ಕೆರಾಟೋಕೋನಸ್‌ – ಕಣ್ಣಿನ ಒಂದು ಹೊಸ ರೂಪದ ರೋಗಸ್ಥಿತಿ


Team Udayavani, Mar 19, 2017, 10:38 AM IST

Arogyavani-19.jpg

ರವಿ 14 ವರ್ಷ ವಯಸ್ಸಿನ ಹೈಸ್ಕೂಲು ವಿದ್ಯಾರ್ಥಿ. ದೈಹಿಕವಾಗಿ ಬಹಳ ಆರೋಗ್ಯಶಾಲಿಯಾಗಿದ್ದ ರವಿ ಬಹಳ ಚಟುವಟಿಕೆಯ, ಉತ್ಸಾಹಿ ಹುಡುಗನಾಗಿದ್ದ. ಚಿತ್ರ ಬಿಡಿಸುವುದರಲ್ಲಿ ಮತ್ತು ಕಥೆ ಪುಸ್ತಕಗಳನ್ನು ಓದುವುದರಲ್ಲಿ ರವಿಗೆ ಬಹಳ ಆಸಕ್ತಿ. ಬಹಳಷ್ಟು ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್‌ಗಳಿಗೆ ಅಂಟಿಕೊಳ್ಳುವ ಈ ದಿನಗಳಲ್ಲಿ ರವಿಯ ಉತ್ತಮ ಅಭಿರುಚಿಯ ಕಾರಣದಿಂದಾಗಿ ಆತನ ಸಹಪಾಠಿಗಳು, ಶಿಕ್ಷಕರು ಮತ್ತು ಅಕ್ಕ ಪಕ್ಕದವರು ಆತನನ್ನು ಬಹುವಾಗಿ ಮೆಚ್ಚುತ್ತಿದ್ದರು. ಜಿಲ್ಲೆ, ತಾಲೂಕು ಮಟ್ಟಗಳಲ್ಲಿ ನಡೆಸುತ್ತಿದ್ದ ಕ್ವಿಝ್ ಕಾರ್ಯಕ್ರಮಗಳಲ್ಲೆಲ್ಲಾ ರವಿ ಆತನ ಶಾಲೆಯ ಏಕೈಕ ಪ್ರತಿನಿಧಿಯಾಗಿದ್ದ. ಆತನ ಓದು ಮತ್ತು ಬರವಣಿಗೆಯ ಕೌಶಲವು ಹಿರಿಯ ವಯಸ್ಕರಿಗೆ ಸರಿಗಟ್ಟುತ್ತಿತ್ತು. 

