ಮಧುಮೇಹಕ್ಕಾಗಿ ಇನ್ಸುಲಿನ್ ಚಿಕಿತ್ಸೆ ಕೆಲವು ತಪ್ಪು ಕಲ್ಪನೆಗಳು
Team Udayavani, Apr 2, 2017, 3:45 AM IST
ಇನ್ಸುಲಿನ್ ಅಂದರೆ ನಮ್ಮ ಶರೀರದಲ್ಲಿರುವ ಪ್ಯಾಂಕ್ರಿಯಾಸ್ ಗ್ರಂಥಿಗಳು ಅಂದರೆ ಮೇದೋಜೀರಕ ಗ್ರಂಥಿಗಳು ಉತ್ಪತ್ತಿ ಮಾಡುವ ಒಂದು ವಿಧದ ಹಾರ್ಮೋನ್. ಶರೀರವು ನಾವು ಸೇವಿಸಿದ ಆಹಾರದಲ್ಲಿರುವ ಕಾಬೋìಹೈಡ್ರೇಟ್‌ಗಳಿಂದ ಸಕ್ಕರೆಯ ಅಂಶವನ್ನು ಉಪಯೋಗಿಸಿಕೊಳ್ಳಲು ಅಥವಾ ಭವಿಷ್ಯದ ಬಳಕೆಗಾಗಿ ಸಂಗ್ರಹಿಸಲು ಈ ಇನ್ಸುಲಿನ್ ಎಂಬ ಹಾರ್ಮೋನ್ ಅನುವು ಮಾಡಿಕೊಡುತ್ತದೆ. ನಮ್ಮ ಶರೀರದ ರಕ್ತದಲ್ಲಿರುವ ಸಕ್ಕರೆಯ ಅಂಶವು ತೀರಾ ಹೆಚ್ಚಾಗದಂತೆ(ಹೈಪರ್‌ಗ್ಲೆ„ಸೆಮಿಯಾ) ಅಥವಾ ತೀರಾ ಕಡಿಮೆ (ಹೈಪೋಗ್ಲೆ„ಸೆಮಿಯಾ) ಆಗದಂತೆ ಇನ್ಸುಲಿನ್ ನೋಡಿಕೊಳ್ಳುತ್ತದೆ.
ದೇಹದ ಶಕ್ತಿಗಾಗಿ ಜೀವಕೋಶಗಳಿಗೆ ಸಕ್ಕರೆಯ ಅಥವಾ ಗುÉಕೋಸ್ ಆವಶ್ಯಕತೆ ಇರುತ್ತದೆ. ಆದರೆ ಹೆಚ್ಚಿನ ಜೀವಕೋಶಗಳ ಒಳಗೆ ಸಕ್ಕರೆಯು ನೇರವಾಗಿ ಸಾಗುವುದಿಲ್ಲ. ನಾವು ಆಹಾರ ಸೇವಿಸಿದ ಅನಂತರ ರಕ್ತದ ಸಕ್ಕರೆಯ ಮಟ್ಟದಲ್ಲಿ ಏರಿಕೆಯಾಗುತ್ತದೆ, ಆಗ ನಮ್ಮ ಪ್ಯಾಂಕ್ರಿಯಾಗಳಲ್ಲಿ (ಬೀಟಾ ಕೋಶಗಳೆಂದು ಕರೆಯಲಾಗುವ) ಇರುವ ಜೀವಕೋಶಗಳು ಇನ್ಸುಲಿನ್ ಅನ್ನು ರಕ್ತಪರಿಚಲನೆಗೆ ಬಿಡುಗಡೆಗೊಳಿಸಬೇಕು ಎಂಬ ಸೂಚನೆಯನ್ನು ಪಡೆಯುತ್ತವೆ. ಆ ಬಳಿಕ ಇನ್ಸುಲಿನ್ ಬಿಡುಗಡೆ ಆಗುತ್ತದೆ ಮತ್ತು ಜೀವಕೋಶಗಳು ಸೂಚನೆಯ ಮೇರೆಗೆ ರಕ್ತಪರಿಚಲನೆಯಲ್ಲಿ ಇರುವ ಸಕ್ಕರೆಯ ಅಂಶವನ್ನು ಹೀರಿಕೊಳ್ಳುತ್ತವೆ. ಹೆಚ್ಚಾಗಿ ಇನ್ಸುಲಿನ್ ಅನ್ನು ಶರೀರ ವ್ಯವಸ್ಥೆಯ ಕೀಲಿಕೈ ಅಥವಾ ಕೀ ಎಂಬುದಾಗಿ ಕರೆಯುತ್ತಾರೆ, ಯಾಕೆಂದರೆ, ಸಕ್ಕರೆಯ ಅಂಶವು ಜೀವಕೋಶಗಳ ಒಳಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುವಂತೆ ಮತ್ತು ಅದನ್ನು ಶಕ್ತಿಗಾಗಿ ಉಪಯೋಗಿಸಲು ಸಾಧ್ಯವಾಗುವಂತೆ, ಇನ್ಸುಲಿನ್ ಜೀವಕೋಶಗಳನ್ನು ತೆರವು ಮಾಡಿಕೊಡುತ್ತದೆ ಅಥವಾ ತೆರೆಯುತ್ತದೆ.
