ಬದಲಾದ ಜೀವನ ಶೈಲಿ, ಜಂಕ್‌ಫುಡ್ ಸಂಸ್ಕೃತಿ…ಇದು ಹೃದಯಾಘಾತಕ್ಕೆ ಕಾರಣ
ಎದೆಯ ನೋವು ಅಥವಾ ಉರಿತ ಮುಖ್ಯವಾಗಿ ದೈಹಿಕ ಶ್ರಮದ ನಂತರ ಕಾಣಿಸಿಕೊಳ್ಳುತ್ತದೆ
Team Udayavani, Dec 19, 2020, 4:15 PM IST
Representative Image
ಭಾರತದಲ್ಲಿಯೂ ಸರಿಸುಮಾರು 7 ಕೋಟಿಗೂ ಅಧಿಕ ಜನರು ಹೃದಯ ಖಾಯಿಲೆಗಳಿಂದ ಬಳಲುತ್ತಿದ್ದು, ಅದರಲ್ಲಿ ವರ್ಷಕ್ಕೆ 25ಲಕ್ಷ ಜನರು ಸಾವಿಗೀಡಾಗುತ್ತಾರೆ. ಅಂದರೆ ಇದು ದೇಶದ ಒಟ್ಟು ಸಾವಿನ ಸಂಖ್ಯೆಯ 25ಪ್ರತಿ ಶತದಷ್ಟು.
ಹೃದಯಾಘಾತ (ಹಾರ್ಟ್ ಅಟ್ಯಾಕ್) ಈಗ ಸಾಮಾನ್ಯ ಎನ್ನುವಂತೆ ಆಗುತ್ತಿದೆ. ಬದಲಾದ ಜೀವನ ಶೈಲಿ, ಜಂಕ್‌ಫುಡ್ ಸಂಸ್ಕೃತಿ, ಕಡಿಮೆ ಆಗುತ್ತಿರುವ ದೈಹಿಕ ಶ್ರಮದ ಕಸರತ್ತು… ಹೀಗೆ ಅನೇಕ ಕಾರಣದಿಂದ ಹೃದಯಾಘಾತಕ್ಕೆ ಒಳಗಾಗುವವರ ಪ್ರಮಾಣ ಹೆಚ್ಚಾಗಿದೆ. ಹಿಂದೆಲ್ಲ ಹಳ್ಳಿ ಜನರು ಹೊಲ-ಮನೆಯಲ್ಲಿ ಕೆಲಸ ಮಾಡುತ್ತಾರೆ. ಅಂತಹವರಿಗೆ ಹಾರ್ಟ್ ಅಟ್ಯಾಕ್… ಆಗುವುದೇ ಇಲ್ಲ ಎಂಬ ಮಾತಿತ್ತು. ಆದರೆ ಈಗ ಗಾಬರಿ ಪಡುವಂತೆ ಗ್ರಾಮೀಣ ಭಾಗದಲ್ಲೂ ಹೃದಯಾಘಾತಕ್ಕೆ ಒಳಗಾಗುವವರ ಪ್ರಮಾಣ ನಗರ ವಾಸಿಗಳ ಮಟ್ಟಕ್ಕೆ ಬರುತ್ತಿದೆ.
ಹೃದ್ರೋಗಗಳಲ್ಲಿ ಹಲವಾರು ಬಗೆ ಇವೆ. ಆದರೂ, ಹೃದಯದ ಸಮಸ್ಯೆ ಎಂದಾಕ್ಷಣ ಥಟ್ಟನೆ ನೆನಪಾಗುವುದು ಹೃದಯಾಘಾತ ಅರ್ಥಾತ್ ಹಾರ್ಟ್ ಅಟ್ಯಾಕ್. ಅಂತಹ ಹಾರ್ಟ್ ಅಟ್ಯಾಕ್‌ನ್ನು ಉತ್ತಮ ಜೀವನ ಶೈಲಿಯಿಂದ ತಡೆಗಟ್ಟಬಹುದು. ಹೃದಯಾಘಾತಕ್ಕೆ ಕಾರಣ, ಲಕ್ಷಣ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಇರುವುದು ಅಗತ್ಯ.
ಹೃದಯಾಘಾತ ಹಾಗೂ ಇತರ ಹೃದಯ ಸಂಬಂಧಿ ಖಾಯಿಲೆಗಳ ಪ್ರಮಾಣ ವಿಶ್ವದಾದ್ಯಂತ ಹೆಚ್ಚಾಗುತ್ತಿದೆ. ಭಾರತದಲ್ಲಿಯೂ ಸರಿಸುಮಾರು 7 ಕೋಟಿ ಜನರು ಹೃದಯ ಖಾಯಿಲೆಗಳಿಂದ ಬಳಲುತ್ತಿದ್ದು, ಅದರಲ್ಲಿ ವರ್ಷಕ್ಕೆ 25ಲಕ್ಷ ಜನರು ಸಾವಿಗೀಡಾಗುತ್ತಾರೆ. ಅಂದರೆ ಇದು ದೇಶದ ಒಟ್ಟು ಸಾವಿನ ಸಂಖ್ಯೆಯ 25 ಪ್ರತಿ ಶತದಷ್ಟು.
