Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ


Team Udayavani, Dec 22, 2024, 3:32 PM IST

3(1

ದಂಪತಿಯು ಒಂದು ವರ್ಷ ಅವಧಿಯ ಮುಕ್ತ ಲೈಂಗಿಕ ಸಂಪರ್ಕ ನಡೆಸಿದ ಬಳಿಕವೂ ಗರ್ಭಧಾರಣೆ ಆಗದೆ ಇದ್ದಲ್ಲಿ ಅದನ್ನು ಸಂತಾನಹೀನತೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಇದು ಒಂದು ಸಂಕೀರ್ಣ ಸಮಸ್ಯೆಯಾಗಿದ್ದು, ದೈಹಿಕ, ಹಾರ್ಮೋನ್‌ ಸಂಬಂಧಿಯಾದ ಮತ್ತು ವಂಶವಾಹಿ ಅಂಶಗಳ ಸಹಿತ ಹಲವಾರು ವಿಷಯಗಳು ಇದಕ್ಕೆ ಕಾರಣವಾಗಬಲ್ಲವು. ಸಂತಾನೋತ್ಪತ್ತಿಯ ಮೇಲೆ ಪ್ರಭಾವ ಬೀರುವ ಗರ್ಭಕೋಶದ ಸಮಸ್ಯೆಗಳನ್ನು ಪತ್ತೆಹಚ್ಚಿ, ಚಿಕಿತ್ಸೆ ಒದಗಿಸುವುದಕ್ಕೆ ಪ್ರಜನನ ತಜ್ಞರಿಗೆ ಲಭ್ಯವಿರುವ ಅನೇಕ ಕಾರ್ಯವಿಧಾನಗಳ ಪೈಕಿ ಹಿಸ್ಟರೊಸ್ಕೋಪಿಯು ಬಹಳ ಮುಖ್ಯವಾದುದಾಗಿದೆ. ಹಿಸ್ಟರೊಸ್ಕೋಪಿ ಎಂದರೇನು, ಸಂತಾನಹೀನತೆಯ ನಿರ್ವಹಣೆಗೆ ಇದನ್ನು ಹೇಗೆ ಉಪಯೋಗಿಸಲಾಗುತ್ತದೆ ಹಾಗೂ ಗರ್ಭಕೋಶದ ಹಲವಾರು ಸಮಸ್ಯೆಗಳನ್ನು ಪತ್ತೆಹಚ್ಚಿ, ಚಿಕಿತ್ಸೆ ಒದಗಿಸುವಲ್ಲಿ ಇದು ಹೇಗೆ ಅಮೂಲ್ಯವಾಗಿದೆ ಎಂಬುದನ್ನು ವಿವರಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ಹಿಸ್ಟರೊಸ್ಕೋಪಿ ಎಂದರೇನು?
ಹಿಸ್ಟರೊಸ್ಕೋಪ್‌ ಎನ್ನುವ ಸಪೂರವಾದ, ನಮ್ಯ (ಫ್ಲೆಕ್ಸಿಬಲ್‌) ಕೊಳವೆಯನ್ನು ಗರ್ಭಕಂಠದ ಮೂಲಕ ಗರ್ಭಕೋಶದ ಒಳಕ್ಕೆ ಕಳುಹಿಸಿ, ಗರ್ಭಕೋಶದ ಒಳಭಾಗವನ್ನು ವೀಕ್ಷಿಸುವುದಕ್ಕೆ ಅನುವು ಮಾಡಿಕೊಡುವ, ಅತ್ಯಂತ ಕಡಿಮೆ ಗಾಯವನ್ನು ಉಂಟು ಮಾಡುವ ಪ್ರಕ್ರಿಯೆ ಹಿಸ್ಟರೊಸ್ಕೋಪಿ. ಬೆಳಕಿನ ಮೂಲ ಮತ್ತು ಕೆಮರಾಗಳನ್ನು ಹೊಂದಿರುವ ಹಿಸ್ಟರೊಸ್ಕೋಪ್‌ ಕಂಪ್ಯೂಟರ್‌ ಪರದೆಯ ಮೇಲೆ ಗರ್ಭಕೋಶದ ಒಳಭಾಗದ ಸೂಕ್ಷ್ಮದರ್ಶನವನ್ನು ಒದಗಿಸುತ್ತದೆ. ಇದರಿಂದಾಗಿ ಸಂತಾನೋತ್ಪತ್ತಿಗೆ ಅಡ್ಡಿಯಾಗಬಲ್ಲ ಯಾವುದೇ ಸಮಸ್ಯೆಯನ್ನು ಅರಿತುಕೊಳ್ಳಲು ವೈದ್ಯರಿಗೆ ಸಾಧ್ಯವಾಗುತ್ತದೆ. ಗರ್ಭಕೋಶದ ಒಳಭಿತ್ತಿಯನ್ನು ನೇರವಾಗಿ ವೀಕ್ಷಿಸಲು, ಸಂಭಾವ್ಯ ಸಮಸ್ಯೆಗಳನ್ನು ಗುರುತಿಸಲು ಮತ್ತು ಅಗತ್ಯವಾಗಿದ್ದರೆ ಅವುಗಳನ್ನು ಬಗೆಹರಿಸಲು ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಅನುವು ಮಾಡಿಕೊಡುವ ಮೂಲಕ ಹಿಸ್ಟರೊಸ್ಕೋಪಿಯು ದೇಹದ ಒಳಭಾಗದ ಚಿತ್ರಣವನ್ನು ಒದಗಿಸುವ ಇತರ ಯಾವುದೇ ಉಪಕರಣಗಳಿಂದ ಭಿನ್ನವಾಗಿದೆ, ಅನುಕೂಲಕರವಾಗಿದೆ.

