ವ್ಯಾಕ್ಸಿನೇಷನ್ ಪ್ರಾಮುಖ್ಯತೆ; ಮಕ್ಕಳು ಕೋವಿಡ್ 19 ಲಸಿಕೆ ಪಡೆಯುವ ಅಗತ್ಯವಿದೆಯಾ?


Team Udayavani, Aug 4, 2022, 1:01 PM IST

ವ್ಯಾಕ್ಸಿನೇಷನ್ ಪ್ರಾಮುಖ್ಯತೆ; ಮಕ್ಕಳು ಕೋವಿಡ್ 19 ಲಸಿಕೆ ಪಡೆಯುವ ಅಗತ್ಯವಿದೆಯಾ?

ಕಳೆದ 2 ವರ್ಷಗಳಿಂದ ಕೋವಿಡ್‌ 19 ನಮ್ಮ ಸಮಾಜದಲ್ಲಿ ಅಪಾರ ತೊಂದರೆಯನ್ನು ಉಂಟು ಮಾಡಿದೆ. ಇಡೀ ಜಗತ್ತಿನಲ್ಲಿ 6 ಮಿಲಿಯನ್‌ಗೂ ಹೆಚ್ಚು ಜನರು ಇದರಿಂದಾಗಿ ಸಾವನ್ನಪ್ಪಿದ್ದಾರೆ. 25 ಶೇಕಡಾ ಮಕ್ಕಳಲ್ಲಿ ಕೋವಿಡ್‌ 19 ಕಂಡುಬಂದಿರುವುದಾಗಿ ಅಧ್ಯಯನ ವರದಿ ತಿಳಿಸಿದೆ. ಜುಲೈ 14, 2022 ರಂತೆ ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ 13.91 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಕೋವಿಡ್ 19 ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಜನಸಂಖ್ಯಾಶಾಸ್ತ್ರ ಸಂಶೋಧನೆಗಾಗಿನ ಮ್ಯಾಕ್ಸ್‌ ಪ್ಲಾಂಕ್‌ ಸಂಸ್ಥೆ (ಎಂಪಿಐಡಿಆರ್) ಡೇಟಾಬೇಸ್‌ ಪ್ರಕಾರ, 3.4 ಮಿಲಿಯನ್‌ ಕೋವಿಡ್‌ 19 ಮರಣ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 0.4% ರಷ್ಟು ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಂಡುಬಂದಿದೆ. ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಕೋವಿಡ್‌ 19 ನಿಂದ ಮರಣ ಪ್ರಮಾಣ ಕಡಿಮೆ ಇದ್ದರೂ, ಹೃದಯ, ಲಿವರ್, ಕಿಡ್ನಿ, ಅಪೌಷ್ಠಿಕತೆ ಮತ್ತು ರೋಗನಿರೋಧಕ ಕೊರತೆಗೆ ಸಂಬಂಧಿಸಿದ ದೀರ್ಘಕಾಲೀನ ಸಮಸ್ಯೆಗಳೊಂದಿಗೆ ದೀರ್ಘಕಾಲೀನ ಸಂಕೀರ್ಣತೆಗಳಿಗೆ ಇದು ಕಾರಣವಾಗಬಹುದು.

