ಶ್ವಾಸಕೋಶದ ಆರೋಗ್ಯ ಕಾಪಾಡಿ
ಉಸಿರನ್ನು ಸ್ವಲ್ಪ ಹೊತ್ತು ತಡೆ ಹಿಡಿದು ನಿಧಾನಕ್ಕೆ ಮೂಗಿನ ಮುಖಾಂತರ ಬಿಡಿ
Team Udayavani, Aug 23, 2021, 2:34 PM IST
ಕೊರೊನಾ ಸಾಂಕ್ರಾಮಿಕದ ಅಲೆ ಹೆಚ್ಚಾಗುತ್ತಲೇ ಇದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳು ವುದು ಅತೀ ಅಗತ್ಯ. ಇದಕ್ಕಾಗಿ ಉಸಿರಾಟದ ವ್ಯಾಯಾಮ ಮಾಡುವುದು ಒಳ್ಳೆಯದು.
ಉಸಿರಾಟದ ವ್ಯಾಯಾಮದಿಂದ ನಮ್ಮ ಆರೋಗ್ಯದ ಸ್ಥಿತಿಗತಿಯನ್ನು ತಿಳಿಯಬಹುದು. ಉಸಿ ರಾಟದ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಅಧಿಕವಾಗುವುದು. ಆರೋಗ್ಯಕರವಾಗಿರುವವರು, ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರು ಈ ವ್ಯಾಯಾಮದ ಅಭ್ಯಾಸ ಮಾಡುವುದು ತುಂಬಾ ಒಳ್ಳೆಯದು. ಇದರಿಂದ ಶ್ವಾಸಕೋಶದ ಆರೋಗ್ಯ ವೃದ್ಧಿಯಾಗುವುದು.
ವ್ಯಾಯಾಮ ಮಾಡುವ ವಿಧಾನ?
*ಬೆನ್ನು ನೇರ ಮಾಡಿ ಸುಖಾಸನದಲ್ಲಿ ಕುಳಿತುಕೊಳ್ಳಿ.
*ಕೈಗಳ ಬೆರಳುಗಳನ್ನು ಜ್ಞಾನ ಮುದ್ರೆಯಲ್ಲಿ ಇರಿಸಿ ತೊಡೆಯ ಮೇಲೆ ಇಡಿ.
*ಉಸಿರನ್ನು ಮೂಗಿನ ಮೂಲಕ ನಿಧಾನಕ್ಕೆ ಎಳೆದು ಸ್ವಲ್ಪ ಹೊತ್ತು ತಡೆ ಹಿಡಿದು ಅನಂತರ ಬಾಯಿಯ ಮುಖಾಂತರ ಬಿಡಿ. ಈ ರೀತಿ ಐದು ಬಾರಿ ಮಾಡಿ.
*ಅನಂತರ ಬಾಯಿಯ ಮೂಲಕ ಉಸಿರು ತೆಗೆದುಕೊಳ್ಳಿ.
*ಉಸಿರನ್ನು ಸ್ವಲ್ಪ ಹೊತ್ತು ತಡೆ ಹಿಡಿದು ನಿಧಾನಕ್ಕೆ ಮೂಗಿನ ಮುಖಾಂತರ ಬಿಡಿ.
ಈ ವ್ಯಾಯಾಮವನ್ನು ನಿತ್ಯವೂ ಮಾಡುತ್ತಿದ್ದರೆ ಉಸಿರನ್ನು ಬಿಗಿ ಹಿಡಿಯುವ ಸಾಮರ್ಥ್ಯ ಹೆಚ್ಚಾ ಗುವುದು. 25 ಸೆಕೆಂಡ್ ಗಿಂತಲೂ ಅಧಿಕ ಸಮಯ ಉಸಿ ರನ್ನು ಬಿಗಿ ಹಿಡಿಯಲು ಸಾಧ್ಯವಾದರೆ ನಿಮ್ಮ ಶ್ವಾಸಕೋಶ ಸುರಕ್ಷಿತವಾಗಿದೆ ಎಂದರ್ಥ.
ಆರೋಗ್ಯವಂತರೂ ನಿತ್ಯವೂ ಈ ವ್ಯಾಯಾಮ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಯನ್ನು ವೃದ್ಧಿಸಿಕೊಳ್ಳಬಹುದು. ನಿತ್ಯವೂ ಅರ್ಧ ಗಂಟೆ ಇದಕ್ಕಾಗಿ ಮೀಸಲಿಡಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.