರಾಥಮಿಕ ತಡೆಗಟ್ಟುವಿಕೆಯ ಒಂದು ಸಾಧನವೂ ಹೌದು. ತುರ್ತು ಔಷಧಿ ಎನ್ನುವುದು, ತುರ್ತು ಆರೈಕೆಯ ಲಭ್ಯತೆಯೂ ಸೇರಿದಂತೆ, ಸಮುದಾಯದಲ್ಲಿ ಮತ್ತು ರೋಗಿಯನ್ನು ಸಾಗಿಸುವಾಗ ತುರ್ತು ಔಷಧಿಯ ಲಭ್ಯತೆ; ಮತ್ತು ರೋಗಿಯನ್ನು ಸೇರಿಸುವ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿನ ಆರೈಕೆಯ ಲಭ್ಯತೆಯನ್ನು ಒಳಗೊಂಡಿರುವ ಒಂದು ಸಮಾನಾಂತರ ಮತ್ತು ಸಮಗ್ರ ವ್ಯವಸ್ಥೆ. ಸಾರ್ವಜನಿಕ ಆರೋಗ್ಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಮರ್ಜೆನ್ಸಿ ಔಷಧಿ ಅನೇಕ ಸಾಧನ ಮತ್ತು ಸಾಧ್ಯತೆಗಳನ್ನು ಒದಗಿಸುತ್ತದೆ. ಈ ಸಾಧನಗಳು ಅಂದರೆ ಪ್ರಾಥಮಿಕ ರೋಗ ತಡೆಗಟ್ಟುವಿಕೆ; ಮಾದಕ ಪದಾರ್ಥಗಳ ದುರ್ಬಳಕೆ ಅಥವಾ ಸೇವನೆಯ ಪ್ರಕರಣಗಳಲ್ಲಿ ಮತ್ತು ವ್ಯಕ್ತಿಗಳ ನಡುವಣ ಪರಸ್ಪರ ಹಾನಿಯಂತಹ ಪ್ರಕರಣಗಳನ್ನು ನಿಭಾಯಿಸುವುದು; ಸುರಕ್ಷತಾ ಕ್ರಮಗಳ ಬಗ್ಗೆ ಅರಿವನ್ನು ಮೂಡಿಸುವುದು, ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಬಗ್ಗೆ ಜಾಗೃತಿಯನ್ನು ಮೂಡಿಸುವುದು; ಗಂಭೀರ ಪರಿಸ್ಥಿತಿಗಳನ್ನು ನಿಭಾಯಿಸುವ ದೃಷ್ಟಿಂದ ಕ್ಲಿನಿಕಲ್ ಸಂಶೋಧನಾ ಪ್ರಯೋಗಗಳಿಗಾಗಿ ರೋಗಿಗಳನ್ನು ದಾಖಲಿಸಿಕೊಳ್ಳುವುದು; ಆರೋಗ್ಯ ಆರೈಕೆ ನೀಡುವವರಿಗಾಗಿ ತಿಳಿವಳಿಕೆ ಮತು ಕ್ಲಿನಿಕಲ್ ತರಬೇತಿಯನ್ನು ಒದಗಿಸುವುದು; ನೈಸರ್ಗಿಕ ಮತ್ತು ಮಾನವ ನಿರ್ಮಿತ ಕಾರಣದಿಂದ ಉಂಟಾಗುವ ಸ್ಥಳೀಯ ಮತ್ತು ಪ್ರಾದೇಶಿಕ ವಿಪತ್ತು ಸಂದರ್ಭಗಳ ನಿರ್ವಹಣೆ.