ಕೋವಿಡ್‌ 19 ಗುಣಲಕ್ಷಣಗಳ ನಂತರದಲ್ಲಿ ಮಕ್ಕಳು ಮತ್ತು ಹದಿಹರೆಯದವರ ಜೀವನ ಮಟ್ಟದ ಮೇಲೆ ಪರಿಣಾಮ ಬೀರುತ್ತವೆ. ಅವರ ದೈನಂದಿನ ಚಟುವಟಿಕೆಗಳ ಮೇಲೆ ಇದು ಮಿತಿ ಹೇರಬಹುದು. ದೈಹಿಕ ಚಟುವಟಿಕೆ ಸೀಮಿತವಾಗುವುದು, ಮಾನಸಿಕ ಆರೋಗ್ಯ ಸಮಸ್ಯೆಗಳು, ಶಾಲೆಗೆ ಅಥವಾ ಡೇ ಕೇರ್‌ಗೆ ಮಗು ಹಾಜರಾಗುವ ದಿನಗಳ ಸಂಖ್ಯೆಯಲ್ಲಿ ಇಳಿಕೆ ಕಾಣುವುದು ಮತ್ತು ಕ್ರೀಡೆ ಅಥವಾ ಇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳು ತಪ್ಪಿ ಹೋಗುವುದು ಇತ್ಯಾದಿ ಸಮಸ್ಯೆಗಳನ್ನು ಮಗು ಎದುರಿಸಬಹುದು. ಹೃದಯ, ಪಿತ್ತಕೋಶ, ಕಿಡ್ನಿಗಳು, ಮಿದುಳು, ಚರ್ಮ, ಕಣ್ಣುಗಳು ಅಥವಾ ಗ್ಯಾಸ್ಟ್ರೋಇಂಟೆಸ್ಟಿನಲ್‌ ಅಂಗಗಳು ಸೇರಿದಂತೆ ವಿವಿಧ ದೇಹದ ಭಾಗಗಳ ಉರಿಯೂತಕ್ಕೆ ಕಾರಣವಾಗುವ ಮಲ್ಟಿಸಿಸ್ಟಮ್‌ ಇನ್‌ಫ್ಲಮೇಟರಿ ಸಿಂಡ್ರೋಮ್ (ಎಂಐಎಸ್‌ ಸಿ) ರೀತಿಯ ಗಂಭೀರ ಸಂಕೀರ್ಣತೆಗಳನ್ನೂ ಇದು ಉಂಟು ಮಾಡಬಹುದು. ಸಾಂಕ್ರಾಮಿಕ ರೋಗ ಕಾಣಿಸಿಕೊಂಡಂದಿನಿಂದ ಸಾವಿರಾರು ಎಂಐಎಸ್‌ ಸಿ ಪ್ರಕರಣಗಳು ಕಂಡುಬಂದಿವೆ ಎಂದು ರೋಗ ನಿಯಂತ್ರಣ ಕೇಂದ್ರ (ಸಿಡಿಸಿ) ಯುಎಸ್‌ಎ ವರದಿ ಮಾಡಿದ್ದು, ಅರ್ಧದಷ್ಟು ಪ್ರಕರಣಗಳು 5-11 ವರ್ಷಗಳ ವಯೋ ಸಮೂಹದಲ್ಲಿ ಕಂಡಿವೆ ಎಂದು ಅದು ಹೇಳಿದೆ.

ಮಕ್ಕಳಲ್ಲಿ ಕೋವಿಡ್‌ 19 ಪರಿಣಾಮಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳ ವಲಯದಲ್ಲಿ ಲಸಿಕೆ ಅತ್ಯಂತ ಪ್ರಮುಖ ಭಾಗವಾಗಿದೆ. ಕೋವಿಡ್‌ 19 ವಿರುದ್ಧ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು ಮತ್ತು ಕೋವಿಡ್‌ 19 ಲಸಿಕೆ ಬೂಸ್ಟರ್ ಅನ್ನು ಪಡೆದುಕೊಳ್ಳಬೇಕು ಎಂದು ಸಿಡಿಸಿ ಶಿಫಾರಸು ಮಾಡುತ್ತದೆ. ತಮ್ಮ ವಯಸ್ಸಿಗೆ ಬಳಸಲು ಅನುಮತಿ ಹೊಂದಿರುವ ಲಸಿಕೆಗೆ ಪ್ರತಿ ಗುಣಲಕ್ಷಣಗಳನ್ನು ಹೊಂದಿಲ್ಲದಿದ್ದರೆ ಎಲ್ಲ ಮಕ್ಕಳು ಮತ್ತು ಹದಿಹರೆಯದವರು ಕೋವಿಡ್‌ 19 ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಅಮೆರಿಕದ ಮಕ್ಕಳ ಅಕಾಡೆಮಿ ಕೂಡ ಶಿಫಾರಸು ಮಾಡಿದೆ. ಪ್ರಸ್ತುತ, ಫೈಜರ್‌ ಬಯೋಎನ್‌ಟೆಕ್‌ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಮಕ್ಕಳ ಲಸಿಕೆ ನೀಡುವುದಕ್ಕೆ ಅನುಮತಿ ಹೊಂದಿದೆ. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಮಕ್ಕಳು ಮತ್ತು ಹದಿಹರೆಯದವರಿಗೆ ಲಸಿಕೆಗಳನ್ನು ಎನ್‌ಎಚ್‌ಎಸ್‌ ಪರಿಣಿತರು ಶಿಫಾರಸು ಮಾಡಿದ್ದಾರೆ.

