Lupus Nephritis: ಲೂಪಸ್‌ ನೆಫ್ರೈಟಿಸ್‌: ರೋಗಿಗಳಿಗೆ ಒಂದು ಮಾರ್ಗದರ್ಶಿ


Team Udayavani, Nov 10, 2024, 11:27 AM IST

4–Lupus-Nephritis

ಸಿಸ್ಟಮಿಕ್‌ ಲೂಪಸ್‌ ಎರಿತಮಾಟೋಸಸ್‌ (ಎಸ್‌ ಎಲ್‌ಇ) ಎಂಬುದು ದೇಹದ ವಿವಿಧ ಅಂಗಗಳನ್ನು ಬಾಧಿಸಬಹುದಾದ ಆಟೊಇಮ್ಯೂನ್‌ (ದೇಹದ ರೋಗ ನಿರೋಧಕ ವ್ಯವಸ್ಥೆಯು ಪ್ರಮಾದವಶಾತ್‌ ಸ್ವಂತ ಅಂಗಗಳ ವಿರುದ್ಧ ಕಾರ್ಯವೆಸಗುವುದು) ಕಾಯಿಲೆಯಾಗಿದ್ದು, ಲೂಪಸ್‌ ನೆಫ್ರೈಟಿಸ್‌ ಇದರ ಒಂದು ಗಮನಾರ್ಹ ಸಂಕೀರ್ಣ ಸ್ಥಿತಿಯಾಗಿದೆ.

ಈ ಕಾಯಿಲೆಯು ಮೂತ್ರಪಿಂಡಗಳನ್ನು ಗಮನಾರ್ಹವಾಗಿ ಬಾಧಿಸುತ್ತದೆ ಮತ್ತು ಸರಿಯಾದ ಸಮಯದಲ್ಲಿ ಸೂಕ್ತವಾದ ಚಿಕಿತ್ಸೆ ನೀಡದೆ ಇದ್ದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲುದಾಗಿದೆ. ಲೂಪಸ್‌ ನೆಫ್ರೈಟಿಸ್‌, ಅದರ ಕಾರಣಗಳು, ಲಕ್ಷಣಗಳು, ರೋಗಪತ್ತೆ, ಚಿಕಿತ್ಸೆ ಮತ್ತು ರೋಗಿಗಳು ಈ ಬಗ್ಗೆ ತಿಳಿವಳಿಕೆ ಹೊಂದಿರುವುದರ ಪ್ರಾಮುಖ್ಯದ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಲೂಪಸ್‌ (ಎಸ್‌ಎಲ್‌ಇ) ಎಂದರೇನು?

ಲೂಪಸ್‌ ಅಥವಾ ಸಿಸ್ಟಮಿಕ್‌ ಲೂಪಸ್‌ ಎರಿತಮಾಟೋಸಸ್‌ (ಎಸ್‌ಎಲ್‌ಇ) ಎಂಬುದು ಒಂದು ದೀರ್ಘ‌ಕಾಲೀನ ಆಟೊಇಮ್ಯೂನ್‌ ಕಾಯಿಲೆ. ಅಂದರೆ ಇಲ್ಲಿ ದೇಹದ ರೋಗ ನಿರೋಧಕ ವ್ಯವಸ್ಥೆಯು ಪ್ರಮಾದವಶಾತ್‌ ಆರೋಗ್ಯವಂತ ಜೀವಕೋಶಗಳು ಮತ್ತು ಅಂಗಾಂಶಗಳ ಮೇಲೆ ಆಕ್ರಮಣ ನಡೆಸುತ್ತದೆ. ಇದು ಚರ್ಮ, ಸಂಧಿಗಳು, ಹೃದಯ, ಶ್ವಾಸಕೋಶಗಳು ಮತ್ತು ಮೂತ್ರಪಿಂಡಗಳ ಸಹಿತ ದೇಹದ ವಿವಿಧ ಅಂಗಗಳಲ್ಲಿ ಉರಿಯೂತ ಮತ್ತು ಹಾನಿಯನ್ನು ಉಂಟು ಮಾಡಬಹುದು. ಯಾರಿಗೆ ಕೂಡ ಲೂಪಸ್‌ ಉಂಟಾಗಬಹುದು ಆದರೆ ಇದು ಮಹಿಳೆಯರಲ್ಲಿ, ಅದರಲ್ಲೂ 15ರಿಂದ 44 ವರ್ಷ ವಯಸ್ಸಿನವರಲ್ಲಿ ತಲೆದೋರುವ ಸಾಧ್ಯತೆಗಳು ಹೆಚ್ಚು.

