Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!


Team Udayavani, Apr 28, 2024, 12:49 PM IST

4-heart-diseases

ಮಹಿಳೆಯರ ಸಾವಿಗೆ ಕಾರಣಗಳಲ್ಲಿ ಹೃದ್ರೋಗಗಳು (ಕಾರ್ಡಿಯೋವಾಸ್ಕಾಲಾರ್‌ ಡಿಸೀಸಸ್‌ – ಸಿವಿಡಿ) ಮುಂಚೂಣಿಯಲ್ಲಿವೆ. ಹೃದ್ರೋಗಗಳು ಮಹಿಳೆಯರಿಗಿಂತ ಪುರುಷರಲ್ಲಿ 3-4 ಪಟ್ಟು ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆಯಾದರೂ 75 ವರ್ಷ ವಯಸ್ಸಿಗಿಂತ ಹಿರಿಯ ಹೃದ್ರೋಗಿಗಳಲ್ಲಿ ಮಹಿಳೆಯರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ.

ಪುರುಷರಿಗಿಂತ ಮಹಿಳೆಯರಲ್ಲಿ ಹೃದ್ರೋಗಗಳು ಸರಿಸುಮಾರು 10 ವರ್ಷಗಳ ಬಳಿಕ ಕಾಣಿಸಿಕೊಳ್ಳುತ್ತವೆಯಾದರೂ ಹೃದ್ರೋಗಗಳಿಂದ ಆಗುವ ಮರಣ ಪ್ರಮಾಣ ಮಹಿಳೆಯರಲ್ಲೇ ಹೆಚ್ಚಿದೆ (ಮಹಿಳೆಯರಲ್ಲಿ ಶೇ. 51, ಪುರುಷರಲ್ಲಿ ಶೇ. 42). ಮಹಿಳೆಯರಲ್ಲಿ ಹೃದ್ರೋಗಗಳು ಲಕ್ಷಣಗಳು, ಅಪಾಯ ಕಾರಣಗಳು ಮತ್ತು ಚಿಕಿತ್ಸಾ ವಿಧಾನಗಳು ಮತ್ತು ಚಿಕಿತ್ಸೆಗೆ ಪ್ರತಿಸ್ಪಂದನೆಯಂತಹ ಹಲವು ವಿಷಯಗಳಲ್ಲಿ ಪುರುಷರಿಗಿಂತ ಭಿನ್ನವಾಗಿರುತ್ತವೆ.

ಮಹಿಳೆಯರಲ್ಲಿ ಹೃದಯಾಘಾತ ಲಕ್ಷಣಗಳು

ಹೃದಯಾಘಾತದ ಅತೀ ಸಾಮಾನ್ಯ ಲಕ್ಷಣವು ಮಹಿಳೆಯರಲ್ಲೂ ಪುರುಷರಲ್ಲೂ ಒಂದೇ ರೀತಿಯದ್ದಾಗಿದೆ – ಕೆಲವು ವಿಧವಾದ ಎದೆನೋವು, ಐದು ನಿಮಿಷಗಳಿಗಿಂತ ಹೆಚ್ಚು ಕಾಲ ಇರುವ ಅಥವಾ ಆಗಾಗ ಬಂದು ಹೋಗುವ ಎದೆ ಹಿಡಿದುಕೊಂಡಂತಾಗುವ ಅನುಭವ ಅಥವಾ ಎದೆ ಭಾಗದಲ್ಲಿ ಒತ್ತಡದ ಅನುಭವ.

