Measles: ದಡಾರ


Team Udayavani, Apr 14, 2024, 4:09 PM IST

8

ದಡಾರ ಹೇಗೆ ಉಂಟಾಗುತ್ತದೆ?

ದಡಾರವು ವೈರಾಣುವಿನಿಂದ ಉಂಟಾಗುವ ಒಂದು ಸೋಂಕುರೋಗ. ಸಾಮಾನ್ಯವಾಗಿ ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆಯಾದರೂ ಹದಿಹರಯದವರು ಮತ್ತು ಪ್ರೌಢರನ್ನು ಕೂಡ ಬಾಧಿಸುತ್ತದೆ. ಪ್ಯಾರಾಮಿಕೊÕವಿರಿಡೇ ಕುಟುಂಬದ ಮಾರ್ಬಿಲಿವೈರಸ್‌ ಪ್ರಭೇದದ ರುಬೆಲ್ಲಾ ವೈರಸ್‌ನಿಂದ ಇದು ತಲೆದೋರುತ್ತದೆ. ಲಸಿಕೆ ಹಾಕಿಸಿಕೊಳ್ಳದ ಅಥವಾ ಈ ಹಿಂದೆ ದಡಾರಕ್ಕೆ ತುತ್ತಾಗದವರಲ್ಲಿ ಈ ವೈರಾಣು ಸೋಂಕನ್ನು ಉಂಟುಮಾಡುವ ಮೂಲಕ ದಡಾರಕ್ಕೆ ಕಾರಣವಾಗುತ್ತದೆ.

ದಡಾರವು ಹೇಗೆ ಹರಡುತ್ತದೆ?

ದಡಾರವು ಒಂದು ತೀವ್ರ ತರಹದ ಸೋಂಕು ರೋಗವಾಗಿದ್ದು, ಗಾಳಿಯ ಮೂಲಕ ಹರಡುತ್ತದೆ. ಮಕ್ಕಳ ಗುಂಪಿನಲ್ಲಿ ಇರಬಹುದಾದ ಸೋಂಕುಪೀಡಿತ ಮಗು ಒಂದು ಬಾರಿ ಸೀನಿದರಷ್ಟೇ ಸಾಕು, ಗುಂಪಿನಲ್ಲಿ ಇರುವ ಇತರ ಮಕ್ಕಳಿಗೂ ದಡಾರ ಹರಡಿಬಿಡುತ್ತದೆ. ಈ ವೈರಾಣುವಿನ ಸಂಪರ್ಕಕ್ಕೆ ಬರುವ, ರೋಗ ನಿರೋಧಕ ಶಕ್ತಿ ಹೊಂದಿರದ ಯಾವುದೇ ಮಗು ದಡಾರಕ್ಕೆ ತುತ್ತಾಗುತ್ತದೆ. ದಡಾರ ಸೋಂಕಿಗೆ ಒಳಗಾಗಿರುವ ವ್ಯಕ್ತಿ ನಿಮ್ಮ ಹತ್ತಿರದಲ್ಲಿ ಸೀನಿದರೆ, ಕೆಮ್ಮಿದರೆ ಅಥವಾ ಕೇವಲ ನಿಮ್ಮ ಜತೆಗೆ ಮಾತನಾಡಿದರೆ ಕೂಡ ನಿಮಗೆ ದಡಾರ ಸೋಂಕು ಉಂಟಾಗಬಲ್ಲುದು.

ಭಾರತ ಮತ್ತು ಜಾಗತಿಕವಾಗಿ ದಡಾರದ ಸೋಂಕು ಎಷ್ಟರ ಮಟ್ಟಿಗೆ ಇದೆ?

ಮಕ್ಕಳು ಬಾಲ್ಯಕಾಲದಲ್ಲಿ ಸಾವನ್ನಪ್ಪುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ದಡಾರ. ಪ್ರತೀ ವರ್ಷ ಜಾಗತಿಕವಾಗಿ ಸರಿಸುಮಾರು 3 ದಶಲಕ್ಷ ದಡಾರ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಅಂದಾಜು 9 ಲಕ್ಷ ಮಕ್ಕಳು ಇದರಿಂದಾಗಿ ಸಾವನ್ನಪ್ಪುತ್ತಾರೆ. ಅತ್ಯಂತ ಕಳವಳಕಾರಿ ವಿಷಯವೆಂದರೆ ಭಾರತದಲ್ಲಿ ದಡಾರಕ್ಕೆ ಲಸಿಕೆಯ ಪ್ರತಿರಕ್ಷಣೆಯು ಕೇವಲ ಶೇ. 66ರಷ್ಟಿದೆ, ಕೆಲವು ರಾಜ್ಯಗಳಲ್ಲಿ ಇನ್ನೂ ಕಡಿಮೆ, ಶೇ. 50ರಷ್ಟಿದೆ.