ಹಿಸ್ಟರೊಸ್ಕೋಪಿಯ ವಿಧಗಳು
1. ಡಯಾಗ್ನಾಸ್ಟಿಕ್‌ ಹಿಸ್ಟರೊಸ್ಕೋಪಿ: ಈ ವಿಧವಾದ ಹಿಸ್ಟರೊಸ್ಕೋಪಿಯನ್ನು ರೋಗಪತ್ತೆ ಉದ್ದೇಶಕ್ಕಾಗಿ ಮಾತ್ರ ಉಪಯೋಗಿಸಲಾಗುತ್ತದೆ. ಗರ್ಭಕೋಶದ ಒಳಭಾಗವನ್ನು ವೀಕ್ಷಿಸಿ ಪಾಲಿಪ್‌ಗ್ಳು, ಫೈಬ್ರಾಯ್ಡಗಳು, ಅಂಟುವಿಕೆಗಳು (ಅಡೆಶನ್‌) ಅಥವಾ ಜನ್ಮಜಾತವಾದವುಗಳ ಸಹಿತ ಯಾವುದೇ ಸಮಸ್ಯೆಗಳನ್ನು ಗುರುತಿಸಲು ಇದು ವೈದ್ಯರಿಗೆ ಅನುವು ಮಾಡಿಕೊಡುತ್ತದೆ.

2. ಆಪರೇಟಿವ್‌ ಹಿಸ್ಟರೊಸ್ಕೋಪಿ: ಡಯಾಗ್ನೊಸ್ಟಿಕ್‌ ಹಿಸ್ಟರೊಸ್ಕೋಪಿಯ ವೇಳೆ ಯಾವುದೇ ಸಮಸ್ಯೆ ಇರುವುದು ಪತ್ತೆಯಾದರೆ ಅದಕ್ಕೆ ಚಿಕಿತ್ಸೆ ನೀಡಲು ಅದೇ ಸಮಯದಲ್ಲಿ ಶಸ್ತ್ರಚಿಕಿತ್ಸಾತ್ಮಕ ಅಥವಾ ಆಪರೇಟಿವ್‌ ಹಿಸ್ಟರೊಸ್ಕೋಪಿಯನ್ನು ನಡೆಸಬಹುದಾಗಿದೆ. ಅಸಹಜ ಅಂಗಾಂಶಕ್ಕೆ ಚಿಕಿತ್ಸೆ ನೀಡಲು ಅಥವಾ ಅದನ್ನು ತೆಗೆದುಹಾಕಲು ಹಿಸ್ಟರೊಸ್ಕೋಪ್‌ ಮೂಲಕ ವಿಶೇಷ ಸಲಕರಣೆಗಳನ್ನು ಉಪಯೋಗಿಸುವುದು ಇದರಲ್ಲಿ ಒಳಗೊಂಡಿರುತ್ತದೆ.

ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಹಿಸ್ಟರೊಸ್ಕೋಪಿ ಯಾಕೆ ಮುಖ್ಯ?
ಗರ್ಭ ಕಟ್ಟುವುದು ಮತ್ತು ಗರ್ಭಧಾರಣೆಯಲ್ಲಿ ಗರ್ಭಕೋಶವು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಗರ್ಭಕೋಶದ ಒಳಭಾಗದಲ್ಲಿ ಇರಬಹುದಾದ ಯಾವುದೇ ಸಮಸ್ಯೆಗಳು ಭ್ರೂಣ ಸ್ಥಾಪನೆಗೆ ಅಡಚಣೆಯನ್ನು ಉಂಟು ಮಾಡಬಹುದು, ಗರ್ಭಸ್ರಾವಕ್ಕೆ ಕಾರಣವಾಗಬಹುದು ಅಥವಾ ಗರ್ಭಧಾರಣೆಯನ್ನೇ ತಡೆಯಬಹುದು. ಗಡ್ಡೆಗಳು, ಪಾಲಿಪ್‌ಗ್ಳು, ಅಡೆಶನ್‌ಗಳು ಅಥವಾ ಗರ್ಭಕೋಶದ ಜನ್ಮಜಾತ ಸಮಸ್ಯೆಗಳು ಸಂತಾನೋತ್ಪತ್ತಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ. ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ನಿಂದ ಪತ್ತೆ ಮಾಡಲಾಗದ ಸಮಸ್ಯೆಗಳನ್ನು ಕೂಡ ತಿಳಿದುಕೊಳ್ಳಲು ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರಜ್ಞರಿಗೆ ಅನುಕೂಲ ಮಾಡಿಕೊಡುವ ಮೂಲಕ ಹಿಸ್ಟರೊಸ್ಕೋಪಿಯು ಬಹಳ ಉಪಯೋಗಕಾರಿಯಾಗಿದೆ.

ಹಿಸ್ಟರೊಸ್ಕೋಪಿಯು ಈ ಕೆಳಕಂಡ ಸಂದರ್ಭಗಳಲ್ಲಿ ವಿಶೇಷವಾಗಿ ಉಪಯೋಗಕಾರಿಯಾಗಿದೆ:
– ಮಹಿಳೆಯು ಪದೇಪದೆ ಗರ್ಭಸ್ರಾವಕ್ಕೆ ಒಳಗಾಗಿದ್ದಾಗ
– ಎಂಡೊಮೆಟ್ರಿಯಲ್‌ ಪಾಲಿಪ್‌, ಫೈಬ್ರಾಯ್ಡಗಳು ಅನಿಯಮಿತ ಋತುಸ್ರಾವಕ್ಕೆ ಕಾರಣವಾಗಿದ್ದಾಗ
– ಗರ್ಭ ಧಾರಣೆ ಪದೇಪದೆ ವಿಫ‌ಲವಾದಾಗ
– ಗರ್ಭಕೋಶದಲ್ಲಿ ಸಮಸ್ಯೆಗಳಿದ್ದಾಗ ಗರ್ಭಕೋಶದಲ್ಲಿ ಇರುವ ಸಮಸ್ಯೆಗಳನ್ನು ಪತ್ತೆಹಚ್ಚಿ, ಹೆಚ್ಚು ಕಡಿಮೆ ಅದೇ ಅವಧಿಯಲ್ಲಿ ಚಿಕಿತ್ಸೆ ಒದಗಿಸಲು ಹಿಸ್ಟರೊಸ್ಕೋಪಿಯು ಪ್ರಜನನ ತಜ್ಞರಿಗೆ ಅನುವು ಮಾಡಿಕೊಡುತ್ತದೆ.