ಆದರೆ ನಿರ್ದಿಷ್ಟವಾಗಿ ಮಹಿಳೆಯರಲ್ಲಿ ಈ ಎದೆನೋವು ಯಾವಾಗಲೂ ಗಮನಕ್ಕೆ ಬರುವಷ್ಟು ತೀವ್ರವಾಗಿರುವುದಿಲ್ಲ ಅಥವಾ ಗಮನ ಸೆಳೆಯುವುದಿಲ್ಲ. ಹೃದಯಾಘಾತದ ನೋವನ್ನು ಮಹಿಳೆಯರು ಸಾಮಾನ್ಯವಾಗಿ ಒತ್ತಡ ಅಥವಾ ಎದೆ ಬಿಗಿತದ ಅನುಭವ ಎಂಬುದಾಗಿ ವರ್ಣಿಸುತ್ತಾರೆ. ಅಲ್ಲದೆ ಎದೆನೋವು ಉಂಟಾಗದೆಯೇ ಹೃದಯಾಘಾತವಾಗುವ ಸಾಧ್ಯತೆಯೂ ಇರುತ್ತದೆ.

ಎದೆನೋವಿಗೆ ಸಂಬಂಧಿಸದ ಅನೇಕ ಹೃದಯಾಘಾತದ ಲಕ್ಷಣಗಳನ್ನು ಸ್ತ್ರೀಯರು ಹೊಂದಲು ಸಾಧ್ಯವಿದೆ; ಅವುಗಳೆಂದರೆ, ­

  • ಕುತ್ತಿಗೆ, ದವಡೆ, ಭುಜ, ಬೆನ್ನಿನ ಮೇಲ್ಭಾಗ ಅಥವಾ ಹೊಟ್ಟೆಯ ಮೇಲ್ಭಾಗದಲ್ಲಿ ಅಸ್ವಾಸ್ಥ್ಯ ­
  • ಉಸಿರು ಕಟ್ಟಿದಂತಾಗುವುದು ­
  • ಒಂದು ಅಥವಾ ಎರಡೂ ಕೈಗಳಲ್ಲಿ ನೋವು
  • ಹೊಟ್ಟೆ ತೊಳೆಸುವುದು ಅಥವಾ ವಾಂತಿ
  • ಬೆವರುವುದು ­
  • ಎಲೆ ಹಗುರವಾದಂತಾಗುವುದು ಅಥವಾ ತಲೆ ತಿರುಗುವುದು
  • ಅಸಹಜ ದಣಿವು ­
  • ಎದೆಯುರಿ (ಅಜೀರ್ಣ)

ಈ ಲಕ್ಷಣಗಳು ಅಸ್ಪಷ್ಟವಾಗಿರಬಹುದು ಮತ್ತು ಹೃದಯಾಘಾತದ ಸಂದರ್ಭದಲ್ಲಿ ಉಂಟಾಗುವ ತೀವ್ರ ಎದೆನೋವಿನಷ್ಟು ಗಮನಕ್ಕೆ ಬರುವಂಥವು ಆಗಿಲ್ಲದೆ ಇರಬಹುದು. ಮಹಿಳೆಯರಲ್ಲಿ ಪ್ರಧಾನ ಅಪಧಮನಿಗಳು ಮಾತ್ರವಲ್ಲದೆ ಹೃದಯಕ್ಕೆ ರಕ್ತವನ್ನು ಸರಬರಾಜು ಮಾಡುವ ಸಣ್ಣ ರಕ್ತನಾಳಗಳಲ್ಲಿ ಕೂಡ ತಡೆ ಉಂಟಾಗುವುದೇ ಇದಕ್ಕೆ ಕಾರಣ; ಈ ತೊಂದರೆಯನ್ನು ಸ್ಮಾಲ್‌ ವೆಸಲ್‌ ಹಾರ್ಟ್‌ ಡಿಸೀಸ್‌ ಅಥವಾ ಕೊರೊನರಿ ಮೈಕ್ರೊವಾಸ್ಕಾಲರ್‌ ಡಿಸೀಸ್‌ ಎಂದು ಕರೆಯಲಾಗುತ್ತದೆ.

ಪುರುಷರಿಗೆ ಹೋಲಿಸಿದರೆ, ಮಹಿಳೆಯರಲಿಲ ವಿಶ್ರಾಂತಿಯಲ್ಲಿದ್ದಾಗ ಅಥವಾ ನಿದ್ದೆಯಲ್ಲಿದ್ದಾಗ ಈ ಲಕ್ಷಣಗಳು ಪ್ರಕಟಗೊಳ್ಳುವುದು ಹೆಚ್ಚು. ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಳ್ಳಲು ಒತ್ತಡ ಪ್ರಚೋದಕವಾಗಿ ಕೆಲಸ ಮಾಡಬಹುದಾಗಿದೆ.

ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಪುರುಷರಿಗಿಂತ ಭಿನ್ನವಾಗಿರಬಹುದಾದ ಕಾರಣ ಮಹಿಳೆಯರಲ್ಲಿ ಹೃದ್ರೋಗಗಳು ಪತ್ತೆಯಾಗುವುದು ಪುರುಷರಿಗಿಂತ ಕಡಿಮೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಅಪಧಮನಿಯಲ್ಲಿ ಹೆಚ್ಚು ತೀವ್ರವಾದ ತಡೆ ಇಲ್ಲದೆಯೂ ಹೃದಯಾಘಾತ ಉಂಟಾಗುವ ಸಾಧ್ಯತೆ ಇದೆ (ನಾನ್‌ಒಬ್‌ಸ್ಟ್ರಕ್ಟಿವ್‌ ಕೊರೊನರಿ ಆರ್ಟರಿ ಡಿಸೀಸ್‌).

ಮಹಿಳೆಯರಿಗೆ ಹೃದಯಾಘಾತದ ಅಪಾಯ ಕಾರಣಗಳು

ಅಧಿಕ ಕೊಲೆಸ್ಟರಾಲ್‌, ಅಧಿಕ ರಕ್ತದೊತ್ತಡ ಮತ್ತು ಬೊಜ್ಜಿನಂತಹ ಕೊರೊನರಿ ಆರ್ಟರಿ ಕಾಯಿಲೆಗಳ ಕೆಲವು ಸಾಂಪ್ರದಾಯಿಕ ಅಪಾಯ ಕಾರಣಗಳು ಮಹಿಳೆಯರು ಮತ್ತು ಪುರುಷರಿಬ್ಬರನ್ನೂ ಬಾಧಿಸುತ್ತವೆ. ಆದರೆ ಇತರ ಕೆಲವು ಅಂಶಗಳು ಮಹಿಳೆಯರಲ್ಲಿ ಹೃದ್ರೋಗಗಳು ಉಂಟಾಗಲು ಪ್ರಧಾನ ಪಾತ್ರ ವಹಿಸಬಹುದಾಗಿವೆ.

ಸಿವಿಡಿ ಉಂಟಾಗಲು ಕೆಲವು ಸ್ತ್ರೀನಿರ್ದಿಷ್ಟ ಅಪಾಯ ಕಾರಣಗಳು ಪ್ರಧಾನ ಪಾತ್ರ ವಹಿಸುತ್ತವೆ. ಸಂತಾನೋತ್ಪತ್ತಿ, ಹಾರ್ಮೋನ್‌ ಸಂಬಂಧಿ ಮತ್ತು ಗರ್ಭಧಾರಣೆಗೆ ಸಂಬಂಧಿಸಿದ ಕೆಲವು ಅಂಶಗಳು ಎಂಡೊಥೇಲಿಯಲ್‌ ಡಿಸ್‌ಫ‌ಂಕ್ಷನ್‌ (ರಕ್ತನಾಳಗಳ ಒಳಪದರಕ್ಕೆ ಹಾನಿಯಾಗುವುದು)ಗೆ ಕಾರಣವಾಗುತ್ತವೆ.