ನಮ್ಮ ದೇಹದಲ್ಲಿ ಶರೀರದ ಆವಶ್ಯಕತೆಗಿಂತಲೂ ಹೆಚ್ಚು ಸಕ್ಕರೆಯ ಅಂಶ ಇದ್ದರೆ, ಆ ಸಕ್ಕರೆಯ ಅಂಶವನ್ನು ನಮ್ಮ ಪಿತ್ತಜನಕಾಂಗದಲ್ಲಿ ಸಂಗ್ರಹಿಸಿ ಇಡಲು ಇನ್ಸುಲಿನ್ ಸಹಾಯ ಮಾಡುತ್ತದೆ. ರಕ್ತದಲ್ಲಿ ಸಕ್ಕರೆಯ ಅಂಶವು ಕಡಿಮೆಯಾದಾಗ ಅಥವಾ ನಮ್ಮ ಶರೀರಕ್ಕೆ ಹೆಚ್ಚು ಸಕ್ಕರೆಯ ಆವಶ್ಯಕತೆ ಇದ್ದಾಗ, ಅಂದರೆ ಊಟಗಳ ನಡುವೆ ಅಥವಾ ದೈಹಿಕ ಚಟುವಟಿಕೆಯ ಅವಧಿಗಳಲ್ಲಿ, ಸಂಗ್ರಹವಾಗಿರುವ ಈ ಸಕ್ಕರೆಯ ಅಂಶವು ಬಿಡುಗಡೆ ಆಗುತ್ತದೆ. ಈ ರೀತಿಯಲ್ಲಿ ಇನ್ಸುಲಿನ್ ರಕ್ತದ ಸಕ್ಕರೆಯ ಮಟ್ಟವನ್ನು ಸಮ ತೋಲನಗೊಳಿಸಲು ಮತ್ತು ಅದನ್ನು ಸಹಜ ಪ್ರಮಾಣದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾಗಿದ್ದರೆ, ಪ್ಯಾಂಕ್ರಿಯಾಸ್ ಹೆಚ್ಚು ಇನ್ಸುಲಿನ್ ಅನ್ನು ಬಿಡುಗಡೆ ಮಾಡುತ್ತದೆ.
ಒಂದುವೇಳೆ ನಮ್ಮ ಶರೀರವು ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಬಿಡುಗಡೆ ಮಾಡುತ್ತಿಲ್ಲವಾದರೆ ಅಥವಾ ಇನ್ಸುಲಿನ್ ಪರಿಣಾಮಕ್ಕೆ ಜೀವಕೋಶಗಳು ತಡೆ ಒಡ್ಡಿದರೆ, ನಮ್ಮ ಶರೀರದಲ್ಲಿ ಹೈಪರ್‌ಗ್ಲೆ„ಸೆಮಿಯಾ (ರಕ್ತದಲ್ಲಿ ಅಧಿಕ ಸಕ್ಕರೆ) ಸ್ಥಿತಿ ಕಾಣಿಸಿಕೊಳ್ಳುತ್ತದೆ. ಒಂದುವೇಳೆ ರಕ್ತದ ಸಕ್ಕರೆಯ ಅಂಶವು ಬಹಳ ಸಮಯ ಹೆಚ್ಚಾಗಿಯೇ ಇದ್ದರೆ, ಇದರಿಂದ ದಿರ್ಘಕಾಲೀನ ತೊಂದರೆಗಳು ಕಾಣಿಸಿಕೊಳ್ಳಬಹುದು.
