ಮನೆಮದ್ದು : ಶ್ವೇತ ವರ್ಣದ ಹಲ್ಲುಗಳಿಗಾಗಿ
Team Udayavani, Mar 6, 2018, 9:00 AM IST
ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸಲು ನಗು ಅತೀ ಅಗತ್ಯ. ನಗು ಆಕರ್ಷಣೀಯವಾಗಿರಲು ಸುಂದರ ಹಲ್ಲುಗಳು ಅನಿವಾರ್ಯ. ಆದ್ದರಿಂದ ಹಲ್ಲುಗಳ ಬಗ್ಗೆ ಕಾಳಜಿ ವಹಿಸುವುದು ಅತೀ ಮುಖ್ಯ. ಹಲ್ಲುಗಳು ಹಳದಿಯಾಗದಂತೆ ರಕ್ಷಿಸಲು ವಿಟಮಿನ್ ಎ ಅಧಿಕವಾಗಿರುವ ಹಸುರು ತರಕಾರಿಗಳ ಸೇವನೆ ಸಹಕಾರಿ. ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿರುವುದರಿಂದ ಅವುಗಳ ಸೇವನೆ ಹಲ್ಲುಗಳನ್ನು ಗಟ್ಟಿಯಾಗಿಸುತ್ತವೆ. ಅಲ್ಲದೆ ಬೆಳ್ಳಗೆ ಹೊಳೆಯುವಂತೆ ಮಾಡುತ್ತವೆ. ಎಣ್ಣೆ ತಿಂಡಿ, ಮಸಾಲೆಯುಕ್ತ ಕರುಕುರು ತಿಂಡಿಗಳು, ಚಾಕಲೇಟ್, ಫಾಸ್ಟ್‌ಪುಡ್‌ಗಳಿಂದ ದೂರ ಇದ್ದಷ್ಟು ಹಲ್ಲುಗಳ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ಅವುಗಳು ಬೆಳ್ಳಗಿರುತ್ತವೆ.
ಹಳದಿ ಹಲ್ಲುಗಳು ವ್ಯಕ್ತಿಯಲ್ಲಿ ಕೀಳರಿಮೆಗೆ ಕಾರಣವಾಗಿ ಆತ ಮಾನಸಿಕವಾಗಿ ನೊಂದುಕೊ ಳ್ಳುವಂತೆ ಮಾಡುತ್ತವೆ. ಅಲ್ಲದೆ ಹಳದಿ ಹಲ್ಲು ಹೊಂದಿರುವ ವ್ಯಕ್ತಿ ಇತರರೊಂದಿಗೆ ಮಾತನಾಡಲು, ಬೆರೆಯಲು ಹಿಂಜರಿಯುತ್ತಾರೆ. ಆದ್ದರಿಂದ ಹಳದಿ ಹಲ್ಲುಗಳಿಂದ ಮುಕ್ತಿ ಹೊಂದಲು ಕೆಲವೊಂದು ಮನೆ ಮದ್ದುಗಳನ್ನು ಬಳಸುವುದು ಉತ್ತಮ.
ಮನೆಮದ್ದು
· ಅಡುಗೆ ಸೋಡ, ಉಪ್ಪು, ಮಾವಿನ ಎಲೆ, ಗೇರು ಎಲೆ ಇತ್ಯಾದಿಗಳನ್ನು ಬಳಸಿ ಹಲ್ಲು ಉಜ್ಜುವುದರಿಂದ ಹೊಳಪು ಲಭಿಸುವುದು.
· ಉಪ್ಪು, ಸೋಡಾ, ಪುದೀನ ಎಲೆಗಳನ್ನು ಬೆರೆಸಿ ಪೇಸ್ಟ ಮಾಡಿಕೊಳ್ಳಿ. ಇದನ್ನು ಹಲ್ಲುಗಳ ಮೇಲೆ ಹಚ್ಚಿ 20 ನಿಮಿಷ ಬಿಡಿ, ಅನಂತರ ಬಿಸಿನೀರಿನಲ್ಲಿ ಬಾಯಿ ಮುಕ್ಕಳಿಸಿ. ಇದು ಹಲ್ಲು ಹಳದಿಯಾಗಿರುವುದನ್ನು ನಿವಾರಿಸುತ್ತದೆ.