ಕ್ರಿಕೆಟ್‌ನಲ್ಲಿಯೂ ಸಹ ಆಸಕ್ತಿಯನ್ನು ಹೊಂದಿದ್ದ ರವಿ ಒಳ್ಳೆಯ ಬೌಲರ್‌ ಆಗಿದ್ದ ಮತ್ತು ತನ್ನ ತರಗತಿಯ ಕ್ರಿಕೆಟ್‌ ತಂಡದ ನಾಯಕನಾಗಿದ್ದ. ಶಾಲೆಯ ಕ್ರಿಕೆಟ್‌ ತಂಡದಲ್ಲಿನ 12 ಅತ್ಯುತ್ತಮ ಕ್ರೀಡಾಳುಗಳಲ್ಲಿ ಒಬ್ಬನಾಗಿ ರವಿಯೂ ಆಯ್ಕೆಯಾಗಿದ್ದ. ತಮ್ಮ ಮಗನ ಪ್ರತಿಭೆಯು ಹೆತ್ತವರಿಗೆ ಸ್ನೇಹಿತರು ಮತ್ತು ಸಂಬಂಧಿಕರ ನಡುವೆ ಹೆಮ್ಮೆಯನ್ನು ತಂದಿತ್ತು, ಮಗನಿಗೆ ಅದ್ಭುತವಾದ ಮತ್ತು ಆಶಾದಾಯಕ ಭವಿಷ್ಯ ಇದೆ ಎಂದು ಆತನ ಹೆತ್ತವರ ಭಾವನೆಯಾಗಿತ್ತು.  ಆದರೆ ವಾಸ್ತವ ಬೇರೆಯೇ ಆಗಿತ್ತು, ನಿಧಾನವಾಗಿ ಕೆಲವು ಅಸಹಜ ಸಂಗತಿಗಳು ಕಾಣಿಸಿಕೊಳ್ಳಲು ಆರಂಭವಾದವು. ರವಿಗೆ ನಿಧಾನವಾಗಿ ದೃಷ್ಟಿ ಮಬ್ಟಾಗಲು ಆರಂಭವಾಯಿತು. ಕರಿ-ಹಲಗೆಯ ಮೇಲೆ ಬರೆದಿದ್ದ ಬರಹಗಳನ್ನು ಸ್ಪಷ್ಟವಾಗಿ ಓದುತ್ತಿದ್ದ ರವಿಗೆ ಈಗೀಗ ಮಬ್ಟಾಗಿ ಕಾಣಿಸುತಿತ್ತು. ತಾನು ಕುಳಿತುಕೊಳ್ಳುವ ಜಾಗವನ್ನು ಬದಲಾಯಿಸುವಂತೆ ರವಿ ತನ್ನ ಶಿಕ್ಷಕರಲ್ಲಿ  ವಿನಂತಿ ಮಾಡಿಕೊಂಡ. ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ (162 ಸೆ.ಮೀ ಉದ್ದ ಇದ್ದ) ರವಿಯನ್ನು ಎರಡನೆಯ ಬೆಂಚಿಗೆ, ಅಂದರೆ ಕರಿ ಹಲಗೆಯು ಸ್ಪಷ್ಟವಾಗಿ ಕಾಣುವಂತೆ ತೀರಾ ಹತ್ತಿರಕ್ಕೆ ವರ್ಗಾಯಿಸಲಾಯಿತು. ಆದರೆ ತೊಂದರೆ ಸರಿ ಹೋಗಲಿಲ್ಲ, ಆ ಪ್ರಯತ್ನವೂ ವ್ಯರ್ಥವಾಯಿತು. ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ರವಿ ಕಣ್ಣುಜ್ಜಿಕೊಳ್ಳುವುದೂ ಜಾಸ್ತಿ ಆಯಿತು. ರವಿಗೆ ಓದಲು ಬಹಳ ಕಷ್ಟವಾಗುತ್ತಿತ್ತು. ಓದಲು, ಬರೆಯಲು ಮತ್ತು ಚಿತ್ರಬಿಡಿಸಲು ಸಾಧ್ಯವೇ ಆಗದೆ ಇರುವಂತಹ ಪರಿಸ್ಥಿತಿ ನಿರ್ಮಾಣವಾಯಿತು.  ತನ್ನ ಇಷ್ಟದ ಕೆಲಸಗಳಾದ ಓದು, ಬರಹ, ಡ್ರಾಯಿಂಗ್‌ ಇತ್ಯಾದಿಗಳಲ್ಲಿ ತೊಡಗಿಕೊಳ್ಳಲು ಇನ್ನು ಸಾಧ್ಯ ಆಗುವುದಿಲ್ಲ ಎಂದು ತಿಳಿದಾಗ ರವಿಗೆ ಆಘಾತವಾಯಿತು. ಆತನ ಹೆತ್ತವರಿಗೆ ಇದು ಅತ್ಯಂತ ನೋವಿನ ಸಂಗತಿಯಾಗಿತ್ತು. ರವಿಯ ಶೈಕ್ಷಣಿಕ ಮಟ್ಟದಲ್ಲಿಯೂ ತೀವ್ರ ಕುಸಿತ ಉಂಟಾಯಿತು. ಕ್ರಿಕೆಟ್‌ ಮತ್ತು ಕ್ರೀಡೆಗಳಲ್ಲಿಯೂ ಸಹ ಆತನ ಕುಶಲತೆಯು ಕಡಿಮೆಯಾಯಿತು. ಅತ್ಯುತ್ತಮ ಕ್ರಿಕೆಟ್‌ ಆಟಗಾರನಾಗಿದ್ದ ರವಿಗೆ, ಈಗ ತನ್ನತ್ತ ಬರುತ್ತಿದ್ದ ಚೆಂಡಿನ ವೇಗ ಮತ್ತು ದಿಕ್ಕನ್ನು ಗಮನಿಸಲು ಸಾಧ್ಯ ಆಗುತ್ತಿರಲಿಲ್ಲ. ಸುಮಾರು 6 ತಿಂಗಳ ಕಾಲ ರವಿಯ ಶಾಲಾ-ಆಡಳಿತ, ಆತನ ಸಹಪಾಠಿಗಳು, ಆತನ ಹೆತ್ತವರು ಮತ್ತು ನೆರೆಹೊರೆಯವರಿಗೆ ಇದೊಂದು ಚರ್ಚೆಯ ವಿಷಯವಾಗಿತ್ತು ಮತ್ತು ಅತ್ಯಂತ ವಿಷಾದಕರ ಸಂಗತಿಯಾಗಿತ್ತು.  

ಹೆಚ್ಚು  ವಿಳಂಬ ಮಾಡದೆ ರವಿಯನ್ನು ಒಂದು ಸಾಮಾನ್ಯ ಚೆಕ್‌-ಅಪ್‌ ಮತ್ತು ಕಣ್ಣು ಪರೀಕ್ಷೆಗಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಒಬ್ಬ ನೇತ್ರತಜ್ಞರು ಆತನ ಕಣ್ಣುಗಳನ್ನು ಪರೀಕ್ಷೆ ಮಾಡಿದರು ಮತ್ತು ಆತನಿಗೆ ಕೆರಾಟೋಕೋನಸ್‌-ಸ್ಟೇಜ್‌ ಐಐ ಕಾಯಿಲೆ ಇದೆ ಎಂಬುದಾಗಿ ತಿಳಿಸಿದರು. 

ಹಾಗಂದರೆ ಏನು? ನಾವು ಈ ಬಗ್ಗೆ ಈ ಹಿಂದೆ ಯಾವತ್ತೂ ಕೇಳಿದ್ದಿಲ್ಲ ಆತಂಕದಿಂದ ಹೆತ್ತವರು ನೇತ್ರತಜ್ಞರನ್ನು ಪ್ರಶ್ನಿಸಿದರು. 

ಕೆರಾಟೋಕೋನಸ್‌ ಎಂದರೇನು?
ಕೆರಾಟೋ ಅಂದರೆ ಕಣ್ಣಿನ ಮುಂಭಾಗದಲ್ಲಿರುವ ಪಾರದರ್ಶಕ ಪಟಲ ಅಥವಾ ಕಾರ್ನಿಯಾ. ಕೋನಸ್‌ ಅಂದರೆ ಕೋನ್‌ ಅಥವಾ ಶಂಕು, ಕಾರ್ನಿಯಾ ಅಥವಾ ಕಣ್ಣಿನ ಪಾರದರ್ಶಕ ಪಟಲವು ಶಂಕುವಿನ ಆಕಾರವನ್ನು ಪಡೆದುಕೊಳ್ಳುವುದನ್ನು ಕೆರಾಟೋಕೋನಸ್‌ ಎಂದು ಹೇಳುತ್ತಾರೆ.

