ಸರಿಯಾದ ಉಸಿರಾಟ ಅಭ್ಯಾಸವನ್ನು ಕಲಿಸುವ ಪ್ರಾಣಾಯಾಮ

ಬೆನ್ನು ನೇರವಾಗಿ, ದೇಹ ಶಾಂತವಾಗಿ, ಎಡಗೈ ಮೊಣಕಾಲಿನ ಮೇಲೆ ಇರಲಿ

Team Udayavani, Mar 24, 2021, 12:05 PM IST

ಸರಿಯಾದ ಉಸಿರಾಟ ಅಭ್ಯಾಸವನ್ನು ಕಲಿಸುವ ಪ್ರಾಣಾಯಾಮ

ದೇಹದ ಪ್ರತಿಯೊಂದು ಜೀವಕೋಶಕ್ಕೂ ಶಕ್ತಿಯನ್ನು ನೀಡುವ ಪ್ರಣಾಯಾಮದ ಅಭ್ಯಾಸ ಸರಳವಾಗಿ ಕಂಡರೂ ನಿಯಮಿತ ತರಬೇತಿ ಅಗತ್ಯ. ಪ್ರಾಣಾಯಾಮವು ಸಾಮಾನ್ಯವಾಗಿ ಸರಿಯಾದ ಉಸಿರಾಟದ ಅಭ್ಯಾಸವನ್ನು ಕಲಿಸುತ್ತದೆ. ಇದರಲ್ಲಿ ದೇಹದ ಎಲ್ಲ ಭಾಗಗಳೂ ಒಳಗೊಳ್ಳುವುದರಿಂದ ತಾಜಾ ಆಮ್ಲಜನಕ ದೇಹದ ಪ್ರತಿಯೊಂದು ಅಂಗಕ್ಕೂ ತಲುಪುತ್ತದೆ.

ಪ್ರಾಣಾಯಾಮದಿಂದ ದೇಹದ 80 ಸಾವಿರ ನರಗಳ ಶುದ್ಧೀ ಕರಣವಾಗುತ್ತದೆ. ಇದು ದೇಹದಲ್ಲಿ ಶಕ್ತಿಯ ಹರಿವನ್ನು ಸಮ ತೋಲನದಲ್ಲಿರಿಸುತ್ತದೆ. ಸ್ಥಿರವಾದ ಮತ್ತು ನಿಯಮಿತವಾದ ಪ್ರಾಣಾಯಾಮದಿಂದ ಮನಸ್ಸು ಮತ್ತು ದೇಹವನ್ನು ರೋಗ ಮುಕ್ತಗೊಳಿಸಲು ಸಾಧ್ಯವಿದೆ.

ಪ್ರಾಣಾಯಾಮದಿಂದ ಆಮ್ಲಜನಕವು ಎಲ್ಲ ಅಂಗಗಳಿಗೂ ತಲುಪುವುದರಿಂದ ಜೀರ್ಣಾಂಗ ವ್ಯವಸ್ಥೆ ಸಮತೋಲನ ದಲ್ಲಿರುತ್ತದೆ. ಚರ್ಮಕ್ಕೆ ನೈಸರ್ಗಿಕ ಹೊಳಪು ಸಿಗುತ್ತದೆ. ಚೈತನ್ಯವನ್ನು ವೃದ್ಧಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುವ ಶಕ್ತಿಯೂ ಪ್ರಾಣಾಯಾಮಕ್ಕೆ ಇದೆ.