ನನಗೆ ದಡಾರ ಉಂಟಾಗುವ ಅಪಾಯ ಇದೆಯೇ?

ಈ ಹಿಂದೆ ನಿಮಗೆ ದಡಾರ ಸೋಂಕು ಉಂಟಾಗಿಲ್ಲದೆ ಇದ್ದರೆ ಅಥವಾ ನೀವು ದಡಾರಕ್ಕೆ ಲಸಿಕೆಯನ್ನು ಹಾಕಿಸಿಕೊಳ್ಳದೆ ಇದ್ದಲ್ಲಿ ನೀವು ಸೋಂಕಿಗೆ ತುತ್ತಾಗುವ ಅಪಾಯ ಇರುತ್ತದೆ. ಸಾಮಾನ್ಯವಾಗಿ 1970ಕ್ಕಿಂತ ಹಿಂದೆ ಜನಿಸಿದವರು ಈ ರೋಗಕ್ಕೆ ಪ್ರತಿರೋಧ ಶಕ್ತಿಯನ್ನು ಹೊಂದಿರುತ್ತಾರೆ ಎಂದು ಪರಿಗಣಿಸಲಾಗುತ್ತದೆ.

ದಡಾರವು ಹೇಗೆ ಹರಡುತ್ತದೆ?

ಇದು ಗಾಳಿಯ ಮೂಲಕ ಹರಡುವ ಸೋಂಕು ರೋಗ. ದಡಾರ ಸೋಂಕುಪೀಡಿತ ವ್ಯಕ್ತಿ ಸ್ಥಳದಿಂದ ದೂರ ತೆರಳಿದರೂ ಆತನಿಂದ ಗಾಳಿಯನ್ನು ಸೇರಿದ ದಡಾರ ಸೋಂಕನ್ನು ಉಂಟು ಮಾಡುವ ವೈರಾಣುವು ಗಾಳಿಯಲ್ಲಿ 2 ತಾಸುಗಳ ವರೆಗೆ ಬದುಕಿರಬಲ್ಲುದು. ಸೋಂಕುಪೀಡಿತ ವ್ಯಕ್ತಿಯ ಕೆಮ್ಮು, ಸೀನಿನಿಂದಲೂ ದಡಾರವು ಇತರರಿಗೆ ಹರಡುತ್ತದೆ.

ದಡಾರ ಸೋಂಕುಪೀಡಿತರು ಯಾವಾಗ ಸೋಂಕು ಪ್ರಸಾರಕರಾಗಿರುತ್ತಾರೆ?

ದಡಾರ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯು ರೋಗ ಲಕ್ಷಣಗಳನ್ನು ಪ್ರದರ್ಶಿಸುವುದಕ್ಕೆ ಒಂದು ದಿನ ಹಿಂದಿನಿಂದ (ಅಂದರೆ ಸಾಮಾನ್ಯವಾಗಿ ದಡಾರದ ಗುಳ್ಳೆಗಳು ಕಾಣಿಸಿಕೊಳ್ಳುವುದಕ್ಕೆ 4ರಿಂದ 7ದಿನ ಮುಂಚಿತವಾಗಿ) ಮತ್ತು ಗುಳ್ಳೆಗಳು ಕಾಣಿಸಿಕೊಂಡ ಬಳಿಕ 4 ದಿನಗಳ ವರೆಗೆ ರೋಗಪ್ರಸಾರಕನಾಗಿರುತ್ತಾನೆ.

ದಡಾರ ಸೋಂಕುಪೀಡಿತ ವ್ಯಕ್ತಿಯು ಎಷ್ಟು ಕಾಲ ಸೋಂಕು ಪ್ರಸಾರಕನಾಗಿರುತ್ತಾನೆ?

 ದಡಾರ ಸೋಂಕನ್ನು ಹೊಂದಿರುವ ವ್ಯಕ್ತಿಯು ರೋಗ ಲಕ್ಷಣಗಳನ್ನು ಹೊಂದುವುದಕ್ಕೆ ಮುಂಚಿತವಾಗಿಯೇ ಸೋಂಕು ಪ್ರಸಾರಕನಾಗಿರುತ್ತಾನೆ.  ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ಒಂದು ದಿನ ಹಿಂದಿನಿಂದ ಆರಂಭಿಸಿ ಲಕ್ಷಣಗಳು ಕಾಣಿಸಿಕೊಂಡ ಬಳಿಕ 4 ದಿನಗಳ ವರೆಗೆ ವ್ಯಕ್ತಿಯು ಸೋಂಕು ಪ್ರಸಾರಕ ಎಂಬುದಾಗಿ ಪರಿಗಣಿಸಲ್ಪಡುತ್ತಾನೆ.