ಇದು ಬಹಳ ನಿಧಾನವಾಗಿ ಹೆಚ್ಚುತ್ತಾ ಹೋಗುವ, ಉರಿಯೂತ ರಹಿತ ರೋಗಲಕ್ಷಣವನ್ನು ಹೊಂದಿರುವ ಕಾಯಿಲೆ ಆಗಿದ್ದು, ಈ ಕಾಯಿಲೆಯಲ್ಲಿ ಕಾರ್ನಿಯದ  (ಕಣ್ಣಿನ ಪಾರದರ್ಶಕ ಪಟಲ) ಕೊಲ್ಯಾಜೆನ್‌ (ಜೋಡಣಾ ಅಂಗಾಂಶ) ಕ್ಷೀಣಿಸಿ, ತೆಳುವಾಗಿ, ಮುಂಚಾಚಿಕೊಳ್ಳುತ್ತದೆ ಮತ್ತು ಕಣ್ಣಿನ ಕಾರ್ನಿಯಾ ಶಂಕುವಿನ ಆಕೃತಿಯನ್ನು ಪಡೆಯುತ್ತಾ ಹೋಗುತ್ತದೆ. ಅಂದರೆ, ಈ ಕಾಯಿಲೆಯಲ್ಲಿ ಕಾರ್ನಿಯಾದ ಚೌಕಟ್ಟಿನ ಪದರವು (ಸ್ಟ್ರೋಮಲ್‌ ಲೇಯರ್‌) ತೆಳುವಾಗುತ್ತಾ ಹೋಗುವ ಕಾರಣದಿಂದ ಅದರ ಜೋಡಣಾ ಅಂಗಾಂಶದ (ಕೊಲ್ಯಾಜೆನ್‌) ಜಾಲದ ಸಂಕೀರ್ಣ, ಜೈವಿಕ ಚಾಲನಾ-ವಿಧಾನ (ಬಯೋಮೆಕ್ಯಾನಿಕ್ಸ್‌) ಅಸಹಜಗೊಳ್ಳುವುದು. ಹೆಚ್ಚಾಗಿ ತಾರುಣ್ಯದ ಆರಂಭದಲ್ಲಿಯೇ ಈ ಕಾಯಿಲೆಯ ರೋಗಲಕ್ಷಣಗಳು ಆರಂಭವಾಗುತ್ತವೆ. 
 
ಚಿತ್ರದಲ್ಲಿ  ಕಣ್ಣಿನ ಪಾರದರ್ಶಕ ಪಟಲದ (ಕಾರ್ನಿಯಾದ) ಸ್ಲಿಟ್‌ ಲ್ಯಾಂಪ್‌ ಆಪ್ಟಿಕ್‌ ಸೆಕ್ಷನ್‌ ಬಿಂಬ. ಚಿತ್ರ ಅ ಯು ಸಹಜ ಕಾರ್ನಿಯಲ್‌ ಕರ್ವೇಚರ್‌ ಅನ್ನು ಪ್ರತಿನಿಧಿಸುತ್ತದೆ ಮತ್ತು ಆ ಕೆರಾಟೋಕಾನಿಕ್‌ ಕಾರ್ನಿಯಾ ಕಾಯಿಲೆ ಇರುವ ಕಾರ್ನಿಯಾವನ್ನು ಪ್ರತಿನಿಧಿಸುತ್ತದೆ. ಚಿತ್ರ ಆ ಯಲ್ಲಿ ಕಾರ್ನಿಯಾವು ಶಂಕುವಿನ ಅಕಾರವನ್ನು ಪಡೆದಿರುವುದನ್ನು ಕಾಣಬಹುದು. 

ಈ ಚಿತ್ರಗಳನ್ನು (ಆಪ್ಟಿಕಲ್‌ ಕೊರೆನ್ಸ್‌ ಟೊಮೋಗ್ರಫಿ) ಮೂಲಕ ಮುಂಭಾಗದಿಂದ (ಆಂಟೀರಿಯರ್‌ ಸೆಗೆ¾ಂಟ್‌) ತೆಗೆದುಕೊಳ್ಳಲಾಗಿದೆ. ಚಿತ್ರ ಇ ಯು ಸಾಕಷ್ಟು ದಪ್ಪಗಿರುವ (ಸಾಮಾನ್ಯವಾಗಿ 500-550 ಮೈಕ್ರಾನ್ಸ್‌) ಸಹಜ ಕಾರ್ನಿಯಾವನ್ನು ಪ್ರತಿನಿಧಿಸುತ್ತದೆ. 

ಚಿತ್ರ ಈ ಯು ದಪ್ಪವು ಕಡಿಮೆಯಾಗಿರುವ (480 ಮೈಕ್ರಾನ್ಸ್‌ ಗಿಂತ ಕಡಿಮೆ) ಕೆರಾಟೋಕೋನಿಕ್‌ ಕಾರ್ನಿಯಾವನ್ನು ಪ್ರತಿನಿಧಿಸುತ್ತದೆ. 

