ಆರೋಗ್ಯ ಸಂಜೀವಿನಿ ಈ ಶುಂಠಿ- ಜೀರಿಗೆ ಕಷಾಯ
ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ
Team Udayavani, Feb 2, 2021, 1:39 PM IST
ಚಳಿಗಾಲ, ಮಳೆಗಾಲವನ್ನು ಒಳಗೊಂಡಂತೆ ವಾತಾವರಣದ ಬದಲಾವಣೆಯಿಂದ ಶೀತ ಜ್ವರದಂತಹ ಸಮಸ್ಯೆಗಳು ಎಲ್ಲರನ್ನೂ ಬಾಧಿಸುತ್ತವೆ. ಈ ಸಮಯದಲ್ಲಿ ಆರೋಗ್ಯವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳುವುದು ಅತೀ ಮುಖ್ಯ . ಕೋವಿಡ್ ಆರಂಭದ ನಂತರವಂತೂ ಈ ಹಿಂದೆ ಸಾಮಾನ್ಯವಾಗಿದ್ದ ಶೀತ ಜ್ವರಗಳಿಗೂ ಜನರು ಹೆದರುವಂತಾಗಿದೆ.
ತಂಪಿನ ವಾತಾವರಣದಿಂದಾಗಿ ಆರೋಗ್ಯವನ್ನು ಬಾಧಿಸುವ ಸಾಮಾನ್ಯ ಶೀತ, ಜ್ವರದಂತಹ ಸಮಸ್ಯೆಗಳಿಗೆ ಮನೆಯಲ್ಲಿಯೇ ತಯಾರಿಸಬಹುದಾದ ಶುಂಠಿ- ಜೀರಿಗೆ ಕಷಾಯವು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
ಶುಂಠಿ- ಜೀರಿಗೆ ಕಷಾಯ ಮಾಡಲು ಬೇಕಾಗುವ ಸಾಮಾಗ್ರಿಗಳು
ಶುಂಠಿ, ಜೀರಿಗೆ, ಕಾಳು ಮೆಣಸು, ಕೊತ್ತಂಬರಿ, ತುಳಸಿ, ಲವಂಗ, ನೆಲನೆಲ್ಲಿ, ಅರಶಿಣ, ಬೆಲ್ಲ
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಎಸಿಬಿ ಶಾಕ್: ಮಂಗಳೂರು ಸೇರಿದಂತೆ ರಾಜ್ಯದ 7 ಕಡೆಗಳಲ್ಲಿ ದಾಳಿ
ಮಾಡುವ ವಿಧಾನ
ಎರಡು ಲೋಟ ಕಷಾಯವನ್ನು ಮಾಡಲು ಎರಡು ಸಣ್ಣ ತುಂಡುಗಳಷ್ಟು ಶುಂಠಿ, ಒಂದು ಚಮಚ ಕಾಳುಮೆಣಸಿನ ಪುಡಿ, ಒಂದು ಚಮಚ ಜೀರಿಗೆ, ಒಂದು ಚಮಚ ಕೊತ್ತಂಬರಿ, ಹತ್ತು ತುಳಸಿ ಎಲೆ, ಎರಡು ಲವಂಗ, 2 ಏಲಕ್ಕಿ ಗೆ ಒಂದು ಚಮಚ ಅರಶಿಣವನ್ನು ಬೆರಸಿ ಪುಡಿ ಮಾಡಿಕೊಳ್ಳಿ. ಹೀಗೆ ತಯಾರಿಸಲಾದ ಪುಡಿಗೆ ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿರುವ ನೆಲನೆಲ್ಲಿ ಗಿಡದ ಸೊಪ್ಪನ್ನು ಪುಡಿ ಮಾಡಿ ಸೇರಿಸಿ. ನಂತರ ಎರಡು ಲೋಟ ನೀರಿಗೆ ಈ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ಹೀಗೆ ಕುದಿಸಿದ ನಂತರ ಸ್ವಲ್ಪ ಬೆಲ್ಲವನ್ನು ಸೇರಿಸಬಹುದು. (ಮಧುಮೇಹಿಗಳು ಬೆಲ್ಲವನ್ನು ಬೆರಸದೆ ಕುಡಿಯುವುದು ಉತ್ತಮ)
ಶಾಂತಿ ಕೊಡಚಾದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.