ಜಾಗತಿಕ ಕಾರ್ಯವಿಧಾನವಾಗಿ
ತುರ್ತು ವೈದ್ಯಕೀಯ
ಆರೈಕೆಯ ವಿಕಸನ
ತುರ್ತು ವೈದ್ಯಕೀಯ ಆರೈಕೆ ಅಥವಾ ಎಮರ್ಜೆನ್ಸಿ ಮೆಡಿಸಿನ್ ಕೇರ್ ಅನ್ನುವುದು ವೈದ್ಯಕೀಯ ಸೇವೆಯಷ್ಟೇ ಹಳೆಯ ಸಂಗತಿ. ಆದರೆ ತುರ್ತು ಆರೈಕೆ ವಿಭಾಗ ಮತ್ತು ತುರ್ತು ಆರೈಕೆಯನ್ನು ಒದಗಿಸುವ ಬಗೆಗಿನ ಸಮಗ್ರ ವ್ಯವಸ್ಥೆಗಳ ಅಭಿವೃದ್ಧಿಯ ವಿಚಾರ ಮಾತ್ರ ಇತ್ತೀಚಿನದು. 1960ಕ್ಕೆ ಮೊದಲು, ಜಗತ್ತಿನಾದ್ಯಂತ ತುರ್ತು ವೈದ್ಯಕೀಯ ಆರೈಕೆ ಅನ್ನುವುದು ವೈದ್ಯಕೀಯ ಆರೈಕೆಯನ್ನು ಒದಗಿಸುವ ಸರಪಣಿಯ ದುರ್ಬಲ ಕೊಂಡಿಯಾಗಿತ್ತು. ಹಿಂದೆ ತುರ್ತು ಆರೈಕೆಯನ್ನು ಒದಗಿಸುವ ವೈದ್ಯರಿಗೆ ಮತ್ತು ದಾದಿಯರಿಗೆ ಯಾವುದೇ ರೀತಿಯ ನಿರ್ದಿಷ್ಟ ತರಬೇತಿ ಯೋಜನೆಗಳು ಇದ್ದಿರಲಿಲ್ಲ. ವಿಶೇಷ ಗುಣಮಟ್ಟದ ತುರ್ತು ಆರೈಕೆಯನ್ನು ಒದಗಿಸುವುದಕ್ಕಾಗಿ ಮೀಸಲಾದ, ವೈಜಾnನಿಕವಾಗಿ ಹಾಗೂ ಕಲಾತ್ಮಕ ಗುಣಮಟ್ಟದ ಸೇವಾ ಸಂಸ್ಥೆಗಳು ಇರಲಿಲ್ಲ ಮತ್ತು ವೈದ್ಯರ ವಿಶೇಷ ತಜ್ಞತೆ ಅಥವಾ ತರಬೇತಿಯ ಮಟ್ಟವನ್ನು ಗಮನಿಸದೆಯೇ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಸಿಬಂದಿಗಳನ್ನು ನಿಯೋಜಿಸುವ ಜವಾಬ್ದಾರಿಯನ್ನು ವೈದ್ಯರಿಗೆ ವಹಿಸಲಾಗುತ್ತಿತ್ತು.
1960ರ ಅವಧಿಯಲ್ಲಿ, ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿರುವ ಎಲ್ಲಾ ರೋಗಿಗಳಿಗೂ ಸೂಕ್ತ ಆರೈಕೆಯ ಲಭ್ಯತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ, ಪಾರಂಪರಿಕ ತರಬೇತಿಯನ್ನು ಪಡೆದಿದ್ದ ಆಂತರಿಕ ವೈದ್ಯಕೀಯ ತಜ್ಞರು, ಶಸ್ತ್ರಚಿಕಿತ್ಸಕರು ಮತ್ತು ಕುಟುಂಬ ವೈದ್ಯರುಗಳ ಮೂಲಕ, ತುರ್ತು ಔಷಧಿ ಆರೈಕೆಯ ಒದಗಿಸುವಿಕೆ, ಅಭಿವೃದ್ಧಿ ಮತ್ತು ಸಂಘಟನೆಯ ನಿಟ್ಟಿನಲ್ಲಿ ಪ್ರಯತ್ನಗಳು ಮತ್ತು ಆಂದೋಲನಗಳು ನಡೆದವು. ತಂತ್ರಜಾnನ, ತಪಾಸಣೆ ಮತ್ತು ವೈದ್ಯಕೀಯ ತುರ್ತು ಪ್ರಕರಣಗಳನ್ನು ಗುರುತಿಸುವ ಮತ್ತು ಚಿಕಿತ್ಸೆ ನೀಡುವ ಉತ್ತಮ ಅವಕಾಶಗಳು ವೇಗವನ್ನು ಪಡೆಯುತ್ತಿದ್ದ ಕಾಲಮಾನದಲ್ಲಿ ಇವು ನಡೆದವು. ಇದೇ ಸಮಯದಲ್ಲಿ, ಹಲವಾರು ದೇಶಗಳಲ್ಲಿ ತುರ್ತು ಔಷಧಿ ಕ್ಷೇತ್ರದಲ್ಲಿ ಈ ಹಿಂದೆ ನುರಿತ ತಜ್ಞರಾಗಿದ್ದವರು, ಈ ಕ್ಷೇತ್ರದಲ್ಲಿ ಆಸಕ್ತಿ ಇದ್ದ ವೈದ್ಯರುಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಆರಂಭಿಸಿದರು ಮತ್ತು ಅಭಿವೃದ್ಧಿಪಡಿಸಿದರು.
