ವಜ್ರಾಸನದಿಂದ ಅಜೀರ್ಣ ಸಮಸ್ಯೆ ದೂರ; ವಜ್ರಾಸನದ ಪ್ರಯೋಜನ
ಊಟವಾದ ಬಳಿಕ ಈ ಆಸನದಲ್ಲಿ ಕೂರುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು
Team Udayavani, Nov 30, 2020, 1:05 PM IST
ಅಜೀರ್ಣ ಸಮಸ್ಯೆಯು ಬಹುತೇಕರನ್ನು ಕಾಡುತ್ತದೆ. ಕಿರಿಕಿರಿ ಉಂಟು ಮಾಡುವ ಇದನ್ನು ನಿರ್ಲಕ್ಷಿಸಿದರೆ ಗಂಭೀರ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡಬಹುದು. ಅಜೀರ್ಣವು ಹೊಟ್ಟೆಯುಬ್ಬರ, ಹೈಪರ್ ಆ್ಯಸಿಡಿಟಿ, ಮಲಬದ್ಧತೆ, ಹೊಟ್ಟೆಯ ಉರಿಯೂತ, ಅಲ್ಸರ್ ಮತ್ತು ಇತರ ಜೀರ್ಣಾಂಗವ್ಯೂಹದ ತೊಂದರೆಗಳಿಗೆ ಕಾರಣವಾಗುತ್ತದೆ.
ನಾವು ತಿಂದ ಆಹಾರವು ಜೀರ್ಣವಾಗಲು ಜಠರವು ಸರಿಯಾಗಿ ಕಾರ್ಯವನ್ನು ನಿರ್ವಹಿಸಬೇಕು. ಈ ವ್ಯವಸ್ಥೆಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದರೆ ಅಜೀರ್ಣ, ಹೊಟ್ಟೆಯ ಸಮಸ್ಯೆ ಕಾಣಿಸುತ್ತದೆ. ಅಜೀರ್ಣ ಉಂಟಾದರೆ ನಮ್ಮ ದೇಹದ ಎಲ್ಲ ಅಂಗಗಳ ಕಾರ್ಯ ವ್ಯವಸ್ಥೆಗೆ ಅಡಚಣೆಯುಂಟಾಗುತ್ತದೆ.
ಇದರಿಂದಾಗಿ ಜೀರ್ಣಕ್ರಿಯೆಯು ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ಆವಶ್ಯಕ. ಹಾಗಾಗಿ ತುಂಬಾ ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ ಪ್ರತಿದಿನ ಒಂದು ನಿಮಿಷ ವಜ್ರಾಸನ ಮಾಡಿದರೆ ಸಾಕು ನಿಮ್ಮ ಸಮಸ್ಯೆ ದೂರವಾಗುವುದು. ಊಟವಾದ ಬಳಿಕ ಈ ಆಸನದಲ್ಲಿ ಕೂರುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಇಲ್ಲಿ ವಜ್ರಾಸನ ಭಂಗಿ ಹಾಗೂ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ:ಪಟ್ಟು ಬಿಡದ ರೈತರು-ಗಡಿಯಲ್ಲಿ ಮುಂದುವರಿದ ಹೋರಾಟ: ಅಮಿತ್ ಶಾ, ಟೋಮರ್ ಮಾತುಕತೆ ಅಂತ್ಯ
ವಜ್ರಾಸನ ಮಾಡುವ ವಿಧಾನ
ಸುಖಾಸನ ಸ್ಥಿತಿಯಲ್ಲಿ ನೇರವಾಗಿ ಕುಳಿತು, ಕಾಲುಗಳನ್ನು ಒಂದಾದ ಬಳಿಕ ಒಂದರಂತೆ ಮುಂದಕ್ಕೆ ಚಾಚಿ, ಅನಂತರ ಒಂದಾದ ಬಳಿಕ ಒಂದರಂತೆ ಕಾಲುಗಳನ್ನು ಮಡಚಿ, ಕೈಯಗಳನ್ನು ತೊಡೆಯ ಮೇಲೆ ಇಟ್ಟು ಕುಳಿತು ನಿಧಾನಕ್ಕೆ ಉಸಿರು ಎಳೆದು ಬಿಡಿ.
ವಜ್ರಾಸನದ ಪ್ರಯೋಜನ
*ರಕ್ತ ಸಂಚಾರ ಸರಾಗವಾಗಿ ನಡೆಯುವುದು
*ಅಜೀರ್ಣ ಸಮಸ್ಯೆ ಇದ್ದವರು ಈ ಯೋಗ ಮಾಡಿದರೆ ಜೀರ್ಣಕ್ರಿಯೆಗೆ ಸಹಕಾರಿ. ಊಟವಾದ ಬಳಿಕ ಈ ಆಸನದಲ್ಲಿ 1 ನಿಮಿಷ ಕುಳಿತುಕೊಳ್ಳಿ.
*ಬೆನ್ನು ಮೂಳೆಗೆ ಉತ್ತಮ ವ್ಯಾಯಾಮ.
*ಕಿಬ್ಬೊಟ್ಟೆಯ ಸ್ನಾಯುಗಳು ಬಲವಾಗುತ್ತವೆ.
*ತೊಡೆ ದಪ್ಪಗಿರುವವರು ಈ ವ್ಯಾಯಾಮದಿಂದ ಆಕರ್ಷಕ ತೊಡೆಗಳನ್ನು ಪಡೆಯಬಹುದು.
*ಮಂಡಿಯ ಆರೋಗ್ಯಕ್ಕೆ ಒಳ್ಳೆಯದು.
*ಕಾಲಿನ ಮಣಿಗಂಟನ್ನು ಬಲವಾಗಿಸುತ್ತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್
World Osteoporosis Day: ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವಕಳಿ ಎಂದರೇನು?
Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್ 16
Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ
Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.