ದಡಾರ ವೈರಾಣುವಿನ ಸೋಂಕಿಗೆ ತುತ್ತಾದ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳಲು ಎಷ್ಟು ದಿನಗಳು ಬೇಕಾಗುತ್ತವೆ?

ದಡಾರ ವೈರಾಣುವಿನ ಸಂಪರ್ಕಕ್ಕೆ ಬಂದ ಬಳಿಕ 7ರಿಂದ 21 ದಿನಗಳ ನಡುವೆ ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಗುತ್ತವೆ. ನೀವು ದಡಾರಕ್ಕೆ ತುತ್ತಾಗುವ ಅಪಾಯ ಹೊಂದಿದ್ದರೆ ವೈರಾಣುವಿನ ಸಂಪರ್ಕಕ್ಕೆ ಬಂದ ಹತ್ತೇ ದಿನಗಳಲ್ಲಿ ಲಕ್ಷಣಗಳು ತಲೆದೋರಬಹುದು. ದಡಾರವು ಒಂದು ಪ್ರಾಣಾಪಾಯಕಾರಿ ಸೋಂಕು ರೋಗವಾಗಿದ್ದು, ಮಕ್ಕಳು ಮತ್ತು ವಯಸ್ಕರಲ್ಲಿ ಹೆಚ್ಚು ತೀವ್ರ ತರಹವಾಗಿರುತ್ತದೆ.

ನಾನು ದಡಾರ ಸೋಂಕಿಗೆ ತುತ್ತಾದರೆ ಏನು ಮಾಡಬೇಕು?

ನೀವು ದಡಾರಕ್ಕೆ ಲಸಿಕೆ ಹಾಕಿಸಿಕೊಳ್ಳದೆ ಇದ್ದಲ್ಲಿ ಅಥವಾ ನಿಮಗೆ ದಡಾರದ ವಿರುದ್ಧ ರೋಗ ಪ್ರತಿರೋಧ ಶಕ್ತಿ ಇಲ್ಲದಿದ್ದಲ್ಲಿ ಸೋಂಕಿಗೆ ತುತ್ತಾದ ಬಳಿಕ 21 ದಿನಗಳ ಕಾಲ ನೌಕರಿ, ಶಾಲೆ-ಕಾಲೇಜು ಇತ್ಯಾದಿ ಎಲ್ಲವುಗಳಿಂದ ದೂರವಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿ ಉಳಿಯಬೇಕು. ನಿಮ್ಮ ಮಗು ದಡಾರದ ಸೋಂಕಿಗೆ ತುತ್ತಾಗಿದ್ದರೆ ಅವಳು/ಅವನನ್ನು ಕೂಡ ಶಾಲೆಗೆ ಕಳುಹಿಸದೆ ಮನೆಯಲ್ಲಿಯೇ ಇತರರ ಸಂಪರ್ಕದಿಂದ ಪ್ರತ್ಯೇಕವಾಗಿ ಇರಿಸಬೇಕು. ಇದರಿಂದ ಅತ್ಯಂತ ತೀವ್ರ ತರಹದ ಸೋಂಕುರೋಗವಾಗಿರುವ ದಡಾರ ಇನ್ನಷ್ಟು ಪ್ರಸರಣವಾಗುವುದನ್ನು ತಡೆದಂತೆ ಆಗುತ್ತದೆ.

ದಡಾರದ ರೋಗಪತ್ತೆ ಹೇಗೆ ನಡೆಸಲಾಗುತ್ತದೆ?