ಐವತ್ತು ವರ್ಷಗಳಿಂದ ಈಚೆಗೆ, ತುರ್ತು ವೈದ್ಯಕೀಯ ಆರೈಕೆ ಎನ್ನುವುದು ರೋಗಿಯ ವಯಸ್ಸು ಮತ್ತು ಲಿಂಗವನ್ನು ಪರಿಗಣಿಸದೆಯೇ, ಎಲ್ಲಾ ರೀತಿಯ ಗಂಭೀರ ಅಸ್ವಸ್ಥತೆ ಅಥವಾ ಹಾನಿಗೊಳಗಾಗಿರುವ ರೋಗಿಗಳನ್ನು ನಿಭಾಯಿಸಲು, ಬೇಕಾಗುವ ಗ್ರಹಿಕೆ, ಆಡಳಿತ ಮತ್ತು ತಂತ್ರಜಾnನ ಕೌಶಲಗಳ ಒಂದು ಶಿಷ್ಟ ಸರಣಿಯಾಗಿ, ಒಂದು ಸಂಯೋಜಿತ ಭಾಗವಾಗಿ ವಿಕಸನವನ್ನು ಹೊಂದಿದೆ. ತುರ್ತು ವೈದ್ಯಕೀಯ ಆರೈಕೆಯೆಡೆಗಿನ ಈ ಆಧುನಿಕ ಹಾದಿಯು ಸಮಾಂತರ ಸಂಯೋಜಿತ ವಿಧಾನವಾಗಿದ್ದು, ಇಲ್ಲಿ ತಿಳಿವಳಿಕೆ ಮತ್ತು ಕೌಶಲಗಳು ಬಹು-ಸೌಲಭ್ಯಗಳ ಜೊತೆಗೆ ಪಾರಂಪರಿಕ ತಳಹದಿಯಲ್ಲಿ ಜತೆಯಾಗುತ್ತವೆ. ತುರ್ತು ಸ್ಥಿತಿಯಲ್ಲಿರುವ ರೋಗಿಗಳ ಸೂಕ್ತ ಮತ್ತು ಪರಿಣಾಮಕಾರಿ ನಿರ್ವಹಣೆಯಲ್ಲಿ ಹೊಸ ಅರಿವು ಮತ್ತು ಕೌಶಲಗಳು ಬಹಳ ಆವಶ್ಯಕ. ಈ ನಿಟ್ಟಿನಲ್ಲಿ 46 ರಾಷ್ಟ್ರಗಳು ತುರ್ತು ವೈದ್ಯಕೀಯ ಆರೈಕೆಯನ್ನು ವಿಶೇಷ ವೈದ್ಯಕೀಯ ಚಿಕಿತ್ಸಾ ಕ್ರಮ (ಸ್ಪೆಶಾಲಿಟಿ) ಎಂಬುದಾಗಿ ಅಂಗೀಕರಿಸಿವೆ ಅಂತಿಮವಾಗಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (Mಇಐ), ಭಾರತೀಯ ಆರೋಗ್ಯ ಆರೈಕೆ ವ್ಯವಸ್ಥೆಯಲ್ಲಿ ತುರ್ತು ವೈದ್ಯಕೀಯ ಆರೈಕೆಯ ಶಿಷ್ಟತೆಗೆ ಅನುಮೋದನೆಯನ್ನು ನೀಡಿರುತ್ತದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ 2009 ಜುಲೈ 21ರ ತಿದ್ದುಪಡಿ ಅಧಿಸೂಚನೆಯಲ್ಲಿ ತುರ್ತು ವೈದ್ಯಕೀಯ ಆರೈಕೆಯನ್ನು ವಿಶೇಷ ಚಿಕಿತ್ಸಾ ಕ್ರಮ (ಸ್ಪೆಶಾಲಿಟಿ) ಎಂಬುದಾಗಿ ಸೇರಿಸಿರುವುದನ್ನು ನಾವು ಕಾಣಬಹುದು.