ಪ್ರಸ್ತುತ, ಭಾರತದಲ್ಲಿ ಮಕ್ಕಳಿಗೆ 3 ಲಸಿಕೆಗಳನ್ನು ಅನುಮೋದಿಸಲಾಗಿದೆ. ಅವುಗಳೆಂದರೆ ಸೀರಮ್ ಇನ್‌ಸ್ಟಿಟ್ಯೂಟ್‌ನ (ಎಸ್‌ಐಐಪಿಎಲ್‌ ಕೋವೋವ್ಯಾಕ್ಸ್‌, ಬಯೋಲಾಜಿಕಲ್‌ ನಿಂದ ಕೋರ್ಬೆವ್ಯಾಕ್ಸ್‌ ಮತ್ತು ಭಾರತ್‌ ಬಯೋಟೆಕ್‌ನ ಕೋವ್ಯಾಕ್ಸಿನ್‌. ಈ ಪೈಕಿ ಕೋವೋವ್ಯಾಕ್ಸ್‌ನ ದಕ್ಷತೆಯು ಮಕ್ಕಳಲ್ಲಿ ಮಂದ್ರ, ಮಧ್ಯಮ ಹಾಗೂ ತೀವ್ರ ಕೋವಿಡ್‌ 19 ನಲ್ಲಿ 80% ಇದ್ದು, ಇದು ಅತಿ ಹೆಚ್ಚಿನ ದರವಾಗಿದೆ.

ಪ್ರಸ್ತುತ ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 12 ರಿಂದ 17 ವರ್ಷಗಳ ಮಕ್ಕಳಿಗೆ ಲಸಿಕೆ ನೀಡಲು ಅನುಮೋದನೆ ನೀಡಲಾಗಿದೆ. 7-11 ವರ್ಷಗಳವರು ಮತ್ತು 2-6 ವರ್ಷದ ಮಕ್ಕಳಿಗೆ ಶೀಘ್ರದಲ್ಲೇ ಲಸಿಕೆ ನೀಡುವುದಕ್ಕೆ ಭಾರತದ ನಿಯಂತ್ರಕ ಸಂಸ್ಥೆಗಳು ಅನುಮತಿ ನೀಡುವ ನಿರೀಕ್ಷೆಯಿದೆ. 2 ವರ್ಷ ವಯಸ್ಸಿನ ಮಕ್ಕಳಲ್ಲಿ ಪರೀಕ್ಷಿಸಲಾಗುತ್ತಿರುವ ವಿಶ್ವದ ಕೆಲವೇ ಲಸಿಕೆಗಳಲ್ಲಿ ಕೋವೊವಾಕ್ಸ್  ಕೂಡಾ ಒಂದಾಗಿದೆ.

ವಯಸ್ಕರು ಮತ್ತು ಮಕ್ಕಳಲ್ಲಿ ವ್ಯಾಪಕವಾಗಿ ಲಸಿಕೆ ಪರೀಕ್ಷೆ ಮಾಡಲಾಗಿದೆ. ಚಿಕಿತ್ಸಾ ಅಧ್ಯಯನಗಳಲ್ಲಿ ಲಸಿಕೆ ಸುರಕ್ಷಿತ ಎಂದು ಸಾಬೀತಾಗಿದೆ. ಯುಎಸ್‌ನಲ್ಲಿ 2,200 ಹದಿಹರೆಯದವರಲ್ಲಿ (12-17 ವರ್ಷಗಳು) ನಡೆಸಿದ ಅಧ್ಯಯನವೊಂದರಲ್ಲಿ ಅಧಿಕ ದಕ್ಷತೆ ಮತ್ತು ರೋಗನಿರೋಧಕತೆಯನ್ನು ತೋರಿಸಿದೆ. 2-17 ವರ್ಷಗಳ 920 ಮಕ್ಕಳಲ್ಲಿ ಕೋವೋವ್ಯಾಕ್ಸ್‌ ಬಳಸಿ ಇನ್ನೊಂದು ಅಧ್ಯಯನ ಭಾರತದಲ್ಲಿ ಪ್ರಸ್ತುತ ಚಾಲ್ತಿಯಲ್ಲಿದೆ. ಲಸಿಕೆ ಸುರಕ್ಷಿತವಾಗಿ ಮತ್ತು ಉತ್ತಮ ರೋಗನಿರೋಧಕತೆಯನ್ನು ಹೊಂದಿದೆ ಎಂದು ಈ ಅಧ್ಯಯನದ ಆಂತರಿಕ ವಿಶ್ಲೇಷಣೆಯು ಅನಾವರಣಗೊಳಿಸಿದೆ.