ಮಧುಮೇಹ ಚಿಕಿತ್ಸೆಯಲ್ಲಿ ಬಳಸುವ ವಿವಿಧ ರೀತಿಯ ಇನ್ಸುಲಿನ್‌ಗಳೆಂದರೆ
-ರಾಪಿಡ್-ಆಕ್ಟಿಂಗ್ ಇನ್ಸುಲಿನ್: ಚುಚ್ಚುಮದ್ದು ನೀಡಿದ ಸುಮಾರು 15 ನಿಮಿಷಗಳ ಅನಂತರ ಇದು ಕೆಲಸ ಮಾಡಲು ಆರಂಭಿಸುತ್ತದೆ ಮತ್ತು ಸುಮಾರು ಒಂದು ಗಂಟೆ ಅವಧಿಯಲ್ಲಿ ಗರಿಷ್ಠ ಮಟ್ಟವನ್ನು ತಲುಪಿ, ಎರಡರಿಂದ ನಾಲ್ಕು ಗಂಟೆಗಳ ವರೆಗೆ ಈ ಇನ್ಸುಲಿನ್ ಇಂಜೆಕ್ಷನ್ ಕ್ರಿಯಾಶೀಲವಾಗಿರುತ್ತದೆ. ಸಾಮಾನ್ಯವಾಗಿ ಊಟಕ್ಕೆ ಮೊದಲು ಮತ್ತು ಲಾಂಗ್-ಆಕ್ಟಿಂಗ್ ಇನ್ಸುಲಿನ್‌ನೊಂದಿಗೆ ಹೆಚ್ಚುವರಿಯಾಗಿ ಇದನ್ನು ತೆಗೆದುಕೊಳ್ಳುತ್ತಾರೆ.
-ಶಾರ್ಟ್ ಆಕ್ಟಿಂಗ್ ಇನ್ಸುಲಿನ್: ಇದು ಚುಚ್ಚಿದ ಸುಮಾರು 30 ನಿಮಿಷಗಳ ಅನಂತರ ಕೆಲಸ ಮಾಡಲು ಆರಂಭಿಸುತ್ತದೆ. ಸುಮಾರು ಎರಡರಿಂದ ಮೂರು ಗಂಟೆಗಳ ಅವಧಿಯಲ್ಲಿ ಗರಿಷ್ಠ ಮಟ್ಟವನ್ನು ತಲುಪುತ್ತದೆ ಮತ್ತು ಮೂರರಿಂದ ಆರು ಗಂಟೆಗಳವರೆಗೆ ಕ್ರಿಯಾಶೀಲವಾಗಿರುತ್ತದೆ. ಈ ಇಂಜೆಕ್ಷನ್ ಅನ್ನು ಸಾಮಾನ್ಯವಾಗಿ ಊಟಕ್ಕೆ ಮೊದಲು ಮತ್ತು ಲಾಂಗ್-ಆಕ್ಟಿಂಗ್ ಇನ್ಸುಲಿನ್‌ನೊಂದಿಗೆ ಹೆಚ್ಚುವರಿಯಾಗಿ ತೆಗೆದುಕೊಳ್ಳುತ್ತಾರೆ.
-ಇಂಟರ್ ಮೀಡಿಯೆಟ್-ಆಕ್ಟಿಂಗ್ ಇನ್ಸುಲಿನ್: ಇದು ಚುಚ್ಚಿದ ಸುಮಾರು 2 ರಿಂದ 4 ಗಂಟೆಗಳ ಅನಂತರ ಕೆಲಸ ಆರಂಭಿಸುತ್ತದೆ; ಮುಂದಿನ 4 ರಿಂದ 12 ಗಂಟೆಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪುತ್ತದೆ ಮತ್ತು 12-18 ಗಂಟೆಗಳ ವರೆಗೆ ಕ್ರಿಯಾಶೀಲವಾಗಿರುತ್ತದೆ. ಸಾಮಾನ್ಯವಾಗಿ ಈ ಚುಚ್ಚುಮದ್ದನ್ನು ದಿನಕ್ಕೆ ಎರಡು ಬಾರಿ ಮತ್ತು ಲಾಂಗ್ – ಆಕ್ಟಿಂಗ್ ಅಥವಾ ಶಾರ್ಟ್-ಆಕ್ಟಿಂಗ್ ಇನ್ಸುಲಿನ್ ಚುಚ್ಚುಮದ್ದಿನ ಜೊತೆಗೆ ಹೆಚ್ಚುವರಿಯಾಗಿ ತೆಗೆದುಕೊಳ್ಳುತ್ತಾರೆ.