ತುರ್ತು ವೈದ್ಯಕೀಯ ಆರೈಕೆಯ
ವಿವಿಧ ಹಂತಗಳು ಮತ್ತು
ಆರೈಕೆಯ ನೀಡುವ ವಿಧಾನ:
ಸೂಕ್ಷ್ಮ ವೈದ್ಯಕೀಯ ನಿರ್ಧಾರಣೆ ಮತ್ತು ಸಮಯ-ಅಮೂಲ್ಯವೆನಿಸುವ ಪರಿಸ್ಥಿತಿಯಲ್ಲಿ (ಅಂದರೆ ಇಂತಿಷ್ಟು ಸಮಯದೊಳಗೆ ಚಿಕಿತ್ಸೆ ಸಿಕ್ಕರೆ ರೋಗಿಯನ್ನು ಮರಣ ಅಥವಾ ರೋಗಸ್ಥಿತಿಯಿಂದ ಪಾರುಮಾಡಬಹುದು ಎಂಬಂತಹ ಮತ್ತು ಕ್ಷಿಪ್ರವಾಗಿ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ) ಅನಾವಶ್ಯಕ ಮರಣ ಮತ್ತು ವೈಕಲ್ಯವನ್ನು ತಪ್ಪಿಸುವ ಉದ್ದೇಶದ ಕಾರ್ಯಾಚರಣೆಯು, ತುರ್ತು ವೈದ್ಯಕೀಯ ಆರೈಕೆಯ ಬಹುಮುಖ್ಯ ಕಲ್ಪನೆ ಮತ್ತು ಕಾರ್ಯತಂತ್ರವಾಗಿರುತ್ತದೆ. ತುರ್ತು ವೈದ್ಯಕೀಯ ಆರೈಕೆಯ ವಿವಿಧ ಹಂತಗಳು ಅಂದರೆ: ಆರೈಕೆಯ ಲಭ್ಯತೆ, ಸಮುದಾಯದಲ್ಲಿನ ಆರೈಕೆ, ಸಾಗಾಟ ಸಮಯದ ಆರೈಕೆ ಮತ್ತು ತಲುಪಿದ ಬಳಿಕ ಆಸ್ಪತ್ರೆಯಲ್ಲಿ ಪಡೆಯುವ ಆರೈಕೆ.
ವೈದ್ಯಕೀಯ ಆರೈಕೆಯ ಲಭ್ಯತೆ
ವೈದ್ಯಕೀಯ ತುರ್ತು ಸ್ಥಿತಿ ಅಂದರೆ ಇಲ್ಲಿ ಸಮಯ ಬಹಳ ಅಮೂಲ್ಯ, ಯಾಕೆಂದರೆ ರೋಗಿಯ ಸ್ಥಿತಿಯ ಗುರುತಿಸುವಿಕೆ ಮತ್ತು ಚಿಕಿತ್ಸೆಯಲ್ಲಿ ಕಾಲ ವಿಳಂಬವಾದರೆ, ರೋಗಸ್ಥಿತಿ, ಮರಣ ಅಥವಾ ವೈಕಲ್ಯದ ಸಂಭವನೀಯತೆ ಹೆಚ್ಚಾಗುತ್ತದೆ. ಹಾಗಾಗಿ ತುರ್ತು ವೈದ್ಯಕೀಯ ಆರೈಕೆಯು ಬಹಳ ಸುಲಭವಾಗಿ ಸಿಗುವಂತಾಗಬೇಕು. ಯಾವಾಗ ಮತ್ತು ಯಾಕೆ ತುರ್ತು ವೈದ್ಯಕೀಯ ಅರೈಕೆಯನ್ನು ಪಡೆಯಬೇಕು ಎಂಬ ಬಗ್ಗೆ ಸಾರ್ವಜನಿಕರಿಗೆ ಅರಿವನ್ನು ನೀಡುವ ಮೂಲಕ ತುರ್ತು ಆರೈಕೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಬಹುದು
ಜನ ಸಮುದಾಯಕ್ಕೆ
ತುರ್ತು ವೈದ್ಯಕೀಯ ಆರೈಕೆ