ಲೂಪಸ್‌ ನೆಫ್ರೈಟಿಸ್‌ ಎಂದರೇನು?

ಲೂಪಸ್‌ ಮೂತ್ರಪಿಂಡಗಳಲ್ಲಿ ಉರಿಯೂತ ವನ್ನು ಉಂಟಾಗುವುದಕ್ಕೆ ಕಾರಣವಾದಾಗ ಲೂಪಸ್‌ ನೆಫ್ರೈಟಿಸ್‌ ತಲೆದೋರುತ್ತದೆ. ಲೂಪಸ್‌ ನೆಫ್ರೈಟಿಸ್‌ ಉಂಟಾದಾಗ ಮೂತ್ರಪಿಂಡಗಳು ಹಾನಿಗೀಡಾಗುತ್ತವೆ, ಇದರಿಂದ ಅವುಗಳು ಸರಿಯಾಗಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗುವುದಿಲ್ಲ.

ಲೂಪಸ್‌ ನೆಫ್ರೈಟಿಸ್‌ಗೆ ಕಾರಣಗಳು

ಲೂಪಸ್‌ ಅಥವಾ ಲೂಪಸ್‌ ನೆಫ್ರೈಟಿಸ್‌ ಉಂಟಾಗುವುದಕ್ಕೆ ನಿರ್ದಿಷ್ಟ ಕಾರಣಗಳಿಲ್ಲ. ಆದರೆ ಲೂಪಸ್‌ ನೆಫ್ರೈಟಿಸ್‌ ತಲೆದೋರುವ ಅಪಾಯವನ್ನು ಹೆಚ್ಚಿಸುವ ಕೆಲವು ಅಂಶಗಳಿದ್ದು, ಅವು ಹೀಗಿವೆ:

ವಂಶವಾಹಿಗಳು: ಕುಟುಂಬದಲ್ಲಿ ಲೂಪಸ್‌ ನೆಫ್ರೈಟಿಸ್‌ ಹೊಂದಿದವರು ಇದ್ದರೆ ಮಕ್ಕಳು ಕೂಡ ಲೂಪಸ್‌ಗೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ.

ಹಾರ್ಮೋನ್‌ ಅಂಶಗಳು: ಹಾರ್ಮೋನ್‌ ಬದಲಾವಣೆಗಳು ಈ ಕಾಯಿಲೆಯ ಮೇಲೆ ಪ್ರಭಾವ ಬೀರಬಹುದಾಗಿದ್ದು, ಇದೇ ಕಾರಣದಿಂದ ಲೂಪಸ್‌ ಮಹಿಳೆಯರಲ್ಲಿ ಹೆಚ್ಚು ಉಂಟಾಗುತ್ತದೆ.

ಪಾರಿಸರಿಕ ಪ್ರಚೋದಕಗಳು: ಸೂರ್ಯನ ಕಿರಣಗಳು, ಸೋಂಕುಗಳು ಮತ್ತು ಕೆಲವು ಔಷಧಗಳು ಲೂಪಸ್‌ ಉಲ್ಬಣಗೊಳ್ಳಲು ಕಾರಣವಾಗಬಹುದು.

ರೋಗ ನಿರೋಧಕ ವ್ಯವಸ್ಥೆಯ ತಪ್ಪು ಕಾರ್ಯಾಚರಣೆ: ರೋಗ ನಿರೋಧಕ ವ್ಯವಸ್ಥೆಯ ಅತೀ ಕ್ರಿಯಾತ್ಮಕ ಮತ್ತು ತಪ್ಪು ಕಾರ್ಯಾಚರಣೆಯಿಂದ ಮೂತ್ರಪಿಂಡಗಳ ಸಹಿತ ದೇಹದ ವಿವಿಧ ಅಂಗಗಳಲ್ಲಿ ಉರಿಯೂತ ಹಾನಿ ಉಂಟಾಗಬಹುದು.