ವಿವಿಧ ದೇಶಗಳಲ್ಲಿನ 4 ಚಿಕಿತ್ಸಾ ಅಧ್ಯಯನದಲ್ಲಿ 50,000 ಕ್ಕೂ ಹೆಚ್ಚು ವಯಸ್ಕರಲ್ಲಿ ಇದನ್ನು ಪರೀಕ್ಷೆ ಮಾಡಲಾಗಿದೆ. ಮಧ್ಯಮ ಮತ್ತು ತೀವ್ರ ಕೋವಿಡ್‌ 19 ರೋಗದ ವಿರುದ್ಧ ಲಸಿಕೆ 100% ಸುರಕ್ಷಿತ ಎಂದು ಸಾಬೀತಾಗಿದೆ. ವಯಸ್ಕರಲ್ಲಿ ನೀಡುವುದಕ್ಕೆ ಡಬ್ಲ್ಯೂಎಚ್‌ಒ ಅನುಮತಿಯನ್ನೂ ನೀಡಿದೆ. ಇದೇ ಲಸಿಕೆಯನ್ನು ನುವಾಕ್ಸೋವಿಡ್‌ ಬ್ರ್ಯಾಂಡ್‌ ಹೆಸರಿನ ಅಡಿಯಲ್ಲಿ ಯುನೈಟೆಡ್‌ ಕಿಂಗ್‌ಡಮ್‌, ಆಸ್ಟ್ರೇಲಿಯಾ, ಜಪಾನ್‌, ನ್ಯೂಜಿಲ್ಯಾಂಡ್‌, ಸಿಂಗಾಪುರ ಮತ್ತು ಇತರ ದೇಶಗಳಲ್ಲಿ ವಯಸ್ಕರಿಗೆ ನೀಡುವುದಕ್ಕೆ ಅನುಮತಿ ನೀಡಲಾಗಿದೆ.

ಒಟ್ಟಾರೆಯಾಗಿ, ವಯಸ್ಕರಿಗೆ ಹೋಲಿಸಿದರೆ ಕೋವಿಡ್‌ 19 ತೀವ್ರತೆಯು ಮಕ್ಕಳಲ್ಲಿ ಕಡಿಮೆ ಇದ್ದರೂ, ಇತರ ರೋಗಗಳು ಇದ್ದಾಗ ಮಕ್ಕಳಲ್ಲಿ ದೀರ್ಘಕಾಲೀನ ಪರಿಣಾಮಗಳನ್ನು ಉಂಟು ಮಾಡಬಹುದು. ಹೀಗಾಗಿ, ಸುರಕ್ಷಿತ, ರೋಗನಿರೋಧಕತೆ ಹೊಂದಿರುವ ಮತ್ತು ಪರಿಣಾಮಕಾರಿಯಾಗಿರುವ ಲಸಿಕೆಯನ್ನು ಮಕ್ಕಳಿಗೆ ನೀಡುವುದು ಅತ್ಯಂತ ಮುಖ್ಯವಾಗಿದೆ.

(ಡಾ ರಶ್ಮಿ ದೇವರಾಜ್, ಎಂಬಿಬಿಎಸ್, ಎಂಡಿ ಪೀಡಿಯಾಟ್ರಿಕ್ಸ್, ಡಿಎಂ ನ್ಯೂರಾಲಜಿ, ಕನ್ಸಲ್ಟೆಂಟ್ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ , ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು)

ಟಾಪ್ ನ್ಯೂಸ್

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.