ಆರೋಗ್ಯಕರ ಹಾಗು ರುಚಿಯಾದ ಹಣ್ಣಿನ ರಸ
Team Udayavani, Aug 8, 2017, 9:27 AM IST
ಸೇಬು-ಬಾಳೆಹಣ್ಣಿನ ಜ್ಯೂಸ್
ಬೇಕಾಗುವ ಸಾಮಗ್ರಿ:
ಬಾಳೆಹಣ್ಣು- 2, ಸೇಬು-1/2, ಹಾಲು- 1/2 ಕಪ್, ಸಕ್ಕರೆ- 4 ಚಮಚ, ಸ್ವಲ್ಪ ನೀರು, ಬಾದಾಮಿ ಚೂರು ಸ್ವಲ್ಪ.
ತಯಾರಿಸುವ ವಿಧಾನ:
ಬಾಳೆಹಣ್ಣಿನ ಸಿಪ್ಪೆ ತೆಗೆದು ಚಿಕ್ಕ ಹೋಳು ಮಾಡಿಡಿ. ಸೇಬು ಹಣ್ಣಿನ ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಹೋಳು ಮಾಡಿಡಿ. ಹಾಲು ಬಿಸಿಮಾಡಿ ತಣಿಸಿಡಿ. ಬಾಳೆಹಣ್ಣು , ಸೇಬು, ಸಕ್ಕರೆ, ಬಾದಾಮಿ ಚೂರು ಒಟ್ಟಿಗೆ ಮಿಕ್ಸಿ ಜಾರ್‌ಗೆ ಹಾಕಿ ಸ್ವಲ್ಪ ನೀರು ಹಾಕಿ ನಯವಾಗಿ ರುಬ್ಬಿ ತೆಗೆದು ಬಟ್ಟಲಿಗೆ ಹಾಕಿ ಹಾಲು ಸೇರಿಸಿ ಚೆನ್ನಾಗಿ ಕದಡಿರಿ. ಫ್ರಿಜ್‌ನಲ್ಲಿಟ್ಟು ತಣಿಸಿ ಕುಡಿಯಬಹುದು.
ಮಾವಿನ ಹಣ್ಣಿನ ರಸ (ಅಂಬ್ರೋಸ್)
ಬೇಕಾಗುವ ಸಾಮಗ್ರಿ:
ಮಾವಿನ ಹಣ್ಣು – 2, ಸಕ್ಕರೆ – 4 ಚಮಚ, ಏಲಕ್ಕಿಹುಡಿ- 1 ಚಮಚ, ಹಾಲು – 1/2 ಕಪ್.
ತಯಾರಿಸುವ ವಿಧಾನ:
ಮಾವಿನ ಹಣ್ಣಿನ ಸಿಪ್ಪೆ ತೆಗೆದು ಚೆನ್ನಾಗಿ ಹಿಚುಕಿಡಿ. ಮಿಕ್ಸಿ ಜಾರ್‌ನಲ್ಲಿ ಸಕ್ಕರೆ, ಸ್ವಲ್ಪ ಹಾಲು, ಮಾವಿನ ಹಣ್ಣನ್ನು ಹಾಕಿ ನಯವಾಗಿ ರುಬ್ಬಿ ಪಾತ್ರೆಗೆ ಹಾಕಿ ಏಲಕ್ಕಿ ಹುಡಿ ಹಾಕಿ ಉಳಿದ ಹಾಲನ್ನು ಹಾಕಿ ಚೆನ್ನಾಗಿ ಬೆರೆಸಿಡಿ. ತಣಿಸಿ ಕುಡಿಯಬಹುದು. ಹಾಲು ಹಾಕದೆ ಮಾವಿನ ರಸ (ದಪ್ಪ)ಕ್ಕೆ ಸಕ್ಕರೆ ಏಲಕ್ಕಿ ಹಾಕಿದಲ್ಲಿ ಅಂಬ್ರೋಸ್ ತಯಾರಾಗುವುದು. ಇದನ್ನು ಪೂರಿ, ಚಪಾತಿಯೊಂದಿಗೆ ಸೇವಿಸಬಹುದು.
ಎಸ್. ಜಯಶ್ರೀ ಶೆಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.