ವ್ಯಾಪಕತೆ
ಭೌಗೋಳಿಕ ಸನ್ನಿವೇಶಗಳು, ತಪಾಸಣಾ ಮಾನದಂಡಗಳು ಮತ್ತು ಆಯ್ಕೆಯಾಗಿರುವ ರೋಗಿಗಳಿಗೆ ಅನುಗುಣವಾಗಿ ವರದಿಯಾಗಿರುವ ಪ್ರಕರಣಗಳಲ್ಲಿಯೂ ಬಹಳಷ್ಟು ಭಿನ್ನತೆಗಳಿವೆ. ಮಧ್ಯ ಭಾರತದಲ್ಲಿ ವರದಿಯಾಗಿರುವ 48 ಡ್ಯಾಪ್ಟರ್‌ ಕಾರ್ನಿಯಲ್‌ ರಿಫ್ರಾಕ್ಟಿವ್‌ ಪವರ್‌ ಅಂಕಿ-ಅಂಶ 2.3%. ಇದರಲ್ಲಿ ಹೆಚ್ಚಿನ ಪಾಲು ತರುಣರದಾಗಿದ್ದು, ಹೆಣ್ಣು ಮತ್ತು ಗಂಡು ಇಬ್ಬರಲ್ಲೂ ಇದು ಸಮಾನವಾಗಿ ಕಾಣಿಸಿಕೊಂಡಿದೆ. ಇದಿಷ್ಟೇ ಅಲ್ಲದೆ ಕೆರಾಟೋಕೋನಸ್‌ ಬೆಳವಣಿಗೆಯಲ್ಲಿ ಹೆತ್ತವರ ರಕ್ತ ಸಂಬಂಧವೂ ಸಹ ಒಂದು ಪ್ರಾತಿನಿಧಿಕ ಅಂಶವಾಗಿರುತ್ತದೆ. ನಮ್ಮ ವೈದ್ಯಕೀಯ ಸಮೀಕ್ಷೆಯ ಪ್ರಕಾರ, ಉಡುಪಿ ಮತ್ತು ಮಂಗಳೂರು ಕರಾವಳಿ ಪ್ರದೇಶದಲ್ಲಿ ಈ ಕಾಯಿಲೆಯ ವ್ಯಾಪಕತೆಯು (ಕಾರ್ನಿಯಾ ಕ್ಲಿನಿಕ್‌ಗೆ ಪರೀಕ್ಷೆಗೆಂದು ಬರುವ 10 ವ್ಯಕ್ತಿಗಳಲ್ಲಿ 2 ಜನರಲ್ಲಿ ಇದು ಪತ್ತೆಯಾಗುತ್ತಿದೆ) ಹೆಚ್ಚಾಗುತ್ತಿದೆ. ಹಾಗಾಗಿ ಕೆರಾಟೋಕೋನಸ್‌ ಬಗ್ಗೆ ಎಚ್ಚರಿಕೆಯನ್ನು ಮೂಡಿಸುವುದು ಈ ಲೇಖನದ ಉದ್ದೇಶ. 

ಲಕ್ಷಣಗಳು (ಕಣ್ಣು ಪರೀಕ್ಷೆಯ ಸಂದರ್ಭದಲ್ಲಿ  ತಜ್ಞರು ಗಮನಿಸಿದ ಹಾಗೆ)
– ಕಣ್ಣಿನ ಸಾಮರ್ಥ್ಯದಲ್ಲಿ  (ರಿಫ್ರಾ$Âಕ್ಟಿವ್‌ ಪವರ್‌) ಸತತ ಬದಲಾವಣೆಗಳಾಗುವುದು 

– ಓಬ್ಲಿಕ್‌ ಅಸ್ಟಿಗ್ಮಾಟಿಸಂ (Oblique astigmatism), ಅಸಿಮ್ಯಾಟ್ರಿಕ್‌ ಬೋ ಟೈ ಪ್ಯಾಟರ್ನ್  

– ವೋಗ್ಟ್ ಸ್ಟ್ರೇ (Vogt straie -ಕಾರ್ನಿಯಾದ ಸ್ಟ್ರೋಮಲ್‌ ಪದರದಲ್ಲಿ ಲಂಬ ಗೆರೆ)

– ರೆಟಿನೋಸ್ಕೋಪಿಯ (ಕಣ್ಣಿನ ಶಕ್ತಿಯನ್ನು ಪರೀಕ್ಷಿಸುವ ಒಂದು ವಿಧಾನ) ಸಂದರ್ಭದಲ್ಲಿ ಸಿಸರ್ಸ್‌ ರಿಫ್ಲೆಕ್ಸ್‌

– ಕಾರ್ನಿಯಾದಲಿ ನರವು ಎದ್ದು ಕಾಣುವುದು

ರೋಗಲಕ್ಷಣಗಳು 
(ಹೆತ್ತವರ ಅನುಭವಕ್ಕೆ ಬಂದಂತೆ)

– ತಿಂಗಳಿಗೊಮ್ಮೆ ಕನ್ನಡಕ ಬದಲಾಯಿಸಬೇಕಾಗುವುದು

– ದೂರದೃಷ್ಟಿಗಾಗಿ ಸೂಕ್ತ ಹೊಂದಾಣಿಕೆಯ ಕನ್ನಡಕವನ್ನು ಧರಿಸಿದರೂ ಸಹ ಸ್ಪಷ್ಟವಾಗಿ ಕಾಣಿಸದೆಯೇ ಇರುವುದು 