ಹಿಸ್ಟರೊಸ್ಕೋಪಿ ಮೂಲಕ ಪತ್ತೆ ಮಾಡಿ ಚಿಕಿತ್ಸೆ ನೀಡಬಹುದಾದ ಗರ್ಭಕೋಶಕ್ಕೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆಗಳು
1. ಯುಟೆರೈನ್‌ ಪಾಲಿಪ್‌ಗ್ಳು: ಗರ್ಭಕೋಶದ ಭಿತ್ತಿಯಲ್ಲಿ ಉಂಟಾಗುವ ಈ ಬೆಳವಣಿಗೆಗಳು ನಿರಪಾಯಕಾರಿಯಾದರೂ ಭ್ರೂಣ ಸ್ಥಾಪನೆಗೆ ಅಡಚಣೆ ಉಂಟು ಮಾಡಬಲ್ಲವು; ಹೀಗಾಗಿ ಇವುಗಳನ್ನು ಹಿಸ್ಟರೊಸ್ಕೋಪಿಯ ಮೂಲಕ ತೆಗೆದುಹಾಕಲಾಗುತ್ತದೆ.
2. ಫೈಬ್ರಾಯ್ಡಗಳು: ಗರ್ಭಕೋಶದ ಒಳಗೆ ಬೆಳೆದಿರುವ ಸಬ್‌ಮ್ಯುಕೋಸಲ್‌ ಫೈಬ್ರಾಯ್ಡಗಳನ್ನು ಹಿಸ್ಟರೊಸ್ಕೋಪಿಯ ಮೂಲಕ ನಿಖರವಾಗಿ ಗುರುತಿಸಿ ತೆಗೆದುಹಾಕಬಹುದಾಗಿದೆ; ಇದರಿಂದ ಸಂತಾನೋತ್ಪತ್ತಿ ಸಾಧ್ಯತೆಗಳನ್ನು ಹೆಚ್ಚಿಸಬಹುದು.
3. ಅಡೆಶನ್‌ಗಳು (ಅಶೆರ್‌ಮನ್ಸ್‌ ಸಿಂಡ್ರೋಮ್‌): ಈ ಹಿಂದೆ ಮಾಡಲಾಗಿರುವ ಶಸ್ತ್ರಚಿಕಿತ್ಸೆ ಅಥವಾ ಸೋಂಕಿನಿಂದ ಗರ್ಭಕೋಶದ ಅಂಗಾಂಶಗಳಿಗೆ ಉಂಟಾಗಿರುವ ಗಾಯಗಳು ಗರ್ಭಕೋಶದ ಒಳಗೆ ಅಡೆತಡೆ ಉಂಟು ಮಾಡುವ ಮೂಲಕ ಗರ್ಭಧಾರಣೆಯನ್ನು ತಡೆಯಬಹುದು. ಹಿಸ್ಟರೊಸ್ಕೋಪಿಯ ಮೂಲಕ ಇಂತಹ ಗಾಯಗೊಂಡ ಅಂಗಾಂಶಗಳನ್ನು ತೆಗೆದುಹಾಕಿ ಗರ್ಭಕೋಶದ ಒಳಗೆ ಗರ್ಭಧಾರಣೆಗೆ ಪೂರಕ ವಾತಾವರಣವನ್ನು ಸೃಷ್ಟಿಸಬಹುದಾಗಿದೆ.
4. ಸೆಪ್ಟೇಟ್‌ ಯುಟೆರಸ್‌: ಇದೊಂದು ಜನ್ಮಜಾತ ಸಮಸ್ಯೆಯಾಗಿದ್ದು, ಇಲ್ಲಿ ಗರ್ಭಕೋಶದ ಒಳಗೆ ಗೋಡೆಯೊಂದು ಬೆಳೆದು ಎರಡು ಭಾಗಗಳು ಸೃಷ್ಟಿಯಾಗಿರುತ್ತವೆ; ಪರಿಣಾಮವಾಗಿ ಗರ್ಭಸ್ರಾವ ಅಥವಾ ಭ್ರೂಣ ಸ್ಥಾಪನೆಗೆ ತೊಂದರೆಯಾಗಬಹುದು. ಹಿಸ್ಟರೊಸ್ಕೋಪಿಕ್‌ ಶಸ್ತ್ರಚಿಕಿತ್ಸೆಯ ಮೂಲಕ ಈ ಸೆಪ್ಟಮ್‌ ಅಥವಾ ಗೋಡೆಯನ್ನು ತೆಗೆದುಹಾಕಿ ಆರೋಗ್ಯಯುತ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಬಹುದು.