ಇವುಗಳೆಂದರೆ, ­

  • ವಂಶಪಾರಂಪರ್ಯ ಸಾಧ್ಯತೆ ­
  • ಬೇಗನೆ ಅಥವಾ ತಡವಾಗಿ ಋತುಸ್ರಾರ ಆರಂಭವಾಗಿರುವುದು ­
  • ಹದಿಹರಯದಲ್ಲಿ ಮೈಗ್ರೇನ್‌ ತಲೆನೋವು ­
  • ಹದಿಹರಯದಲ್ಲಿ ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಗಳು ­
  • ಪಾಲಿಸಿಸ್ಟಿಕ್‌ ಓವರಿ ಡಿಸೀಸ್‌
  •  ಬೇಗನೆ ಋತುಬಂಧ ವಾಗಿರುವುದು ­
  • ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿರುವ ರುಮಾಟಿಕ್‌ ಆರ್ಥೈಟಿಸ್‌, ಥೈರಾಯ್ಡ ಸಮಸ್ಯೆಗಳಂತಹ ಇತರ ಅನಾರೋಗ್ಯಗಳಿರುವುದು

ಮಹಿಳೆಯರಲ್ಲಿ ಹೃದ್ರೋಗಗಳಿಗೆ ಚಿಕಿತ್ಸೆ

ಸಾಮಾನ್ಯವಾಗಿ ಹೃದ್ರೋಗಗಳಿಗೆ ಚಿಕಿತ್ಸೆಯು ಮಹಿಳೆಯರು ಮತ್ತು ಪುರುಷರಿಗೆ ಸಮಾನವಾಗಿರುತ್ತದೆ. ಔಷಧೋಪಚಾರ, ಆ್ಯಂಜಿಯೊಪ್ಲಾಸ್ಟಿ ಮತ್ತು ಸ್ಟೆಂಟ್‌ ಅಳವಡಿಕೆ ಅಥವಾ ಕೊರೊನರಿ ಬೈಪಾಸ್‌ ಶಸ್ತ್ರಕ್ರಿಯೆ ಇವುಗಳಲ್ಲಿ ಸೇರಿವೆ.

ಮಹಿಳೆಯರು ಮತ್ತು ಪುರುಷರಲ್ಲಿ ಹೃದ್ರೋಗ ಚಿಕಿತ್ಸೆಯಲ್ಲಿ ಕೆಲವು ಗಮನಾರ್ಹ ವ್ಯತ್ಯಾಸಗಳು: ­

  • ಮಹಿಳೆಯರಲ್ಲಿ ಭವಿಷ್ಯದ ಹೃದಯಾಘಾತಗಳನ್ನು ತಡೆಯಲು ಆಸ್ಪಿರಿನ್‌ ಮತ್ತು ಸ್ಟಾಟಿನ್‌ ಔಷಧಗಳನ್ನು ನೀಡುವ ಸಾಧ್ಯತೆಗಳು ಕಡಿಮೆ. ಆದರೆ ಪುರುಷರು ಮತ್ತು ಮಹಿಳೆಯರಲ್ಲಿ ಈ ಔಷಧಗಳಿಂದ ಪ್ರಯೋಜನ ಸಮಾನವಾಗಿರುವುದು ಅಧ್ಯಯನಗಳಿಂದ ತಿಳಿದುಬಂದಿದೆ. ­
  • ಮಹಿಳೆಯರು ಕೊರೊನರಿ ಬೈಪಾಸ್‌ ಶಸ್ತ್ರಕ್ರಿಯೆಗೆ ಒಳಗಾಗುವ ಸಾಧ್ಯತೆಗಳು ಪುರುಷರಿಗಿಂತ ಕಡಿಮೆ. ಮಹಿಳೆಯರಲ್ಲಿ ಅಪಧಮನಿಯ ರಕ್ತನಾಳಗಳಲ್ಲಿ ತಡೆ ಕಾಯಿಲೆ ಕಡಿಮೆ ಇರುವುದು ಅಥವಾ ಸ್ಮಾಲ್‌ ವೆಸಲ್‌ ಡಿಸೀಸ್‌ ಹೆಚ್ಚು ಪ್ರಮಾಣದಲ್ಲಿ ಇರುವುದು ಇದಕ್ಕೆ ಕಾರಣ. ­
  • ಹೃದಯ ಸಂಬಂಧಿ ಪುನರ್ವಸತಿಯಿಂದ ಆರೋಗ್ಯ ಉತ್ತಮಗೊಳ್ಳಬಹುದು ಮತ್ತು ಹೃದ್ರೋಗಗಳಿಂದ ಗುಣ ಹೊಂದುವುದಕ್ಕೆ ಪ್ರಯೋಜನವಾಗಬಹುದು. ಆದರೆ ಮಹಿಳೆಯರನ್ನು ಹೃದಯ ಸಂಬಂಧಿ ಪುನರ್ವಸತಿಗೆ ಶಿಫಾರಸು ಮಾಡುವುದು ಪುರುಷರಿಗೆ ಹೋಲಿಸಿದರೆ ಕಡಿಮೆ.