ಲೂಪಸ್‌ ನೆಫ್ರೈಟಿಸ್‌ ಲಕ್ಷಣಗಳು

ಕಾಲುಗಳಲ್ಲಿ ಊತ: ದೇಹದಲ್ಲಿ ದ್ರವಾಂಶ ಉಳಿದುಕೊಳ್ಳುವುದರಿಂದ ಕಾಲುಗಳು, ಪಾದಗಳು ಮತ್ತು ಮುಖದಲ್ಲಿ ಊತ ಕಂಡುಬರಬಹುದು.

ಮೂತ್ರದಲ್ಲಿ ಬದಲಾವಣೆ: ಲೂಪಸ್‌ ನೆಫ್ರೈಟಿಸ್‌ಗೆ ತುತ್ತಾಗಿರುವ ರೋಗಿಗಳ ಮೂತ್ರವು ಗಾಢ ಬಣ್ಣದ್ದಾಗಿರಬಹುದು, ನೊರೆ ನೊರೆಯಾಗಿರಬಹುದು ಮತ್ತು ರಕ್ತ ಕಂಡುಬರಬಹುದು.

ಅಧಿಕ ರಕ್ತದೊತ್ತಡ: ಮೂತ್ರಪಿಂಡಕ್ಕಾಗುವ ಹಾನಿಯಿಂದಾಗಿ ಅಧಿಕ ರಕ್ತದೊತ್ತಡ ಕಂಡುಬರಬಹುದು.

ದಣಿವು; ಲೂಪಸ್‌ ರೋಗಿಗಳಲ್ಲಿ ಸತತ ದಣಿವು ಅಥವಾ ದೌರ್ಬಲ್ಯ ಸಾಮಾನ್ಯ ಲಕ್ಷಣವಾಗಿರುತ್ತದೆ.

ಜ್ವರ: ವಿವರಿಸಲಾಗದ ಜ್ವರ ಕೂಡ ಕಂಡುಬರಬಹುದು.

ಲೂಪಸ್‌ನ ಇತರ ಲಕ್ಷಣಗಳು: ರೋಗಿಗಳು ಸಂಧಿಗಳಲ್ಲಿ ನೋವು, ಚರ್ಮದಲ್ಲಿ ದದ್ದುಗಳು, ಕೂದಲು ಉದುರುವಿಕೆ ಮತ್ತು ಬಾಯಿ ಹುಣ್ಣುಗಳನ್ನು ಅನುಭವಿಸಬಹುದು.

ಲೂಪಸ್‌ ನೆಫ್ರೈಟಿಸ್‌ ರೋಗಪತ್ತೆ ಪ್ರಯೋಗಾಲಯ ಪರೀಕ್ಷೆಗಳು

 ಮೂತ್ರ ಪರೀಕ್ಷೆ: ಮೂತ್ರದಲ್ಲಿ ಪ್ರೊಟೀನ್‌, ರಕ್ತ ಮತ್ತು ಇತರ ಅಸಹಜ ಸ್ರಾವಗಳನ್ನು ಪತ್ತೆ ಹಚ್ಚಲು ಮೂತ್ರ ಪರೀಕ್ಷೆ ನಡೆಸಲಾಗುತ್ತದೆ.

 ರಕ್ತ ಪರೀಕ್ಷೆಗಳು: ಮೂತ್ರಪಿಂಡದ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲು ಮತ್ತು ಲೂಪಸ್‌ನ ಸಂಕೇತಗಳಾಗಿರುವ ಆ್ಯಂಟಿನ್ಯೂಕ್ಲಿಯರ್‌ ಆ್ಯಂಟಿಬಾಡಿಗಳು (ಎಎನ್‌ಎಗಳು) ಮತ್ತು ಆ್ಯಂಟಿ ಡಬಲ್‌ ಸ್ಟ್ರಾಂಡೆಡ್‌ ಡಿಎನ್‌ಎ ಆ್ಯಂಟಿಬಾಡಿಗಳನ್ನು ಪತ್ತೆಹಚ್ಚಲು ರಕ್ತ ಪರೀಕ್ಷೆಗಳನ್ನು ಉಪಯೋಗಿಸಲಾಗುತ್ತದೆ.

