ಮನೆಯಲ್ಲೆ ತಯಾರಿಸಿ ಆರೋಗ್ಯಕರ ಜ್ಯೂಸ್‌ಗಳು
Team Udayavani, Aug 8, 2017, 10:24 AM IST
ಹಣ್ಣುಗಳು, ಹಾಲು, ಖರ್ಜೂರ ಇತ್ಯಾದಿಗಳನ್ನು ಉಪಯೋಗಿಸಿ ವಿವಿಧ ಜ್ಯೂಸ್‌ಗಳನ್ನು ಸೇವಿಸುವುದರಿಂದ ರುಚಿಯೊಂದಿಗೆ ಶಕ್ತಿಯನ್ನೂ ಪಡೆದು ಆರೋಗ್ಯದೊಂದಿಗೆ ನಳನಳಿಸಬಹುದು.
ಆ್ಯಪಲ್ ಜ್ಯೂಸ್
ಬೇಕಾಗುವ ಸಾಮಗ್ರಿ:
ಸೇಬು – ಒಂದು, ನೆನೆಸಿದ ಒಣದ್ರಾಕ್ಷಿ- ಹತ್ತು, ಜೇನುತುಪ್ಪ – ಎರಡು ಚಮಚ.
ತಯಾರಿಸುವ ವಿಧಾನ:
ಸಿಪ್ಪೆ ಸಹಿತ ಸೇಬನ್ನು ಒಣದ್ರಾಕ್ಷಿಯೊಂದಿಗೆ ಮಿಕ್ಸಿಯಲ್ಲಿ ರುಬ್ಬಿ ನಂತರ ಬೇಕಾದಷ್ಟು ನೀರು ಸೇರಿಸಿಕೊಂಡು ಪುನಃ ರುಬ್ಬಿ . ಬೇಕಷ್ಟು ನೀರು ಸೇರಿಸಿ ಹದ ಮಾಡಿಕೊಳ್ಳಿ. ಜೇನುತುಪ್ಪಸೇರಿಸಿ ಸರ್ವ್ ಮಾಡಬಹುದು. ಸೇವಿಸಿದ ಕೂಡಲೇ ಶಕ್ತಿ ಕೊಡುವ ಈ ಪಾನಕದ ಸೇವನೆ ಜಠರದ ಹುಣ್ಣು , ಹೊಟ್ಟೆಉರಿ ಇತ್ಯಾದಿ ಸಮಸ್ಯೆಗಳಿಗೆ ಉತ್ತಮ ಪ್ರಯೋಜನಕಾರಿ.
ಖರ್ಜೂರ ವಿದ್ ಬನಾನ ಶೇಕ್
ಬೇಕಾಗುವ ಸಾಮಗ್ರಿ:
ನೆನೆಸಿದ ಖರ್ಜೂರ – ಎಂಟು, ಹಾಲು – ಎರಡು ಕಪ್, ಬಾಳೆಹಣ್ಣು – ಒಂದು, ಸಕ್ಕರೆ – ನಾಲ್ಕು ಚಮಚ, ಏಲಕ್ಕಿ – ಸುವಾಸನೆಗಾಗಿ, ಬಾದಾಮಿತರಿ- ಒಂದು ಚಮಚ.
ತಯಾರಿಸುವ ವಿಧಾನ:
ಮಿಕ್ಸಿಜಾರಿಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಸ್ವಲ್ಪ ಹಾಲು ಸೇರಿಸಿ ರುಬ್ಬಿ. ನಂತರ, ಇದಕ್ಕೆ ತಂಪಾದ ಹಾಲು ಸೇರಿಸಿ ಪುನಃ ರುಬ್ಬಿ . ಸರ್ವ್ ಮಾಡುವಾಗ ಮೇಲಿನಿಂದ ಬಾದಾಮಿ ಚೂರುಗಳನ್ನು ಉದುರಿಸಿ.
ಗೀತಸದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.