ಇದನ್ನೂ ಓದಿ:ಪಶ್ಚಿಮಬಂಗಾಳದಲ್ಲಿ ಬಿಜೆಪಿ ಬೃಹತ್ ಸಮಾವೇಶ, ಶಾ ಸಮ್ಮುಖದಲ್ಲಿ ಸುವೇಂದು ಬಿಜೆಪಿಗೆ
2000 ನೇ ಇಸ್ವಿಯಿಂದೀಚೆಗೆ ಈ ಸಾವಿನ ಪ್ರಮಾಣ ನಗರ ಪ್ರದೇಶಗಳಲ್ಲಿ ಸುಮಾರು 56 ಪ್ರತಿಶತದಷ್ಟು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 40 ಪ್ರತಿಶತದಷ್ಟು ಏರಿಕೆಯಾಗಿದೆ. ಅದರಲ್ಲಿ ಅರ್ಧದಷ್ಟು ಸಾವುಗಳು 70 ವರ್ಷ ವಯಸ್ಸಿನ ಓಳಗಿನವರಲ್ಲಿ ಆಗುತ್ತಿದ್ದು, ಆಯಾ ಕುಟುಂಬಕ್ಕೂ ಹಾಗೂ ಒಟ್ಟಿನಲ್ಲಿ ದೇಶದ ಆರ್ಥಿಕತೆಯ ಮೇಲೂ ಗಾಢವಾದ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಹೃದಯಾಘಾತ ಬೇರೆ ದೇಶಗಳಿಗಿಂತ ಸುಮಾರು ಹತ್ತು ವರ್ಷ ಮುಂಚಿತವಾಗಿಯೇ ಅಂದರೆ ತುಂಬಾ ಚಿಕ್ಕ ವಯಸ್ಸಿನಲ್ಲಿ ಸಂಭವಿಸುತ್ತಿದೆ ಎಂಬುದು ಆತಂಕಕಾರಿ ಸಂಗತಿ.
ಬಹುಮುಖ್ಯ ಕಾರಣಗಳು
ತಂಬಾಕು ಸೇವನೆ, ಸಕ್ಕರೆ ಖಾಯಿಲೆ, ಅಧಿಕ ರಕ್ತದೊತ್ತಡ, ಬೊಜ್ಜುತನ, ದೈಹಿಕ ಶ್ರಮದ ಅಭಾವ, ದೈನಂದಿನ ಜೀವನದಲ್ಲಿನ ಒತ್ತಡಗಳು ಕೊಲೆಸ್ಟ್ರಾಲ್ ಪ್ರಮಾಣದ ಹೆಚ್ಚಳ, ದೇಹದಲ್ಲಿನ ರಕ್ತ ಹೆಪ್ಪುಗಟ್ಟುವ ಕೆಲವು ಅಂಶಗಳಲ್ಲಿನ ಹೆಚ್ಚಳ, ರೋಗದ ಬಗೆಗಿನ ನಿರ್ಲಕ್ಷ.
ಲಕ್ಷಣಗಳು
ಎದೆಯ ನೋವು ಅಥವಾ ಉರಿತ ಮುಖ್ಯವಾಗಿ ದೈಹಿಕ ಶ್ರಮದ ನಂತರ ಕಾಣಿಸಿಕೊಳ್ಳುತ್ತದೆ ಹಾಗೂ ವಿಶ್ರಾಂತಿ ತೆಗೆದುಕೊಂಡರೆ ನೋವು ಸ್ವಲ್ಪ ಕಡಿಮೆಯಾಗುವುದು. ಎದೆನೋವು ಒಮ್ಮೊಮ್ಮೆ ಎಡಗೈಗೆ ಹಾಗೂ ಬೆನ್ನಿಗೆ ಕೂಡ ಹರಡಬಹುದು. ಜೊತೆಗೆ ಸುಸ್ತು, ಅತೀವ ಬೆವರುವಿಕೆ, ತಲೆಸುತ್ತು, ಉಸಿರಾಟದ ತೊಂದರೆ, ವಾಂತಿ ಮುಂತಾದವುಗಳು ಖಾಯಿಲೆಯ ತೀವ್ರತೆಯನ್ನು ತೋರಿಸುತ್ತವೆ.
