ಹೃದಯದ ಸಮಸ್ಥಿತಿಗೆ ಎಳನೀರು ನೈಸರ್ಗಿಕ ಟಾನಿಕ್..!
Team Udayavani, Mar 17, 2021, 7:00 PM IST
ಪರೋಪಕಾರಾಯ ಫಲಂತಿ ವೃಕ್ಷಾಃ ಎಂಬ ಸಂಸ್ಕೃತದ ನಾನ್ನುಡಿಗೆ ಕಲ್ಪ ವೃಕ್ಷ ರೂಢ ನಾಮ ಎಂದು ಹೇಳಿದರೆ ತಪ್ಪಿಲ್ಲ. ತೆಂಗಿನಮರದ ಪ್ರಯೋಜನ ಒಂದೆರಡಲ್ಲ. ಇದೇ ಕಾರಣಕ್ಕೆ ತೆಂಗಿನ ಮರವನ್ನು ಕಲ್ಪವೃಕ್ಷ ಎನ್ನಲಾಗುತ್ತದೆ. ತೆಂಗಿನ ಮರದ ಪ್ರತಿಯೊಂದು ಅಂಗವೂ ಪ್ರಯೋಜನಕಾರಿ. ತೆಂಗಿನ ಮರ ನೀಡುವ ಎಳನೀರು ಯಾರಿಗಿಷ್ಟವಿಲ್ಲ ಹೇಳಿ..? ಮನಸ್ಸಿನ, ದೇಹದ ದಾಹ ತಣಿಸಿಕೊಳ್ಳಲು ಎಳನೀರು ಹೇಳಿ ಮಾಡಿಸಿದ್ದು. ಎಳನೀರು ಮನಸ್ಸಿಗೆ, ದೇಹಕ್ಕೆ ಚೇತೋಹಾರಿ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೇ, ಅಷ್ಟೇ ಅಲ್ಲ. ಎಳನೀರಿನ ಪ್ರಯೋಜನಗಳು ಇನ್ನೂ ಸಾಕಷ್ಟಿವೆ. ನಿಮಗೆ ಗೊತ್ತಿಲ್ಲದ ಕುತೂಹಲಕಾರಿಯಾದ ಮಾಹಿತಿಯನ್ನು ನಾವು ನಿಮಗೆ ನೀಡುತ್ತೇವೆ. ಈ ಬೇಸಿಗೆಯಲ್ಲಿ ಆರೋಗ್ಯ ಹದವಾಗಿ ಇಡಲು ಎಳನೀರು ಸೂಕ್ತ.
ಓದಿ : ಸಂವಿಧಾನ ಕರಡು ಸಮಿತಿ ಸದಸ್ಯ; ಕೋವಿಡ್ ಲಸಿಕೆ ಪಡೆದ 107 ವರ್ಷದ ಕೇವಳ್ ಕೃಷ್ಣನ್
ಎಳನೀರಿನ ಕೆಲವು ಆರೋಗ್ಯ ಪ್ರಯೋಜನಗಳು ಇಲ್ಲಿವೆ :
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಎಳನೀರು ದಿ ಬೆಸ್ಟ್..!
ಎಳನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಇರುವುದರಿಂದ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಸಂಶಯ ಪಡಬೇಕಾಗಿಲ್ಲ.
ಹೃದಯದ ಸಮಸ್ಥಿತಿಗೆ ಎಳನೀರು ನೈಸರ್ಗಿಕ ಟಾನಿಕ್..!
ಎಳನೀರು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಗ್ರಹಿಸುತ್ತದೆ. ದೇಹಕ್ಕ ಬೇಕಾಗುವ ಉಪಯುಕ್ತ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೃದಯದ ಸಮಸ್ಥಿತಿಗೆ ಎಳನೀರು ಹೇಳಿ ಮಾಡಿಸಿದ್ದು.
