ಆಹಾರಕ್ರಮಗಳ ಬದಲಾವಣೆ; ಪಿತ್ತದ ಸಮಸ್ಯೆಗೆ ಇಲ್ಲಿದೆ ಪರಿಹಾರ
ಅಮೃತ ಬಳ್ಳಿಯ ರಸವನ್ನು ಸೇವಿಸುವುದು ಪಿತ್ತ ಸಮಸ್ಯೆ ದೂರವಾಗುತ್ತದೆ.
Team Udayavani, Feb 19, 2021, 1:25 PM IST
ಪಿತ್ತ ರೋಗ ಸಾಮಾನ್ಯವಾಗಿ ಹಲವರಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ನಮ್ಮ ಆಹಾರಕ್ರಮಗಳ ಬದಲಾವಣೆಯಿಂದ ದೇಹವನ್ನು ಬಾಧಿಸುವ ಈ ಪಿತ್ತದ ಸಮಸ್ಯೆ ಯಿಂದಾಗಿ ದೇಹ ಅನಾರೋಗ್ಯಕ್ಕೆ ಈಡಾಗುತ್ತದೆ.
ಪಿತ್ತದ ಸಮಸ್ಯೆ ಇರುವವರು ತಮ್ಮ ಆಹಾರ ಕ್ರಮಗಳಲ್ಲಿ ಸ್ಪಲ್ಪ ಬದಲಾವಣೆಗಳನ್ನು ಮಾಡಿಕೊಂಡರೂ ಅಜೀರ್ಣ, ಎದೆ ಮತ್ತು ಗಂಟಲಿನಲ್ಲಿ ಉರಿ ಅನುಭವ, ತಲೆ ಸುತ್ತು, ಹುಳಿತೇಗು, ವಾಂತಿ ಮುಂತಾದ ವಿವಿಧ ಬಗೆಯ ಸಮಸ್ಯೆಗಳಿಂದ ಬಳಲುತ್ತಾರೆ.
ಪಿತ್ತದ ಸಮಸ್ಯೆಗೆ ಪರಿಹಾರಗಳೇನು.
ನಮ್ಮ ದೇಹದಲ್ಲಿನ ಪ್ರತಿಯೊಂದು ಸಮಸ್ಯೆಗಳಿಗೆ ನೈಸರ್ಗಿಕವಾಗಿ ಸಿಗುವ ವಸ್ತುಗಳಲ್ಲಿ ಪರಿಹಾರಗಳಿದ್ದು, ಈ ನಡುವೆ ಪಿತ್ತದ ಸಮಸ್ಯೆಗೂ ಹಲವು ನೈಸರ್ಗಿಕ ಪರಿಹಾರಗಳಿವೆ. ಇವುಗಳನ್ನು ಸೇವನೆ ಮಾಡುವುದರಿಂದ ಶೀಘ್ರವಾಗ ನಮ್ಮ ಆರೋಗ್ಯವನ್ನು ಸರಿಪಡಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ:ತನ್ನ “ಪ್ಲೇ ಮ್ಯೂಸಿಕ್” ಸೇವೆಯನ್ನು ಕೊನೆಗೊಳಿಸಲಿದೆ ಗೂಗಲ್
- ನೆಲ್ಲಿ ಕಾಯಿ ಚೂರ್ಣವನ್ನು ಅಥವಾ ನೆಲ್ಲಿಕಾಯಿಯ ರಸವನ್ನು ಸೇವನೆ ಮಾಡುವುದರಿಂದ ಪಿತ್ತದ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದಾಗಿದೆ.
- ಕಡಲೆಕಾಯಿ ಸಿಪ್ಪೆಯ ಚೂರ್ಣವನ್ನು ತಯಾರಿಸಿಕೊಂಡು ಅದಕ್ಕೆ ಸಕ್ಕರೆ ಬೆರೆಸಿ, ತುಪ್ಪದಲ್ಲಿ ಕಲಸಿ ಸೇವಿಸಿದರೆ ಪಿತ್ತದ ಸಮಸ್ಯೆ ಶಮನವಾಗುತ್ತದೆ.( ಎರಡು ವಾರ ಎರಡು ಹೊತ್ತು )
- ಅಮೃತ ಬಳ್ಳಿಯ ರಸವನ್ನು ಸೇವಿಸುವುದು ಪಿತ್ತ ಸಮಸ್ಯೆ ದೂರವಾಗುತ್ತದೆ.
ಈ ಎಲ್ಲಾ ವಸ್ತುಗಳಷ್ಟೇ ಅಲ್ಲದೆ, ದಾಳಿಂಬೆ ರಸ, ಬೇಲದ ಹಣ್ಣಿನ ರಸ, ಲಿಂಬೆ ರಸ, ಹೇರಳೆ ಹಣ್ಣಿನ(ಕಂಚಿಕಾಯಿ)ರಸವನ್ನು ಸೇವಿಸುವುದರಿಂದಲೂ ಪಿತ್ತದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.