ರೋಗ ಲಕ್ಷಣಗಳು, ದಡಾರ ಸೋಂಕಿಗೆ ಒಳಗಾದ ವ್ಯಕ್ತಿಯ ಸಂಪರ್ಕಕ್ಕೆ ಬಂದ ಹಿನ್ನೆಲೆ ವಿವರ ಮತ್ತು ರಕ್ತ ಪರೀಕ್ಷೆಯ ಸಹಿತ ಪ್ರಯೋಗಾಲಯ ಪರೀಕ್ಷೆಗಳ ಫ‌ಲಿತಾಂಶಗಳ ಸಂಯೋಜಿತ ಆಧಾರದಲ್ಲಿ ದಡಾರ ರೋಗಪತ್ತೆಯನ್ನು ನಡೆಸಲಾಗುತ್ತದೆ. ನಿಮಗೆ ದಡಾರದ ರೋಗ ಲಕ್ಷಣಗಳಿದ್ದು, ನೀವು ಈ ಹಿಂದೆ ಪ್ರಯೋಗಾಲಯದಲ್ಲಿ ಪರೀಕ್ಷೆಯಿಂದ ಖಚಿತಗೊಂಡ ಸೋಂಕುಕಾರಕ ದಡಾರಪೀಡಿತ ವ್ಯಕ್ತಿಯಿಂದ ಈ ಸೋಂಕಿನ ಸಂಪರ್ಕಕ್ಕೆ ಬಂದಿರುವುದು ಹೌದಾದರೆ ಮರಳಿ ನಿಮಗೆ ಪ್ರಯೋಗಾಲಯ ಪರೀಕ್ಷೆಯ ಅಗತ್ಯವಿರುವುದಿಲ್ಲ.

ದಡಾರವು ಸೋಂಕುರೋಗವೇ?

ದಡಾರವು ತೀವ್ರ ತರಹದ ಸೋಂಕುರೋಗವಾಗಿದೆ. ದಡಾರ ಹಾವಳಿಯು ಒಂದು ಸಾರ್ವಜನಿಕ ಆರೋಗ್ಯ ಅಪಾಯ ಸ್ಥಿತಿಯಾಗಿದೆ. ದಡಾರದ ಲಕ್ಷಣಳೇನು? ದಡಾರದ ಲಕ್ಷಣಗಳು ಎಂದರೆ: 38.3 ಡಿಗ್ರಿ ಸೆಂಟಿಗ್ರೇಡ್‌ ಅಥವಾ ಅದಕ್ಕಿಂತ ಹೆಚ್ಚು ಜ್ವರ, ಕೆಮ್ಮು, ಮೂಗಿನಿಂದ ಸಿಂಬಳ ಸುರಿಯುವಂತಹ ಶೀತ ಅಥವಾ ಕಣ್ಣುಗಳು ಕೆಂಪಗಾಗುವುದು, ಜ್ವರ ಆರಂಭವಾಗಿ 3ರಿಂದ 7 ದಿನಗಳ ಬಳಿಕ ಮೈಮೇಲೆ ಕೆಂಪನೆಯ ನೀರು ಸಹಿತ ಗುಳ್ಳೆಗಳು ಉಂಟಾಗುತ್ತವೆ. ಈ ಗುಳ್ಳೆಗಳು ಕಿವಿಗಳ ಹಿಂಭಾಗದಲ್ಲಿ ಉಂಟಾಗಲು ಆರಂಭವಾಗಿ ಬಳಿಕ ಮುಖಕ್ಕೆ ಹರಡುತ್ತವೆ, ಅನಂತರ ದೇಹವಿಡೀ ವ್ಯಾಪಿಸಿ ಕೈಗಳು ಮತ್ತು ಕಾಲುಗಳಿಗೂ ಹರಡುತ್ತವೆ.

ನನ್ನ ಮಗು ಅಥವಾ ಸ್ವತಃ ನಾನು ದಡಾರ ಸೋಂಕಿಗೆ ತುತ್ತಾಗಿದ್ದರೆ ಏನು ಮಾಡಬೇಕು?

ನಿಮಗೆ ಅಥವಾ ನಿಮ್ಮ ಮಗುವಿಗೆ ದಡಾರದ ಲಕ್ಷಣಗಳು ಕಂಡುಬಂದಲ್ಲಿ ಯಾವುದೇ ಆಸ್ಪತ್ರೆ ಅಥವಾ ಕ್ಲಿನಿಕ್‌ಗೆ ತೆರಳಿ ಖಚಿತಪಡಿಸಿಕೊಂಡು ಚಿಕಿತ್ಸೆ ಪಡೆದು ಕೊಳ್ಳಬೇಕು.

ಒಬ್ಬರಿಗೆ ಒಂದಕ್ಕಿಂತ ಹೆಚ್ಚು ಬಾರಿ ದಡಾರ ಉಂಟಾಗಬಹುದೇ?

ದಡಾರ ಸೋಂಕು ಒಬ್ಬರಿಗೆ ಒಂದಕ್ಕಿಂತ ಹೆಚ್ಚು ಬಾರಿ ತಗಲುವುದು ತೀರಾ ಅಪರೂಪ. ಸಾಮಾನ್ಯವಾಗಿ ಒಮ್ಮೆ ದಡಾರ ಸೋಂಕಿಗೆ ತುತ್ತಾದರೆ ಆ ಬಳಿಕ ಜೀವಮಾನ ಪರ್ಯಂತ ದಡಾರಕ್ಕೆ ಪ್ರತಿರಕ್ಷಣೆ ಒದಗುತ್ತದೆ.