-ಲಾಂಗ್-ಆಕ್ಟಿಂಗ್ ಇನ್ಸುಲಿನ್: ಈ ಇಂಜೆಕ್ಷನ್ ಚುಚ್ಚಿದ ಕೆಲವು ಗಂಟೆಗಳ ಅನಂತರ ಕಾರ್ಯ ಆರಂಭಿಸುತ್ತದೆ ಮತ್ತು ಸುಮರು 24 ಗಂಟೆಗಳವರೆಗೆ ಕ್ರಿಯಾಶೀಲವಾಗಿರುತ್ತದೆ. ಆವಶ್ಯಕತೆ ಇದ್ದರೆ, ಇದನ್ನು ಹೆಚ್ಚಾಗಿ ರಾಪಿಡ್ ಅಥವಾ ಶಾರ್ಟ್-ಆಕ್ಟಿಂಗ್ ಇನ್ಸುಲಿನ್ ಜೊತೆಗೆ ಜಂಟಿಯಾಗಿ ಉಪಯೋಗಿಸುತ್ತಾರೆ.
ಇನ್ಸುಲಿನ್ ಅನ್ನು ಸಿರಿಂಜ್ ಮೂಲಕ, ಇಂಜೆಕ್ಷನ್ ಪೆನ್ ಮೂಲಕ ಅಥವಾ ಇನ್ಸುಲಿನ್ ಅನ್ನು ನಿರಂತರವಾಗಿ ಹರಿಸುವ ಇನ್ಸುಲಿನ್ ಪಂಪ್ ಮೂಲಕ ದೇಹದೊಳಕ್ಕೆ ಸೇರಿಸಬಹುದು.
ಮಧುಮೇಹಕ್ಕೆ ಇನ್ಸುಲಿನ್ ಚಿಕಿತ್ಸೆ
-ಟೈಪ್ – 1 ಡಯಾಬೆಟಿಸ್ ಇರುವ ಮಧುಮೇಹ ರೋಗಿಗಳ ಶರೀರದಲ್ಲಿ ಇನ್ಸುಲಿನ್ ಉತ್ಪತ್ತಿ ಆಗುವುದಿಲ್ಲ ಯಾಕೆಂದರೆ, ಅವರ ಪ್ಯಾಂಕ್ರಿಯಾಸ್‌ನಲ್ಲಿ ಇರುವ ಬೀಟಾ ಕೋಶಗಳಿಗೆ ಹಾನಿಯಾಗಿರುತ್ತದೆ ಅಥವಾ ಅವು ನಾಶವಾಗಿರುತ್ತವೆ. ಹಾಗಾಗಿ, ಈ ವರ್ಗದ ಜನರಿಗೆ ಇನ್ಸುಲಿನ್ ಚುಚ್ಚುಮದ್ದುಗಳ ಆವಶ್ಯಕತೆ ಇದ್ದು, ಇದರ ಸಹಾಯದಿಂದ ಅವರ ಶರೀರದಲ್ಲಿ ಗುÉಕೋಸ್ ಸಂಸ್ಕರಣೆಯ ಕಾರ್ಯ ನಡೆಯುತ್ತದೆ ಮತ್ತು ಹೈಪರ್ ಗ್ಲೆ„ಸೆಮಿಯಾದ ತೊಡಕುಗಳು ನಿವಾರಣೆಯಾಗುತ್ತವೆ.