ಗರ್ಭಿಣಿಯರಿಗಿದು ನೈಸರ್ಗಿಕ ಅಮೃತ :
ಎಳನೀರಿನಲ್ಲಿ ಒಮೆಗಾ 3 ಹೇರಳವಾಗಿ ಇರುವುದರಿಂದ ಗರ್ಭದಲ್ಲಿನ ಮಗುವಿನ ಮೆದುಳಿನ ಬೆಳವಣಿಗೆ ಚುರುಕಾಗಲು ಒಮೆಗಾ 3 ಸಹಾಯ ಮಾಡುತ್ತದೆ. ಗರ್ಭಿಣಿಯರು ತಮ್ಮ ಆರೋಗ್ಯಕ್ಕೆ ಹಾಗೂ ಮಗುವಿನ ಆರೋಗ್ಯ ವೃದ್ಧಿಗಾಗಿ ಎಳನೀರು ಸೇವಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಸಕ್ಕರೆ ಕಾಯಿಲೆಗೆ ಎಳನೀರು ಸಿದ್ಧೌಷಧ :
ಎಳನೀರಿನಲ್ಲಿ ಮೆಗ್ನೇಶಿಯಂ ಪ್ರಮಾಣ ಹೇರಳವಾಗಿರುವ ಕಾರಣದಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಿಸುತ್ತದೆ. ಜೊತೆಗೆ ಸಕ್ಕರೆ ಪ್ರಮಾಣ(ಶುಗರ್ ಲೆವೆಲ್) ಕಡಿಮೆ ಮಾಡುತ್ತದೆ. ತತ್ಪರಿಣಾಮ ಬ್ಲಡ್ ಶುಗರ್ ನಿಯಂತ್ರಣದಲ್ಲಿರುತ್ತದೆ ಎನ್ನುತ್ತಾರ ತಜ್ಞ ವೈದ್ಯರು
ರಕ್ತದೊತ್ತಡ ಕಡಿಮೆ ಮಾಡುತ್ತದೆ ಎಳನೀರು :
ಎಳನೀರಿನಲ್ಲಿ ಹೇರಳವಾದ ಪೊಟ್ಯಾಶಿಯಂ ಅಂಶ ಇರುವುದರಿಂದ ರಕ್ತದೊತ್ತಡ ಕಡಿಮೆ ಮಾಡುತ್ತದೆ. ಮಾತ್ರವಲ್ಲದೇ, ರಕ್ತಹೆಪ್ಪುಗಟ್ಟುವುದನ್ನು ತಪ್ಪಿಸುತ್ತದೆ.
ಕಿಡ್ನಿ ಸ್ಟೋನ್ ನಿಯಂತ್ರಣಕ್ಕೆ ಎಳನೀರು ಟಾಪೆಸ್ಟ್ ಮೆಡಿಸಿನ್ :
ಎಳನೀರು ಮೂತ್ರ ಕ್ರಿಯೆಯನ್ನು ಸರಾಗಗೊಳಿಸುತ್ತದೆ. ಹೀಗಾಗಿ, ಮೂತ್ರದಲ್ಲಿರುವ ಸಣ್ಣ ಸಣ್ಣ ಹರಳುಗಳು ಮೂತ್ರಕೋಶದಲ್ಲಿ ಸಂಗ್ರಹವಾಗದೇ ದೇಹದಿಂದ ಹೊರಗೆ ಹೋಗುತ್ತವೆ. ಇದರಿಂದ ಕಿಡ್ನಿಯಲ್ಲಿ ಸ್ಟೋನ್ ಸಮಸ್ಯೆ ಉಂಟಾಗುವುದನ್ನು ತಡಯುತ್ತದೆ.
ಬೊಜ್ಜು ನಿವಾರಣೆಗೆ ಎಳನೀರು ಪ್ರಯೋಜನಕಾರಿ :
ಎಳನೀರಿನಲ್ಲಿ ಫೈಬರ್ ಅಂಶ ಅಪಾರವಾಗಿದೆ. ಎಳನೀರಿನಲ್ಲಿ ಫೈಬರ್ ಜೀರ್ಣ ಕ್ರಿಯೆಯನ್ನು ನಿಧಾನಿಸುತ್ತದೆ. ಹಸಿವು ಕಡಿಮೆ ಆಗುತ್ತದೆ. ತತ್ಪರಿಣಾಮ ಬೊಜ್ಜು ಬೆಳೆಯುವುದಿಲ್ಲ.
ಓದಿ : ಪಶ್ಚಿಮ ಬಂಗಾಳ : ಒಂದು ವರ್ಷದಲ್ಲಿ ಐದು ಲಕ್ಷ ಉದ್ಯೋಗ ಸೃಷ್ಟಿ : ತೃಣಮೂಲ ಕಾಂಗ್ರೆಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.