Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್ ಮೊರೆಹೋಗಿ
Team Udayavani, Mar 17, 2024, 9:51 AM IST
ಹಲ್ಲುಜ್ಜುವ ಬಿದಿರಿನ ಬ್ರಶ್‌ಗಳು ಜೈವಿಕವಾಗಿ ವಿಘಟನೆ ಹೊಂದುತ್ತವೆ, ಇದರಿಂದಾಗಿ ಜನಸಮೂಹದಲ್ಲಿ ಸ್ವೀಕೃತಗೊಂಡಿವೆ. ಇವುಗಳ ಉಪಯೋಗಗಳನ್ನು ತಿಳಿದುಕೊಳ್ಳಲು ಈ ಲೇಖನ ಸಹಕಾರಿಯಾಗಿದೆ.
ಹಲ್ಲುಜ್ಜುವ ಬ್ರಶ್‌ಗಳು ಮತ್ತು ಟೂತ್‌ಪೇಸ್ಟ್ ಗಳನ್ನು ಆವಿಷ್ಕರಿಸುವುದಕ್ಕೆ ಮುನ್ನ ಜನರು ಒರಟು ಬಟ್ಟೆಗಳು, ಉಪ್ಪು, ಗಿಡಗಂಟಿಗಳ ಕಡ್ಡಿಗಳು ಅಥವಾ ಇದ್ದಿಲನ್ನು ಹಲ್ಲುಜ್ಜಲು ಉಪಯೋಗಿಸುತ್ತಿದ್ದರು. ಹಲ್ಲುಜ್ಜುವ ವ್ಯವಸ್ಥೆಗಳು, ಸಾಧನಗಳು ಮತ್ತು ಪೇಸ್ಟ್‌ಗಳು ಆವಿಷ್ಕಾರಗೊಂಡಿದ್ದು, ದಂತಗಳ ನೈರ್ಮಲ್ಯಕ್ಕೆ ಅನೇಕ ಬಗೆಯ ಪರ್ಯಾಯಗಳು ಲಭ್ಯವಿವೆ.
ಜೈವಿಕವಾಗಿ ವಿಘಟನೆಗೊಳ್ಳುವ ಗುಣದಿಂದಾಗಿ ಹಲ್ಲುಜ್ಜುವ ಬಿದಿರಿನ ಬ್ರಶ್‌ಗಳು ಜಾಗತಿಕವಾಗಿ ತುಂಬಾ ಜನಪ್ರಿಯವಾಗಿವೆ. ಹಲ್ಲುಜ್ಜುವ ಬಿದಿರಿನ ಬ್ರಶ್ ಬಿದಿರಿನ ಹಿಡಿಕೆ ಮತ್ತು ನೈಲಾನ್ ಫೈಬರ್ ಅಥವಾ ಕೆಲವು ಸಂದರ್ಭಗಳಲ್ಲಿ ಪ್ಲಾಸ್ಟಿಕ್‌ನಷ್ಟೇ ಬಾಳಿಕೆ ಬರಬಲ್ಲ ಇತರ ನೈಸರ್ಗಿಕ ನಾರುಗಳನ್ನು ಒಳಗೊಂಡಿರುತ್ತವೆ.
ಹಲ್ಲುಜ್ಜುವ ಬಿದಿರಿನ ಬ್ರಶ್‌ಗಳ ಅತ್ಯಂತ ಪ್ರಮುಖವಾದ ಒಂದು ಉಪಯೋಗ ಎಂದರೆ ಅವು ಪ್ಲಾಸ್ಟಿಕ್‌ನ ಬ್ರಶ್‌ಗಳಷ್ಟೇ ಮಟ್ಟದಲ್ಲಿ ಹಲ್ಲುಗಳನ್ನು ಶುಚಿಗೊಳಿಸುತ್ತವೆ; ಆದರೆ ಅಪಾರ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುವುದನ್ನು ಕಡಿಮೆ ಮಾಡುತ್ತವೆ. ಬಳಸಿ ಹಳೆಯದಾದ ಪ್ಲಾಸ್ಟಿಕ್ ಬ್ರಶ್‌ಗಳು ಮತ್ತು ಅವುಗಳ ಪ್ಯಾಕೆಟ್‌ಗಳನ್ನು ಪುನರ್ಬಳಸುವುದು, ರಿಸೈಕ್ಲಿಂಗ್ ಅಥವಾ ಕಾಂಪೋಸ್ಟ್ ಮಾಡುವುದು ನಿಜಕ್ಕೂ ಒಂದು ಬೃಹತ್ ಸಮಸ್ಯೆ.
ಉತ್ತಮ ನಿರ್ವಹಣೆ ಮತ್ತು ಶುಚಿತ್ವಕ್ಕಾಗಿ ನಿಮ್ಮ ಹಲ್ಲುಜ್ಜುವ ಬ್ರಶ್ಶನ್ನು ಪ್ರತೀ ಎರಡು ಅಥವಾ ಮೂರು ತಿಂಗಳುಗಳಿಗೆ ಒಮ್ಮೆ ಬದಲಾಯಿಸಿಕೊಳ್ಳಬೇಕು. ಪರಿಸರಸಹ್ಯವಾದ ವಸ್ತುವಿನಿಂದ ಮಾಡಿರುವ ಹೊಸ ಹಲ್ಲುಜ್ಜುವ ಬ್ರಶ್ ಹಿಡಿದು ಹಲ್ಲುಜ್ಜುವುದು ನಿಮಗೆ ಒಂದು ಆಹ್ಲಾದಕರ ಅನುಭವವೇ ಆಗಬಹುದು.