ಮೂತ್ರಪಿಂಡದ ಬಯಾಪ್ಸಿ: ಉರಿಯೂತ ಅಥವಾ ಮೂತ್ರಪಿಂಡಕ್ಕೆ ಹಾನಿ ಉಂಟಾಗಿರು ವುದನ್ನು ತಿಳಿಯುವುದಕ್ಕಾಗಿ ಮೂತ್ರಪಿಂಡದ ಕಿರು ಮಾದರಿಯೊಂದನ್ನು ಪಡೆದು ಪರೀಕ್ಷೆಗೆ ಒಳಪಡಿಸಿ ರೋಗಪತ್ತೆ ಮಾಡಲಾಗುತ್ತದೆ, ಇದು ಚಿಕಿತ್ಸೆಗೆ ಮಾರ್ಗದರ್ಶಿಯೂ ಆಗುತ್ತದೆ.

ಲೂಪಸ್‌ ನೆಫ್ರೈಟಿಸ್‌ಗೆ ಚಿಕಿತ್ಸೆಯ ಆಯ್ಕೆಗಳು

ಲೂಪಸ್‌ ನೆಫ್ರೈಟಿಸ್‌ಗೆ ಚಿಕಿತ್ಸೆಯು ಉರಿಯೂತವನ್ನು ಕಡಿಮೆ ಮಾಡುವುದು, ಲಕ್ಷಣಗಳನ್ನು ನಿಯಂತ್ರಿಸುವುದು ಮತ್ತು ಮೂತ್ರಪಿಂಡಗಳ ಕಾರ್ಯಕ್ಷಮತೆಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿರುತ್ತದೆ. ಕಳೆದ 10 ವರ್ಷಗಳಲ್ಲಿ ಆಗಿರುವ ಅತ್ಯಾಧುನಿಕ ಬೆಳವಣಿಗೆಗಳು ಲೂಪಸ್‌ ನೆಫ್ರೈಟಿಸ್‌ಗೆ ಚಿಕಿತ್ಸೆಯ ಫ‌ಲಿತಾಂಶ ಸಾಕಷ್ಟು ಉತ್ತಮವಾಗುವುದಕ್ಕೆ ಕಾರಣವಾಗಿವೆ. ರುಮಟಾಲಜಿ ಸ್ಪೆಶಲಿಸ್ಟ್‌ ಜತೆಗೆ ಕ್ಲಪ್ತ ಕಾಲದಲ್ಲಿ ಸಮಾಲೋಚನೆ ನಡೆಸಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದರಿಂದ ಸಹಜಕ್ಕೆ ನಿಕಟ ಜೀವನವನ್ನು ನಡೆಸುವುದಕ್ಕೆ ಸಾಧ್ಯವಿದೆ.

ಔಷಧಗಳು

 ಕಾರ್ಟಿಕೊಸ್ಟಿರಾಯ್ಡಗಳು: ಮೂತ್ರಪಿಂಡಗಳಲ್ಲಿ ಉರಿಯೂತವನ್ನು ತತ್‌ ಕ್ಷಣ ನಿಯಂತ್ರಣಕ್ಕೆ ತರಲು ಈ ಔಷಧಗಳನ್ನು ಉಪಯೋಗಿಸಲಾಗುತ್ತದೆ. ಇದನ್ನು 6ರಿಂದ 9 ತಿಂಗಳುಗಳ ನಿರ್ದಿಷ್ಟ ಅವಧಿಗೆ ರುಮಟಾಲಜಿಸ್ಟ್‌ ಅವರ ವಿವೇಚನೆಯನ್ನು ಆಧರಿಸಿ ನೀಡಲಾಗುತ್ತದೆ. ಸ್ಟಿರಾಯ್ಡಗಳು ಜೀವಸಂರಕ್ಷಕ ಔಷಧಗಳಾದರೂ ಅವುಗಳ ದೀರ್ಘ‌ಕಾಲೀನ ಬಳಕೆಯಿಂದ ಸಮಸ್ಯೆಗಳು ಉಂಟಾಗಬಹುದಾಗಿದೆ.

ಇಮ್ಯುನೊಸಪ್ರಸೆಂಟ್‌ಗಳು: ದೀರ್ಘ‌ಕಾಲೀನ ನಿರ್ವಹಣೆಗಾಗಿ ಮೈಕೊಫಿನಲೇಟ್‌, ಅಝಾತಿಯೊಪ್ರಿನ್‌, ರಿಟುಕ್ಸಿಮಾಬ್‌ ಮತ್ತು ಸೈಕ್ಲೊಫಾಸ್ಫೊಮೈಡ್‌ ಗಳನ್ನು ಉಪಯೋಗಿಸಬಹುದಾಗಿದೆ.