ಹಿಸ್ಟರೊಸ್ಕೋಪಿ ಪ್ರಕ್ರಿಯೆ: ಏನನ್ನು ನಿರೀಕ್ಷಿಸಬೇಕು?
ಸಾಮಾನ್ಯವಾಗಿ ಹಿಸ್ಟರೊಸ್ಕೋಪಿಗೆ ಒಳಗಾದಾಗ ಚೇತರಿಸಿಕೊಳ್ಳಲು ಅತ್ಯಂತ ಕಡಿಮೆ ಅವಧಿ ಸಾಕಾಗುತ್ತದೆ. ರೋಗಪತ್ತೆ ಹಿಸ್ಟರೊಸ್ಕೋಪಿ ಅಥವಾ ಡಯಾಗ್ನಾಸ್ಟಿಕ್‌ ಹಿಸ್ಟರೊಸ್ಕೋಪಿಯನ್ನು ಸಾಮಾನ್ಯವಾಗಿ ಅರಿವಳಿಕೆ ಇಲ್ಲದೆಯೇ ನಡೆಸಲಾಗುತ್ತದೆಯಾದರೆ ಶಸ್ತ್ರಚಿಕಿತ್ಸಾತ್ಮಕ ಅಥವಾ ಆಪರೇಟಿವ್‌ ಹಿಸ್ಟರೊಸ್ಕೋಪಿಗೆ ಲಘು ಅರಿವಳಿಕೆ ಬೇಕಾಗಬಹುದು. ಹಿಸ್ಟರೊಸ್ಕೋಪಿಯ ಬಳಿಕ ಬಹುತೇಕ ಮಹಿಳೆಯರಿಗೆ ಲಘುವಾಗಿ ಹೊಟ್ಟೆ ಹಿಡಿದುಕೊಂಡಂಥ ನೋವು ಅಥವಾ ಜನನಾಂಗದಿಂದ ಒಂದೆರಡು ಹನಿ ರಕ್ತಸ್ರಾವ ಒಂದೆರಡು ದಿನಗಳ ಕಾಲ ಉಂಟಾಗಬಹುದು; ಇದನ್ನು ಹೊರತುಪಡಿಸಿದರೆ ಒಂದು ದಿನದೊಳಗೆ ಸಾಮಾನ್ಯ ಚಟುವಟಿಕೆಗಳಿಗೆ ಮರಳಬಹುದಾಗಿದೆ.

ಅಪಾಯಗಳು ಮತ್ತು ಸಂಭಾವ್ಯ ಸಂಕೀರ್ಣ ಸಮಸ್ಯೆಗಳು
ಹಿಸ್ಟರೊಸ್ಕೋಪಿಯು ಬಹುತೇಕ ಸುರಕ್ಷಿತ ಎಂದೇ ಪರಿಗಣಿತವಾಗಿದೆ; ಆದರೆ ಇತರ ಯಾವುದೇ ಶಸ್ತ್ರಚಿಕಿತ್ಸೆಯಂತೆ ಸೋಂಕು, ರಕ್ತಸ್ರಾವ; ಕೆಲವು ಅಪರೂಪದ ಪ್ರಕರಣಗಳಲ್ಲಿ ಯುಟೆರೈನ್‌ ಪಫೊìರೇಶನ್‌ (ಗರ್ಭಕೋಶದ ರಕ್ತನಾಳಗಳಿಗೆ ಹಾನಿ ಅಥವಾ ಸುತ್ತಲಿನ ಮೂತ್ರಕೋಶ, ಜಠರದಂತಹ ಅಂಗಗಳಿಗೆ ಹಾನಿ) ಉಂಟಾಗುವ ಸಾಧ್ಯತೆಗಳು ಇಲ್ಲದಿಲ್ಲ. ಆದರೆ ಗರ್ಭಕೋಶದ ಸಮಸ್ಯೆಗಳನ್ನು ಪ್ರತ್ಯಕ್ಷವಾಗಿ ದರ್ಶಿಸಿ ಚಿಕಿತ್ಸೆ ಒದಗಿಸಬಹುದಾದ, ವಿಶೇಷವಾಗಿ ದೀರ್ಘ‌ಕಾಲ ಸಂತಾನಹೀನತೆಯ ಸಮಸ್ಯೆಯನ್ನು ಅನುಭವಿಸುತ್ತಿರುವ ಮಹಿಳೆಯರಿಗೆ ಹಿಸ್ಟರೊಸ್ಕೋಪಿ ಒದಗಿಸಬಲ್ಲ ಪ್ರಯೋಜನಗಳಿಗೆ ಹೋಲಿಸಿದರೆ ಈ ಅಪಾಯಗಳು ನಗಣ್ಯವಾಗಿವೆ.

ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ ಹಿಸ್ಟರೊಸ್ಕೋಪಿಯ ಪ್ರಯೋಜನಗಳು
ಅನೇಕ ಮಹಿಳೆಯರಿಗೆ ತಮ್ಮ ಸಂತಾನೋತ್ಪತ್ತಿಯ ಹಾದಿಯಲ್ಲಿ ಹಿಸ್ಟರೊಸ್ಕೋಪಿಯು ಒಂದು ಮೈಲಿಗಲ್ಲಾಗಬಹುದು. ಇದು ಗರ್ಭಕೋಶದ ಸಮಸ್ಯೆಗಳನ್ನು ಸ್ಪಷ್ಟವಾಗಿ ಗುರುತಿಸಿ, ನಿಖರವಾಗಿ ಪರಿಹರಿಸಬಲ್ಲ ಅವಕಾಶಗಳನ್ನು ಒದಗಿಸುವ ಮೂಲಕ ಗರ್ಭಧಾರಣೆಯ ಸಾಧ್ಯತೆಯನ್ನು ಗಮನಾರ್ಹವಾಗಿ ಹೆಚ್ಚಿಸಬಲ್ಲುದಾಗಿದೆ. ಸಂತಾನೋತ್ಪತ್ತಿಗೆ ಅಡಚಣೆ ಉಂಟು ಮಾಡುತ್ತಿರುವ ಸಮಸ್ಯೆಗಳಿಗೆ ಉತ್ತರ ಮತ್ತು ಕ್ರಿಯಾತ್ಮಕ ಪರಿಹಾರಗಳನ್ನು ಒದಗಿಸುವ ಮೂಲಕ ಹಿಸ್ಟರೊಸ್ಕೋಪಿಯು ಮಾನಸಿಕ ನೆಮ್ಮದಿಯನ್ನೂ ಉಂಟುಮಾಡಬಲ್ಲುದಾಗಿದೆ.

ಹಿಸ್ಟರೊಸ್ಕೋಪಿ ಮತ್ತು ಸಂತಾನೋತ್ಪತ್ತಿ ಚಿಕಿತ್ಸೆಯ ಫ‌ಲಿತಾಂಶಗಳು

ಹಿಸ್ಟರೊಸ್ಕೋಪಿಯ ಮೂಲಕ ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದರಿಂದ ಐವಿಎಫ್ ಸಂತಾನೋತ್ಪತ್ತಿ ವಿಧಾನಗಳ ಫ‌ಲಿತಾಂಶ ಉತ್ತಮಗೊಳ್ಳುತ್ತವೆ ಮತ್ತು ಸಹಜ ಗರ್ಭಧಾರಣೆಯ ಸಾಧ್ಯತೆಗಳು ಹೆಚ್ಚುತ್ತವೆ ಎಂದು ಅಧ್ಯಯನಗಳ ಮೂಲಕ ಕಂಡುಕೊಳ್ಳಲಾಗಿದೆ. ಗರ್ಭಕೋಶದಲ್ಲಿ ಭ್ರೂಣಸ್ಥಾಪನೆ ಮತ್ತು ಗರ್ಭಧಾರಣೆಗೆ ಅತ್ಯಂತ ಅನುಕೂಲಕರವಾದ ಪರಿಸರವನ್ನು ಈ ಚಿಕಿತ್ಸಾತ್ಮಕ ತಂತ್ರಜ್ಞಾನದಿಂದ ನಿರ್ಮಿಸಲು ವೈದ್ಯರಿಗೆ ಸಾಧ್ಯವಾಗುತ್ತದೆ.