–ಟೈಪ್-2 ವಿಧದ ಮಧುಮೇಹ ರೋಗಿಗಳು ಇನ್ಸುಲಿನ್ ಚುಚ್ಚುಮದ್ದಿಗೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ ಅಥವಾ ಅವರ ಶರೀರದಲ್ಲಿ ಇನ್ಸುಲಿನ್‌ಗೆ ಪ್ರತಿರೋಧವಿರುತ್ತದೆ. ಅವರಲ್ಲಿ ಸಕ್ಕರೆಯ ಸಂಸ್ಕರಣೆ ಮತ್ತು ಕಾಯಿಲೆಯ ದೀರ್ಘಕಾಲೀನ ತೊಂದರೆಗಳನ್ನು ತಡೆಯಲು ಇನ್ಸುಲಿನ್ ಚುಚ್ಚುಮದ್ದಿನ ಆವಶ್ಯಕತೆ ಇರಬಹುದು.
-ಟೈಪ್-2 ಡಯಾಬೆಟಿಸ್ ಇರುವ ಮಧುಮೇಹ ರೋಗಿಗಳಿಗೆ, ಆಹಾರ ಕ್ರಮ ಮತ್ತು ವ್ಯಾಯಾಮಗಳ ಜೊತೆಗೆ , ಮೊದಲು ಬಾಯಿಯ ಮೂಲಕ ಸೇವಿಸುವ ಔಷಧಿಯ ಚಿಕಿತ್ಸೆಯನ್ನು ನೀಡಲಾಗುವುದು.
–ಟೈಪ್-2 ಡಯಾಬೆಟಿಸ್ ಅನ್ನುವುದು ಹೆಚ್ಚುತ್ತಾ ಹೋಗುವ ರೋಗಪರಿಸ್ಥಿತಿ ಆಗಿರುವ ಕಾರಣ, ಕೆಲವು ವ್ಯಕ್ತಿಗಳನ್ನು ಇದು ಜಾಸ್ತಿ ಸಮಯ ಬಾಧಿಸಿದಾಗ, ತಮ್ಮ ರಕ್ತದ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಅವರಿಗೆ ಇನ್ಸುಲಿನ್‌ನ ಆವಶ್ಯಕ ಎನಿಸುವ ಹೆಚ್ಚು ಸಾಧ್ಯತೆ ಇದೆ.
ಚಿಕಿತ್ಸೆಯಲ್ಲಿ ಇನ್ಸುಲಿನ್ : ಪರಿಣಾಮಗಳು
ಇನ್ಸುಲಿನ್ ಬಹಳ ದುಬಾರಿಯೇ?
ಅಲ್ಲ, ಆದರೆ ಮಧುಮೇಹ ಎಂಬ ಕಾಯಿಲೆ ಬಹಳ ದುಬಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಬಾಯಿಯ ಮೂಲಕ ಸೇವಿಸುವ ಇತರ ಬೇರೆ ರೀತಿಯ ಔಷಧಿಗಳಿಗೆ ಹೋಲಿಸಿದರೆ, ಇನ್ಸುಲಿನ್ ಕಡಿಮೆ ಖರ್ಚಿನ ಔಷಧಿ ಎನ್ನಬಹುದು. ಆದರೆ ಬೆಲೆಗಳು ಬೇರೆ ಬೇರೆ ಅಂಗಡಿಗಳಲ್ಲಿ ಬೇರೆ ಬೇರೆ ಇರಬಹುದು. ಹಾಗಾಗಿ ಬೆಲೆ ಸೂಕ್ತ ಇರುವ ಅಂಗಡಿಯಲ್ಲಿ ಖರೀದಿಸಿ. ಇನ್ಸುಲಿನ್ ಜೊತೆಗೆ ಸಿರಿಂಜ್, ಇನ್ಸುಲಿನ್ ಬಗೆಗಿನ ಕಲಿಕಾ ಪಠ್ಯಗಳು ಮತ್ತು ಇನ್ಸುಲಿನ್ ಪೆನ್‌ಗಳು ಸಹ ಉಚಿತವಾಗಿ ದೊರೆಯುತ್ತವೆ.
ಇನ್ಸುಲಿನ್ ಅಂದರೆ ಜೀವನದಲ್ಲಿ ಬದಲಾವಣೆ
ಆಗುವುದು ಎನ್ನುತ್ತಾರೆ, ಇದು ಸತ್ಯವೇ?