 ಆ್ಯಂಟಿಮಲೇರಿಯಲ್‌ ಔಷಧಗಳು: ಎಚ್‌ಸಿಕ್ಯು ಎಂಬುದು ಲೂಪಸ್‌ ನೆಫ್ರೈಟಿಸ್‌ ಗೆ ತಳಪಾಯ ಔಷಧವಾಗಿದೆ. ಇದು ರೋಗಲಕ್ಷಣಗಳು ಆಗಾಗ ಉಲ್ಬಣಿಸುವುದನ್ನು ತಡೆಯುತ್ತದೆ ಮತ್ತು ಒಟ್ಟಾರೆ ಜೀವ ರಕ್ಷಣೆಯನ್ನು ಸುಧಾರಿಸುತ್ತದೆ.

ಜೀವನಶೈಲಿ ಬದಲಾವಣೆಗಳು

 ಆಹಾರಾಭ್ಯಾಸ: ಕಡಿಮೆ ಉಪ್ಪಿನಂಶ, ಹಣ್ಣು, ತರಕಾರಿಗಳು, ಇಡೀ ಧಾನ್ಯಗಳು ಹೆಚ್ಚು ಇರುವ ಆಹಾರ ಕ್ರಮವು ಮೂತ್ರಪಿಂಡಗಳ ಆರೋಗ್ಯಕ್ಕೆ ನೆರವಾಗುತ್ತದೆ. ಸಂಸ್ಕರಿತ ಸಕ್ಕರೆ, ಅತಿಯಾಗಿ ಕರಿದ ಆಹಾರವಸ್ತುಗಳು ಮತ್ತು ಕೆಂಪು ಮಾಂಸ ಸೇವನೆಯನ್ನು ವರ್ಜಿಸುವುದು ಅತ್ಯಗತ್ಯವಾಗಿದೆ.

 ನಿಯಮಿತವಾದ ವ್ಯಾಯಾಮ: ಇದು ದೇಹತೂಕ ಮತ್ತು ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

 ದ್ರವಾಂಶ: ದೇಹದಲ್ಲಿ ಸಾಕಷ್ಟು ದ್ರವಾಂಶ ಕಾಪಾಡಿಕೊಳ್ಳುವುದು ಮೂತ್ರಪಿಂಡಗಳ ಕಾರ್ಯನಿರ್ವಹಣೆಗೆ ನೆರವಾಗುತ್ತದೆ.

ದೀರ್ಘ‌ಕಾಲೀನ ಫ‌ಲಿತಾಂಶಗಳು ಲೂಪಸ್‌ ನೆಫ್ರೈಟಿಸ್‌ಗೆ ಚಿಕಿತ್ಸೆಯು ಉತ್ತಮ ಫ‌ಲಿತಾಂಶ ಪಡೆಯುವುದಕ್ಕೆ ಶೀಘ್ರ ಪತ್ತೆ ಮತ್ತು ಕ್ಲಪ್ತ ಕಾಲದಲ್ಲಿ ಚಿಕಿತ್ಸೆ ಮುಖ್ಯವಾಗಿದೆ. ಬಹುತೇಕ ರೋಗಿಗಳಲ್ಲಿ ಲಕ್ಷಣಗಳು ಪ್ರಕಟವಾಗದೆ ಇರುವಾಗಲೇ ಲೂಪಸ್‌ ನೆಫ್ರೈಟಿಸ್‌ ಆರಂಭವಾಗಿರುತ್ತದೆ. ಆದ್ದರಿಂದ ರುಮಟಾಲಜಿಸ್ಟ್‌ ಬಳಿ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದು ರೋಗವನ್ನು ಆರಂಭಿಕ ಹಂತಗಳಲ್ಲಿ ಪತ್ತೆಹಚ್ಚುವುದಕ್ಕೆ ಸಹಾಯವಾಗುತ್ತದೆ. ಪ್ರಸ್ತುತ ಕಾಲದಲ್ಲಿ ಇನ್ನಷ್ಟು ಉತ್ತಮ ಆಯ್ಕೆಗಳು ಲಭ್ಯವಿರುವುದರಿಂದ ದೀರ್ಘ‌ಕಾಲೀನ ಸ್ಟಿರಾಯ್ಡ ಚಿಕಿತ್ಸೆ ಉತ್ತಮವಲ್ಲ. ಆದರೂ ತಿಳಿವಳಿಕೆಯ ಕೊರತೆಯಿಂದಾಗಿ ಅನೇಕ ರೋಗಿಗಳು ಸೂಕ್ತವಾದ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ ಮತ್ತು ರೋಗ ಸಾಕಷ್ಟು ಉಲ್ಬಣಗೊಂಡ ಬಳಿಕ ರುಮಟಾಲಜಿಸ್ಟ್‌ರನ್ನು ಸಂಪರ್ಕಿಸುತ್ತಾರೆ.