ಸಾರಾಂಶ

ಅನೇಕ ಕಾರಣಗಳಿಂದ ಕ್ಲಿನಿಕಲ್‌ ಪ್ರಾಕ್ಟೀಸ್‌ನಲ್ಲಿ ಮಹಿಳೆಯರಲ್ಲಿ ಸಿವಿಡಿ ಅಷ್ಟಾಗಿ ಪ್ರತ್ಯೇಕ ಪರಿಗಣನೆಗೆ ಬಾರದ, ವಿಶೇಷವಾಗಿ ಚಿಕಿತ್ಸೆಗೆ ಒಳಪಟ್ಟಿಲ್ಲ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಸಿವಿಡಿಯ ಸಹಜ ಲಕ್ಷಣಗಳು ವಿಭಿನ್ನವಾಗಿರುವುದರಿಂದ ಮಹಿಳೆಯರಲ್ಲಿ ಸಿವಿಡಿಯ ಪ್ರತ್ಯೇಕತೆಯ ಬಗ್ಗೆ ಅರಿವು ಹೆಚ್ಚಬೇಕಾಗಿದೆ. ಈಸ್ಟ್ರೋಜೆನ್‌ ಹಾರ್ಮೋನ್‌ನಿಂದಾಗಿ ಮಹಿಳೆಯರು ಸಿವಿಡಿಯಿಂದ ರಕ್ಷಣೆ ಹೊಂದಿರುತ್ತಾರೆ; ಆದರೆ ಋತುಚಕ್ರ ಬಂಧದ ಬಳಿಕ ಅವರು ಸಿವಿಡಿಗೆ ತುತ್ತಾಗುವ ಅಪಾಯ ಅದೇ ವಯಸ್ಸಿನ ಪುರುಷರಿಗಿಂತ ಹೆಚ್ಚಿರುತ್ತದೆ.

ಮಹಿಳೆಯರಲ್ಲಿ ಸಿವಿಡಿಯ ಪ್ರತ್ಯೇಕ ಆಯಾಮಗಳನ್ನು ವಿಶ್ಲೇಷಿಸಲು ಮತ್ತು ಮಹಿಳೆಯರಲ್ಲಿ ಸಿವಿಡಿಯನ್ನು ಬೇಗನೆ ಪತ್ತೆಹಚ್ಚಲು ಅರಿವು ಮತ್ತು ಪರೀಕ್ಷಾ ಕ್ರಮಗಳು ಅಗತ್ಯವಾಗಿದೆ. ಅಪಾಯ ಕಾರಣಗಳ ಪರಿಣಾಮಕಾರಿ ನಿರ್ವಹಣೆ ಮತ್ತು ಅಂತರ್ಗತ ಅನಾರೋಗ್ಯಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವುದರಿಂದ ಮಹಿಳೆಯರಲ್ಲಿ ಸಿವಿಡಿಯ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.

ಡಾ| ರಾಜೇಶ್‌ ಭಟ್‌ ಯು.,

ಅಸೋಸಿಯೇಟ್‌ ಪ್ರೊಫೆಸರ್‌ ಮತ್ತು ಸೀನಿಯರ್‌ ಇಂಟರ್‌ವೆನ್ಶನಲ್‌ ಕಾರ್ಡಿಯಾಲಜಿಸ್ಟ್‌

ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕಾರ್ಡಿಯಾಲಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.