ದಡಾರದಿಂದ ಉಂಟಾಗಬಹುದಾದ ಸಂಕೀರ್ಣ ಆರೋಗ್ಯ ಸಮಸ್ಯೆಗಳು ಯಾವುವು?

ಜ್ವರ, ಮೈಯಿಡೀ ಗುಳ್ಳೆಗಳು ಮತ್ತು ಇತರ ಲಕ್ಷಣಗಳ ಜತೆಗೆ ದಡಾರ ಸೋಂಕಿಗೆ ತುತ್ತಾದ ಪ್ರತೀ ಮೂವರಲ್ಲಿ ಒಬ್ಬ ರೋಗಿಯು ಒಂದು ಅಥವಾ ಅದಕ್ಕಿಂತ ಹೆಚ್ಚು ಸಂಕೀರ್ಣ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬಹುದು. ಅವುಗಳಲ್ಲಿ, ಕಿವಿಯ ಸೋಂಕು (ಇದರಿಂದ ಶಾಶ್ವತ ಶ್ರವಣ ಶಕ್ತಿ ನಷ್ಟ ಉಂಟಾಗಬಹುದು), ನ್ಯುಮೋನಿಯಾ, ಎನ್‌ಸೆಫ‌ಲೈಟಿಸ್‌ (ಮೆದುಳಿನ ಉರಿಯೂತ), ಮೂರ್ಛೆ ಸೇರಿವೆ. ದಡಾರ ಸೋಂಕಿಗೆ ತುತ್ತಾದ ಕೆಲವು ತಿಂಗಳುಗಳ ಬಳಿಕ ಮೆದುಳು ಮತ್ತು ಮೆದುಳು ಬಳ್ಳಿಗೆ ಸಂಬಂಧಿಸಿದ ಅತ್ಯಂತ ಅಪರೂಪವಾದ ಆದರೆ ಅಷ್ಟೇ ಪ್ರಾಣಾಂತಿಕವಾಗಿರುವ ಕಾಯಿಲೆಯೂ ಉಂಟಾಗಬಹುದು. ಈ ಮಾರಕ ಕಾಯಿಲೆಯನ್ನು ಸಬ್‌ ಅಕ್ಯೂಟ್‌ ಪ್ಯಾನ್‌ಎನ್‌ಸೆಫ‌ಲೈಟಿಸ್‌ ಎನ್ನಲಾಗುತ್ತದೆ. ದಡಾರದಿಂದ ಸಾವು ಕೂಡ ಸಂಭವಿಸಬಹುದು. ಐದು ವರ್ಷಕ್ಕಿಂತ ಸಣ್ಣ ವಯಸ್ಸಿನ ಮಕ್ಕಳು ಮತ್ತು 20 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ದಡಾರದಿಂದ ಸಂಕೀರ್ಣ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಹೆಚ್ಚು.

ನಾನು ಗರ್ಭಿಣಿ; ನನ್ನ ಗರ್ಭದಲ್ಲಿರುವ ಶಿಶುವಿಗೆ ದಡಾರದಿಂದ ಅಪಾಯ ಇದೆಯೇ?