ಜನಸಾಮಾನ್ಯರಿಗೆ, ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ, ದಾದಿಯರಿಗೆ, ಪ್ರಾಥಮಿಕ ಆರೈಕೆ ನೀಡುವ ವೈದ್ಯರಿಗೆ ಮತ್ತು ಇತರ ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ತರಬೇತಿಯನ್ನು ನೀಡುವ ಮೂಲಕ ಜನ ಸಮುದಾಯಕ್ಕೆ ಪರಿಣಾಮಕಾರಿ ತುರ್ತು ವೈದ್ಯಕೀಯ ಆರೈಕೆಯನ್ನು ತಲುಪಿಸಬಹುದು. ಪ್ರಥಮ ಚಿಕಿತ್ಸೆ, ಹೃದಯ ಶ್ವಾಸಕೋಶಗಳನ್ನು ಪುನಶ್ಚೇತನಗೊಳಿಸುವುದು, ಶ್ವಾಸನಾಳದಲ್ಲಿ ಸಿಕ್ಕಿಹಾಕಿಕೊಂಡಿರುವ ಬಾಹ್ಯ ವಸ್ತುವಿನ ನಿರ್ವಹಣೆ, ಕೈಕಾಲುಗಳಿಗೆ ಗಾಯವಾಗುವ ಸಂದರ್ಭದಲ್ಲಿ ಸ್ಥಳೀಯ ಸಾಮಗ್ರಿಗಳನ್ನು ಬಳಸಿಕೊಂಡು ಬಾಹ್ಯ ರಕ್ತಸ್ರಾವವನ್ನು ಮತ್ತು ಚಲನೆಯನ್ನು ನಿಯಂತ್ರಿಸುವುದು ಮುಂತಾದವುಗಳಿಗೆ ಸಂಬಂಧಿಸಿದ ತರಬೇತಿ ಯೋಜನೆಗಳು, ಆಸ್ಪತ್ರೆಯ ವ್ಯವಸ್ಥೆ ಇಲ್ಲದಿರುವಲ್ಲಿ ತತ್‌ಕ್ಷಣದ ಆರೈಕೆಯ ಅಥವಾ ಆಸ್ಪತ್ರೆಯ ಆರೈಕೆಯು ಸಿಗುವುದಕ್ಕೆ ಮೊದಲು ಸಿಗಬಹುದಾದ ತತ್‌ಕ್ಷಣದ ಮತ್ತು ಮೂಲ ಹಂತದ ತುರ್ತು ಆರೈಕೆಯನ್ನು ಖಚಿತಪಡಿಸುತ್ತವೆ.
ಸಾಗಾಟ ಸಮಯದ
ತುರ್ತು ವೈದ್ಯಕೀಯ ಆರೈಕೆ
ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿರುವ ರೋಗಿಯನ್ನು ಆರೈಕೆ ನೀಡುವ ಸೌಕರ್ಯಕ್ಕೆ ಅಥವಾ ಆಸ್ಪತ್ರೆಗೆ ಸಾಗಿಸುವುದೂ ಸಹ ರೋಗಸ್ಥಿತಿ ಮತ್ತು ಮರಣವನ್ನು ತಗ್ಗಿಸುವ ಮತ್ತೂಂದು ಬಹುಮುಖ್ಯ ಅಂಶ. ಸೂಕ್ತ ಸಂಪರ್ಕ ವ್ಯವಸ್ಥೆಗಳು, ರೋಗಿಯನ್ನು ಬರಮಾಡಿಕೊಳ್ಳುವ ಆಸ್ಪತ್ರೆಯ ಆಸ್ಪತ್ರೆ-ಪೂರ್ವ ಆರೈಕೆ ನೀಡುವವರಿಗೆ ಜಾಗೃತವಾಗಿರಲು ಮತ್ತು ಸಾಗಟದ ಸಮಯದ ವೈದ್ಯಕೀಯ ಸಮಾಲೋಚನೆಗೆ ಅನುವು ಮಾಡಿಕೊಡುತ್ತದೆ.