ಹೀಗಾಗಿ ಮನಸ್ಸು ಶಾಂತವಾಗಿ ಏಕಾಗ್ರತೆ ವೃದ್ಧಿಸುತ್ತದೆ. ಮಾನಸಿಕ ನರಗಳು ಶಾಂತವಾಗಿ ರಕ್ತ ಪರಿಚಲನೆ ವೃದ್ಧಿ ಯಾಗುವುದು. ಇದರಿಂದ ಮಾನಸಿಕ, ದೈಹಿಕ ಒತ್ತಡ ದೂರವಾಗುವುದು. ಅಧಿಕ ರಕ್ತದೊತ್ತಡ ಸಮಸ್ಯೆ ಯಿಂದ ಬಳಲುತ್ತಿರುವವರಿಗೆ ಪ್ರಾಣಾಯಾಮ ಅಭ್ಯಾಸ ಉತ್ತಮ. ದೇಹವನ್ನು ಶಾಂತಗೊಳಿಸಿ ಸಂಪೂರ್ಣ ವಿಶ್ರಾಂತಿ ಒದಗಿಸುವ ಹಾರ್ಮೋನ್‌ ಅನ್ನು ಬಿಡುಗಡೆ ಮಾಡುತ್ತದೆ. ರಕ್ತದೊತ್ತಡದ ಜತೆಗೆ ಮಧುಮೇಹ, ಖಿನ್ನತೆಯನ್ನೂ ದೂರ ಮಾಡುತ್ತದೆ.

ವ್ಯಕ್ತಿಯ ದೀರ್ಘಾಯುಷ್ಯವು ಉಸಿರಾಟದ ಪ್ರಮಾಣವನ್ನು ಅವಲಂಬಿಸಿರುತ್ತದೆ. ಹೀಗಾಗಿ ಪ್ರಾಣಾಯಾಮದಿಂದ ಆಯುಷ್ಯವನ್ನು ವೃದ್ಧಿಸಲು ಸಾಧ್ಯವಿದೆ. ದೇಹ ಮತ್ತು ಮನ ಸ್ಸಿನ ಮೇಲೆ ಹಿಡಿತ ಸಾಧಿಸಲು ನೆರವಾಗುವ ಪ್ರಾಣಾಯಾಮವು ತೂಕ ಇಳಿಸಲು ನೆರವಾಗುತ್ತದೆ. ನಿರಂತರವಾಗಿ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ಆಹಾರ ಸೇವನೆಯಲ್ಲಿ ಸಮತೋಲನ ಸಾಧಿಸಲು ಸಾಧ್ಯವಿದೆ.

ಪ್ರಾಣಾಯಾಮ ಮಾಡುವುದು ಹೇಗೆ?
*ಯೋಗ ಮ್ಯಾಟ್‌ ಮೇಲೆ ಧ್ಯಾನಸ್ಥ ಭಂಗಿಯಲ್ಲಿ ಕಾಲು ಮಡಚಿ ಕುಳಿತುಕೊಳ್ಳಿ
*ಹೆಬ್ಬೆರಳಿನಿಂದ ಬಲ ಮೂಗಿನ ಹೊಳ್ಳೆಯನ್ನು ಮುಚ್ಚಿ ಎಡ ಮೂಗಿನ ಹೊಳ್ಳೆಯಿಂದ ಉಸಿರಾಡಿ.
*ಬೆನ್ನು ನೇರವಾಗಿ, ದೇಹ ಶಾಂತವಾಗಿ, ಎಡಗೈ ಮೊಣಕಾಲಿನ ಮೇಲೆ ಇರಲಿ.
*ಬಳಿಕ ಎಡ ಮೂಗಿನ ಹೊಳ್ಳೆಯನ್ನು ಬಲಗೈಯ ಉಂಗುರದ ಬೆರಳಿನಿಂದ ಮುಚ್ಚಿ. ಬಲ ಮೂಗಿನಿಂದ ಉಸಿರಾಡಿ.
*15 ನಿಮಿಷಗಳ ಕಾಲ ಇದನ್ನು ಪುನರಾವರ್ತಿಸಿ. ಅಗತ್ಯವಿದ್ದರೆ ಪ್ರತಿ 5 ನಿಮಿಷಕ್ಕೊಮ್ಮೆ ವಿರಾಮ ಪಡೆಯಿರಿ.

ಟಾಪ್ ನ್ಯೂಸ್

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.