ನೀವು ದಡಾರಕ್ಕೆ ಪ್ರತಿರಕ್ಷಣೆ ಹೊಂದಿಲ್ಲದೆ ಇದ್ದರೆ ನಿಮ್ಮ ಗರ್ಭದಲ್ಲಿರುವ ಶಿಶುವಿಗೆ ದಡಾರದಿಂದ ಅಪಾಯ ಉಂಟಾಗಬಹುದು. ಗರ್ಭಿಣಿಯಾಗಿರುವಾಗ ದಡಾರ ಸೋಂಕಿಗೆ ತುತ್ತಾದರೆ ಗರ್ಭಪಾತ, ಅವಧಿಪೂರ್ವ ಜನನ ಮತ್ತು ಕಡಿಮೆ ತೂಕದ ಶಿಶು ಜನನ ಆಗಬಹುದು. ಜನಿಸಿದ ಶಿಶುವಿಗೆ ಜನ್ಮಜಾತ ವೈಕಲ್ಯಗಳು ಉಂಟಾಗುವುದು ಅಪರೂಪ, ಆದರೆ ಅಸಾಧ್ಯವೇನಲ್ಲ. ನೀವು ದಡಾರಕ್ಕೆ ಪ್ರತಿರಕ್ಷಣೆಯನ್ನು ಹೊಂದಿದ್ದರೆ ದಡಾರದ ಆ್ಯಂಟಿಬಾಡಿಗಳು ನಿಮ್ಮಿಂದ ನಿಮ್ಮ ಗರ್ಭದಲ್ಲಿರುವ ಶಿಶುವಿಗೂ ರವಾನೆಯಾಗುತ್ತವೆ; ಬಹುತೇಕ ಗರ್ಭ ಧರಿಸಿದ ಕೊನೆಯ ತ್ತೈಮಾಸಿಕದಲ್ಲಿ ಇದು ನಡೆಯುತ್ತದೆ. ತಾಯಿಯಿಂದ ಪಡೆದ ಈ ಆ್ಯಂಟಿಬಾಡಿಗಳು ದಡಾರದ ವಿರುದ್ಧ ನಿಮ್ಮ ಶಿಶುವಿಗೆ ಸ್ವಲ್ಪ ಮಟ್ಟಿಗಿನ ರಕ್ಷಣೆಯನ್ನು ಒದಗಿಸುತ್ತವೆ, ಆದರೆ ಸ್ವಲ್ಪ ಸಮಯಾನಂತರ ಈ ರಕ್ಷಣೆ ಮಾಯವಾಗುತ್ತದೆ. ನಿಮ್ಮ ಶಿಶು ಜನಿಸಿದ ಬಳಿಕ ದಡಾರದ ವಿರುದ್ಧ ಸ್ವಂತ ಪ್ರತಿರಕ್ಷಣೆಯನ್ನು ಹೊಂದುವುದಕ್ಕಾಗಿ ದಡಾರ ಲಸಿಕೆಯನ್ನು ಹಾಕಿಸಬೇಕು.

ನಾನು ದಡಾರಕ್ಕೆ ತುತ್ತಾಗಿದ್ದರೆ ನನಗೆ ಯಾವ ಆರೈಕೆಯ ಅಗತ್ಯವಿದೆ?

ದಡಾರಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಬಹುತೇಕ ದಡಾರ ಪ್ರಕರಣಗಳನ್ನು ಮನೆಯಲ್ಲಿ ಸ್ವಯಂ ಆರೈಕೆಯಿಂದ ನೋಡಿಕೊಳ್ಳಬೇಕು. ಮನೆಯಲ್ಲಿ ದಡಾರಕ್ಕೆ ಸ್ವಯಂ ಆರೈಕೆಯು ವಿಶ್ರಾಂತಿ, ಸಾಕಷ್ಟು ದ್ರವಾಹಾರ ಸೇವನೆ ಹಾಗೂ ಜ್ವರ ಮತ್ತಿತರ ಲಕ್ಷಣಗಳನ್ನು ಉಪಶಮನಗೊಳಿಸಲು ಅಸಿಟಾಮಿನೊಫಿನ್‌ ಮತ್ತಿತರ ಔಷಧಗಳನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿರುತ್ತದೆ. ದಡಾರಕ್ಕೆ ತುತ್ತಾದ ಮಕ್ಕಳಿಗೆ ಔಷಧ ಅಂಗಡಿಯಿಂದ ಖರೀದಿಸಿದ ಎಎಸ್‌ಎ (ಆ್ಯಸ್ಪಿರಿನ್‌) ಔಷಧಗಳನ್ನು ಕೊಡಬಾರದು, ಅದರಿಂದ ಅಪರೂಪದ ಆದರೆ ಪ್ರಾಣಾಂತಿಕವಾದ ರೇಯೆ ಸಿಂಡ್ರೋಮ್‌ ಉಂಟಾಗುವ ಅಪಾಯ ಇದೆ.

ದಡಾರದ ಲಕ್ಷಣಗಳನ್ನು ಗುಣಪಡಿಸಲು ಔಷಧಗಳಿವೆಯೇ?