ಸಂತಾನೋತ್ಪತ್ತಿಗೆ ಅಡಚಣೆ ಉಂಟು ಮಾಡುವ ಗರ್ಭಕೋಶದ ಸಮಸ್ಯೆಗಳನ್ನು ಪತ್ತೆಹಚ್ಚಿ ಪರಿಹರಿಸಲು ಹಿಸ್ಟರೊಸ್ಕೋಪಿಯು ಒಂದು ಅತ್ಯಂತ ಶಕ್ತಿಶಾಲಿಯಾದ ಮತ್ತು ಅತ್ಯಂತ ಕಡಿಮೆ ಗಾಯವನ್ನು ಉಂಟುಮಾಡುವ ತಂತ್ರಜ್ಞಾನವಾಗಿದೆ. ಸಂತಾನಹೀನತೆಯನ್ನು ಎದುರಿಸು ತ್ತಿರುವ ದಂಪತಿಗೆ ಪ್ರಜನನ ತಜ್ಞರಲ್ಲಿ ಹಿಸ್ಟರೊಸ್ಕೋಪಿಗೆ ಒಳಗಾಗುವ ಬಗ್ಗೆ ಸಮಾಲೋಚನೆ ನಡೆಸುವುದು ಮತ್ತು ವಿಶೇಷ ಆರೈಕೆಯನ್ನು ಪಡೆಯುವುದು ಯಶಸ್ವಿ ಗರ್ಭಧಾರಣೆಯಲ್ಲಿ ಒಂದು ಕ್ರಿಯಾತ್ಮಕ ಹೆಜ್ಜೆಯಾಗಿದೆ. ಸಂತಾನಹೀನತೆಯನ್ನು ಅನುಭವಿಸುತ್ತಿರುವ ಅನೇಕರಿಗೆ ಶೀಘ್ರ ಚಿಕಿತ್ಸೆ ಮತ್ತು ವ್ಯಕ್ತಿನಿರ್ದಿಷ್ಟ ಆರೈಕೆಯ ಮೂಲಕ ಶಿಶುವನ್ನು ಪಡೆಯುವ ಕನಸು ನನಸಾಗಲು ಸಾಧ್ಯವಿದೆ.

ಡಾ| ವಿದ್ಯಾಶ್ರೀ ಜಿ. ಪೂಜಾರಿ,

ಅಸೋಸಿಯೇಟ್‌ ಪ್ರೊಫೆಸರ್‌,

ರಿಪ್ರೊಡಕ್ಟಿವ್‌ ಮೆಡಿಸಿನ್‌ ಮತ್ತು ಸರ್ಜರಿ ವಿಭಾಗ

ಕೆಎಂಸಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

1-new

Bengaluru: ರಂಗೇರಿದ ರಾತ್ರಿಯಲ್ಲಿ ಹೊಸ ವರ್ಷದ ಸಂಭ್ರಮ

1-carr

Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು

1-viman

Narrow Escape; ಯುಎಸ್ ನಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ವಿಮಾನಗಳ ದುರಂತ

1-world

2025 ರ ವರ್ಷ ಫಲ: ದ್ವಾದಶ ರಾಶಿಗಳ ಫ‌ಲಾಫ‌ಲ ಹೇಗಿದೆ ನೋಡಿ

KSRtc-1

New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’

High-Court

Criminal Case: 44 ವರ್ಷದ ಹಿಂದಿನ ಪ್ರಕರಣ ವಿಲೇವಾರಿಗೊಳಿಸಿದ ಹೈಕೋರ್ಟ್‌

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

19-health

Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು

18-liver-cancer

Liver cancer: ಯಕೃತ್ತಿನ ಕ್ಯಾನ್ಸರ್‌

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-new

Bengaluru: ರಂಗೇರಿದ ರಾತ್ರಿಯಲ್ಲಿ ಹೊಸ ವರ್ಷದ ಸಂಭ್ರಮ

1-carr

Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು

1-viman

Narrow Escape; ಯುಎಸ್ ನಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ವಿಮಾನಗಳ ದುರಂತ

1-world

2025 ರ ವರ್ಷ ಫಲ: ದ್ವಾದಶ ರಾಶಿಗಳ ಫ‌ಲಾಫ‌ಲ ಹೇಗಿದೆ ನೋಡಿ

KSRtc-1

New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.