ಅಲ್ಲ, ಒಂದು ಬಾರಿ ಇನ್ಸುಲಿನ್ ಅನ್ನು ಆರಂಭಿಸಿದರೆ ಅವರು ಪರಾವಲಂಬಿ ಗಳಾಗುತ್ತಾರೆ, ಅವರಿಗೆ ಒಂಟಿಯಾಗಿ ಬದುಕುವುದು, ಪ್ರಯಾಣ ಮಾಡುವುದು ಅಥವಾ ಮನೆಯಿಂದ ಹೊರಗೆ ಆಹಾರ ಸೇವಿಸುವುದು ಸಾಧ್ಯವಾಗಲಾರದು ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ ಇವು ಯಾವುದೂ ನಿಜ ಅಲ್ಲ. ಯೋಜನಾಬದ್ಧವಾಗಿ ಮಾಡಿದರೆ ಒಬ್ಬ ವ್ಯಕ್ತಿಗೆ ತಾನು ಈ ಹಿಂದೆ ಮಾಡಿದ ಎಲ್ಲಾ ಕೆಲಸಗಳನ್ನು ಮಾಡದೆ ಇರಲು ಯಾವ ಕಾರಣವೂ ಇಲ್ಲ. ನಮ್ಮ ಜೀವನಶೈಲಿಗೆ ಸರಿಹೊಂದುವಂತಹ ಅನೇಕ ವಿಧದ ಇನ್ಸುಲಿನ್‌ಗಳು ಈಗ ಲಭ್ಯ ಇವೆ.
ವಾಸ್ತವವಾಗಿ,ಇನ್ಸುಲಿನ್ ಜೊತೆಗೆ ತಮ್ಮ ಬದುಕೂ ಉತ್ತಮ ರೀತಿಯಲ್ಲಿ ಬದಲಾಗಿರುವುದನ್ನು ಅನೇಕ ಜನರು ಕಂಡುಕೊಂಡಿದ್ದಾರೆ. ಹೆಚ್ಚು ಸಾಮರ್ಥ್ಯ, ತಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚು ನಿಖರತೆ ಮತ್ತು ತಮ್ಮ ಬಗ್ಗೆ ಹೆಚ್ಚು ಧನಾತ್ಮಕ ಭಾವನೆಯನ್ನು ಹೊಂದಿದವರಾಗಿದ್ದ ಆ ಜನರು ಇನ್ಸುಲಿನ್ ಆರಂಭಿಸಿದ ಅನಂತರ ಈ ಭಾವಗಳನ್ನೆಲ್ಲಾ ಮತ್ತೆ ಅನುಭವಿಸಲು ತಾವು ಇಷ್ಟು ವರ್ಷ ಕಾದದ್ದೇಕೆ ಎಂದು ಅಚ್ಚರಿಗೊಳ್ಳುತ್ತಾರೆ.
ಇನ್ಸುಲಿನ್‌ನಿಂದಾಗಿ ರಕ್ತದಲ್ಲಿ ಗುÉಕೋಸ್ ಅಂಶವು ತಗ್ಗುವ ಪರಿಣಾಮ ಉಂಟಾಗುವುದು ನಿಜ. ಆದರೆ, ಹೊಸ ಮತ್ತು ಲಾಂಗ್-ಆಕ್ಟಿಂಗ್ ಇನ್ಸುಲಿನ್‌ಗಳಲಿ, ಈ ರೀತಿಯ ಹೈಪೋಗ್ಲೆ„ಸ್ಮಿಯಾ ಕಾಣಿಸಿಕೊಳ್ಳುವುದು ಬಹಳ ಕಡಿಮೆ. ರೋಗಿಗಳು ಹೈಪೋಗ್ಲೆ„ಸೆಮಿಯಾದ ತಡೆಗಟ್ಟುವಿಕೆ, ಗುರುತಿಸುವಿಕೆ ಮತ್ತು ಚಿಕಿತ್ಸೆಯನ್ನು ತಿಳಿದುಕೊಳ್ಳಬೇಕು ಮತ್ತು ಆ ಮೂಲಕ ಇನ್ಸುಲಿನ್‌ನ ಗಂಭೀರ ಪರಿಣಾಮಗಳು ಉಂಟಾಗುವುದನ್ನು ತಡೆಯಬೇಕು.