ಇಲ್ಲ, ದಡಾರವನ್ನು ಗುಣಪಡಿಸಲು ಯಾವುದೇ ಔಷಧಗಳಿಲ್ಲ. ಆ್ಯಂಟಿಬಯಾಟಿಕ್‌ಗಳಿಂದ ದಡಾರವು ಗುಣ ಹೊಂದುತ್ತದೆಯೇ? ಇಲ್ಲ. ದಡಾರವನ್ನು ಗುಣಪಡಿಸಲು ಯಾವುದೇ ಔಷಧಗಳಿಲ್ಲ. ದಡಾರಕ್ಕೆ ಚಿಕಿತ್ಸೆ ನೀಡಲು ಅಥವಾ ಗುಣಪಡಿಸಲು ಆ್ಯಂಟಿಬಯಾಟಿಕ್‌ಗಳನ್ನು ಉಪಯೋಗಿಸುವುದಿಲ್ಲ. ದಡಾರ ಸೋಂಕಿನಿಂದಾಗಿ ಕಿವಿಯ ಸೋಂಕು ಅಥವಾ ನ್ಯುಮೋನಿಯಾದಂತಹ ಬ್ಯಾಕ್ಟೀರಿಯಾ ಸೋಂಕುಗಳು ತಲೆದೋರಿದರೆ ಆಗ ಆ್ಯಂಟಿಬಯಾಟಿಕ್‌ ಅಗತ್ಯವಾಗಬಹುದೇ ವಿನಾ ಆ್ಯಂಟಿಬಯಾಟಿಕ್‌ಗಳನ್ನು ದಡಾರಕ್ಕೆ ಚಿಕಿತ್ಸೆ ನೀಡಲು ಅಥವಾ ಗುಣಪಡಿಸಲು ಸಾಧ್ಯವಿಲ್ಲ.

ದಡಾರವನ್ನು ತಡೆಗಟ್ಟಬಹುದೇ? ನನ್ನನ್ನು ನಾನು ರಕ್ಷಿಸಿಕೊಳ್ಳುವುದು ಹೇಗೆ?

ಲಸಿಕೆಯೇ ದಡಾರದ ವಿರುದ್ಧ ಅತ್ಯುತ್ತಮವಾದ ರಕ್ಷಣೆ.

ದಡಾರಕ್ಕೆ ಯಾವುದಾದರೂ ಲಸಿಕೆ ಲಭ್ಯವಿದೆಯೇ?

ಹೌದು, ದಡಾರದ ಲಸಿಕೆಯನ್ನು ಹಾಕಿಸಿಕೊಳ್ಳುವುದರಿಂದ ದಡಾರ ಉಂಟಾಗದಂತೆ ತಡೆಗಟ್ಟಬಹುದಾಗಿದೆ.

ಯಾರು ದಡಾರ ಲಸಿಕೆಯನ್ನು ಹಾಕಿಸಿಕೊಳ್ಳಬೇಕು?

ಭಾರತದಲ್ಲಿ ಮಕ್ಕಳು ದಡಾರ ಲಸಿಕೆಯ ಮೊದಲ ಡೋಸನ್ನು 9-12 ತಿಂಗಳು ವಯಸ್ಸಿನಲ್ಲಿ ಮತ್ತು ಎರಡನೇ ಡೋಸನ್ನು 16-24 ತಿಂಗಳು ವಯಸ್ಸಿನಲ್ಲಿ ಹಾಕಿಸಿಕೊಳ್ಳಬೇಕು. 1970ರಲ್ಲಿ ಅಥವಾ ಆ ಬಳಿಕ ಜನಿಸಿದ ವ್ಯಕ್ತಿಗಳಿಗೂ ದಡಾರ ಲಸಿಕೆ ಹಾಕಿಸಿಕೊಳ್ಳುವುದನ್ನು ಶಿಫಾರಸು ಮಾಡಲಾಗುತ್ತದೆ (1970ಕ್ಕಿಂತ ಹಿಂದೆ ಜನಿಸಿದವರು ಆಗ ವ್ಯಾಪಕವಾಗಿದ್ದ ದಡಾರ ಸೋಂಕಿಗೆ ತುತ್ತಾಗುವ ಮೂಲಕ ಪ್ರತಿರಕ್ಷಣೆ ಬೆಳೆಯಿಸಿಕೊಂಡಿರುತ್ತಾರೆ ಎಂದು ಪರಿಗಣಿಸಲಾಗುತ್ತದೆ). ದಡಾರಕ್ಕೆ ತುತ್ತಾಗಿರುವುದು ಖಚಿತಗೊಂಡಿರುವ ರೋಗಿಯ ಸಂಪರ್ಕಕ್ಕೆ ಬಂದವರಿಗೆ ಸಂಪರ್ಕ ಹೊಂದಿದ 72 ತಾಸುಗಳ ಒಳಗೆ ಕೂಡ ದಡಾರ ಲಸಿಕೆಯನ್ನು ನೀಡಬಹುದಾಗಿದೆ. ಇದರಿಂದ ರೋಗ ಉಂಟಾಗದಂತೆ ತಡೆಯಬಹುದಾಗಿದೆ.

ಪ್ರೌಢರಿಗೆ ದಡಾರ ಲಸಿಕೆಯ ಎರಡು ಡೋಸ್‌ಗಳು ಅಗತ್ಯವಿದೆಯೇ?