-ಆಗಾಗ ಕಣ್ಣುಗಳನ್ನು ಉಜ್ಜುತ್ತಾ ಇರುವುದು

– ಬೆಳಕಿಗೆ ಸಂವೇದನಾಶೀಲತೆ ಹೆಚ್ಚಾಗುವುದು

-ನೋಡುತ್ತಿರುವ ವಸ್ತುನ ಸುತ್ತಲೂ ನೆರಳು ಇರುವಂತೆ ಗೋಚರಿಸುವುದು

ಕೆರಾಟೋಕೋನಸ್‌ ಅನ್ನು ತಪಾಸಣೆ ಮಾಡಲು ಮುಂದೆ ತಿಳಿಸುವ ಪ್ರಮಾಣಕಗಳನ್ನು ಪರಿಗಣಿಸಲಾಗುವುದು. 
a.    ಸೆಂಟ್ರಲ್‌ ಕಾರ್ನಿಯಲ್‌ ಕರ್ವೇಚರ್‌, ಡಯಾಪ್ಟರ್‌ನಲ್ಲಿ
b.    ರಿಫ್ಯಾಕ್ಟಿವ್‌ ಪವರ್‌ ಶ್ರೇಣಿ
c.    ಕಾರ್ನಿಯಾದ ದಪ್ಪ, ಮೈಕ್ರಾನ್ಸ್‌ನಲ್ಲಿ
d.    ಕಾರ್ನಿಯಾದ ಮಧ್ಯಭಾಗದಲ್ಲಿ ಗಾಯದ ಗುರುತು ಇರುವುದು/ಇಲ್ಲದಿರುವುದು

ಆಮ್ಸ್‌ಲರ್‌-ಕ್ರುಮೆಚ್‌ ಒದಗಿಸಿರುವ ಕೆರಾಟೋಕೋನಸ್‌ನ ವಿವಿಧ ಹಂತಗಳ ವರ್ಗೀಕರಣ ಶ್ರೇಣಿ ಹೀಗಿದೆ.

ಹಂತ 1: ಸರಾಸರಿ ಕೇಂದ್ರ ಕಾರ್ನಿಯಲ್‌ ರೀಡಿಂಗ್‌   48.00 D, ರಿಫ್ರಾÂಕ್ಟಿವ್‌ ಪವರ್‌ 5.00D (ಮಿಯೋಪಿಯಾ/ಅಸ್ಟಿಗ್ಮಾಟಿಸಂ).

ಹಂತ 2: ಸರಾಸರಿ ಕೇಂದ್ರ ಕಾರ್ನಿಯಲ್‌ ರೀಡಿಂಗ್‌  53.00D, ರಿಫ್ರಾÂಕ್ಟಿವ್‌ ಪವರ್‌ 5.00 ಈ ದಿಂದ 8.00 ಈ ನಡುವೆ (ಮಿಯೋಪಿಯಾ/ ಅಸ್ಟಿಗ್ಮಾಟಿಸಂ), ಕಾರ್ನಿಯಾ ದಪ್ಪ 400 ಮೈಕ್ರಾನ್ಸ್‌ .

ಹಂತ 3: ಸರಾಸರಿ ಕೇಂದ್ರ ಕಾರ್ನಿಯಲ್‌ ರೀಡಿಂಗ್‌  53.00 D, ರಿಫ್ರಾ$Âಕ್ಟಿವ್‌ ಪವರ್‌ 8.00 ಈ ದಿಂದ 10.00 D ನಡುವೆ (ಮಿಯೋಪಿಯಾ/ ಅಸ್ಟಿಗ್ಮಾಟಿಸಂ), ಕಾರ್ನಿಯಾ ದಪ್ಪ 300 ಮೈಕ್ರಾನ್ಸ್‌ ನಿಂದ 400 ಮೈಕ್ರಾನ್ಸ್‌ .

ಹಂತ 4: ಸರಾಸರಿ ಕೇಂದ್ರ ಕಾರ್ನಿಯಲ್‌ ರೀಡಿಂಗ್‌  55.00 D, ರಿಫ್ರಾ$Âಕ್ಟಿವ್‌ ಪವರ್‌ ಪತ್ತೆ ಮಾಡುವುದು ಕಷ್ಟ, ಕಾರ್ನಿಯಾ ಮಧ್ಯಭಾಗದಲ್ಲಿ ಗಾಯ ಆಗಿರುವುದು, ಕಾರ್ನಿಯಾದ ದಪ್ಪ  200 ಮೈಕ್ರಾನ್ಸ್‌. 

ಕೆರಾಟೋಕೋನಸ್‌:
ಕೆರಾಟೋಕೋನಸ್‌ ಉಂಟಾಗಲು ಇರುವ ಪ್ರಮುಖ ಕಾರಣ ಅಂದರೆ ಕಣ್ಣುಗಳನ್ನು ಸತತವಾಗಿ ಉಜ್ಜುತ್ತಿರುವುದು ಎಂಬುದಾಗಿ ತಿಳಿದು ಬಂದಿರುತ್ತದೆ ಮತ್ತು ವರದಿಯಾಗಿರುತ್ತದೆ. ಕಣ್ಣಿನ ಅಥವಾ ದೇಹದ ಯಾವುದೇ ರೀತಿಯ ಸಕ್ರಿಯ ಅಲರ್ಜಿ ಪ್ರತಿಕ್ರಿಯೆಗಳು/ಪರಿಸ್ಥಿತಿಗಳು ರೋಗಸ್ಥಿತಿಯನ್ನು ಪ್ರಚೋದಿಸಬಹುದು. ಈ ಪ್ರತಿಕ್ರಿಯೆಯನ್ನು ತಗ್ಗಿಸಲು ಕೊಡುವ ಯಾವುದೇ ರೀತಿಯ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟರೆ ಕೆರಾಟೋಕೋನಸ್‌ ಹೆಚ್ಚಳಕ್ಕೆ ಕಾರಣ ಆಗಬಹುದು. ಹತ್ತಿರದ ಸಂಬಂಧಿಗಳ ಮಧ್ಯೆ ವಿವಾಹ ಆಗುವುದು ಕೆರಾಟೋಕೋನಸ್‌ ಹೆಚ್ಚಳಕ್ಕೆ ಇರುವ ಮತ್ತೂಂದು ಪ್ರಮುಖ ಕಾರಣ. ಮತ್ತೂಂದು ವರ್ಗದ ಜನರಿರುತ್ತಾರೆ ಅವರಲ್ಲಿ ಕೆರಾಟೋಕೋನಸ್‌ ಪರಿಸ್ಥಿತಿಯು ನೈಸರ್ಗಿಕವಾಗಿಯೇ ಬಂದಿರುತ್ತದೆ ಮತ್ತು ಬೆಳವಣಿಗೆ ಆಗುತ್ತಿರುತ್ತದೆ. ಇದಕ್ಕೆ ನಿಖರ ಕಾರಣ ಏನೆಂಬುದು ಇನ್ನಷ್ಟೆ ತಿಳಿದು ಬರಬೇಕಿದೆ. 