ಇನ್ಸುಲಿನ್‌ನಿಂದ ಕುರುಡುತನ ಅಥವಾ ಮೂತ್ರಪಿಂಡದ
ವೈಫಲ್ಯಗಳಂತಹ ತೊಂದರೆಗಳು ಉಂಟಾಗುತ್ತವೆಯೇ?
ಇಲ್ಲ, ಸಾಮಾನ್ಯವಾಗಿ ವೈದ್ಯರುಗಳು ಚಿಕಿತ್ಸೆಯ ಬಗೆಗಿನ ತಮ್ಮದೇ ಹಿಂಜರಿಕೆಯ ಕಾರಣದಿಂದಾಗಿ ಇನ್ಸುಲಿನ್ ಆರಂಭಿಸಲು ನಿಧಾನ ಮಾಡುತ್ತಾರೆ. ಇದಕ್ಕಿರುವ ಕೆಲವು ಕಾರಣಗಳು ಅಂದರೆ ರಕ್ತದಲ್ಲಿ ಸಕ್ಕರೆಯ ಅಂಶದ ಕುಸಿತ ಉಂಟಾಗುವ ಭಯ ಅಥವಾ ತಮ್ಮ ರೋಗಿಯು ಇನ್ಸುಲಿನ್ ನಿಯಮ ಅಥವಾ ಕ್ರಮವನ್ನು ಪಾಲಿಸಲಾರ ಎಂಬ ಕಾಳಜಿ. ಇದರ ಪರಿಣಾಮವಾಗಿ ಮಧುಮೇಹ ರೋಗಿಗಳ ಚಿಕಿತ್ಸೆಯಲ್ಲಿ ಇನ್ಸುಲಿನ್ ಬಹಳ ತಡವಾಗಿ ಸೇರ್ಪಡೆಯಾಗುತ್ತದೆ. ಆದರೆ ವಾಸ್ತವ ವಿಷಯ ಏನೆಂದರೆ ಜನರಿಗೆ ಇನ್ಸುಲಿನ್ ಆರಂಭಿಸಿದ ಕಾರಣದಿಂದ ತೊಂದರೆಗಳು ಆರಂಭವಾಗುವುದಿಲ್ಲ, ಅದಕ್ಕೆ ಬದಲಾಗಿ ಇನ್ಸುಲಿನ್ ಅನ್ನು ಬಹಳ ತಡವಾಗಿ ಆರಂಭಿಸಿದ ಕಾರಣದಿಂದಾಗಿ ಅವರಲ್ಲಿ ತೊಂದರೆಗಳು ಆರಂಭವಾಗಿರುತ್ತವೆ. ವಾಸ್ತವವಾಗಿ ಇನ್ಸುಲಿನ್ ತೊಂದರೆ ಉಂಟಾಗುವುದನ್ನು ತಗ್ಗಿಸುತ್ತದೆ. ಚಿಕಿತ್ಸೆಯಲ್ಲಿ ಇನ್ಸುಲಿನ್ ಅನ್ನು ಸೇರಿಸಿಕೊಳ್ಳುವುದರಿಂದ ಕೆಲವು ತೊಂದರೆಗಳ ವಿರುದ್ಧ ನಿಯಂತ್ರಣವನ್ನು ಸಾಧಿಸಬಹುದು ಮತ್ತು ತೊಂದರೆಗಳ ಪ್ರಮಾಣವನ್ನು ತಗ್ಗಿಸಿಕೊಳ್ಳಬಹುದು. ಆದರೆ ಚಿಕಿತ್ಸೆಯ ಯಶಸ್ಸಿಗಾಗಿ ವೈದ್ಯರು ತಿಳಿಸಿದ ನಿಯಮಗಳನ್ನು ಅನುಸರಿಸುವುದು ಬಹಳ ಆವಶ್ಯಕ.
– ಡಾ| ರಾಮ್ ಭಟ್,
ಪ್ರೊಫೆಸರ್ ಆಫ್ ಮೆಡಿಸಿನ್,
ಮೆಡಿಸಿನ್ ವಿಭಾಗ,ಕೆ.ಎಂ.ಸಿ., ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್; ತಪ್ಪಿದ ಅನಾಹುತ
Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ
Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.