ಅಂತಹ ಸಂದರ್ಭಗಳಲ್ಲಿ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಅನೇಕ ವೇಳೆ ಗ್ಯಾಸ್ಟ್ರಿಕ್ ತೊಂದರೆ ಎಂದು ತುಂಬಾ ಜನ ಅದನ್ನು ನಿರ್ಲಕ್ಷಿಸುವುದರಿಂದ ಆಸ್ಪತ್ರೆಗೆ ಬರುವುದು ತಡವಾಗಿ, ರೋಗದ ಲಕ್ಷಣಗಳು ತೀವ್ರ ಪ್ರಮಾಣಕ್ಕೆ ಹೋಗಿ ಸಾವು ಸಂಭವಿಸುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಯಾವುದೇ ತರಹದ ಎದೆನೋವು, ಉಸಿರಾಟದ ತೊಂದರೆಯಾದಲ್ಲಿ ವೈದ್ಯರ ಸಲಹೆ ಅತ್ಯಗತ್ಯ.
ಪರೀಕ್ಷಾ ವಿಧಾನಗಳು
ಇಸಿಜಿ, ಎಕೋಕಾರ್ಡಿಯೋಗ್ರಾಫಿ ಎನ್ನುವ ರಕ್ತ ಪರೀಕ್ಷೆಗಳಿಂದ ರೋಗವನ್ನು ಹಾಗೂ ಅದರ ತೀವ್ರತೆಯನ್ನು ಕಂಡು ಹಿಡಿಯಬಹುದು. ಅದಕ್ಕೆ ತುರ್ತುಚಿಕಿತ್ಸೆ ಅಗತ್ಯ. ಒಂದು ವೇಳೆ ರೋಗಿಗೆ ತುಂಬಾ ಶ್ರಮವಾದಾಗ ಮಾತ್ರ ಎದೆನೋವು ಬರುತ್ತಿದ್ದರೆ ಕೇವಲ ಇಸಿಜಿ ಹಾಗೂ ಎಕೋ ಪರೀಕ್ಷೆಗಳಲ್ಲಿ ಯಾವುದೇ ತೊಂದರೆ ಕಾಣದೇ ಇರಬಹುದು. ಅಂತಹರಿಗೆ ವಿಶೇಷ ಪರೀಕ್ಷೆ ಮಾಡುವುದರ ಮೂಲಕ ಮೊದಲ ಹಂತದಲ್ಲಿಯೇ ರೋಗವನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆಯನ್ನು ನೀಡಬಹುದು.
ಚಿಕಿತ್ಸಾ ವಿಧಾನಗಳು
ಹೃದಯಾಘಾತವಾಗಿದ್ದಲ್ಲಿ ರೋಗಿಗೆ ತುರ್ತುಚಿಕಿತ್ಸೆ ನೀಡಬೇಕಾಗುತ್ತದೆ. ತೀವ್ರತೆ ಕಡಿಮೆಯಿದ್ದಲ್ಲಿ ಕೇವಲ ಔಷ ಧಿಗಳಿಂದ ಹೃದಯಾಘಾತ ಹೆಚ್ಚಾಗದಂತೆ ನೋಡಿಕೊಳ್ಳಬಹುದು. ರೋಗದ ಪ್ರಮಾಣ ಕಂಡು ಹಿಡಿಯಲು ಆ್ಯಂಜಿಯೋಗ್ರಾಂ ಪರೀಕ್ಷೆಯನ್ನು ಮಾಡಿ ಅದರಲ್ಲಿ ಹೃದಯದ ರಕ್ತನಾಳದಲ್ಲಿ ಎಷ್ಟು ಬ್ಲಾಕೇಜ್ ಇವೆ ಎನ್ನುವ ಆಧಾರದ ಮೇಲೆ ಆ್ಯಂಜಿಯೋಪ್ಲಾಸ್ಟಿ ಮಾಡಿ ಸ್ಟಂಟ್ ಅನ್ನು ಅಳವಡಿಸಬಹುದು. ಅಥವಾ ಬ್ಲಾಕೇಜಸ್ ಹೆಚ್ಚಾಗಿದ್ದಲ್ಲಿ ಅಂತಹವರಿಗೆ ಇದನ್ನು ಮಾಡಬೇಕಾಗುತ್ತದೆ. ಈ ಎಲ್ಲಾ ಚಿಕಿತ್ಸೆಗಳಿಗೆ ಸುಸಜ್ಜಿತವಾದ ಆಸ್ಪತ್ರೆ ಹಾಗೂ ಸಂಕೀರ್ಣ ಸಲಕರಣೆಗಳು ಅತ್ಯಗತ್ಯ. ನಾರಾಯಣ ಹೃದಯಾಲಯದ ಅಂಗ ಸಂಸ್ಥೆ ಎಸ್.ಎಸ್. ನಾರಾಯಣ ಹಾರ್ಟ್ ಸೆಂಟರ್ ಕಳೆದ ಏಳು ವರ್ಷಗಳಿಂದ ಮಧ್ಯ ಕರ್ನಾಟಕದ ಹೃದಯರೋಗಿಗಳಿಗೆ ಅತ್ಯುತ್ತಮ ಆರೈಕೆ ಒದಗಿಸುತ್ತಿದೆ.
ಡಾ| ಶ್ರೀನಿವಾಸ್ ಬಿ. ಹೃದ್ರೋಗ ತಜ್ಞರು, ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್ ದಾವಣಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.