ಹಿಮ್ಮಡಿ ಬಿರುಕಿನಿಂದ ಮುಕ್ತಿ ಪಡೆಯಲು ಇಲ್ಲಿವೆ ಸರಳ ಸೂತ್ರಗಳು
Team Udayavani, Nov 12, 2020, 10:07 AM IST
ಚಳಿಗಾಲದಲ್ಲಿ ಪ್ರತಿಯೊಬ್ಬರಿಗೂ ಪಾದಗಳು ಒಡೆಯುವ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಮುಖ್ಯವಾಗಿ ಪಾದ ಗಳನ್ನು ನಾವು ಸಂಪೂರ್ಣವಾಗಿ ಕಡೆಗಣಿಸುವುದು. ಹೀಗಾಗಿ ಪಾದಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ.
ಒಂದು ಟಬ್ ಬಿಸಿ ನೀರು ತೆಗೆದುಕೊಳ್ಳಿ ಮತ್ತು ಇದಕ್ಕೆ ಲಿಂಬೆ ರಸ, ಕಲ್ಲು ಉಪ್ಪು, ಗ್ಲಿಸರಿನ್ ಮತ್ತು ರೋಸ್ ವಾಟರ್ ಹಾಕಿ. ಈ ನೀರಿನಲ್ಲಿ 15-20 ನಿಮಿಷ ಕಾಲ ಕಾಲನ್ನು ಅದ್ದಿಟ್ಟುಕೊಳ್ಳಿ. ಪಾದವನ್ನು ತೊಳೆದುಕೊಂಡು ಒರೆಸಿದ ಬಳಿಕ ಮಾಶ್ಚರೈಸರ್ ಹಚ್ಚಿಕೊಳ್ಳಿ.
ಗ್ಲಿಸರಿನ್, ರೋಸ್ ವಾಟರ್ ಮತ್ತು ಲಿಂಬೆ ರಸ ಹಾಕಿಕೊಂಡು ನೀವು ಫುಟ್ ಮಾÓR… ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಒಡೆದಿರುವ ಪಾದಗಳಿಗೆ ಹಚ್ಚಿಕೊಳ್ಳಿ ಮತ್ತು ರಾತ್ರಿಯಿಡೀ ಹಾಗೆಯೇ ಬಿಟ್ಟುಬಿಡಿ.
ಬೆಚ್ಚಗಿನ ನೀರಿನಲ್ಲಿ ಪಾದವನ್ನು ನೆನೆಸಿ, ಅನಂತರ ಮೃದುವಾಗಿ ಮಸಾಜ್ ಮಾಡಿ. ಸತ್ತ ಜೀವಕೋಶಗಳನ್ನು ತೆಗೆದು, ಪಾದಗಳನ್ನು ತೊಳೆದು ಒಣಗಿಸಿಕೊಳ್ಳಿ. ಅನಂತರ ಅಲೋವೆರಾ ಜೆಲ್ ಹಚ್ಚಿ, ಸಾಕ್ಸ್ ಧರಿಸಿ ಮಲಗಿ. ಮುಂಜಾನೆ ಕಾಲನ್ನು ಶುದ್ಧಗೊಳಿಸಿ.
ಬಾಳೆಹಣ್ಣು ಒಳ್ಳೆಯ ಮಾಶ್ಚರೈಸರ್ ಆಗಿ ಕೆಲಸ ಮಾಡುವುದು. ಇದು ಚರ್ಮವನ್ನು ತುಂಬಾ ನಯವಾಗಿಸುವುದು. ಒಡೆದಿರುವ ಪಾದಗಳಿಗೆ ಬಾಳೆಹಣ್ಣನ್ನು ಹಚ್ಚಿಕೊಳ್ಳಿ. 15-20 ನಿಮಿಷ ಹಾಗೆಯೇ ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಅರ್ಧ ಬಕೆಟ್ ಬಿಸಿ ನೀರು ತೆಗೆದುಕೊಳ್ಳಿ ಮತ್ತು ಇದಕ್ಕೆ ಅರ್ಧ ಕಪ್ ಜೇನುತುಪ್ಪ ಹಾಕಿ. ಈ ನೀರಿನಲ್ಲಿ 15-20 ನಿಮಿಷ ಕಾಲ ಕಾಲನ್ನು ಅದ್ದಿಟ್ಟುಕೊಳ್ಳಿ. ಒಣ ಚರ್ಮವನ್ನು ಕಿತ್ತುಹಾಕಲು ಸðಬ್ ಮಾಡಿ. ಜೇನುತುಪ್ಪವು ನೈಸರ್ಗಿಕವಾಗಿ ಒಡೆದಿರುವ ಚರ್ಮವನ್ನು ಶಮನ ಮಾಡಿ, ನಯಗೊಳಿಸುವುದು.
ಅರ್ಧ ಬಕೆಟ್ ಬಿಸಿ ನೀರಿಗೆ ಅಡುಗೆ ಸೋಡಾ ಹಾಕಿ. ನೀರಿನಲ್ಲಿ ಇದು ಸರಿಯಾಗಿ ಕರಗಲಿ. ಇದರ ಬಳಿಕ ಕಾಲುಗಳನ್ನು ಇದರಲ್ಲಿ ಅದ್ದಿಟ್ಟುಕೊಳ್ಳಿ ಮತ್ತು 10-15 ನಿಮಿಷಗಳ ಕಾಲ ಹಾಗೆ ಬಿಡಿ. ನೀರಿನಲ್ಲಿ ಅದ್ದಿಟ್ಟ ಬಳಿಕ ತುಂಬಾ ನಿಧಾನವಾಗಿ ಫ್ಯೂಮಿಕ್ ಕಲ್ಲಿನಿಂದ ಸðಬ್ ಮಾಡಿಕೊಳ್ಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್
World Osteoporosis Day: ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವಕಳಿ ಎಂದರೇನು?
Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್ 16
Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ
Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.