ಗರ್ಭಧಾರಣೆ ಮತ್ತು ಲೂಪಸ್‌ ನೆಫ್ರೈಟಿಸ್‌ ಲೂಪಸ್‌ ನೆಫ್ರೈಟಿಸ್‌ಗೆ ತುತ್ತಾದವರು ಕೂಡ ಗರ್ಭಧಾರಣೆಯನ್ನು ಯೋಜಿಸಿಕೊಳ್ಳಬಹುದು ಮತ್ತು ಯಶಸ್ವಿ ಫ‌ಲಿತಾಂಶವನ್ನು ಪಡೆಯಬಹುದು. ಆದರೆ ರೋಗಕ್ಕೆ ಸಮರ್ಪಕವಾಗಿ ಚಿಕಿತ್ಸೆಯನ್ನು ಒದಗಿಸುತ್ತಿರಬೇಕು ಮತ್ತು ಕನಿಷ್ಠ 2 ವರ್ಷಗಳಿಂದ ಅದು ನಿಯಂತ್ರಣದಲ್ಲಿ ಇರಬೇಕು. ಗರ್ಭಧಾರಣೆಯ ಅವಧಿಯಲ್ಲಿ ಔಷಧವನ್ನು ನಿಲ್ಲಿಸಬಾರದು, ಆದರೆ ಗರ್ಭಧಾರಣೆಗೆ ಸುರಕ್ಷಿತ ಔಷಧಗಳಿಗೆ ಬದಲಾಯಿಸಿಕೊಳ್ಳಬೇಕು. ಯೋಜಿತ ಗರ್ಭಧಾರಣೆಗೆ ಕನಿಷ್ಠ 3 ತಿಂಗಳು ಮುನ್ನ ಈ ಬದಲಾವಣೆಯನ್ನು ಮಾಡಿಕೊಳ್ಳಬೇಕು. ಎಲ್ಲ ಲೂಪಸ್‌ ರೋಗಿಗಳು ಗರ್ಭಧಾರಣೆಗೆ ಯೋಜಿಸುವ ಮುನ್ನ ಎಪಿಎಲ್‌ಎ ಆ್ಯಂಟಿಬಾಡಿ ಪರೀಕ್ಷೆಗೆ ಒಳಗಾಗಬೇಕು.

-ಡಾ| ಶಿವರಾಜ್‌ ಪಡಿಯಾರ್‌

ಅಸೋಸಿಯೇಟ್‌ ಪ್ರೊಫೆಸರ್‌

-ಡಾ| ಪ್ರತ್ಯೂಷಾ ಮಣಿಕುಪ್ಪಮ್‌

ಅಸಿಸ್ಟೆಂಟ್‌ ಪ್ರೊಫೆಸರ್‌

ಕ್ಲಿನಿಕಲ್‌ ಇಮ್ಯುನಾಲಜಿ ಮತ್ತು ರುಮಟಾಲಜಿ ವಿಭಾಗ

ಕೆಎಂಸಿ ಅತ್ತಾವರ, ಮಾಹೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರುಮಟಾಲಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

1-CT

C.T.Ravi; ನನ್ನ ಬಂಧನ ನ್ಯಾಯಾಂಗ ತನಿಖೆಯಾಗಲಿ…ಈಗಲೂ ಜೀವ ಬೆದರಿಕೆ ಇದೆ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

G.parameshwar

C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್‌

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-CT

C.T.Ravi; ನನ್ನ ಬಂಧನ ನ್ಯಾಯಾಂಗ ತನಿಖೆಯಾಗಲಿ…ಈಗಲೂ ಜೀವ ಬೆದರಿಕೆ ಇದೆ

Pro Kabaddi: ಪಾಟ್ನಾ-ಗುಜರಾತ್‌ ಟೈ

Pro Kabaddi: ಪಾಟ್ನಾ-ಗುಜರಾತ್‌ ಟೈ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

G.parameshwar

C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್‌

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.