ವೈದ್ಯಕೀಯ ತಪಾಸಣಾ 
ಸಾಧನಗಳು

-ಆಪ್ಟಿಕಲ್‌ ಕೊಯರೆನ್ಸ್‌ ಟೋಮೋಗ್ರಫಿ – ಮುಂಭಾಗದ್ದು.
-ಪೆಂಟಾಕ್ಯಾಮ್‌ ವಿಥ್‌ ಸ್ಕೀಮಗ್‌ ಇಮೇಜಿಂಗ್‌.
-ORBSCAN  ಕಾರ್ನಿಯಲ್‌ ಟೊಪೋಗ್ರಾಫ‌ರ್‌.
-ಆಕ್ಯುಲಾರ್‌ ರೆಸ್ಪಾನ್ಸ್‌ ಅನಲೈಸರ್‌
-ಶಿಯರ್‌ ವೇವ್‌ ಪ್ರೊಪೊಗೇಶನ್‌ ಇಮೇಜಿಂಗ್‌.

ನಿರ್ವಹಣಾ ಆಯ್ಕೆಗಳು 
ಒಳ್ಳೆಯ ಸಮಾಚಾರ ಏನು ಅಂದರೆ, ರೋಗಿಯು ಕೆರಾಟೋಕೋನಸ್‌ನಿಂದ ಯಾವತ್ತೂ ಕುರುಡರಾಗುವುದಿಲ್ಲ. ಪರಿಸ್ಥಿತಿಯ ಮಟ್ಟವನ್ನು ಅನುಸರಿಸಿಕೊಂಡು ಬೇರೆ ಬೇರೆ ರೀತಿಯ ಚಿಕಿತ್ಸೆಯನ್ನು ನೀಡಲಾಗುತ್ತದೆ, ಇದರಿಂದ ವ್ಯಕ್ತಿಗೆ ಕ್ರಮೇಣ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಮತ್ತು ದೈನಂದಿನ ಚಟುವಟಿಕೆಗಳನ್ನು ನಡೆಸಲು ಸಹಾಯವಾಗುತ್ತದೆ. 

ಈ ಕಾಯಿಲೆಯಲ್ಲಿ ಸಕಾಲದಲ್ಲಿ ತಪಾಸಣೆ ಮತ್ತು ನಿರ್ವಹಣೆ ಬಹಳ ಮುಖ್ಯವಾಗುತ್ತದೆ. ಆರಂಭಿಕ ಹಂತದಲ್ಲಿ ಇದನ್ನು ಕನ್ನಡಕ ಅಥವಾ ಕಾನ್‌ಟ್ಯಾಕ್ಟ್ ಲೆನ್ಸ್‌ಗಳಿಂದ ನಿರ್ವಹಿಸಬಹುದು. ಆದರೆ ಕಾಯಿಲೆಯು ಕ್ಷಿಪ್ರವಾಗಿ ಬೆಳೆಯುತ್ತಾ ಹೋದ ಹಾಗೆಲ್ಲಾ, ಕಣ್ಣುಗಳ ವಕ್ರೀಭವನ ಸಾಮರ್ಥ್ಯವು ಆಗಾಗ ಕ್ಷಿಪ್ರವಾಗಿ ಬದಲಾಗುವ ಸಾಧ್ಯತೆ ಇದೆ. ಕೆಲವು ಸಾಧಾರಣ ಪ್ರಕರಣಗಳಲ್ಲಿ ರಿಜಿಡ್‌ ಗ್ಯಾಸ್‌ ಪರ್ಮಿಯೇಬಲ್‌ (Rಎಕ) ಲೆನ್ಸ್‌ಗಳ ಮೂಲಕ ನಿರ್ವಹಿಸಲಾಗುವುದು. ಇದು ಬಿಂಬದ ಅನಿಯುತ ಅಸ್ಪಷ್ಟತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಪರಿಸ್ಥಿತಿಯು ಇನ್ನಷ್ಟು ಹೆಚ್ಚಾದರೆ ಕೆರಾಟೋಕೋನಸ್‌ ಅನ್ನು  ವಿಶೇಷ ವಿನ್ಯಾಸದ ಕಾಂಟ್ಯಾಕ್ಟ್ ಲೆನ್ಸ್‌ ಗಳಾದ ರೋಸ್‌ ಕೆ ಲೆನ್ಸ್‌  (Rose) ಅಥವಾ ಪಿಗ್ಗಿ ಬ್ಯಾಕ್‌ ಲೆನ್ಸ್‌  ((Piggy back lens) ಗಳು ಅಥವಾ ಹೈಬ್ರಿಡ್‌ (hybrid) ಕಾಂಟ್ಯಾಕ್ಟ್ ಲೆನ್ಸ್‌ ಮೂಲಕ ನಿರ್ವಹಿಸಬಹುದು

