ಹೆಲ್ತ್ ಟಿಪ್ಸ್ : ಅಪಾಯದ ಕಾಲದಲ್ಲಿ ಮದ್ದಾಗುವ ಪಪ್ಪಾಯ
Team Udayavani, Dec 5, 2020, 1:40 PM IST
ವರ್ಷದ ಎಲ್ಲಾ ದಿನಗಳಲ್ಲೂ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಹಣ್ಣು ಪಪ್ಪಾಯ. ಕೆಂಪಗೆ ಇರುವ ಕಾರಣಕ್ಕೆ ಇದಕ್ಕೆ “ಪರಂಗಿ ಹಣ್ಣು’ ಎಂಬ ಹೆಸರೂ ಇದೆ. ಉಳಿದೆಲ್ಲ ಹಣ್ಣುಗಳಿಗಿಂತ ಹೆಚ್ಚು ಪೌಷ್ಟಿಕಾಂಶ ಮತ್ತು ರೋಗನಿರೋಧಕ ಗುಣ ಹೊಂದಿರುವುದು ಪಪ್ಪಾಯದ ಹೆಗ್ಗಳಿಕೆ. ಮನೆಯ ಮುಂದೆ ಅಥವಾ ಕಾಂಪೌಂಡ್‌ನಲ್ಲಿ ಇರುವ ಚಿಕ್ಕಜಾಗದಲ್ಲಿ ಕೂಡ ತುಂಬಾ ಕಡಿಮೆ ಖರ್ಚಿನಲ್ಲಿ ಪಪ್ಪಾಯ ಬೆಳೆಯಬಹುದು.
ಪಪ್ಪಾಯದ ರೋಗನಿರೋಧಕ ಶಕ್ತಿಯ ಪರಿಚಯ ಎಲ್ಲರಿಗೂ ಆದದ್ದು ಡೆಂಗ್ಯೂ ಜ್ವರ ಇಡೀ ದೇಶವನ್ನು ಕಾಡಿದಾಗ ಅನ್ನಬಹುದು. ರಕ್ತದಲ್ಲಿ ಪ್ಲೇಟ್ ಲೆಟ್‌ಗಳ ಸಂಖ್ಯೆ ಕಡಿಮೆಯಾಗಿ ಜನ ಕಂಗಾಲಾಗಿದ್ದಾಗ ಎಲ್ಲರಿಗೂ ಸಂಜೀವಿನಿಯಂತೆ ಕಾಣಿಸಿದ್ದು ಪಪ್ಪಾಯ. ಪಪ್ಪಾಯದ ಎಲೆಯಿಂದ ತಯಾರಿಸಿದ ಜ್ಯೂಸ್ ಕುಡಿದವರೆಲ್ಲಾ ಡೆಂಗ್ಯು ಜ್ವರದಿಂದ ಮುಕ್ತರಾದರು. ಈಗ ವಿಶ್ವವನ್ನೇ ಕಾಡುತ್ತಿರುವ ಕೋವಿಡ್ ಕಾಟದಿಂದ ಪಾರಾಗಲು ದೇಹಕ್ಕೆ ರೋಗನಿರೋಧಕ ಶಕ್ತಿ ಬೇಕಲ್ಲ? ಪಪ್ಪಾಯ ಸೇವನೆಯೇ ಅದಕ್ಕಿರುವ ಸುಲಭ ಮಾರ್ಗ ಎಂಬ ಮಾತುಗಳನ್ನು ಈಗ ವೈದ್ಯರೂ ಸೇರಿದಂತೆ ಹಲವರು ಹೇಳುತ್ತಿದ್ದಾರೆ.
ಪಪ್ಪಾಯದಿಂದ ಇರುವ ಅನುಕೂಲಗಳು ಹಲವು. ಪಪ್ಪಾಯ ಹಣ್ಣಿನಲ್ಲಿ ಕೊಬ್ಬು ಮತ್ತು ಕೊಲೆ ಸ್ಟ್ರಾಲ್‌ನ ಅಂಶವಿಲ್ಲ. ಹಾಗಾಗಿ ಇದನ್ನು ಎಲ್ಲರೂ ಸೇವಿಸಬಹುದು. ಪಪ್ಪಾಯ ಕಾಯಿಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿದರೆ ಜಂತು ಹುಳು ನಾಶವಾಗುತ್ತದೆ. ಪಪ್ಪಾಯ ಕಾಯಿಯ ರಸವನ್ನು ಹಚ್ಚುವುದರಿಂದ ಚರ್ಮದ ಸಮಸ್ಯೆಗಳು ಪರಿಹಾರವಾಗುತ್ತವೆ. ದಿನವೂ ಊಟದ ನಂತರ ಪಪ್ಪಾಯ ಹಣ್ಣು ಸೇವನೆಯಿಂದ ಮಲಬದ್ಧತೆ ನಿವಾರಣೆ ಯಾಗುತ್ತದೆ. ಮೂತ್ರಕೋಶದಲ್ಲಿ ಕಲ್ಲುಗಳು ಉಂಟಾಗುವುದೂ ತಪ್ಪುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.