1970 ಮತ್ತು ಆ ಬಳಿಕ ಜನಿಸಿದ, ಹಿಂದೊಮ್ಮೆ ದಡಾರ ಸೋಂಕಿಗೆ ತುತ್ತಾಗದ ವ್ಯಕ್ತಿಗಳಿಗೆ ದಡಾರ ಲಸಿಕೆಯ ಎರಡು ಡೋಸ್‌ಗಳನ್ನು ಶಿಫಾರಸು ಮಾಡಲಾಗುತ್ತದೆ. ದಡಾರ ಸೋಂಕಿನ ಹಾವಳಿ ಉಂಟಾದ ಸಂದರ್ಭದಲ್ಲಿ, ದಡಾರ ಲಸಿಕೆಯನ್ನು ಆದ್ಯತೆಯ ಮೇರೆಗೆ, ಒಂದು ಡೋಸ್‌ ಲಸಿಕೆಯನ್ನೂ ಪಡೆಯದವರಿಗೆ ನೀಡಬಹುದಾಗಿದೆ. 1970ಕ್ಕಿಂತ ಹಿಂದೆ ಜನಿಸಿದವರು ಆಗ ವ್ಯಾಪಕವಾಗಿದ್ದ ದಡಾರ ಸೋಂಕಿಗೆ ತುತ್ತಾಗಿ ಪ್ರತಿರಕ್ಷಣೆ ಹೊಂದಿರುತ್ತಾರೆ ಎಂದು ಪರಿಗಣಿಸಲಾಗುತ್ತದೆ.

ದಡಾರ ಲಸಿಕೆಯಿಂದ ಆಟಿಸಂ ಉಂಟಾಗುತ್ತದೆಯೇ?

ಇಲ್ಲ; ದಡಾರ ಲಸಿಕೆಯು ಸುರಕ್ಷಿತವಾಗಿದೆ.

ದಡಾರ ಲಸಿಕೆಯಿಂದಲೇ ದಡಾರ ಸೋಂಕು ಉಂಟಾಗಬಹುದೇ?

ಇಲ್ಲ, ಲಸಿಕೆಯು ದಡಾರ ಸೋಂಕಿಗೆ ಕಾರಣವಾಗುವುದಿಲ್ಲ. ಲಸಿಕೆಯು ರೋಗ ಉಂಟಾಗಲು ಕಾರಣವಾಗದೆಯೇ ರೋಗದ ವಿರುದ್ಧ ಅಗತ್ಯವಾದ ಪ್ರತಿರಕ್ಷಣೆ ಉತ್ಪಾದನೆಯಾಗುವಂತೆ ಪ್ರಚೋದಿಸುತ್ತದೆ.

ದಡಾರಕ್ಕೆ ಚಿಕಿತ್ಸೆ ಇದೆಯೇ?

ಇಲ್ಲ, ದಡಾರಕ್ಕೆ ಯಾವುದೇ ಪ್ರತಿರಕ್ಷಣೆ ಇಲ್ಲ.

ದಡಾರವನ್ನು ಲಸಿಕೆಯಿಂದ ಮಾತ್ರ ಬಾರದಂತೆ ತಡೆಯ ಬಹುದು. ಯಾರು ದಡಾರ ಲಸಿಕೆಯನ್ನು ಹಾಕಿಸಿಕೊಳ್ಳಬಾರದು?

ದಡಾರ ಲಸಿಕೆಯನ್ನು ಈ ಕೆಳಗಿನವರಿಗೆ ನೀಡಬಾರದು:

 ಗರ್ಭಿಣಿಯರು

 ಕಾಯಿಲೆ ಅಥವಾ ಔಷಧಗಳಿಂದಾಗಿ ರೋಗ ನಿರೋಧಕ ಶಕ್ತಿ ದುರ್ಬಲಗೊಂಡಿರುವವರು

 ದಡಾರ ಲಸಿಕೆಯನ್ನು ಈ ಹಿಂದೆ ಸ್ವೀಕರಿಸಿದ್ದಾಗ ಲಸಿಕೆ ಅಥವಾ ಅದರ ಯಾವುದೇ ಘಟಕದಿಂದಾಗಿ ಗಂಭೀರ ಅಲರ್ಜಿಗೆ ತುತ್ತಾದವರು.

-ಡಾ| ಶಿವಶಂಕರ್‌ ಕೆ.ಎನ್‌.,

ಪ್ರೊಫೆಸರ್‌ ಮತ್ತು ಯೂನಿಟ್‌ ಹೆಡ್‌ ಮೆಡಿಸಿನ್‌ ವಿಭಾಗ,

ಕೆಎಂಸಿ ಆಸ್ಪತ್ರೆ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಸಿನ್‌ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.