ಮುಂದುವರಿದ ಅಥವಾ ತೀವ್ರ ಪ್ರಕರಣಗಳಲ್ಲಿ  ಸ್ಕಿ$Éàರಲ್‌ ಕಾಂಟ್ಯಾಕ್ಟ್ ಲೆನ್ಸ್‌  ವಿನ್ಯಾಸವು (ದೊಡ್ಡ ವ್ಯಾಸವುಳ್ಳ ಲೆನ್ಸ್‌) ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚು ಸೂಕ್ತ ಅನ್ನಿಸಬಹುದು. ಭಾರತದ – ಬಹಳ ಜನಪ್ರಿಯ ಮತ್ತು ಗೌರವಾನ್ವಿತ ಕ್ರಿಕೆಟಿಗರಾಗಿರುವ ಮತ್ತು ಪ್ರಸ್ತುತ ಭಾರತದ ಸಮರ್ಥ ಕ್ರಿಕೆಟ್‌ ತಂಡದ ಕೋಚ್‌ ಆಗಿರುವ ಅನಿಲ್‌ ಕುಂಬ್ಳೆ ತಮ್ಮ ಯಶಸ್ವೀ ವೃತ್ತಿಜೀವನ ಮತ್ತು ಜನಪ್ರಿಯತೆಯನ್ನು ಕಾಯ್ದುಕೊಂಡದ್ದು ಸ್ಕಿ$Éàರಲ್‌ ಕಾಂಟ್ಯಾಕ್ಟ್ ಲೆನ್ಸ್‌ಗಳ ಮೂಲಕ. ಕೆಲವು ಶಸ್ತ್ರಚಿಕಿತ್ಸಾ ಆಯ್ಕೆಗಳು ಸಹ ಲಭ್ಯ ಇವೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಇಂಟ್ರಾ ಸ್ಟ್ರೋಮಲ್‌ ರಿಂಗ್‌ಗಳನ್ನು ಉಪಯೋಗಿಸಲಾಗುತ್ತದೆ. 

ಬಹಳ ತೀವ್ರ ಹಂತದ ಪ್ರಕರಣಗಳಲ್ಲಿ, ಯಾವುದೇ ರೀತಿಯ ಮಧ್ಯದ ಕಾರ್ನಿಯಲ್‌ ಮಬ್ಟಾಗುವಿಕೆ (ಸೆಂಟ್ರಲ್‌ ಕಾರ್ನಿಯಲ್‌ ಅಪ್ಯಾಸಿಟಿ) ಇದ್ದಲ್ಲಿ, ಕಣ್ಣಿನ ದೃಷ್ಟಿಯನ್ನು ಮತ್ತೆ ಗಳಿಸಲು, ಪೆನಟ್ರೇಟಿಂಗ್‌ ಕೆರಟೋಪ್ಲಾಸ್ಟಿಯಂತಹ (ಡೀಪ್‌ ಆಂಟೀರಿಯರ್‌ ಲ್ಯಾಮೆಲ್ಲಾರ್‌ ಕೆರೆಟೋಪ್ಲಾಸ್ಟಿಯಂತಹ ಕೆಲವು ಪ್ರಕರಣಗಳು) ವಿಶೇಷ ಶಸ್ತ್ರಚಿಕಿತ್ಸಾ  ವಿಧಾನಗಳನ್ನು ಅನುಸರಿಸಲಾಗುತ್ತದೆ. 

ಬಹುಶಃ ಇಲ್ಲಿ C3R ತಂತ್ರಜಾnನದ (ಕಾರ್ನಿಯಲ್‌ ಕಲೀಜನ್‌ ಕ್ರಾಸ್‌ ಲಿಂಕಿಂಗ್‌ ವಿಥ್‌ ರೈಬೋಫ್ಲೇನ್‌) ಬಗ್ಗೆ ವಿವರಿಸುವುದು ಹೆಚ್ಚು ಪ್ರಸ್ತುತ. ಯಾಕೆಂದರೆ ಇದು ರೋಗಪರಿಸ್ಥಿತಿಯ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ. ರೈಬೋಫ್ಲೇನ್‌, ವಿಟಾಮಿನ್‌ B2 ವನ್ನು  ಪಾರದರ್ಶಕ ಪದರೆಯ ಚೌಕಟ್ಟಿನ (ಕಾರ್ನಿಯಲ್‌ ಸ್ಟ್ರೋಮಲ್‌) ಮೇಲೆ ಹಚ್ಚುವುದರಿಂದ, ಈ ಔಷಧಿಯು ದುರ್ಬಲವಾದ ಜೋಡಣಾ ಅಂಗಾಂಶದ (ಕೊಲ್ಯಾಜೆನ್‌) ಸೂಕ್ಷ್ಮ ತಂತುಗಳನ್ನು ಬಲಗೊಳಿಸಿ, ಆ ಮೂಲಕ ರೋಗಸ್ಥಿತಿಯ ಬೆಳವಣಿಗೆಯನ್ನು ತಡೆಯುವಲ್ಲಿ (ಹೆಚ್ಚಿನ ಪ್ರಕರಣಗಳಲ್ಲಿ ನಿಲ್ಲಿಸುತ್ತದೆ) ವಿಶೇಷವಾಗಿ ಸಹಕಾರಿಯಾಗಿರುತ್ತದೆ ಎಂಬುದಾಗಿ ವರದಿಗಳು ಹೇಳುತ್ತವೆ. ರೋಗ ಪರಿಸ್ಥಿತಿಯ ಆರಂಭಿಕ ಹಂತದಲ್ಲಿ ಕಾಯಿಲೆಯು ಬೆಳವಣಿಗೆಯನ್ನು ತಡೆಯುವುದಕ್ಕಾಗಿ ಇದನ್ನು ಸೂಚಿಸಲಾಗುತ್ತದೆ, ಆ ಬಳಿಕ ಚುರುಕಾದ ಮತ್ತು ಸ್ಪಷ್ಟ ದೃಷ್ಟಿಯನ್ನು ಪಡೆಯುವುದಕ್ಕಾಗಿ ಕಾಂಟ್ಯಾಕ್ಟ್ ಲೆನ್ಸ್‌ ಬಳಸಲು ಸೂಚಿಸಲಾಗುತ್ತದೆ. 