· ಬೇವಿನ ಎಲೆಯನ್ನು ನೀರೊಳಗೆ ಹಾಕಿ ಕುದಿಸಿ, ಕಷಾಯ ಮಾಡಿ ಮೌತ್‌ವಾಶ್‌ನಂತೆ ಬಳಸಿ.
· ಕಬ್ಬನ್ನು ಜಗಿದು ತಿನ್ನುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ. ಹಲ್ಲಿನ ಮೇಲಿನ ಕಲೆ, ಹಲ್ಲು ಹಳದಿಯಾಗುವುದನ್ನು ತಡೆಯಬಹುದು.
· ಕ್ಯಾಲ್ಷಿಯಂ ಹೇರಳವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಿ.
· ನಿಂಬೆ ರಸವನ್ನು ಉಪ್ಪಿನೊಂದಿಗೆ ಮಿಶ್ರ ಮಾಡಿ ಹಲ್ಲುಜ್ಜುವುದರಿಂದ ಹೊಳಪು ಲಭಿಸುತ್ತದೆ.
· ನಿಂಬೆಹಣ್ಣಿನ ಸಿಪ್ಪೆಯಿಂದ ಉಜ್ಜಿದರೂ ಹಲ್ಲುಗಳು ಬೆಳ್ಳಗಾಗುತ್ತವೆ.
· ವಿವಿಧ ಜೀವಸತ್ವಗಳಿರುವ ತರಕಾರಿಗಳ ಸೇವನೆ ಉತ್ತಮ.
· ಹಲ್ಲುಗಳ ವರ್ಣ ಬದಲಾಯಿಸುವ ಆಂಟಿ ಬಯೋಟಿಕ್‌ಗಳ ಅನಗತ್ಯ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ.
· ಸ್ಟ್ರಾಬೆರಿಯಿಂದ ಉಜ್ಜುವುದರಿಂದಲೂ ಹಳದಿ ಹಲ್ಲಿನಿಂದ ಮುಕ್ತಿ ಪಡೆಯಬಹುದು.
· ಪುದೀನ ಬಳಸಿರುವ ಟೂತ್ ಪೇಸ್ಟ್ ಬಳಕೆ ಉಪಯುಕ್ತ.
· ತೆಂಗಿನೆಣ್ಣೆ ಒಂದು ಚಮಚ ಬಾಯಿಗೆ ಹಾಕಿ 5 ನಿಮಿಷಗಳ ಬಳಿಕ ಬಾಯಿ ಮುಕ್ಕಳಿಸಿ.
· ಬೇವಿನ ಎಣ್ಣೆ ಬಳಸಿ ಮೌತ್‌ವಾಶ್ ಮಾಡಿ.
· ತುಳಸಿ ಎಲೆಗಳನ್ನು ನೆರಳಲ್ಲಿ ಇಟ್ಟು ಒಣಗಿಸಿ ಪುಡಿಮಾಡಿ ಹಲ್ಲುಜ್ಜಲು ಉಪಯೋಗಿಸಿ.
· ಸ್ವಲ್ಪ ತೆಂಗಿನೆಣ್ಣೆಗೆ ಚಿಟಿಕೆಯಷ್ಟು ಅರಿಸಿ ನ ಪುಡಿ ಮಿಶ್ರ ಮಾಡಿ ಹಲ್ಲುಜ್ಜಿ.
· ಅರಿಸಿನವನ್ನು ಹಾಲಿನೊಂದಿಗೆ ಚೆನ್ನಾಗಿ ಮಿಶ್ರ ಮಾಡಿ ಹಲ್ಲುಜ್ಜಲು ಬಳಸಬಹುದು.
ಜಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್
World Osteoporosis Day: ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವಕಳಿ ಎಂದರೇನು?
Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್ 16
Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ
Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.