ಬಿದಿರಿನಿಂದ ಮಾಡಿರುವ ಹಲ್ಲುಜ್ಜುವ ಬ್ರಶ್‌ಗಳ ಕೆಲವು ಪ್ರಯೋಜನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:
ಬಿದಿರಿನಲ್ಲಿ ಫಂಗಸ್‌ನಿರೋಧಕ ಗುಣವೂ ಇದೆ. ಬಿದಿರು ಮತ್ತು ಮರದಿಂದ ಕಟ್ಟಿಂಗ್ ಬೋರ್ಡ್ ಮತ್ತು ಪಾತ್ರೆಗಳನ್ನು ನಿರ್ಮಿಸುವುದಕ್ಕೆ ಒಂದು ಉದ್ದೇಶವಿರುತ್ತದೆ. ಬಿದಿರಿನ ಅಂತರ್ಗತ ಗುಣಗಳು ಅದರ ಮೇಲ್ಮೈಯನ್ನು ಪ್ರವೇಶಿಸುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವಂತಿವೆ. ಇದರಿಂದಾಗಿ ಸೂಕ್ಷ್ಮಜೀವಿಗಳಿಂದ ದೀರ್ಘಾವಧಿಯಲ್ಲಿ ರಕ್ಷಣೆ ಸಿಗುತ್ತದೆ.
ಬಿದಿರು ಒಂದು ಹುಲ್ಲಿನ ಜಾತಿಯ ಸಸ್ಯವಾದ್ದರಿಂದ ಇದನ್ನು ಎಲ್ಲಿ ಬೇಕಾದರಲ್ಲಿ ಪರಿಸರಕ್ಕೆ ಧಕ್ಕೆ ಉಂಟು ಮಾಡದೆಯೇ ಬೆಳೆಸಬಹು ದಾಗಿದೆ. ಇದರ ಕಾಂಡಗಳು ಕ್ಷಿಪ್ರವಾಗಿ ಬೆಳೆಯುತ್ತವೆ ಮತ್ತು ಅವುಗ ಳಿಗೆ ಯಾವುದೇ ರಸಗೊಬ್ಬರ ಅಥವಾ ಕೀಟನಾಶಕ ಬೇಕಾಗಿಲ್ಲ.
ಬಿದಿರು ಸಂಪೂರ್ಣವಾಗಿ ನೈಸರ್ಗಿಕ ವಾತಾವರಣದಲ್ಲಿ ಬೆಳೆಯುತ್ತದದಾದ್ದರಿಂದ ಅದು ಬಳಕೆಗೆ ಸಂಪೂರ್ಣ ಸುರಕ್ಷಿತ. ಬಿದಿರನ ಕಾಂಡಗಳನ್ನು ಕತ್ತರಿಸುವಲ್ಲಿ ಅಥವಾ ಸಂಸ್ಕರಿಸುವಲ್ಲಿ ಯಾವುದೇ ವಿಷಕಾರಿ ಸಂಯುಕ್ತಗಳನ್ನು ಬಳಸುವುದಿಲ್ಲ. ಏಶ್ಯಾ ಮತ್ತು ಆಫ್ರಿಕಾದ ಹಲವು ಪ್ರದೇಶಗಳು ಮತ್ತು ಸಂಸ್ಕೃತಿಗಳಲ್ಲಿ ಬಿದಿರಿನ ಮೊಳಕೆ ಅಥವಾ “ಕಣಿಲೆ’ ಖಾದ್ಯವಾಗಿ ಬಳಕೆಯಾಗುತ್ತದೆ.
ಬಿದಿರಿನಿಂದ ಮಾಡಿರುವ ಹಲ್ಲುಜ್ಜುವ ಬ್ರಶ್‌ಗಳು ಪ್ಲಾಸ್ಟಿಕ್ ಬ್ರಶ್‌ಗಳಿಗಿಂತ ಸ್ವಲ್ಪ ಹೆಚ್ಚು ಬೆಲೆಯನ್ನು ಹೊಂದಿರಬಹುದು. ಆದರೆ ಅವುಗಳ ಬಳಕೆಯಿಂದ ಅಂತಿಮವಾಗಿ ನಮಗೆ ಮತ್ತು ಈ ಸುಂದರ ಜಗತ್ತಿಗೆ ಉಂಟಾಗುವ ಪ್ರಯೋಜನಗಳು ಬೆಲೆಕಟ್ಟಲಾಗದವುಗಳಾಗಿವೆ.
-ಡಾ| ಆನಂದದೀಪ್ ಶುಕ್ಲಾ,
ಅಸೋಸಿಯೇಟ್ ಪ್ರೊಫೆಸರ್,
ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗ,
ಎಂಸಿಡಿಒಎಸ್, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗ, ಎಂಸಿಡಿಒಎಸ್, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.