ಇನ್ನಷ್ಟು  ಸಲಹೆಗಳು ಮತ್ತು 
ತಪ್ಪಿಸಬೇಕಾದ ಅಂಶಗಳು: 

1.     ಪರಿಸ್ಥಿತಿಯನ್ನು ಗಮನಿಸುತ್ತಿರುವುದಕ್ಕಾಗಿ ಮತ್ತು ಸಕಾಲಿಕವಾಗಿ ನಿರ್ವಹಿಸಲು ಸಹಾಯವಾಗುವಂತೆ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವಂತೆ ರೋಗಿಗೆ ಸೂಚಿಸಲಾಗುತ್ತದೆ
2.     ಆಗಾಗ ಕಣ್ಣುಜ್ಜಿಕೊಳ್ಳಬಾರದು ಮತ್ತು ತುರಿಕೆಯಂತಹ ಸಮಸ್ಯೆ ಇದ್ದರೆ ನೇತ್ರತಜ್ಞರನ್ನು ಭೇಟಿಯಾಗಬೇಕು. 

ಕೆರಾಟೋಕೋನಸ್‌ ಕಾಯಿಲೆಯ ಬೆಳವಣಿಗೆಯನ್ನು ತಡೆಯುವುದಕ್ಕಾಗಿ ರವಿಗೆ C3R  ವಿಧಾನವನ್ನು ಸೂಚಿಸಲಾಯಿತು.  ಈ ವಿಧಾನವನ್ನು ಅನುಸರಿಸಿದ 3 ತಿಂಗಳ ನಂತರ ಸ್ಪಷ್ಟ ದೃಷ್ಟಿಯನ್ನು ಪಡೆಯುವುದಕ್ಕಾಗಿ ಕಾಂಟ್ಯಾಕ್ಟ್ ಲೆನ್ಸ್‌ ಅನ್ನು ಬಳಸುವಂತೆ ಸೂಚಿಸಲಾಯಿತು. 

ಗಮನಿಸಬೇಕಾದ ಅಂಶಗಳು: 
-ನಿಮ್ಮ ಮಗುವು ಸತತವಾಗಿ ಆತನ/ಆಕೆಯ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಿದ್ದಾನೆ/ಳೆಯೇ?
-ಪದೇ ಪದೇ ಕನ್ನಡಕಗಳನ್ನು ಬದಲಿಸಬೇಕಾಗಿದೆಯೇ (3-6 ತಿಂಗಳಿಗೊಮ್ಮೆ)?
-ನಿಮ್ಮ ಮಗು ಕಣ್ಣಿಗೆ ಎರಡೆರಡು ಬಿಂಬಗಳು (ಒಂದರ ಹಿಂದೆ ಒಂದು ನೆರಳಿನಂತೆ –  Shadowing effect) ಕಾಣುತ್ತದೆಂದು ದೂರುತ್ತಿದೆಯೆ?
-ನಿಮ್ಮ ಮಗುವು ಕಣ್ಣಿನ ದೃಷ್ಟಿಯು ಮಬ್ಟಾಗುತ್ತಿದೆ ಎಂದು ಹೇಳುತ್ತಿರುತ್ತಾನೆ/ಳೆಯೇ? 
-ಹಾಗಿದ್ದರೆ ಆದಷ್ಟು ಬೇಗನೆ ಒಬ್ಬ ನೇತ್ರ ತಜ್ಞರನ್ನು ಭೇಟಿಯಾಗಲು ಇದು ಸಕಾಲ!!!

– ಅವಿನಾಶ್‌  ಪ್ರಭು,   
ಅಸಿಸ್ಟೆಂಟ್‌ ಪ್ರೊಫೆಸರ್‌, 
ಡಿಪಾಟೆಟ್‌ ಆಫ್ ಓಪ್ಟೋಮೆಟ್ರಿ, 
ಸ್ಕೂಲ್‌ ಆಫ್ ಅಲೈಡ್‌ ಹೆಲ್ತ್‌ ಸೈನ್ಸಸ್‌, 
ಮಣಿಪಾಲ ವಿಶ್ವವಿದ್ಯಾನಿಲಯ

– ಪ್ರೇಮ್‌ ಜಿತ್‌ ಭಕತ್‌ 
ಅಸಿಸ್ಟೆಂಟ್‌ ಪ್ರೊಫೆಸರ್‌, 
ಡಿಪಾಟೆಟ್‌ ಆಫ್ ಓಪ್ಟೋಮೆಟ್ರಿ, 
ಸ್ಕೂಲ್‌ ಆಫ್ ಅಲೈಡ್‌ ಹೆಲ್ತ್‌ ಸೈನ್ಸಸ್‌, 
ಮಣಿಪಾಲ ವಿಶ್ವದ್ಯಾನಿಲಯ

 

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.