ಆರೋಗ್ಯ ಸಂಜೀವಿನಿ ಈ ಪಪ್ಪಾಯ
Team Udayavani, Feb 12, 2021, 6:47 PM IST
ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಭ್ಯವಾಗುವ ಹಲವಾರು ಹಣ್ಣು ಹಂಪಲುಗಳು ತನ್ನಲ್ಲಿ ಅತೀ ಹೆಚ್ಚಿನ ಪ್ರಮಾಣದ ವಿಟಮಿನ್ ಗಳನ್ನು ಒಳಗೊಂಡಂತೆ ಆರೋಗ್ಯಕ್ಕೆ ಪೂರಕವಾಗುವ ಅಂಶಗಳನ್ನು ಒಳಗೊಂಡಿರುತ್ತದೆ. ಅಂತಹ ಹಣ್ಣುಗಳಲ್ಲಿ ಪಪ್ಪಾಯ ಕೂಡಾ ಒಂದು.
ದಕ್ಷಿಣ ಆಪ್ರೀಕಾ ಮೂಲದ ಈ ಪಪ್ಪಾಯ ಹಣ್ಣು ಕೊಲಂಬಸ್ ನಿಂದ ಜಗತ್ತಿಗೆ ಪರಿಚಿತವಾಯಿತು. ಅವಾಬಿ(ದೇವರ ಹಣ್ಣು) ಎಂದು ಕರೆಸಿಕೊಳ್ಳುವ ಈ ಪಪ್ಪಾಯ ಹಣ್ಣು ತನ್ನ ರುಚಿ ಹಾಗೂ ಆರೋಗ್ಯಕ್ಕೆ ಪೂರಕವಾಗಿರುವ ಅಂಶಗಳ ಮೂಲಕ ಭಾರತದಲ್ಲಿ ನೆಲೆಯೂರಿದೆ.
ಇದನ್ನೂ ಓದಿ:ಸಂಹಿತಾ ವಿನ್ಯಾ ಬೋಲ್ಡ್ ನಡಿಗೆ
ಪಪ್ಪಾಯಿ ಹಣ್ಣಿನ ಉಪಯೋಗಗಳು
‘ವಿಟಮಿನ್ ಎ’ ಅಂಶ ಹೇರಳವಾಗಿರುವ ಈ ಹಣ್ಣನ್ನು ಬಳಸುವುದರಿಂದ ಹಲವಾರು ಆರೋಗ್ಯದ ಸಮಸ್ಯೆಗಳಿಂದ ನಮ್ಮ ದೇಹವನ್ನು ಸಂರಕ್ಷಿಸಿಕೊಳ್ಳಬಹುದಾಗಿದೆ.
- ಪಪ್ಪಾಯ ಹಣ್ಣಿನ ಸೇವನೆಯಿಂದ ಜೀರ್ಣಾಂಗದ ಹಲವು ಸಮಸ್ಯೆಗಳನ್ನು ದೂರ ಮಾಡುವುದರೊಂದಿಗೆ ದೇಹಕ್ಕೆ ಸೇರಿರುವ ಅಪಾಯಕಾರಿ ಕ್ರಿಮಿಗಳನ್ನು ಇದು ನಾಶಗೊಳಿಸುತ್ತದೆ.
- ದೇಹದಲ್ಲಿ ಗಾಯಗಳಾದಾಗ ಪಪ್ಪಾಯ ಹಣ್ಣಿನ ತಿರುಳನ್ನು ಲೇಪನ ಮಾಡುವುದರಿಂದ ಗಾಯ ಬಹುಬೇಗ ಗುಣವಾಗುತ್ತದೆ.
- ಹುಳಕಜ್ಜಿ ಮತ್ತು ಇತರ ಚರ್ಮ ರೋಗಗಳಿಗೆ ಪಪ್ಪಾಯ ಕಾಯಿಯ ಸೊನೆಯನ್ನು ಹಚ್ಚುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.
- ಮಲಬದ್ಧತೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ಊಟದ ಬಳಿಕ ಪಪ್ಪಾಯ ಹಣ್ಣನ್ನು ಸೇವಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.
- ಮಕ್ಕಳಿಗೆ ಪಪ್ಪಾಯ ಹಣ್ಣನ್ನು ತಿನ್ನಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
- ಮೊಡವೆ ಮತ್ತು ಕಲೆಗಳಿಗೆ ಪಪ್ಪಾಯ ಹಣ್ಣಿನ ತಿರುಳನ್ನು ಸ್ಪಲ್ಪ ಲೇಪಿಸುವುದರಿಂದ ಕಲೆ ಮಾಯವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.