ರೋಗಿಯನ್ನು ಸೇರಿಸುವ
ಕೇಂದ್ರದ ಅಥವಾ ಆಸ್ಪತ್ರೆಯಲ್ಲಿನ
ತುರ್ತು ವೈದ್ಯಕೀಯ ಆರೈಕೆ
ಒಂದು ಬಾರಿ ರೋಗಿಯು ತುರ್ತು ನಿಗಾ ಘಟಕವನ್ನು ತಲುಪಿದ ನಂತರ, ನಿಗಾ ವ್ಯವಸ್ಥೆಯು ಮುಂದಿನ ಅಂಶಗಳನ್ನು ಒಳಗೊಂಡಿರುತ್ತದೆ: ಚಿಕಿತ್ಸೆಯ ಸರದಿ ನಿರ್ಧರಿಸುವುದು, ಪುನಃಶ್ಚೇತನಗೊಳಿಸುವುದು ಮತ್ತು ಗಾಯಾಳುವಿನ ಸ್ಥಿತಿಯನ್ನು ಸ್ಥಿರಗೊಳಿಸುವುದು; ಆರಂಭಿಕ ತಪಾಸಣೆಗಳನ್ನು ಪ್ರಾರಂಭಿಸುವುದು ಮತ್ತು ಚಿಕಿತ್ಸೆ ಆರಂಭಿಸುವುದು; ಗಮನಿಸುವುದು ಮತ್ತು ಸಮಾಲೋಚನೆ, ಪರಿಣಾಮ (ಫಲಿತಾಂಶ)ಗಳನ್ನು ಪಡೆಯುವುದು ಮತ್ತು ನೀಡುವ ಆರೈಕೆಯನ್ನು ದಾಖಲಿಸುವುದು ಮತ್ತು ಫಾಲೋ-ಅಪ್ ಕೇರ್‌ನ ಸೌಲಭ್ಯಗಳನ್ನು ಒದಗಿಸುವುದು. ಯಾರಿಗೆ ಮೊದಲು ಚಿಕಿತ್ಸೆಯನ್ನು ನೀಡಬೇಕು ಮತ್ತು ಯಾರಿಗೆ ಸ್ವಲ್ಪ ಕಾಲ ಬಿಟ್ಟು ಚಿಕಿತ್ಸೆ ನೀಡಬಹುದು ಮತ್ತು ಉಳಿದ ರೋಗಿಗಳಲ್ಲಿ ಯಾರಿಗೆ ಆದ್ಯತೆಯನ್ನು ನೀಡಬೇಕು ಎಂಬುದನ್ನು ನಿರ್ಧರಿಸುವುದಕ್ಕಾಗಿ ಮತ್ತು ಇರುವ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಹಂಚಿಕೊಡಲು ಚಿಕಿತ್ಸೆಯ ಸರದಿಯನ್ನು ನಿರ್ಧರಿಸುವುದು ಮುಖ್ಯವಾಗುತ್ತದೆ. ಮೊದಲೆ ತಯಾರಿಸಿದ ಚಿಕಿತ್ಸಾ ಸರದಿಯ ಪಟ್ಟಿ ಇದ್ದರೆ, ತುರ್ತು ಅಗತ್ಯ ಇದ್ದವರಿಗೆ ಮೊದಲು ಚಿಕಿತ್ಸೆ ನೀಡುವ ಮೂಲಕ ಮರಣ-ಸಾಧ್ಯತೆಯನ್ನು ತಗ್ಗಿಸಬಹುದು. ಸಾಮಾನ್ಯವಾಗಿ ನುರಿತ ದಾದಿಯರು ಚಿಕಿತ್ಸಾ ಸರದಿಯ ಪಟ್ಟಿಯನ್ನು ತಯಾರಿಸುತ್ತಾರೆ.
– ಮುಂದಿನ ವಾರಕ್ಕೆ
ಡಾ| ಜೀಧು ರಾಧಾಕೃಷ್ಣನ್,
ಎಮರ್ಜೆನ್ಸಿ ಮೆಡಿಸಿನ್ ತಜ್ಞರು,
ಎಮರ್ಜೆನ್ಸಿ ಮೆಡಿಸಿನ್ ವಿಭಾಗ,
ಕೆ.ಎಂ.ಸಿ. ಆಸ್ಪತ್ರೆ, ಅಂಬೇಡ್ಕರ್ ವೃತ್ತ, ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.