![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Dec 13, 2021, 10:55 AM IST
ಹೈದರಾಬಾದ್: ಒಬ್ಬ ಮನುಷ್ಯನ ಉಸಿರಾಡು ತ್ತಿರುವ ಶ್ವಾಸಕೋಶವನ್ನೇ ಬೇರೊಬ್ಬ ಮನುಷ್ಯನ ದೇಹದೊಳಗೆ ಕಸಿ ಮಾಡುವ ಶಸ್ತ್ರಚಿಕಿತ್ಸೆಯಲ್ಲಿ ತೆಲಂಗಾಣದ ಹೈದರಾಬಾದ್‌ನ ವೈದ್ಯರು ಯಶಸ್ವಿ ಯಾಗಿದ್ದಾರೆ. ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ಪ್ರಯೋಗ ನಡೆದಿದ್ದು, ಈ ಮೂಲಕ ಅತ್ಯಾ ಧುನಿಕ ತಂತ್ರಗಾರಿಕೆಯ ಮೂಲಕ ಶ್ವಾಸಕೋಶ ಕಸಿ ಮಾಡುವ ದೇಶಗಳ ಪಟ್ಟಿಗೆ ಭಾರತವೂ ಸೇರಿಕೊಂಡಿದೆ.
ಈ ಪ್ರೊಸೆಸ್‌ನಲ್ಲಿ ದಾನ ಪಡೆದ ಶ್ವಾಸಕೋಶವನ್ನು “ಆರ್ಗನ್ ರೀ- ಕಂಡೀಶನಿಂಗ್ ಬಾಕ್ಸ್’ನೊಳಗಿಟ್ಟು, ಕೃತಕವಾಗಿ ಆ ಶ್ವಾಸಕೋಶ ಉಸಿರಾ ಡುವಂತೆ ಮಾಡಲಾಗುವುದು. ಅದನ್ನು ಅಗತ್ಯವಿರುವ ರೋಗಿಗೆ ಕಸಿ ಮಾಡಬೇಕೆನ್ನುವ ಸಮಯ ದಲ್ಲಿ ಬಾಕ್ಸ್‌ನಿಂದ ನೇರವಾಗಿ ತೆಗೆದು, ಆ ರೋಗಿಯ ದೇಹದೊಳಗೆ ಕೂರಿಸಲಾಗುವುದು. ಇದರಿಂದಾಗಿ ಕಸಿ ಮಾಡಿಸಿಕೊಳ್ಳುವ ದೇಹ, ಆ ಶ್ವಾಸಕೋಶದೊಂದಿಗೆ ಬಹಳ ಬೇಗ ಹೊಂದಿಕೊಳ್ಳುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ಮಧ್ಯಪ್ರದೇಶದ 5 ಕಡೆ ಡ್ರೋನ್ ತಂತ್ರಜ್ಞಾನ ಶಾಲೆ: ಜ್ಯೋತಿರಾಧಿತ್ಯ ಸಿಂಧಿಯಾ
ವೇಸ್ಟೇಜ್ ನಿಯಂತ್ರಣ: ಸಾಮಾನ್ಯ ವಾಗಿ ದಾನ ಪಡೆಯಲಾಗುವ ಎಲ್ಲ ಶ್ವಾಸಕೋಶಗಳನ್ನು ಕಸಿ ಮಾಡು ವುದಕ್ಕೆ ಸಾಧ್ಯವಾಗುವುದಿಲ್ಲ. ಅನೇಕ ಶ್ವಾಸಕೋಶಗಳು ಅಲರ್ಜಿ ಯಿಂದಾಗಿ ಅಥವಾ ಆಂತರಿಕ ಭಾಗ ನಿಷ್ಕ್ರಿಯ ವಾಗುವುದರಿಂದ ಬಳಕೆಯ ಯೋಗ್ಯತೆಯನ್ನು ಕಳೆದುಕೊಳ್ಳು ತ್ತದೆ. ಅದನ್ನು “ವೇಸ್ಟೇಜ್’ ಎನ್ನಲಾಗುತ್ತದೆ. ಈ ಕಟಿಂಗ್ ಎಡ್ಜ್ ಪ್ರೊಸೆಸ್ ಬಳಕೆಯಿಂದ ವೇಸ್ಟೇಜ್ ಪ್ರಮಾಣ ಶೇ. 30 ಕಡಿಮೆಯಾಗಲಿದೆ. ಹಾಗೆಯೇ ದಾನ ಪಡೆದ ಅನಂತರ ಕಸಿ ಮಾಡುವುದಕ್ಕೂ ಹೆಚ್ಚು ಸಮಯಾ ವಕಾಶ ಸಿಗಲಿದೆ ಎಂದು ವೈದ್ಯರು ಮಾಹಿತಿ ಕೊಟ್ಟಿದ್ದಾರೆ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.